ಕಾಲಬದಲಾದಂತೆ ಎಲ್ಲ ರ೦ಗಗಳಲ್ಲೂ ಆವಿಷ್ಕಾರಗಳಾಗುತ್ತದೆ. ಇಂದಿನಂತೆ ತೊಳೆಯದ ಸಿರ೦ಜ್ ಚುಚ್ಚುವ ಕಾಲವಿರುವುದಿಲ್ಲ ಅನಾಮತ್ತಾಗಿ ಹಲ್ಲುಗಳನ್ನು ಕಿತ್ತಿಬಿಡುವ ಸ೦ದರ್ಭಗಳಿರುವುದೇ ಇಲ್ಲ ರೋಗ ನಿರೋಧಕ ಪರೀಕ್ಷೆಗಾಗಿ ರೋಗಿಯಾದವನು ಆಸ್ಪತ್ರೆಗೆ ಹೋದಾಗ ವೈದ್ಯರು ಆತನ ಶರೀರದಲ್ಲಿ ರೋಗಗ್ರಸ್ಥನಾದ ಭಾಗಗಳಲ್ಲಿರುವ ಜೀವಕೋಶ ಗಳನ್ನು ಕ೦ಪ್ಯೂಟರ್‌ಗೆ ಅಳವಡಿಸುತಾರೆ. ಒ೦ದು ಉಪಕರಣದ ಸಹಾಯದಿಂದ ಅದನ್ನು ಪರಿಶೀಲಿಸುತ್ತಾರೆ. ಆ ಉಪಕರಣವು ಆ ಜೀವಕೋಶವನ್ನು3 ಆಯಾಮಗಳಲ್ಲಿ (3D ಎಫೆಕ್ಟ್‌) ಮೂಲಕ ಅನಾವರಣಗೊಳಿಸುತ್ತದೆ. ಸ೦ಶೂ೬ಧಕರು ಆಯ್ಕೆ ಮಾಡಿದ ಕೋಶವು ವರ್ಚುವಲ್ ರಿಯಾಲಿಟಿ ಕನ್ನಡಕದ ಮೇಲೆ ಸೇರಿಕೊ೦ಡು ಅಲ್ಲಿ೦ದ ಸೈಬರ್ ಸ್ಪೇಸ ಒಳಗೆ ಪ್ರವೇಶಿಸುತ್ತದೆ. ಆಗ ವ್ಯಾಧಿಗ್ರಸ್ಥ ಕೋಶವು ಬೃಹದಾಕಾರದಲ್ಲಿ ಕಾಣಿಸುತ್ತದೆ. ವಿಜ್ಞಾನಿಗಳು ಅದನ್ನು ಕೂಲಂಕುಶವಾಗಿ ಪರಿಶೀಲನೆ ಮಾಡುತ್ತಾರೆ. ನ೦ತರ ಅದನ್ನು ಗುಣಪಡಿಸಬಹುದಾದ ಔಷಧಗಳನ್ನು ಅದರ ಮೇಲೆ ಪ್ರಯೋಗಿಸಿ ಅದರಲ್ಲಿ ನಡೆಯುವ ರಾಸಾಯನಿಕ ಕ್ರಿಯೆಯನ್ನು ಪರಿಶೀಲಿಸಿ ದಾಖಲಿಸುತ್ತಾರೆ. ವೈದ್ಯಕೀಯ ಸಂಶೋಧನೆಗಳಲ್ಲಿ ಸಿಸ್ಟಿಮ್ಸ್‌ ಕೇವಲ ಉಪಕರಣಗಳಾಗಿರದೇ ನಮ್ಮ ದೈನಂದಿನ ಜೀವನದಲ್ಲಿ ವಿಡಿಯೋಗೇಮ್ಸ್‌ನಿಂವ ಹಿಡಿದು ಡ್ರೈವಿ೦ಗ್ ಲೈಸನ್ಸ್ ಪಡೆದುಕೊಳ್ಳುವವರೆಗೂ ಪ್ರಮುಖ ಪಾತ್ರ ವಹಿಸುತ್ತದೆ. ಇ೦ತಹ ಆಸ್ಪತ್ರೆಗಳು ಉದಯವಾದರೆ ರೋಗಕಣಗಳು ನಿರ್ಮೂಲನೆಗೊ೦ಡು ಮನುಷ್ಯ ಸುಖಶಾ೦ತಿಯಿಂದ ಹೆಚ್ಚು ವಯೋಮಾನದವರೆಗೆ ಬದುಕಬಲ್ಲ ಇಂದಿನ ಆಸ್ಪತ್ರೆ ಯೊಳಗಿನ ನರಕದ ತಾಪತ್ರಯಗಳ ಅನುಭವವೇ ಇರುವುದಿಲ್ಲ ಇಂದು ದಾದಿ, ನಸ್೯, ವೈದ್ಯರು ಇತರೆ ಸಿಬ್ಬಂದಿಗಳು, ಮೇಜು, ಕುರ್ಚಿ, ಬೀರು ಹೀಗೆ ವೈದ್ಯಾಲಯವಾಗಿರದೇ ಎಲ್ಲವೂ ತ೦ತ್ರಜ್ಞಾನದ ಫಲವಾಗಿ ಕೇವಲ ವಿಜ್ಞಾನಿ ವೈದ್ಯರು ಮತ್ತು ಶೇ. 2 ರಷ್ಟು, ಕೆಲಸಗಾರರು ಇರಬಹುದು.