ವಾಗ್ದೇವಿ – ೧೫

ವಾಗ್ದೇವಿ – ೧೫

ಬಾಲಮುಕುಂದಾಚಾರ್ಯನು ಸೂಚಿಸಿದ ಸಮಯಕ್ಕೆ ಭೀಮಾಚಾ ರ್ಯನು ವೇದವ್ಯಾಸ ಉಪಾಧ್ಯನನ್ನು ಕರೆದುಕೊಂಡು ಮಠಕ್ಕೆ ಬಂದನು ಹರಿಪದಾಂಬುಜತೀರ್ಥರು ಬಹು ನಿಧಾನಿಗಳು. ಪ್ರಣಿಪಾತಮಾಡಿ ನಿಂತು ಕೊಂಡ ವಿಪ್ರರೀರ್ವರನ್ನೂ ಸಮ್ಮುಖದಲ್ಲಿ ಕುಳ್ಳರಿಸಿಕೂಂಡು, ಯಾವ ಉದ್ದಿಶ್ಶ ಎಲ್ಲಿಂದ ಬರೋಣಾಯಿತೆಂದು ಕೇಳದಾಗ ಬಾಲಮುಕುಂದಾಚಾ ರ್ಯನು ವೇದವ್ಯಾಸ ಉಪಾಧ್ಯನ ಸ್ಮಿತಿಗತಿಯನ್ನೆಲ್ಲಾ ಸವಿಸ್ತಾರವಾಗಿ ತಿಳಿಸಿ, ಅವನು ತಂದ ಬಿನ್ನವತ್ತಳೆಯನ್ನು ಗುರುಗಳ ಮುಂದೆ ಇರಿಸಿದನು. ಅವರು ಅದನ್ನು ತಾವೇ ಓದಿ ನೋಡಿ ಚಂಚಲನೇತ್ರರ ಮೇಲೆ ಹೇಳೋ ಣಾಗುವ ಅಪವಾದಗಳನ್ನು ನಂಬಲಿಕ್ಕೆ. ಆಗುವುದಿಲ್ಲ. ದ್ವೇಷಸಾಧನೆ ಮಾಡುವ ಜನರು ಅಡ್ಡಾದಿಡ್ಡಿಯಾಗಿ ಆಡುವರು. ಆದು ಹ್ಯಾಗೂ ಇರಲಿ ಹೆಚ್ಚು ಅನುಭವಸ್ಥರಾದ ಬೇರೆ ಮೂರು ಮಠಾಧಿಪತಿಗಳು ಪ್ರವೇಶಿಸಲಿಕ್ಕ ನಿರಾಕರಿಸಿದ ಪ್ರಸಕ್ತಿಯಲ್ಲಿ ತನ್ನಿಂದ ಕೈಹಾಕಕೂಡುವುದಿಲ್ಲವೆಂದು ಖಂಡಿತ ವಾದ ಉತ್ತರಕೊಟ್ಟರು. ಆಗ ಭೀಮಾಚಾರ್ಯನು ವಕೀಲನಂತೆ ಹೆಚ್ಚು ಸಮಯ ಯತಿಗಳ ಕೂಡೆ ಜಿಜ್ಞಾಸಮಾಡಿದನು. ಪರಂತು ಯತಿಗಳು ಒಮ್ಮೆ ಕೊಟ್ಟ ತೀರ್ಪನ್ನು ಪುನರಾಲೋಚನೆ ಮಾಡಲಿಕ್ಕಿಲ್ಲವೆಂದು ಹೇಳಿ ಬಿಟ್ಟರು. ವೇದವ್ಯಾಸ ಉಪಾಧ್ಯನು ಒಳ್ಳೇ ಪಂಡಿತನೆಂದು ತೋರುವುದ ರಿಂದ ತನ್ನ ಮಠದಲ್ಲಿ ಹುಡುಗರಿಗೆ ಪಾಠ ಹೇಳಿಕೊಂಡಿದ್ದರೆ ಒಳ್ಳೇ ಸಂಬಳ ಸಿಕ್ಕೀತೆಂದು ಅನುಗ್ರಹ ವಚನವನ್ನು ಕೊಡುವುದಕ್ಕಿಂತ ಹೆಚ್ಚಿನ ಉಪಕೃತಿ ಯನ್ನು ಮಾಡಲಸಂದರ್ಭವೆಂತ ಮಧುರೋಕ್ತಿಯಿಂದ ಭೀಮಾಚಾರ್ಯ ನನ್ನು ನಸುನಗುತ್ತಾ ಉಪಚರಿಸಿದರು. ಹಾಗಾಗಲಿ. ಒಂದು ವೇಳೆ ರಾಜ ಸ್ಥಾನದಿಂದ ವೇದವ್ಯಾಸ ಉಪಾಧ್ಯನ ದೂರಿನ ಕುರಿತು ಬೇರೆ ನಾಲ್ಕು ಮಠ ದವರು ವಿಚಾರಣೆ ನಡೆಸಬೇಕಾಗಿ ಅಪ್ಪಣೆಯಾದರೆ ತಮ್ಮ ಹಟಪೂರೈಸ ಲಿಕ್ಕೆ ಅನುಕೂಲವಾಗುವುದು. ಇನ್ನು ಇಲ್ಲಿ ಹೆಚ್ಚು ಚರ್ಚೆಮಾಡದೆ. ಅಪ್ಪಣೆತಕ್ಕೊಂಡು ನಡೆದುಬಿಡುವಾ ಎಂದು ಅಂತರಂಗದಲ್ಲಿ ಭೀಮಾ ಚಾರ್ಯನು ಹೇಳಿದ ಮಾತು ವೇದವ್ಯಾಸಗೆ ಸರಿಯಾಗಿ ತೋರಿತು. ಬಿಡಾ ರಕ್ಕೆ ಹೋಗಲಿಕ್ಕೆ ಅಪ್ಪಣೆ ಪಡಕೊಂಡು, ಆಚಾರ್ಯನೂ ಉಪಾಧ್ಯನೂ ಒಟ್ಟಿನಲ್ಲಿ ಹೊರಟರು. ಅವರ ಬೆನ್ನಿಗೆ ಬಾಲಮುಕುಂದನು ಬಂದು ರಾತ್ರಿ ಭೋಜನಕ್ಕೆ ತನ್ನಲ್ಲಿಗೆ ದಯಮಾಡುವ ಹಾಗೆ ಅಪೇಕ್ಷಿಸಿ, ಅವರಿಬ್ಬರನ್ನೂ ಸಂಗಡ ಕರೆದುಕೊಂಡುಹೋಗಿ ಅವರಿಗೆ ಸತ್ಕಾರಮಾಡಿ ದಣಿಸಿದನು. ಭೋಜನದ ತರುವಾಯ ತಾಂಬೂಲಾದಿ ಉಪಚಾರಗಳು ಅಂತ್ಯವಾಗುವ ಮೊದಲು ಅವರೊಳಗೆ ಸಂಭಾಷಣೆ ನಡಿಯಿತು.

ಬಾಲಮುಕುಂದ -“ಆ‌ಚಾರ್ಯರೇ, ತಮ್ಮ ಸ್ನೇಹಿತನ ಕಾರ್ಯಕ್ಕೆ ನಾನು ಚೆನ್ನಾಗಿ ಮನಸ್ಸು ಕೊಡಲಿಲ್ಲವೆಂಬ ಅನುಮಾನ ತಮಗುಂಟಾಗಿಯ ದೆಂದು ತಿಳಿಯುತ್ತೇನೆ.”

ಭೀಮಾಚಾರ್ಯ–“ತಾವು ಎಂದೂ ಹಾಗೆ ತಿಳಿದುಕೊಳ್ಳಬಾರದು. ನನ್ನ ಸ್ವಭಾವ ತಾವು ಅರಿತವರಲ್ಲ. ವೇದವ್ಯಾಸನು ಜಯಹೊಂದುವ ಮಾರ್ಗವನ್ನೇಬಿಟ್ಟು ಕಾರ್ಯಹಾನಿಗೆ ಆಮಂತ್ರಣ ಕೊಟ್ಟನು. ಹಿಂದು ಮುಂದು ನೋಡದೆ, ಸಂಸ್ಥಾನಾಧಿಪತಿಗಳ ಮುಂದೆ ಬಿದ್ದು, ಸಮಯೋಚಿತ ತಿಳಿಯದೆ, ಪ್ರಥಮತಃ ಅವರ ಸಿಟ್ಟಿಗೆ ಒಳಗಾದರೆ ಮಾಡತಕ್ಕದ್ದೇನು?”

ವೇದವ್ಯಾಸ–“ಸರ್ವರಿಗೂ ಬುದ್ಧಿ ಏಕಪ್ರಕಾರವಾಗಿದೆಯೇ? ಏನು ಮಾಡಲಿ! ನನ್ನ ಗ್ರಹ ಗತಿಯ ದೋಷದಿಂದ ಅಪಜಯವಾಯಿತು. ನಾನು ತೊಡಗಿದ ಕಾರ್ಯ ಯಾರೂ ವಿಹಿತವಲ್ಲದ್ದೆನ್ನರು.

ಭೀಮಾಚಾರ್ಯ–“ನಮ್ಮ ಅವಗುಣಗಳು ನಮಗೆ ತಿಳಿಯುವುದಿಲ್ಲ. ನಮ್ಮ ತಪ್ಪುಗಳನ್ನು ಅನ್ಯರೇ ಕಂಡುಹಿಡಿಯುವರು.?

ವೇದವ್ಯಾಸ–“ತಪ್ಪುಗಳನ್ನು ಮಾಡದ ಮನುಜನ್ಯಾರು? ಎಂಥಾ ಮತಿವಂತನೂ ತಪ್ಪಿಬೀಳುವುದುಂಟು. ಮಿಕ್ಕಾದವರ ಪಾಡೇನು)?

ಬಾಲಮುಕುಂದ—“ಈ ಶುಷ್ಕ ವಾದವು ಹಾಗಿರಲಿ. ಕಾರ್ಯಚಿಂತನೆ ಮುಂದರಿಯಲಿ, ‘ಕಂಡಂತೆ ಆಡಿದರೆ ಕಂಡದಂಧ ಉರಿ’ ಎನ್ನುವರು. ಉಪಾ ಧ್ಯರೆ! ಸರ್ವಥಾ ಸಿಟ್ಟುಮಾಡಬೇಡಿ. ತಾವು ಕೊಂಚವಾದರೂ ತಾಳ್ಮೆಯುಳ್ಳ ವರಲ್ಲ. ಎಷ್ಟು ಸತ್ಯವಂತರಾದರೇನು?”

ಭೀಮಾಚಾರ್ಯ–“ತಮ್ಮ ಅಪ್ಪಣೆ ವಿಹಿತವೇ. ನಾನೀ ಬಡಬ್ರಾಹ್ಮ ಣನ ಪಕ್ಷ ಹಿಡಿದಾಯಿತು. ಇನ್ನು ಅವನನ್ನು ಎಂದೂ ಬಿಡೆ. ಮುಖ್ಯತಃ ನಾವು ತಮ್ಮ ಮರೆಹೊಕ್ಕ ಮೇಲೆ ಇನ್ನೊಬ್ಬರ ಅಶ್ರಯ ಬೇಡಲಾರೆವು ನಮಗೆ ಮನಃಪೂರ್ವಕವಾಗಿ ಸಹಾಯ ಮಾಡುವುದಕ್ಕೆಮೀ ಇನ್ನೊಬ್ಬ ಮಹಾ ರಾಯನು ಸಿಕ್ಕನು.”

ಬಾಲ ಮುಕುಂದ–*ಸ್ವಾಮೀ! ಹಾಗೆ ನನ್ನನ್ನು ಹೊಗಳಬಾರದು. ನಾನು ಅಷ್ಟು ಬುದ್ಧಿವಂತನಲ್ಲ. ತಮ್ಮಂಥವರ ದಯೆಯಿಂದ ಮರ್ಯಾದಿ ಯಿಂದ ಕಾಲಕ್ಷೇಪ ಮಾಡಿಕೊಂಡು ಬರುತ್ತೇನೆ.”

ಭೀಮಾಚಾರ್ಯ– “ತಮ್ಮ ಪಾದದಾಣೆ ವೇದವ್ಯಾಸನು ನಿಷ್ಕಪಟಿ. ಅವನು ಬರೇ ದ್ವೇಷ ಸಾಧನೆಗೋಸ್ಟರ ಇಷ್ಟು ಪ್ರಯಾಸಪಡುವವನಲ್ಲ. ಅವರಿಗಾದ ಅನ್ಯಾಯವು ಘೋರವಾದದ್ದು.”

ಬಾಲ ಮುಕುಂದ–“ಆಚಾರ್ಯರೇ ಹಾಗೆಂದರೆ ಕೇಳುವವನಲ್ಲ- ಅವನಿಗಾದ ಅನ್ಯಾಯ ಯಾವುದು?”

ಭೀಮಾಚಾರ್ಯ–“ಅವನ ಅನ್ನವನ್ನೇ ಚಂಚಲನೇತ್ರರು ತೆಗೆಯ ಲಿಲ್ಲವೇ??

ಬಾಲ ಮುಕುಂದ “ಒಂದು ವೇಳೆ ಕೋಪದಿಂದ ಯತಿಗಳ ಬಾಯಿ ಯಿಂದ ಅವಾಚ್ಯವೇ ಬಂತೆನ್ನುವಾ. ಅಷ್ಟು ಮಾತ್ರದಿಂದ ಇವರು ಪುಸ್ತಕವನ್ನು ಕಟ್ಟಿಟ್ಟು ಹೋಗಿಬಿಡಬೇಕೇ?”

ಭೀಮಾಚಾರ್ಯ–“ತಮ್ಮ ಮಾತು ನ್ಯಾಯವಾದದ್ದೇ. ಆದರೂ ಶ್ರೀಪಾದಂಗಳವರ ಬಾಯಿಯಿಂದ ಅಂಧಾ ಅಭಾಸದ ಮಾತು ಹೊರಟ ಸಮ್ಮಂಧ ಉಪಾಧ್ಯಗೆ ಸಿಟ್ಟು ಬರಲಿಕ್ಕೆ ಒಳ್ಳೆ ಕಾರಣವಿತ್ತು. ಈಗ ಅವನ ಜೀವನ ನಡಿಯುವದು ಹ್ಯಾಗೆ?”

.ಬಾಲಮುಕುಂದ–“ಜೀವನೋವಾಯವನ್ನು ನಮ್ಮ ಶ್ರೀಪಾದಂಗಳ ವರು ವಾಗ್ದತ್ತಮಾಡಿ ಆಯಿತಲ್ಲ–ನಮ್ಮ ಮಠದಲ್ಲಿ ಯೋಗ್ಯವಾದ ಉದ್ಯೋಗವನ್ನು ಕೊಡಲಿಕ್ಕೆ ಅವರು ತುಂಬಾ ಸಂಶೋಷಉಳ್ಳವರಾಗಿರು ತ್ತಾರೆ. ಇನ್ನೇನಾಗಬೇಕು?”

ವೇದವ್ಯಾಸ–“ಸ್ವಾಮಾ, ಶ್ರೀಪಾದಂಗಳವರು ನನ್ನ ಮೇಲೆ ಇಟ್ಟಿ ರುವ ಕೃಪೆಗಾಗಿ ಅವರನ್ನು ಸದಾ ವಂದಿಸುವೆನು. ಶ್ವಾನಸೂಕರವು ಹೊಟ್ಟೆ ಹೊರೆವುದಿಲ್ಲವೇ?’

ಬಾಲಮುಕುಂದ–“ಆ ಯತಿಗಳ ಮೇಲೆ ತಾವು ಹಟ ಹಿಡಿಯತಕ್ಕ ಕಾರಣ ಇನ್ಯಾವದು?”

ಭೀಮಾಚಾರ್ಯ—“ನಿರ್ನಿಮಿತ್ತವಾಗಿ ಆ ಬಡಬ್ರಾಹ್ಮಣನನ್ನು ಬಹಿ ಷ್ಕಾರಕ್ಕೆ ಒಳಪಡಿಸಿದ್ದು ನೀತಿಯೇ? ತನ್ನ ಕಾಲಬುಡದಲ್ಲಿರುವ ಕುಂಬಳ ಕಾಯಿ ಬಿಟ್ಟು ಅನ್ಯರ ಕಣ್ಣಿನಲ್ಲಿ ಸಾಸಿವೆಯನ್ನು ಹುಡುಕುವುದು ಯೋಗ್ಯ ವೇನು?”

ಬಾಲಮುಕುಂದ–“ಆ ಮಾತು ಸರಿಯೇ.?

ಭೀಮಾಚಾರ್ಯ. “ಹಾಗಾದರೆ ವೇದವ್ಯಾಸನ ಸಾಧನೆಯು ದುಸ್ಸಾ ಧನೆಯೇ?”

ಬಾಲಮುಕುಂದ –* ದುಸ್ಸಾಧನೆಯಾಗಲೀ ಸುಸಾಧನೆಯಾಗಲೀ ಒಂದು ಕಾರ್ಯದಲ್ಲಿ ಒಬ್ಬನು ಪ್ರವೇಶಿಸಬೇಕಾದರೆ ಅದನ್ನು ಪೂರೈಸಿಕೊಳ್ಳ ಬಹುದೋ ಎಂಬ ವಿಚಾರಮಾಡಬೇಕು. ಸಮರ್ಧರಲ್ಲಿ ದ್ವೇಷಕಟ್ಟಕೊಳ್ಳು ವಷ್ಟು ಹುಚ್ಚುತನ ಇನ್ನೊಂದಿರದು.?

ವೇದವ್ಯಾಸ–ಸ್ಟಾಮೀ ಅನಾವಶ್ಯಕ ದ್ವೇಷನಾಧನೆಗೆ ನಾನು ಹೊರಟ ವನಲ್ಲ. ಯತಿಗಳಿಂದ ತನಗಾದ ಅಪಕಾರಗಳನ್ನೆಲ್ಲ ಸಹಿಸದೆ ಬಹಿಷ್ಕಾರ ಪತ್ರಿಕೆ ಹುಟ್ಟಿದ ಮೇಲೆ ನಿರ್ವಾಹ ವಿಲ್ಲದುದರಿಂದ ಎದುರಿಗೆ ನಿಲ್ಲಬೇಕಾಯಿತು.?

ಬಾಲಮುಕುಂದ–“ಆ ಮಾತು ಹಾಗಿರಲಿ. ನಿಮ್ಮಿಂದ ಇನ್ನಾದರೂ ಈ ಸಾಧನೆ ನಡಿಯುವುದು ಪ್ರಯಾಸವೆಂತ ನನ್ನ ಮನಸ್ಸಿಗೆ ತೋರುತ್ತೆ.”

ಭೀಮಾಚಾರ್ಯ–“ತಾವೇ ಇಷ್ಟು ಅಪಧೈರ್ಯದ ಮಾತು ಹೇಳಿ ದರೆ ನನ್ನಿಂದ ಆಗುವುದೇನು? ವೇದವ್ಯಾಸ ಉಪಾಧ್ಯಗೆ ತಮ್ಮ ಆಶ್ರಯ ಸಿಕ್ಕುವ ಹಾಗಿಲ್ಲವಾದರೆ ನಾನು ಇಲ್ಲಿಂದಲೇ ಊರಿಗೆ ಮರಳುತ್ತೇವೆ. ವೇದ ವ್ಯಾಸನು ಹೊಳೆಗೆ ಹಾರಲಿ.?

” ಬಾಲಮುಕುಂದ—“ಈ ದ್ವಿಜೋತ್ತಮನನ್ನು ಬಿಟ್ಟು ಹಾಕಬಹುದೇ? ಒಂದು ಸಣ್ಣ ಆಲೋಚನೆ ಹೇಳಿಬಿಡುತ್ತೇನೆ. ಅದನ್ನು ಪ್ರಕಟಪಡಿಸದೆ ಅನು ಸರಿಸಿದರೆ ಪ್ರಯೋಜನ ಸಿಕ್ಕುವುದು.

ವೇದವ್ಯಾಸ & ಭೀಮಾಚಾರ್ಯ – ತಮ್ಮ ಪಾದದಾಣೆ ಪ್ರಕಟಮಾಡುವುದಿಲ್ಲ. ಮಾಡತಕ್ಕ ಯುಕ್ತಿ ಯಾವುದೋ ಅಪ್ಪಣೆಯಾಗಲಿ.

ಬಾಲಮುಕುಂದ–“ಷಟ್ಪುರನಗರವನ್ನಾಳುವ ಅರಸು ಅತಿ ಪ್ರತಾ ಪಿಯೂ ನೀತಿವಂತನೂ ಧರ್ಮಪರಿಪಾಲಕನೂ ಎಂಬ ಖ್ಯಾತಿಯು ರಾಜ್ಯ ದಲ್ಲೆಲ್ಲಾ ತುಂಬಿಯದೆ. ಪಂಚಮಠದಲ್ಲಿರುವ ಯಾವನೊಬ್ಬ ಸನ್ಯಾಸಿಯೂ ಮಾಡಿದ ಅಪರಾಧವನ್ನು ಉಳಕೆ ನಾಲ್ಕು ಮತಾಧಿಪತಿಗಳು ಬಚ್ಚಿಟ್ಟು ಬಿಟ್ಟರೆ, ಅದರ ವಿಚಾರವನ್ನು ಪ್ರಧ್ವಿಪಾಲಕರು ಮಾಡುವ ಸಂಪ್ರದಾಯ ವಿದೆ. ಆದುದರಿಂದ ಆ ವೇದವ್ಯಾಸ ಉಪಾಧ್ಯನು ಕಂಗೆಡುವದ್ಯಾಕೆ? ನೃಸಿಂಹಪುರಕ್ಕೆ ಶೀಘ್ರ ಹೋಗಿ ರಾಜದ್ವಾರದಲ್ಲಿ ದೂರು ಹೇಳಿದರೆ ನಿವೃತ್ತಿ ಸಿಕ್ಕದಿರದು. ಬಳಿಕ ತಾವು ನನ್ನನ್ನು ಕಂಡರೆ ಮುಂದಿನ ಉಪಾಯ ಹೇಳು ವೆನು. ಸಾವಕಾಶ ಮಾಡದೆ ಆ ಪಟ್ಟಣಕ್ಕೆ ತೆರಳಿ ಬೇಕಾದ ರಾಜಸೇವಕ ರನ್ನು ಆದಿಯಲ್ಲಿ ಕಂಡು ಜಾಗ್ರತೆಯಿಂದ ವ್ಯವಹರಿಸಿದರೆ ಪ್ರಯಾಸವಿಲ್ಲದೆ ಕೆಲಸ ಕೈಗೂಡುವದು ಸಾವಿರಮಾತ್ಯಾಕೆ?
*****
ಮುಂದುವರೆಯುವುದು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸಂಭ್ರಮ
Next post ಪ್ರೀತಿ ನನಗೆ

ಸಣ್ಣ ಕತೆ

  • ಜೋತಿಷ್ಯ

    ತಮಿಳು ಮೂಲ: ಕೊನಷ್ಟೈ "ನೀವು ಏನು ಬೇಕಾದರೂ ಹೇಳಿ, ನನಗೆ ಜ್ಯೋತಿಷ್ಯದಲ್ಲಿ ನಂಬಿಕೆ ತಪ್ಪುವುದಿಲ್ಲ. ಅದರಲ್ಲಿಯೂ ರಾಮಲಿಂಗ ಜೋಯಿಸರಲ್ಲಿ ಪೂರ್ಣ ನಂಬಿಕೆ"ಎಂದಳು ಕಮಲಾ. ಸಮಯ, ಸಂಧ್ಯಾ ಕಾಲ.… Read more…

  • ಕರಿಗಾಲಿನ ಗಿರಿರಾಯರು

    ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…

  • ಬೆಟ್ಟಿ

    ಮೃದುವಾಗಿ ಯಾರೋ ತೋಳು ತಟ್ಟಿದಂತಾಯಿತು. ಪುಸ್ತಕದಿಂದ ತಟ್ಟನೆ ತಲೆ ಎತ್ತಿದಳು ಲಿಂಡಾ. ನೀಲಿಕಣ್ಣುಗಳಲ್ಲಿ ಆಶ್ಚರ್ಯ ಮೂಡಿತ್ತು. "ಮದರ್ ಕರೆಯುತ್ತಿದ್ದಾರೆ..." ಅಷ್ಟೇ ಹೇಳಿ ಮೇರಿ ಸಿಸ್ಟರ್ ಹೊರಟರು. ಅವಳ… Read more…

  • ತೊಳೆದ ಮುತ್ತು

    ಕರ್ನಾಟಕದಲ್ಲಿ ನಮ್ಮ ಮನೆತನವು ಪ್ರತಿಷ್ಠಿತವಾದದ್ದು. ವರ್ಷಾ ನಮಗೆ ಇನಾಮು ಭೂಮಿಗಳಿಂದ ಎರಡು- ಮೂರು ಸಾವಿರ ರೂಪಾಯಿಗಳ ಉತ್ಪನ್ನ. ನಮ್ಮ ತಂದೆಯವರಾದ ರಾವಬಹಾದ್ದೂರ ಅನಂತರಾಯರು ಡೆಪುಟಿ ಕಲೆಕ್ಟರರಾಗಿ ಪೆನ್ಶನ್ನ… Read more…

  • ತನ್ನೊಳಗಣ ಕಿಚ್ಚು

    ಶಕೀಲಾ ಇನ್ನೂ ಮನೆಗೆ ಬಂದಿಲ್ಲ ಮೈಮೇಲೆ ಮುಳ್ಳುಗಳು ಎದ್ದಂಗಾಗದೆ. ಅಸಲು ಜೀವಂತ ಅದಾಳೋ? ಉಳಿದಾಳೆ ಜಿಂದಾ ಅಂಬೋದಾದ್ರೆ ಎಲ್ಲಿ? ಕತ್ಲೆ ಕವ್ಕತಾ ಅದೆ. ಈಗಷ್ಟೇ ಒಂದು ಗಂಟೆ… Read more…

cheap jordans|wholesale air max|wholesale jordans|wholesale jewelry|wholesale jerseys