ಜೀವರಾಶಿಗಳ ಆವಾಸ ಸರ್‌ಗ್ಯಾಸೋ

ಜೀವರಾಶಿಗಳ ಆವಾಸ ಸರ್‌ಗ್ಯಾಸೋ

ಸೆಪ್ಟೆಂಬರ್‍ ೧೭, ೧೪೯೨, ಹಡಗಿನ ಸಿಬ್ಬಂದಿ ದಿಗ್ಭ್ರಾಂತಗೊಂಡರು. ಅವರ ೯೪ ಅಡಿ ಉದ್ದ ‘ನಿನಾ’ ಹಡಗು ವಿಚಿತ್ರ ಸುಳಿವಿನ ನೀರಿನಲ್ಲಿ ನಿಂತುಬಿಟ್ಟಿತು. ಕ್ರಿಸ್ಟೋಫರ್‍ ಕೊಲಂಬಸ್ ಬಹುಶಃ ಈ ಸ್ಥಳವನ್ನು ಪ್ರಪ್ರಥಮವಾಗಿ ದಾಖಲಿಸಿದ್ದ. “ಅತಿಯಾಗಿ ಬೆಳೆದ ಕಳೆ, ಇದು ಕಲ್ಲಿನಿಂದ ಹುಟ್ಟಿದ ಸಸ್ಯ ಪಶ್ಚಿಮದಿಂದ ಬಂದಿದೆ. ಅವರು ಈ ಸ್ಥಳವನ್ನು ನೋಡಿ ಭೂಮಿಗೇ ಕಾಲಿರಿಸದರೆಂದು ಊಹಿಸಿದ್ದರು” ಆದರೆ ಅವರು ನೆಲಕ್ಕೆ ಮುಟ್ಟಿದ್ದಿಲ್ಲ. ದಂಡೆಯಿಂದ ಬಹಳೇ ದೂರದಲ್ಲಿದ್ದರು. ಅಂದು ಅವರಿಗೆ ಅತ್ಯಂತ ಹುಲುಸಾಗಿ ಭೂಮಿಯಂತೆ ಕಾಣಿಸಿದ್ದ ಸಸ್ಯ ಸರ್‌ಗ್ಯಾಸಂ ಎಂದು ನಮಗೀಗ ತಿಳಿದಿದೆ. ಅದು ಸರ್‌ಗ್ಯಾಸೋ ಸಮುದ್ರದಲ್ಲಿ ತನ್ನ ಜೀವನಚಕ್ರ ಕಳೆಯುತ್ತದೆ. ಒಂದು ವಾರದ ನಂತರ ನಿನಾ ಪಿಂಟಾ ಮತ್ತು ಸಂತ ಮರಿಯಾ ಗುರಿಯಿಲ್ಲದೇ ತಿರುಗಾಟದಲ್ಲಿ ತೊಡಗಿದ್ದವು. ಕೋಲಂಬಸ್ ತನ್ನ ಡೈರಿಯಲ್ಲಿ ಹೀಗೆ ಬರೆದ: “ಸಮುದ್ರ ಶಾಂತ ಮತ್ತು ಜುಳು ಜುಳು ಹರಿಯುತ್ತಿದೆ. ಆ ಸಮುದ್ರ ಎಂದೂ ವಕ್ರವಕ್ರವಾಗಿ ಹರಿದಿಲ್ಲ. ಆದರೆ ಒಮ್ಮೆಲೆ ಅದರ ನೀರಿನ ಮಟ್ಟ ಹೆಚ್ಚಾಯಿತು, ಗಾಳಿ ಬೀಸದೇ – ಇದು ಅವರನ್ನು ದಿಗ್ಭ್ರಾಂತರನ್ನಾಗಿಸಿತು…..”

ಅವರು ನುರಿತ ನಾವಿಕರಾದರೂ ಅವಾಕ್ಕಾದರು. ಇತರ ಸಮುದ್ರಗಳಂತೆ ಅದು ತಿಳಿ, ಶಾಂತ ಮತ್ತು ಮನೋಹರವಾಗಿದ್ದಿಲ್ಲ. ಖಾಲಿ ಹಾಗೂ ಮೃತವಾಗಿತ್ತು. ಆಹಾರಕ್ಕಾಗಿ ಹಾಕಿದ ಗಾಳಕ್ಕೆ ಮೀನುಗಳೇ ಸಿಕ್ಕಿಲ್ಲ. ಅಲ್ಲಿ ವಾಸಿಸುವುದು ಕೇವಲ ಸಾಗರದಾಮೆಗಳು. ಆಗಾಗ್ಗೆ ತಿಮಿಂಗಿಲಗಳು. ಉಳಿದುದೆಲ್ಲ ಸರ್‌ಗ್ಯಾಸಂ ಕಳೆ ಮಾತ್ರ ಆವರಿಸಿದೆ. ಒಂದು ತರದ ಮರುಭೂಮಿಯಂತೆಯೇ ಗೋಚರಿಸುತ್ತಿತ್ತು. ಆ ಸಮುದ್ರ ಡಯಾಟಂ ಮತ್ತು ಡಿನೋಫ್ಲಾಜಿಲ್ಲೇಟುಗಳನ್ನು ಹೊರತುಪಡಿಸಿ ತುಂಬ ಕಡಿಮೆ ಜೀವರಾಶಿಗಳನ್ನು ಹೊಂದಿತ್ತು. ಇದರ ನೀರು ಕರಾವಳಿಯ ಸಮುದ್ರ ನೀರಿಗಿಂತ ಕೇವಲ ೨೫ ಪ್ರತಿಶತದಷ್ಟು ಫಲವತ್ತಾಗಿದೆ. ಉತ್ತರ ಅಟ್ಲಾಂಟಿಕ್ ಸಾಗರದ ನಡುವಿನ ತುಂಪಾದ, ಆಳವಾದ ಭಾಗಲದಲ್ಲಿ ಅರ್‍ಧ ಮೈಲು ತಳದಲ್ಲಿ, ೨ ಮಿಲಿಯನ್ ಚದರ ಮೈಲು ಉದ್ದದ ನೀಲಿಜಿನ್ ನೀರು ಹರಿಯುತ್ತದೆ. ಇದರ ಮೇಲ್ಮೈಯಲ್ಲಿ ಬಂಗಾರ ಬಣ್ಣದ ಸರ್‌ಗ್ಯಾಸಂ (Sargassum) ಕಳೆ ಬೆಳೆದಿದೆ. ‘ಸರ್‌ಗ್ಯಾಸಂ’ ಪದವನ್ನು ಪೋರ್‍ಚುಗೀಸ್ ಭಾಷೆಯಿಂದ ಬಳಸಿಕೊಳ್ಳಲಾಗಿದ್ದು, ಅದರ ಅರ್‍ಥ ದ್ರಾಕ್ಷಿಯಾಕಾರದ ಸಣ್ಣ ಗುಳ್ಳೆಗಳು. ಈ ಸಸ್ಯದ ಬಣ್ಣ, ಬಲೂನ್‌ನಂತಹ ಗಾಳಿ ಗುಳ್ಳೆಗಳು ಕಂದುಬಣ್ಣದ ಸಸ್ಯದ ಭಾಗಕ್ಕೆ ಹೋಲಿಸಲಾಗಿದೆ. ಅವು ಸಸ್ಯವು ತೇಲಲು ಸಹಕಾರಿಯಗಿವೆ.

ಶತಶತಮಾನಗಳಿಂದ ಸರ್‌ಗ್ಯಾಸೋದ ನಿಗೂಢತೆ ಹಲವಾರು ಕತೆಗಾರರು ಮತ್ತು ವಿಜ್ಞಾನಿಗಳ ನಡುವೆ ವಾದ-ವಿವಾದಕ್ಕೆ ಗ್ರಾಸವಾಗಿದೆ. ಅರ್‍ಧ ತೇಲಿ, ಶಾಂತವಾಗಿ ಬೀಸುವ ಗಾಳಿ, ದಪ್ಪನಾದ ದಟ್ಟವಾಗಿ ಬೆಳೆದ ಕಳೆ, ಹಲವಾರು ನಿಗೂಢಗಳಿಗೆ ನಾಂದಿಯಾಗಿದೆ. ಈ ಜಾಗದಲ್ಲಿನ ಕಳೆಯು ತನ್ನ ಮೀನಿನಂತಹ ಟೆಂಟ್ಯಾಕಲ್‌ಗಳಿಂದ ಹಡಗುಗಳನ್ನು ಕೆಡವಿದೆ. ಅವುಗಳ ಅಸ್ಥಿಪಂಜರವಷ್ಟೇ ಉಳಿಯುವವರೆಗೆ ಹಿಡಿದಿದೆ. ಉಗಿ ಚಾಲಿತ ಹಡಗುಗಳು, ರೋಮನ್, ಸ್ಪಾನಿಶ್ ಹಡಗುಗಳು ನಾಶವಾದ ಕುರಿತು ಹಲವಾರು ಪೇಂಟಿಂಗ್‌ಗಳಲ್ಲಿ ರೌದ್ರವಾಗಿ ಚಿತ್ರಿಸಲಾಗಿದೆ. ಕೇವಲ ಕಳೆದ ಕೆಲವು ದಶಕಗಳಿಂದ ಮಾತ್ರ ಈ ಪುರಾಣಕ್ಕೆ ಸಂಶೋಧನೆ ಸಾಗಿದೆ.

ಬೆರ್‍ಮುಡಾ ಬಯಲಾಜಿಕಲ್ ಕೇಂದ್ರಕ್ಕೆ ವಿಜ್ಞಾನಿಗಳು, ಸಾಗರ ವಿಜ್ಞಾನಿಗಳು, ಜೀವರಸಾಯನ ತಜ್ಞರು, ಪವನಶಾಸ್ತ್ರಜ್ಞರು ಅದರ ನಿಗೂಢತೆ ಮತ್ತು ಸೂಕ್ಷ್ಮ ವಿವರಗಳಿಗಾಗಿ ನಿಯಮಿತವಾಗಿ ಜಗತ್ತಿನ ಮೂಲಮೂಲೆಗಳಿಂದ ಭೇಟಿಯಿಡುತ್ತಾರೆ. ಸರ್‌ಗ್ಯಾಸೋದ ವಾಯುವ್ಯ ಚತುರ್‍ಥದಲ್ಲಿಯ ಹವಳದಿಬ್ಬಗಳಿಂದ ಸುತ್ತುವರಿದ ಜ್ವಾಲಾಮುಖಿ ಪರ್‍ವತದ ತುದಿಗೆ ಬರ್‍ಮುಡಾ ನಡುಗಡ್ಡೆಯಿದೆ. ಕೇಪ್ ಹ್ಯಾಟರಸ್‌ನಿಂದ ಪೂರ್‍ವಕ್ಕೆ ೬೫೦ ಮೈಲುಗಳ ದೂರದಲ್ಲಿರುವ ಇದು ಸರ್‌ಗ್ಯಾಸೋ ಅಧ್ಯಯನಕ್ಕೆ ಹೇಳಿ ಮಾಡಿಸಿದಂತಿದೆ. ವಿಜ್ಞಾನಿಗಳು, ತಂತ್ರಜ್ಞಾನಿಗಳಿಂದ ತುಂಬಿರುವ ಸಂಶೋಧನಾ ನೌಕೆ ವೆದರ್‌ಬರ್‍ಡ್ ೨, ಕನಿಷ್ಟ ಎರಡು ವಾರಕ್ಕೊಮ್ಮೆಯಾದರೂ ನೀರಿಗಿಳಿಯುತ್ತದೆ. ಅದರಲ್ಲಿಯೂ ಸಂಶೋಧಕರು, ಆ ಸಮುದ್ರವು ಸಮುದ್ರದಾಮೆಗಳಿಂದ ಹಿಡಿದು ಈಲ್‌ಗಳವರೆಗೆ ಹಲವಾರು ಜೀವರಾಶಿಗಳಿಗೆ ಸ್ವರ್‍ಗಸಮಾನವಾಗಿದೆ ಎಂದು ತಿಳಿಯುವತ್ತ ಅಧ್ಯಯನದಲ್ಲಿ ಸಾಗಿದ್ದಾರೆ.

ದಶಕಗಳ ಹಿಂದಿನ ಮಾತು. ಸರ್‌ಗ್ಯಾಸೋ ದಾಟುತ್ತಿರುವ ನಾವಿಕರು ಸಾಮಾನ್ಯವಾಗಿ ಕ್ಷಿತಿಜದಿಂದಲೇ ಸರ್‌ಗ್ಯಾಸಂ ಅನ್ನು ಗುರುತಿಸುತ್ತಿದ್ದರು. ಆದರೆ ಕಳೆದ ಕೆಲವು ವರ್‍ಷಗಳಿಂದ ಈ ಕಳೆಯು ಅತ್ಯಂತ ವಿರಳವಾಗುತ್ತಾ ಬರುತ್ತಿದೆ. ವಿಜ್ಞಾನಿಗಳ ಪ್ರಕಾರ ಇದಕ್ಕೆ ಕಾರಣ ಈ ಕಳೆಯ ಜೀವನ ಚಕ್ರವಾಗಿದೆ. ಇದಕ್ಕೂ ಮುಂಚೆ ಅದು ಈ ಘಟ್ಟವನ್ನು ದಾಟಿ ಮುಂದೆ ಬಂದಿದೆ. ಎರಡು ವರ್‍ಷಗಳ ಹಿಂದೆ ಮತ್ತೆ ದಟ್ಟವಾಗಿ ಬೆಳೆಯಲಾರಂಭಿಸಿದೆ. ಅದು ಹೀಗೆ ದಟ್ಟವಾಗಲು ಹಾಗೂ ಹುಲುಸಾಗಿ ಬೆಳೆಯಲು ಕಾರಣವೇನು? “ಈರೀತಿ ನಾಟಕೀಯವಾಗಿ ಅದರ ಜೀವನ ಚಕ್ರದಲ್ಲಿಯ ಬದಲಾವಣೆಗೆ ಕಾರಣಗಳು ತಿಳಿದಿಲ್ಲ” ಎನ್ನುತ್ತಾರೆ ಬೆರ್‍ಮುಡಾ ರಿಸರ್‍ಚ್ ಕೇಂದ್ರದ ಹಿರಿಯ ವಿಜ್ಞಾನಿ ಫ್ರೆಡ್ ಲಿಪ್ಸ್‌ಲ್ಜ್.

ಪರಸ್ಪರ ಸಹಕಾರ:

೧೯೩೯ರವರೆಗೆ ಯಾಲೆ ವಿಶ್ವವಿದ್ಯಾಲಯದ ಆಲ್ಬರ್‍ಟ್ ಪಾರ್‍ ಎಂಬ ಸಾಗರ ವಿಜ್ಞಾನಿ ಸರ್‍ ಗ್ಯಾಸೋ ಕುರಿತು ಅಧ್ಯಯನ ಕೈಗೊಳ್ಳುವ ವರೆಗೆ, ಇತರ ವಿಜ್ಞಾನಿಗಳು ಈ ಕಳೆ ತನ್ನ ತಾನೇ ಬೆಳೆದಿರಬಹುದು ಎಂದು ಊಹಿಸಿದ್ದರು. ಆದರೆ ಹಾರ್‍ಬರ್‍ ಬ್ರಾಂಚ್ ಓಸಿಯಾನೋಗ್ರಾಫಿಕ್ ಸಂಸ್ಥೆ (ಫೋರ್‍ಡ್ ಪಿಯರ್‍ಸ್, ಫ್ಲೋರಿಡಾ) ಯ ಶೈವಲತ್ಞ ಬ್ರಿಯಾನ್ ಲಾಪೊಂಟೆ ಅವರು ತಿಳಿಸಿದ ಪ್ರಕಾರ ಸಮುದ್ರದ ದಂಡೆಯಲ್ಲಿನ ಬಂಡೆಗಳ ಸಂದುಗಳಲ್ಲಿ Sargassum natans ಮತ್ತು Sargassum fluians ಎರಡು ಪ್ರಕಾರಗಳ ಸರ್‍ ಗ್ಯಾಸಂ ಪ್ರಭೇದಗಳು ಬೆಳೆಯುತ್ತಿವೆ. ಸರ್‌ಗ್ಯಾಸಂದ ಹೆಚ್ಚಿನ ಬೆಳವಣಿಗೆಯನ್ನು ತೀರದ ನೀರಿನಲ್ಲಿ ಕಾಣಬಹುದು. “ಕರಾವಳಿಯ ಬೆಚ್ಚನೆಯ, ಪೋಷಕ ದ್ರವ್ಯ ಭರಿತ ನೀರು ಸಾಗರದ ತಣ್ಣನೆಯ ನೀರನ್ನು ಕೂಡುವ ಸ್ಥಳದಲ್ಲಿ ಕಳೆಯು ಅತ್ಯಂತ ಹುಲುಸಾಗಿ ಬೆಳೆದಿದೆ. ಮೀನುಗಳೂ ಈ ಸಸ್ಯದೊಂದಿಗೆ ಸಹಜೀವನ ನಡೆಸುತ್ತವೆ. ಅವು ಅಮೋನಿಯ ಮತ್ತು ಫಾಸ್ಫೇಟ್‌ಗಳಂತಹ ದ್ರವ್ಯಗಳನ್ನು ವಿಸರ್‍ಜಿಸುವುದರ ಮೂಲಕ ಪೋಷಕಾಂಶಗಳನ್ನು ಸಸ್ಯಕ್ಕೆ ಒದಗಿಸಿದರೆ, ಸಸ್ಯ ಅವಕ್ಕೆ ವಾಸಸ್ಥಾನ ಕಲ್ಪಿಸುತ್ತದೆ” ಎನ್ನುತ್ತಾರೆ ಅವರು.

ಸರ್‌ಗ್ಯಾಸಂ ಮತ್ತು ಅದರ ಬಳಗದ ಸಸ್ಯಗಳು ಜಗತ್ತಿನ ಎಲ್ಲ ಭಾಗಗಳಲ್ಲಿ ವಲಸೆ ಹೋಗಿ, ಅಲ್ಲಿನ ಸಂಸ್ಕೃತಿಯಲ್ಲಿ ನೆಲೆಯೂರಿವೆ. ಉದಾಹರಣೆಗೆ ಏಶಿಯನ್ನರು ಸರ್‌ಗ್ಯಾಸಂನಂತಹ ಸಮುದ್ರ ಕಳೆಗಳನ್ನು ದೇಶೀಯ ವೈದ್ಯ ಪದ್ಧತಿಯಲ್ಲಿ ಉಪಯೋಗಿಸುತ್ತಾ ಬಂದಿದ್ದಾರೆ. ಸಂಯುಕ್ತ ಸಂಸ್ಥಾನದ ನ್ಯಾಶನಲ್ ಕ್ಯಾನ್ಸರ್‍ ಸಂಸ್ಥೆಯು ಸಾವಿರಾರು ಸಸ್ಯಗಳ ಸಾರವನ್ನು ಅದರಲ್ಲಿ ಕ್ಯಾನ್ಸರ್‍ ಮತ್ತು ಹೆಚ್‌ಐವಿ ರೋಧಕ ಗುಣಗಳು ಇವೆಯೋ ಎಂದು ಅಧ್ಯಯನಗೈದಿದ್ದಾರೆ. ಹಲವು ಸಮುದ್ರ ಕಳೆಗಳ ಸಾರಗಳಲ್ಲಿ ಪಾಲಿಸೆಕರೈಡ್ ಟ್ಯಾನಿನ್ ಇದ್ದು, ಇದು ರೋಗ ನಿರೋಧಕ ಕ್ರಿಯೆಯನ್ನು ಬಲಗೊಳಿಸುವಲ್ಲಿ ಪಾತ್ರ ವಹಿಸುತ್ತದೆ. ಜಪಾನಿನ ಗೀವು ವಿಶ್ವವಿದ್ಯಾಲಯದ ಸಂಶೋಧಕರು Sargassum Thuhbergii ಎಂಬ ಪ್ರಭೇದದಿಂದ ಪಾಲಿಸೆ ಕರೈಡ್‌ಗಳನ್ನು ಬೇರ್‍ಪಡಿಸಿದ್ದಾರೆ. ಅವುಗಳಲ್ಲಿಯ ಎರಡು ರೋಗ ನಿರೋಧಕ ಕ್ರಿಯೆಯನ್ನು ಬಲ ಪಡಿಸುವುದರೊಂದಿಗೆ ಟ್ಯೂಮರ್‍ ರೋಧಕ ಲಕ್ಷಣ ತೋರಿಸಿವೆ. ಸಾಕು ಹಂದಿಗಳಿಗೆ ಸರ್‌ಗ್ಯಾಸಂದಿಂದ ತಯಾರಿಸಿದ ಆಹಾರ ಉತ್ಪನ್ನದ ನೀಡುವಿಕೆಯಿಂದ ಅವುಗಳಲ್ಲಿ ಅವುಳಗಳಲ್ಲಿ ನಿರೋಧಕ ಕ್ರಿಯೆ ಬಲಗೊಂಡಿದೆ. ವಿಜ್ಞಾನಿಗಳು ಈ ಸಸ್ಯದ ವಿಭವಗಳನ್ನು ಅರ್‍ಥಮಾಡಿಕೊಳ್ಳುತ್ತಿದ್ದು, ಕ್ಯಾನ್ಸರ್‍ ಥೆರಪಿಯನ್ನು ತಯಾರಿಸುವ ಹಂತದಲ್ಲಿದ್ದಾರೆ. ಅತ್ಯಂತ ವಿಕಸನ ಹೊಂದಿರುವ ಸಸ್ಯದಲ್ಲಿ ಜೀವರಸಾಯನ ವಿಜ್ಞಾನ ಅಡಗಿದೆ ಎನ್ನುತ್ತಾರೆ ಲಾಪೊಂಟೆ.

ಕೈಗಾರಿಕೆಗಳಿಂದ ಹೊರಬರುವ ತ್ಯಾಜ್ಯ ವಸ್ತುಗಳ ವಿಲೇವಾರಿಗಳಲ್ಲಿಯೂ ಸರ್‌ಗ್ಯಾಸಂ ಕಳೆಯನ್ನು ಉಪಯೋಗಿಸಬಹುದಾಗಿದೆ. “ಭಾರ ಲೋಹಗಳನ್ನು ನೈಸರ್‍ಗಿಕವಾಗಿ ಶೋಷಕವಾಗಿಸುವ ಸಸ್ಯ ಸರ್‌ಗ್ಯಾಸಂ ಎಂದು ನಾವು ಆವಿಷ್ಕರಿಸಿದ್ದೇವೆ” ಎನ್ನುತ್ತಾರೆ ಬೊಹುಮಿಲ್ ವೊಲಿಸ್ಕಿ. ಇವರು ಮಾಂಟಿರಯಲ್‌ದ ಮ್ಯಾಕ್‌ಗಿಲ್ ವಿಶ್ವವಿದ್ಯಾಲಯದ ರಾಸಾಯನಿಕ ಇಂಜೀನಿಯರ್‍, ನೈಸರ್‍ಗಿಕವಾಗಿ ಆಯಾನು ವಿನಿಮಯ ಕಾರಕವಾಗಿ ಕಾರ್‍ಯ ನಿರ್‍ವಹಿಸುವ ಇದು ಅದರ ಜೈವಿಕ ರಾಶಿಯು ಹೆಚ್ಚಿನ ಮೊತ್ತದಲ್ಲಿ ಶೇಖರಣೆಯಾಗುತ್ತಿದ್ದು, ಅಲ್ಲದಿದ್ದರೆ ವಿಷಕಾರಿ ಭಾರಲೋಹಗಳು ಸೀಸ, ಕ್ಯಾಡ್‌ಮಿಯಂ, ಕಾಪರ್‍, ಕ್ರೋಮಿಯಂ, ಜಿಂಕ್, ಯುರೇನಿಯಂ ಇತ್ಯಾದಿ. ಸರ್‌ಗ್ಯಾಸಂ ಕ್ಯಾಲ್ಸಿಯಂ ಅಯಾನುಗಳನ್ನು ಹೊಂದಿರುತ್ತದೆ. ಭಾರಲೋಹಗಳು ದ್ರಾವಣದಲ್ಲಿ ಇದರೆಡೆಗೆ ಹಾರಿದಾಗ ವಿಷಕಾರಿ ಲೋಹ ಅಯಾನುಗಳು ಕ್ಯಾಲ್ಸಿಯಂ ಆಯಾನುಗಳನ್ನು ಹೊರದೂಡುತ್ತವೆ. ಸಮುದ್ರಕಳೆಯು ಲೋಹದೊಂದಿಗೆ ಪರ್‍ಯಾಪ್ತಗೊಂಡಾಗ, ಕಳೆಯನ್ನು ಮೆದು ಆಮ್ಲದಿಂದ ತೊಳೆಯುವುದರೊಂದಿಗೆ ೮೦ ಬಾರಿ ಉಪಯೋಗಿಸಬಹುದು. ಹೀಗೆ ಅತಿಸಾರತೆ ಹೊಂದಿರುವ ನಿಷ್ಕರ್‍ಷಿತವು ಉಪಯೋಗಕಾರಿ ಲೋಹಗಳನ್ನು ಹೊಂದಿರುತ್ತದೆ. ಈ ವಿಧಾನವನ್ನು ವಾಲೆಸ್ಕಿ ಅವರು ಎಲೆಕ್ಟ್ರೋವಿನ್ನಿಂಗ್ ಎಂದು ಕರೆಯುತ್ತಾರೆ.

“ಜಗತ್ತಿನ ಕನಿಷ್ಠ ೯೯ ಪ್ರತಿಶತದಷ್ಟು ಸೂಕ್ಷ್ಮ ಜೀವಿಗಳು ಕೃಷಿಕೆ ಅಥವಾ ಹೊಂದಿಕೆಯಾಗಿಲ್ಲ. ಉಳಿದ ಕೇವಲ ೧ ಪ್ರತಿಶತ ಜೀವಿಗಳಿಂದ ಮಾನವನು ವೈದ್ಯಕೀಯ ಮತ್ತು ಮಾರುಕಟ್ಟೆಯಲ್ಲಿ ಬೆಲೆಯಿರುವಂತಹ ಪೆನಿಸಿಲಿನ್‌ಗಳಂಥಹ ಸಂಯುಕ್ತಗಳನ್ನು ಬೇರ್‍ಪಡಿಸಿದ್ದಾನೆ” ಎನ್ನುತ್ತಾರೆ ಹ್ಯಾಂಕ್ ಟ್ರಾಪಿಡೋ-ರೋಸೆಂಥಾಲ್ ಅಣುಜೀವ ವಿಜ್ಞಾನಿಗಳು.

ಟ್ರಾಪಿಡೋ ರೋಸೆಂಥಾಲ್ ಈ ಅಧ್ಯಯನ ಕೈಗೊಳ್ಳಲು ಸಂಡ್ರಾ ಜೀಲ್ಕೆ (ಬಯೋಟೆಕ್ನಾಲಾಜಿಸ್ಟ್) ಅವರನ್ನು ಕೂಡಿದ್ದಾರೆ. ಅವರು ಸರ್‌ಗ್ಯಾಸೋ ಸಮುದ್ರವನ್ನು ಅಧ್ಯಯನಕ್ಕೆ ಆರಿಸಿಕೊಂಡಿದ್ದಾರೆ. ಸರ್‌ಗ್ಯಾಸೋ ಸಮುದ್ರವು ಹೆಚ್ಚಿನ ಸಂಖ್ಯೆಯ ಸೂಕ್ಷ್ಮಜೀವಿ ಹೊಂದಿದೆ ಎಂಬ ಕಾರಣಕ್ಕಲ್ಲ, ಬದಲಿಗೆ ಅದು ಅತ್ಯುತ್ತಮವಾದ ಅಭ್ಯಾಸ ನಡೆಸಲು ಸೂಕ್ತ ಸಾಗರವಾಗಿದೆ. ಇತರೆಡೆಗಿಂತ ಇಲ್ಲಿನ ಸೂಕ್ಷ್ಮಜೀವಿಗಳ ಕುರಿತು ಮಾಹಿತಿಯಿದೆ. ಸೂಕ್ಷ್ಮಜೀವಿಗಳ ಅಧ್ಯಯನದಲ್ಲಿ, ಜೀಲ್ಕೆ ಅವರು ಸಮುದ್ರ ನೀರು, ಹವಳ ದಿಬ್ಬ, ಮಣ್ಣು ಮತ್ತು ಸ್ಪಾಂಜ್‌ಗಳನ್ನು ಡಿಎನ್‌ಎ ವಿಶ್ಲೇಷಣೆ ಮಾಡಲು ಆರಿಸಿಕೊಂಡಿದ್ದಾರೆ. ಅವರಿಗೆ ಬೇಕಾಗುವಷ್ಟು ಡಿಎನ್‌ಎ ಪಡೆಯಲು ೨೦೦ ಕ್ವಾರ್‍ಟ್ಸಗಳಷ್ಟು ಸಮುದ್ರ ನೀರು ಬೇಕು. ಆದರೆ ಸ್ಪಾಂಜ್ ಗಂಟೆಗೆ ೧೦,೦೦೦ ಕ್ವಾರ್‍ಟ್ಸ್ ನೀರನ್ನು ಸೋಸುತ್ತದೆ. ಎಲ್ಲ ಬ್ಯಾಕ್ಟೀರಿಯಾಗಳು ಸೆಟಲ್ ಆಗುತ್ತವೆ.

ಈ ಅಧ್ಯಯನದ ಮೊದಲ ಪರಿಣಾಮಗಳು ಆಶಾದಾಯಕವಾಗಿವೆ. ೨ ವರ್‍ಷಗಳ ಹಿಂದೆ ಟ್ರಾಪಿಡೋ ರೋಸೆಂಥಾಲ್ ಮತ್ತು ಜೀಲ್ಕೆ ಅವರು ರಕ್ತದಲ್ಲಿಯ ಫೈಬ್ರಿನೋಜಿನ್ ಮಟ್ಟ ಕಡಿಮೆ ಮಾಡುವ ಸಂಯುಕ್ತವನ್ನು ಕಂಡುಹಿಡಿದಿದ್ದಾರೆ. ಇದು ಶಸ್ತ್ರಚಿಕಿತ್ಸೆಯ ಸಮಯದಲ್ಲಿ ರಕ್ತಪ್ರವಾಹವನ್ನು ತಡೆಯುತ್ತದೆ. ಡಯಾಬಿಟಿಸ್ ಚಿಕಿತ್ಸೆಯಲ್ಲಿ ಉಪಯೋಗಿಸುವ ಇನ್ಸುಲಿನ ಸಂವೇದನಾಕಾರಕವನ್ನು ಗುರುತಿಸಿದ್ದಾರೆ. ಜೀಲ್ಕೆ ಅವರ ಪ್ರಕಾರ ಈ ಕಾರ್‍ಯ ಪ್ರಗತಿಯಲ್ಲಿದೆ. ಈ ಜೀವಿಗಳ ಕುರಿತು ನಮಗೆ ಹೆಚ್ಚಿಗೇನೂ ತಿಳಿದಿಲ್ಲ. ಕಲ್ಲನ್ನು ಬಳಸಿ ಬೆಳೆದ ಸ್ಪಾಂಜ್‌ನ್ನು ನೀವು ನೋಡಿರಬಹುದು, ಅದರ ಮೇಲೆ ಏನೂ ಬೆಳೆದಿರುವುದಿಲ್ಲ. ಇದರಿಂದ ಸುತ್ತಲಿನ ಪರಿಸರದ ಮೇಲೆ ಅಂಗಸಾರಣ ಮಾಡುತ್ತವೆ ಎಂದು ಊಹಿಸಬಹುದು. ಮೀನು ಅದನ್ನು ತಿನ್ನಬಹುದಲ್ಲವೇ? ತನ್ನ ಉಳಿವಿಗಾಗಿ ಅದು, ರಕ್ಷಣಾ ತಂತ್ರ ಉಪಯೋಗಿಸುತ್ತದೆ. ಆದರೆ ಅಂತಹ ಒಂದು ವಸ್ತು ಸ್ಪಾಂಜ್ ತಯಾರಿಸಿದರೆ ಅಥವಾ ಅದರ ಮೇಲೆ ವಾಸಿಸುವ ಸೂಕ್ಷ್ಮ ಜೀವಿ ತಯಾರಿಸಿದರೆ ಅಥವಾ ಒಂದಕ್ಕೊಂದು ವರ್‍ತಿಸಿದರೆ? ಇದರ ಕುರಿತು ತಿಳಿಯುವುದು ಅತಿ ಕ್ಲಿಷ್ಠಕರ. ಆದರೆ ಒಮ್ಮೆ ಬಹಿರಂಗವಾಯಿತೆಂದರೆ ರೋಮಾಂಚನವಾಗುತ್ತದೆ.

ಕೇಂದ್ರದ ಸೂಕ್ಷ್ಮಜೀವಿ ಪರಿಸರ ವಿಜ್ಞಾನಿಗಳಾದ ಕ್ರೇಗ್ ಕಾರ್‍ಲ್‌ಸನ್ ಮತ್ತು ರಾಕೆಲ್ ಪಾರ್‍ಸೆನ್ಸ್, ಸಾಗರದ ನೀರಿನಲ್ಲಿಯ ಬ್ಯಾಕ್ಟೀರಿಯಾ ಮತ್ತು ವೈರಸ್‌ಗಳ ಕುರಿತು ಮಾಹಿತಿ ನಡೆಸಿದ್ದಾರೆ. “ಆ ವೈರಸ್‌ಗಳು ಯಾವುದೂ ಮಾನವನಿಗೆ ರೋಗ ಉಂಟುಮಾಡುವುದಿಲ್ಲ” ಎನ್ನುತ್ತಾರೆ ಪಾರ್‍ಸಲ್ಸ್. “ಸಾಗರದ ಆಹಾರ ಸರಪಳಿ ಮತ್ತು ಕಾರ್‍ಬನ್ ಚಕ್ರದಲ್ಲಿ ಈ ವೈರಸ್‌ಗಳು ಎಂತಹ ಪರಿಣಾಮಕಾರಿ ಪಾತ್ರವಹಿಸುತ್ತವೆ ಎಂಬುದನ್ನು ತಿಳಿಯುವತ್ತ ಸಾಗಿದ್ದಾರೆ. ಶೈವಲಗ್ ಬ್ಲೂಮ್ ಗಳಂತ, ಬ್ಯಾಕ್ಟೀರಿಯಾ ಬ್ಲೂಮ್, ವೈರಸ್ ಬ್ಲೂಮ್ ನೀವು ಕಾಣಬಹುದು”. ಚೀಸಾಪಿಕೆ ಕೊಲ್ಲಿಯಲ್ಲಿಯ ೧/೨೦ನೇ ಅಂಶದ ವೈರಸ್ ಮಟ್ಟದಷ್ಟು ಸರ್‌ಗ್ಯಾಸೋದ ಮೇಲಿನ ಕೆಲವು ಯಾರ್‍ಡ್ ನೀರಿನ ಪೋಷಕ ದ್ರವ್ಯ ಕಡಿಮೆಯಿದೆ. ವೈರಸ್‌ಗಳ ಇರುವಿಕೆಯು ಸರ್‌ಗ್ಯಾಸೋ ಮರು ಭೂಮಿಗಿಂತ ಎಷ್ಟೋ ಮಿಗಿಲು ಎಂದು ಸಾಬೀತುಪಡಿಸುತ್ತದೆ.

ಯೂರೋಪದ ಈಲ್ ಮೀನು ಎಂಗೂಲಾ ಎಂಗೂಲಾ (Anguilla Anguilla) ಕಡಲು ಆಹಾರ ಸೇವಿಸುವವರಿಗೆ ತನ್ನ ರುಚಿ ಹಾಗೂ ನೈಸರ್‍ಗಿಕ ಇತಿಹಾಸದಿಂದ ಚಿರಪರಿಚಿತವಾಗಿದೆ. ೧೯೨೦ರ ವರೆಗೆ ವಿಜ್ಞಾನಿಗಳು ಸರ್‌ಗ್ಯಾಸೋದಲ್ಲಿ ಹುಟ್ಟುವ ಈಲ್ಗಳು, ಪ್ರೌಢಾವಸ್ಥೆಯಲ್ಲಿ ವಲಸೆ ಬಂದು ತಮ್ಮ ಮೂಲ ಆವಾಸ ಮರೆತಂತೆ ಹೆಚ್ಚಿನ ಸಂಖ್ಯೆಯಲ್ಲಿ ಮೊಟ್ಟೆ ಇಡುತ್ತವೆ.

ಆದರೆ ಡಿಎನ್‌ಎ ವಿಜ್ಞಾನ ಮುಂದುವರಿದಂತೆ ಹೊಸ ಹೊಸ ಆವಿಷ್ಕಾರಗಳು ಹೊರಬಿದ್ದಿವೆ. ಸಂಶೋಧನೆಯಿಂದ ತಿಳಿದುಬಂದದೇನೆಂದರೆ ಈಲ್‌ಗಳು ಸರ್‌ಗ್ಯಾಸೋದಲ್ಲಿ ಹುಟ್ಟಿ, ಅಟ್ಲಾಂಟಿಕ್‌ದಿಂದ ಕರಾವಳಿ ಯೂರೋಪಿಯ ನೀರಿನಿಂದ ಗಲ್ಫ್ ಸರೋವರಕ್ಕೆ ಹೋಗುತ್ತವೆ. ಅಲ್ಲಿ ಅವು ೨ ವರ್‍ಷಗಳವರೆಗೆ ಬದುಕುತ್ತವೆ. ಅನಂತರ ಅವು ತಮ್ಮ ಪೂರ್‍ವಜರು ಈಜಿ ಬಂದ ನದಿಗೆ ಈಜುತ್ತ ಬಂದು, ೧೦-೧೫ ವರ್‍ಷ ಬದುಕಿ ಅಟ್ಲಾಂಟಿಕ್‌ಗೆ, ಸರ್‌ಗ್ಯಾಸೋ ಹೊರಗೆ ಬಂದು ಮೊಟ್ಟೆ ಇಟ್ಟು ಸಾಯುತ್ತವೆ. ಥೀರಿ ವರ್‍ಥ್ ಮತ್ತು ಲೂಯಿಸ್ ಬರ್‍ನಾಟೆಜ್ (ಕ್ಯೂಬಾದ ಲಾವಲ್ ವಿಶ್ವವಿದ್ಯಾಲಯ)ರು ೬೧೧ ಈಲ್‌ಗಳನ್ನು ಡಿಎನ್‌ಎ ಪರೀಕ್ಷೆ ಮಾಡಿದಾಗ ಎಂಗುಲಿಫಾರ್‍ಮ್‌ಗಳು ಈಲ್‌ನೊಂದಿಗೆ ಸಾಮಾನ್ಯವಾಗಿ ಕೂಡಿದ ವರದಿಬಂತು.

ಅವು ತಮ್ಮನ್ನು ತಾವು ಹೇಗೆ ಅರಿಯುತ್ತವೆ? ವರ್‍ಥ್ ಮತ್ತು ಬರ್‍ನಾಟೆಜ್ ಅವರು ಇದಕ್ಕೆ ಕಾರಣ ಜೈವಿಕ ಗಡಿಯಾರ ಎಂದು ಹೇಳುತ್ತಾರೆ. ವಿವಿಧ ಬಗೆಯ ಈಲ್ ಸಮ್ಮುಖದಲ್ಲಿ ಜೀವಿಕ ಗಡಿಯಾರವಿದ್ದು, ಅದರಿಂದ ಬೇರೆ ಬೇರೆ ಸಮಯದಲ್ಲಿ ವಲಸೆಗಾಗಿ ಮೋಚಕಮಾಡುತ್ತಾದೆ. ಹಾಗಾಗಿ ಒಂದೇ ನದಿಯ ಈಲ್‌ಗಳು ಅದೇ ವೇಳೆಯಲ್ಲಿ ಸರ್‌ಗ್ಯಾಸೋಗೆ ಮರಳಿ ಬರುತ್ತವೆ. ಸಂತಾನೋತ್ಪತ್ತಿ ಸಮಯದಲ್ಲಿ ಒಂದು ಪ್ರದೇಶದ ಈಲ್‌ ಒಂದಕ್ಕೊಂದು ಕೂಡುತ್ತವೆ. ಆದರೆ ಒಂದು ಪ್ರಶ್ನೆಗೆ ಉತ್ತರ ನಿಗೂಢವಾಗಿಯೇ ಉಳಿಯುತ್ತದೆ. ಮರಿ ಈಲ್‌ಗಳಿಗೆ ತಾವೆಂದೂ ಪಯಣಿಸದ ಸರ್‌ಗ್ಯಾಸೋದ ದಾರಿ ಹೇಗೆ ಸಿಗುತ್ತದೆ?

ಆಕಾಶಕ್ಕೆ ಸದಾ ತೆರೆದೇ ಇರುವ ಸಮುದ್ರಗಳ ಜೀವಿಗಳ ಕುರಿತು ಅಧ್ಯಯನದ ಮಾತಂತೂ ದೂರ, ಊಹಿಸುವುದೂ ಕಷ್ಟ. ಅಧ್ಯಯನದ ಮೊದಲೇ ಕೆಲವು ಜೀವಿಗಳು ನಾಶಹೊಂದಬಹುದು. ಸರ್‌ಗ್ಯಾಸೋದಲ್ಲಿ ವಾಸಿಸುವ ಸಮುದ್ರಾಮೆಯ ಎಲ್ಲ ೭ ಪ್ರಭೇದಗಳು ಅಪಾಯದಲ್ಲಿವೆ. ಕೋಲಂಬಸ್ ೧೫೦೩ರಲ್ಲಿ ತನ್ನ ೪ನೇ ದಂಡಯಾತ್ರೆಯಲ್ಲಿ ಕೇಮನ್ ನಡುಗಡ್ಡೆಯ ದಂಡೆಯ ತುಂಬೆಲ್ಲ ಆಮೆಗಳು ಆಕ್ರಮಿಸಿದ್ದನ್ನು ಕಂಡು ಆಶ್ಚರ್‍ಯಗೊಂಡಿದ್ದ. ಅವು ಗೂಡು ಕಟ್ಟಿ ಹಾಗೂ ತತ್ತಿ ಇಟ್ಟಿದ್ದವು. ಸದ್ಯ ಆ ಆಮೆಗಳ ೬%ದಷ್ಟು ಸಂತತಿ ಮಾತ್ರ ಉಳಿದಿದೆ ಎಂದು ಹೇಳಬಹುದು.

ಅತ್ಯುತ್ತಮವಾಗಿ ಅಭ್ಯಸಿಸಿದ ಸಮುದ್ರ ಆಮೆಗಳಲ್ಲಿ ಲಾಗರ್‌ಹೆಡ್‌ಗಳ ಪ್ರಭೇದವೂ ಒಂದು. ಅವು ಕೆರೋಲಿನಾಸ್‌ದಿಂದ ಕೆರಿಬಿಯನ್ ಸಮುದ್ರಗಳ ದಂಡೆಗಳಲ್ಲಿ ಗೂಡು ಕಟ್ಟುತ್ತವೆ. ಜುಲೈ ಮತ್ತು ಅಕ್ಟೋಬರ್‍ ಮಧ್ಯದಲ್ಲಿ ಅವುಗಳ ತತ್ತಿ ಮರಿಯಾಗಿ ಸಮುದ್ರದೆಡೆಗೆ ಓಡುತ್ತವೆ. ಹಸಿವಿನಿಂದ ಕಂಗಾಲಾಗಿ ನಿಲ್ಲುವ ಏಡಿಗಳು ಮತ್ತು ಸಮುದ್ರ ಪಕ್ಷಿಗಳಿಗೆ ಆಹಾರವಾಗದಿದ್ದರೆ, ಸಮುದ್ರ ಸೇರಿ, ಅದೇ ದಂಡೆಗೆ ತತ್ತಿ ಇಡಲು ಮಾತ್ರ ಹೊರಗೆ ಬರುತ್ತವೆ.

ಆಮೆ ತಜ್ಞ ಆರ್‍ಚಿ ಕಾಲ್ ಈ ಅಂತರವನ್ನು “ಕಳೆದ ವರ್‍ಷ” ಎಂದು ಅವನು ಸಾಯುವ ಸ್ವಲ್ಪ ಮುಂಚೆ ೧೯೮೭ರಲ್ಲಿ ದಾಖಲಿಸಿದ್ದ. ಅವು ಸರ್‌ಗ್ಯಾಸೋದಲ್ಲಿ ಆ ವರ್‍ಷ ಕಳೆದಿವೆಯೆಂದು. ಕಳೆದ ಒಂದು ದಶಕದಲ್ಲಿ ಪ್ರಾಣಿ ತಜ್ಞ ಕರೆನ್ ಜೋರ್‍ನಾ ಡಾಲ್, ಫ್ಲೋರಿಡಾದ ಆರ್‍ಚಿ ಕಾರ್‍ ಸೆಂಟರ್‍ ಫಾರ್‍ ಸೀ ಟರ್‍ಟಲ್ ರಿಸರ್‍ಚ್, ಅವರು ಕಾರ್‍ ಅವರ ತತ್ವವನ್ನು ಪ್ರತಿಪಾದಿಸಿದರು. ಅದಕ್ಕೆ ಒಂದು ವರ್‍ಷ ಸಾಕಾಗುವುದಿಲ್ಲ. ಡಿಎನ್‌ಎ ಅಧ್ಯಯನದಿಂದ ಮರಿಗಳು ಒಮ್ಮೆ ಗೂಡನ್ನು ಬಿಟ್ಟಾಗ ಎಲ್ಲಿಗೆ ಹೋಗುತ್ತವೆ ಎಂಬುದನ್ನು ಕಂಡುಹಿಡಿದಿದ್ದಾರೆ. ಯೂರೋಪಿನ ವಿವಿಧ ನದಿಗಳ ಈಲ್‌ಗಳಂತೆ, ವಿಭಿನ್ನ ಬೀಚ್‌ಗಳ ಲಾಗರ್‌ಹೆಡ್‌ಗಳು ವಿಶಿಷ್ಠವಾದ ಮೈಟೊಕಾಂಡ್ರಿಯಲ್ ಡಿಎನ್‌ಎ ಹೊಂದಿರುತ್ತವೆ. ಜೋರ್‍ನಾಡಾಲ್ ಮತ್ತು ಸಾಗರ ಪರಿಸರತಜ್ಞ ಆಲನ್ ಬಾಲ್ಟನ್ ಅವರು ಸಣ್ಣ ಬೆಳ್ಳಿಯ ಡಾಲರ್‌ ಗಾತ್ರದ ಮರಿಗಳು ತಮ್ಮ ತವರು ದಂಡೆಯಿಂದ ಸಾವಿರಾರು ಮೈಲುಗಳವರೆಗೆ ಅಟ್ಲಾಂಟಿಕ್ ಮತ್ತು ಮೆಡಿಟರ್‍ರೇನಿಯನ್‌ವರೆಗೆ ವಲಸೆ ಹೋಗುತ್ತವೆ. ಅವು ಒಂದಲ್ಲ, ಎರಡಲ್ಲ ೧೧ ವರ್‍ಷಗಳವರೆಗೆ ಜೆಲ್ಲಿಮೀನು, ಸ್ನೇಲ್, ಕಾವಡಿ ಮತ್ತು ಶ್ರಿಂಪ್ಸ್‌ಗಳನ್ನು ತಿನ್ನುತ್ತ ಕಳೆಯುತ್ತವೆ ಎನ್ನುತ್ತಾರೆ.

ಬೆರ್‍ಮುಡಾ ಅಕ್ವೇರಿಯಂದ ಟರ್‍ಟಲ್ ಪ್ರಾಜೆಕ್ಟ್ ಕೋ ಆರ್‍ಡಿನೇಟರ್‍ ಮತ್ತು ಮುಖ್ಯ ಅಕ್ವೇರಿಸ್ಟ್ ಜೆನ್ನೀಫರ್‍ ಗ್ರೇ, ಅವರು ೨,೫೦೦ ಹಸಿರು ಸಮುದ್ರದಾಮೆಗಳನ್ನು ಗುರುತು ಹಾಕಿದ್ದಾರೆ. “ಈ ಆಮೆಗಳಿಗೆ ಸರ್‌ಗ್ಯಾಸೋ ಸಮುದ್ರ ಬಹಳ ಮುಖ್ಯವಾಗಿದೆ. ಪ್ರಾಢಾವಸ್ತೆಗೆ ಬರಲು ೫೦ ವರ್‍ಷ ತೆಗೆದುಕೊಳ್ಳುವ ಇವಕ್ಕೆ ಬಹುಮುಖ್ಯ ಬೆಳವಣಿಗೆಯ ಆವಾಸವಾಗಿದೆ. ಅವುಗಳ ಉಪಹಾರ, ಮಧ್ಯಾಹ್ನದ ಊಟ, ರಾತ್ರಿಯೂಟ ಅಷ್ಟೇ ಅಲ್ಲ, ಮನೆಯಾಗಿದೆ” ಎನ್ನುತ್ತಾರೆ. ಸರ್‌ಗ್ಯಾಸೋ ನಾಶವಾದರೆ ಈ ಆಮೆಗಳ ಸಂತತಿಗೆ ಅಪಾಯ ಎಂದು ಚಿಂತಿಸುತ್ತಾರೆ. ಮತ್ತಾವ ಸಮುದ್ರಕ್ಕಿಂತಲೂ ಸರ್‌ಗ್ಯಾಸೋದಲ್ಲಿ ಅವು ಅತ್ಯಂತ ಸುರಕ್ಷಿತವಾಗಿವೆ ಅವು ಸಣ್ಣವಾಗಿದ್ದಾಗ ಪೋಷಕ ದ್ರವ್ಯದ ಜಾಗ ಬಿಟ್ಟು ಕದಲುತ್ತವೆ, ಏಕೆಂದರೆ ಅಲ್ಲಿ ವೈರಿಗಳಿರುವುದರಿಂದ ಎನ್ನುತ್ತಾರೆ ಗ್ರೇ. ಸರ್‌ಗ್ಯಾಸೋದಲ್ಲಿ ವಾಸವಾಗಿರುತ್ತವೆ. ಒಂದು ವರ್‍ಷದ ನಂತರ ಒಂದು ನಿರ್‍ದಿಷ್ಟ ಗಾತ್ರಕ್ಕೆ ಬೆಳೇದಾಗ ಹೆಚ್ಚಿನ ಆಹಾರಕ್ಕಾಗಿ ಕರಾವಳಿ ಪ್ರದೇಶಕ್ಕೆ ಬರುತ್ತವೆ. ಅವು ಸರ್‌ಗ್ಯಾಸೋ ಬಿಟ್ಟಾಗ ಮಾನವನಿಂದ ಹೆಚ್ಚಿನ ಅಪಾಯದಲ್ಲಿರುತ್ತವೆ. ಗ್ರೇ ಅವರು ಗುರುತಿಸಿದ್ದ ೨,೫೦೦ ಹಸಿರು ಆಮೆಗಳಲ್ಲಿ ೪೮ ಆಮೆಗಳನ್ನು ಆಹಾರಕ್ಕಾಗಿ ಸಾಯಿಸಲಾಗಿತ್ತು.

ಬೆರ್‍ಮುಡಾದಿಂದ ದಕ್ಷಿಣಕ್ಕೆ ೭೦ ಮೈಲುಗಳ ದೂರದಲ್ಲಿ ರಿಸರ್‍ಚ್ ಕೇಂದ್ರ ವೆದರ್‌ಬರ್‍ಡ್ ೨ ದಲ್ಲಿ ನೀರಿನ ನಮುನೆ ಕಲೆಹಾಕುವ ಬಾಟ್ಲ್‌ಗಳು ಸಮುದ್ರದಾಳಕ್ಕೆ ಇಳಿಯುತ್ತವೆ. ತಂತಿ ಸಾಗರದೊಳಗೆ ನೂರಾರು ಅಡಿ ಇಳಿದು ಅಲ್ಲಿನ ಉಷ್ಣತೆ, ಸಾಂದ್ರತೆ ಮತ್ತಿತರ ವಿಷಯಗಳ ಲೆಕ್ಕಾಚಾರ ಹಾಕುತ್ತದೆ. ಸಾಗರ ಮಾನವ ತಳಕ್ಕೆ ಇಳಿದು ಮುಷ್ಠಿಯಲ್ಲಿ ಸರ್‌ಗ್ಯಾಸಂ ಹಿಡಿದು ತರುತ್ತಾನೆ. ಅದು ಸರಾಯಿ ವಾಸನೆ ಹೊಂದಿದ್ದು, ಖಾಕಿ ಬಣ್ಣ, ಹುಲ್ಲಿನ ಕಿರಿದಾದ ಪಟ್ಟೆಗಳಂಥೆ ಎಲೆಗಳು ಹಾಗೂ ಸಣ್ಣ ಸಣ್ಣ ಬೀಜಗಳ ತರಹದ ಗುಳ್ಳೆಗಳು. ಬಿಳಿ ಪೇಪರ್‍ ತಟ್ಟೆಯ ಮೇಲೆ ಕಳೆಯನ್ನು ಅಲುಗಾಡಿಸಿದಾಗ ಇಂಚಿನ ೩/೮ನೇ ಭಾಗದಷ್ಟು ಸಣ್ಣ ಏಡಿ ಕೆಳಗೆ ಬೀಳುತ್ತದೆ. ಅದು ಖಾಕಿ ಬಣ್ಣದಾಗಿದ್ದು, ಅದರ ಹಿಂಬದಿಯಲ್ಲಿ ಚುಕ್ಕೆಗಳಂತೆ ಎರಡು ಸಣ್ಣ ಕಣ್ಣುಗಳು, ದಿಟ್ಟಿಸುತ್ತಿರುವಂತಿವೆ. “ನಮಗೆ ಆಶ್ಚರ್‍ಯಕರವಾದ ಸಂಗತಿಗಳು ಗೋಚರಿಸುತ್ತವೆ” ಎನ್ನುತ್ತಾರೆ ಟೋನಿ ನ್ಯಾಪ್ ಕೇಂದ್ರದ ನಿರ್‍ದೇಶಕರು. ಅವರು ಕೊನೆಯಲ್ಲಿ ಒಂದು ಮಾತಿನಿಂದ ಮುಗಿಸುತ್ತಾರೆ.

“ನಮಗೆ ಸರ್‌ಗ್ಯಾಸೋ ಸಮುದ್ರದ ಎಷ್ಟೋ ಸುಂದರವಾದ ವಿಷಯಗಳು ತಿಳಿಯಬೇಕಿದೆ.”

ಸಾಗರ ಮಧ್ಯ ಸಮುದ್ರ

ಎರಡು ಮಿಲಿಯನ್ ಚದರ ಮೈಲು ತತ್ತಿಯಾಕಾರದ ಸರ್‌ಗ್ಯಾಸೋ ಸಮುದ್ರ, ಅರ್‍ಧ ಮೈಲು ಆಳವಾಗಿದ್ದು ಅಟ್ಲಾಂಟಿಕ್ ಸಾಗರದ ತಂಪು ಪ್ರದೇಶದಲ್ಲಿ ಹರಡಿದೆ. ಅದರ ಸುತ್ತಲೂ ಪ್ರವಾಹಗಳು ಸುತ್ತುವರಿದಿವೆ. ಪಶ್ಚಿಮಕ್ಕೆ ಗಲ್ಫ್ ಸ್ಟ್ರೀಮ್, ಉತ್ತರ ಅಟ್ಲಾಂಟಿಕ್ ಪ್ರವಾಹ ಉತ್ತರಕ್ಕೆ, ಕೆನರಿ ಪ್ರವಾಹ ಪೂರ್‍ವಕ್ಕೆ ಹಾಗೂ ದಕ್ಷಿಣಕ್ಕೆ ಉತ್ತರ ಈಕ್ವಡೋರಿಯಲ್ ಪ್ರವಾಹ. ಕಳೆದ ೪೭ ವರ್‍ಷಗಳಿಂದ ಸಂಶೋಧಕರು ಸರ್‌ಗ್ಯಾಸೋ ಸಮುದ್ರಕ್ಕೆ ನಿಯಮಿತವಾಗಿ ಭೇಟಿ ಮಾಡಿ ಅಲ್ಲಿನ ಪ್ರವಾಹಗಳ ವರ್‍ತನೆ ಅಷ್ಟೇ ಅಲ್ಲ ಉಷ್ಣತೆ, ವಾಹಕತೆ, ಆಳ ಮತ್ತು ಸಮುದ್ರ ಹಾಗು ಸಾಗರದ ಲವಣಯುಕ್ತತೆ ಅಭ್ಯಸಿಸುತ್ತಿದ್ದಾರೆ.

ಸದ್ಯ ವಿಜ್ಞಾನಿಗಳು ಈ ಲೆಕ್ಕಾಚಾರವನ್ನು ಜಾಗತಿಕ ಉಷ್ಣತಾಮಾನ ಏರುವಿಕೆಯಲ್ಲಿ ಸಾಗರದ ಪಾತ್ರದ ಕುರಿತು ಅಧ್ಯಯನ ನಡೆಸುತ್ತಿದ್ದಾರೆ. ಇದನ್ನು ಫೈಟೋಪ್ಲಾಂಕ್ಟನ್ ತಜ್ಞ ಮೈಕೇಲ್ ಲೋಮಾಸ್ ನಡೆಸುತ್ತಿದ್ದಾರೆ. ಫಾಸಿಲ್ ಇಂಧನದಿಂದ ಹೊರಬರುವ ಕಾರ್‍ಬನ್ ಡೈ ಆಕ್ಸೈಡ್ ಬಹುಮುಖ್ಯ ಅನಿಲವಾಗಿದ್ದು ಜಾಗತಿಕ ತಾಪಮಾನದಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಸೂರ್‍ಯಕಿರಣ ತೂರಿ ಬರುವಂತೆ ಮಾಡಿ, ಪರಿಸರ ಬಿಸಿಯಾಗುವಿಕೆಗೆ ಕಾರಣವಾಗಿದೆ. ಸಸ್ಯಗಳು CO2 ಅನ್ನು ಉಪಯೋಗಿಸಿಕೊಳ್ಳುವಂಥೆ ಉಳಿದಿದ್ದನ್ನು ಸಾಗರದ ಸಸ್ಯಗಳು ಬಳಸಿಕೊಳ್ಳುತ್ತವೆ. ಕಾರ್‍ಬನ್ ಹೀರಿ ಸ್ಥಿರಗೊಳಿಸುತ್ತವೆ. ಸಸ್ಯಗಳು ಸತ್ತಾಗ ಕಾರ್‍ಬನ್‌ದೊಂದಿಗೆ ಬುಡ ಸೇರುತ್ತವೆ. ಉದ್ದಿಮೆಗಳಿಂದ CO2 ಹೆಚ್ಚಿಗೆ ಹೊರಬಂದು ಭೂಮಿಯ ಅಥವಾ ಸಾಗರದ ಸಸ್ಯಗಳಿಗೆ ಹೀರಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ವಾತಾವರಣದಲ್ಲಿ CO2 ಪ್ರಮಾಣ ಕಳೆದ ೪೦ ವರ್‍ಷಗಳಿಂದ ಏರುತ್ತಿವೆ. ಸರ್‌ಗ್ಯಾಸೋ ಅಧ್ಯಯನದಿಂದ ಸಾಗರದಲ್ಲಿಯೂ ಕೂಡ CO2 ಪ್ರಮಾಣ ಹೆಚ್ಚುತ್ತಿದೆ. ಲೋಮಾಸ್ ಹೇಳುವಂತೆ ಸಾಗರಗಳು ಕಾರ್‍ಬನ್ ಹೀರಿಕೆಗಳು. ಒಂದು ವೇಳೆ ಕಾರ್‍ಬನ್ ಹೀರಿಕೆ ಆಗದಿದ್ದರೆ ಜಾಗತಿಕ ಉಷ್ಣತಾಪಮಾನ ಹೆಚ್ಚುತ್ತದೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಯೋಧ
Next post ಬನ್ನಿ ಮೇಘಗಳೇ

ಸಣ್ಣ ಕತೆ

 • ಆವರ್ತನೆ

  ಒಬ್ಬ ಸಾಹಿತಿಯನ್ನು ನೋಡುವ ಕುತೂಹಲ ಯಾರಿಗಿಲ್ಲ? ಪಕ್ಕದೂರಿನ ಹೈಸ್ಕೂಲಿನಲ್ಲಿ ಕಾದಂಬರಿಕಾರ ಅ.ರ.ಸು.ರವರ ಕಾರ್ಯಕ್ರಮವಿದೆಯೆಂಬ ಸುದ್ದಿ ಕೇಳಿ ನಾವು ನೋಡಲು ಹೋದೆವು. ಅ.ರ.ಸು.ರವರ ಕೃತಿಗಳನ್ನು ನಾವಾರೂ ಹೆಚ್ಚಾಗಿ ಓದಿರಲಾರೆವು.… Read more…

 • ನಾಗನ ವರಿಸಿದ ಬಿಂಬಾಲಿ…

  ಬಿಂಬಾಲಿ ಬೋಯ್ ತನ್ನ ಅಮ್ಮ ಅಣ್ಣ ಅತ್ತಿಗೆ ಜೊತೆ ಅಟಲಾ ಎಂಬ ಒರಿಸ್ಸಾದ ಹಳ್ಳಿಯಲ್ಲಿ ವಾಸಿಸುತ್ತಿದ್ದಳು. ತಂದೆಯ ಮರಣದ ಮುಂಚೆಯೆ ಅವಳ ಹಿರಿಯಕ್ಕನ ಮದುವೆಯಾಗಿತ್ತು. ತಂದೆ ಬದುಕಿದ್ದಾಗ… Read more…

 • ವಲಯ

  ಅವಳ ಕೈ ಬೆರಳುಗಳು ನನ್ನ ಮುಖದ ಮೇಲೆ ಲಯಬದ್ಧವಾಗಿ ಚಲಿಸುತ್ತಿವೆ. ಕಂಗಳ ಮೇಲೆ ಅದೊಂದು ತರಹ ಮಂಪರು ಮೆತ್ತ-ಮೆತ್ತಗೆ ಹಾರಾಡತೊಡಗುತ್ತಿದೆ! ನಾಳೆ ಹೋಗಬೇಕಾದ ‘ಪಾರ್ಟಿ’ ಗೆ ಈಗಾಗಲೇ… Read more…

 • ಬಲಿ

  ಅವಳು ಭಾಗಶಃ ಚಟ್ಟೆಯಾದ ಕಪ್ಪು ಬಣ್ಣಕ್ಕೆ ತಿರುಗಿದ ಅಲ್ಯೂಮೀನಿಯಂ ತಟ್ಟೆಯೊಳಗೆ ಸ್ವಲ್ಪ ಹಾಲು ಸುರಿದು ಅದಕ್ಕೆ ಸ್ವಲ್ಪ ನೀರನ್ನು ಬೆರೆಸಿ, ಒಲೆಯ ಮೇಲಿಟ್ಟು ಮುಚ್ಚಳ ಮುಚ್ಚಿದಳು. ಒಲೆಯ… Read more…

 • ಎರಡು…. ದೃಷ್ಟಿ!

  ದೀಪಾವಳಿಯು ಸಮೀಪಿಸಿದ್ದಿತು. ದೀಪಾವಳಿಯನ್ನು ನಾವು ಪಂಚಾಗ ನೋಡದೆ ತಿಳಿದುಕೊಳ್ಳಬಹುದು. ಅದು ಹೇಗೆ? ದೀಪಾವಳಿ ಪೂರ್ವರಂಗದ ಸುಳಿವು ನಮಗೇ ಗೊತ್ತೇ ಆಗುವದು. ಮನೆಯಲ್ಲಿ ಕರಚೀ ಕಾಯಿ, ಚಿರೋಟಿಗಳನ್ನು ಕರಿಯುವ… Read more…