ಬನ್ನಿ ಮೇಘಗಳೇ
ಬನ್ನಿ ಜೀವನಾಡಿಗಳೇ|
ನನ್ನ ತವರೂರಿಗೆ
ನಾಲ್ಕು ಹನಿಯ ಸುರಿಸಿ|
ನನ್ನ ಅಣ್ಣ ತಮ್ಮಂದಿರ ಉಣಿಸಿ
ಮುಂದೆ ಪ್ರಯಾಣ ಬೆಳೆಸಿ||
ತಾಯಿ ಇರುವಳು ಅಲ್ಲಿ
ನೀರಿಲ್ಲವಂತೆ
ಅಣ್ಣಬೆಳೆದಿಹ ಪೈರು
ಒಣಗುತಿದೆಯಂತೆ|
ನನ್ನ ಸಾಕಿದ ಹಸುಕರುವಿಗೆ
ಮೇವಿಲ್ಲವಂತೆ||
ನಾ ಆಡಿ ಬೆಳೆದಾ ಗುಡಿಯ
ಬಾಗಿಲನು ತೊಳೆಯೆ ಬಾ|
ನಾ ರಂಗೋಲಿ ಹಾಕಿದಾ
ಅಂಗಳವ ಸಾರಿಸಲು ನೀ ಬಾ|
ನನ್ನೂರ ಪುಷ್ಕರಣಿಯ
ತುಂಬಿಸಲು ನೀನೊಮ್ಮೆ ಬಾ||
ನನ್ನೂರ ಗಿರಿಬೆಟ್ಟವದು
ಬಿಸಿಲಿಗೆ ಬಳಲಿಹುದು|
ಹಳ್ಳ ಕೊಳ್ಳ ಕೆರೆಕಟ್ಟೆ ಬಾವಿಗಳು
ಬತ್ತಿ ಬರಡಾಗಿಹವು|
ನನ್ನ ಮನೆದೇವರ
ಪೂಜೆಗೆ ಹೂ ಪತ್ರೆಯದಿಲ್ಲಾ||
*****
Latest posts by ಜಾನಕಿತನಯಾನಂದ (see all)
- ಅನುಕರುಣೆಯೆಂಬ - January 18, 2021
- ನಾನು ಅಂಧನಾಗಿ - January 11, 2021
- ಅಲ್ಪ ತೃಪ್ತನಾಗಿರೆ - January 4, 2021