ಅಪಾಯದ ಕಾರ್ಖಾನೆ, ಅಣು ವಿದ್ಯುತ್ ಕೇಂದ್ರ ಮತ್ತು ಅನಿಲಯುಕ್ತ ಕೇಂದ್ರಗಳಲ್ಲಿ ಕೆಲಸ ಮಾಡುವುದು ಮೈತುಂಬ ಎಚ್ಚರಿಕೆಯನ್ನಿಟ್ಟುಕೊಂಡೇ ಮಾಡಬೇಕಾಗುತ್ತದೆ. ಅನಿರೀಕ್ಷಿತವಾಗಿ ಬೆಂಕಿ ತಗಲುವುದು. ಕೈ ಕಾಲುಗಳಿಗೆ ಜಖಂ ಆಗುವುದು. ಇತ್ಯಾದಿ ಅಪಾಯಗಳಾಗುತ್ತಲೇ ಇರುತ್ತದೆ. ಇಂಥಹ ಸ್ಥಳಗಳಲ್ಲಿ ಕೆಲಸ ಮಾಡುವ ಜನರಿಗಾಗಿ ಅಪಾಯ ರಹಿತ ಮತ್ತು ಅಪಾಯದ ಎಚ್ಚರಿಕೆಯನ್ನು ನೀಡುವ ಸೇಷ್ಟಿಸೂಟ್‌ಗಳು ರಚನೆಯಾಗಿವೆ.

ಇಂಥಹ ವಸ್ತ್ರಗಳನ್ನು ಅಮೇರಿಕಾದ ನ್ಯೂಮೆಕ್ಸಿಕೋದಲ್ಲಿರುವ ‘ಲಾಸ್ ಆಲಾಮೋಸ್’ ರಾಷ್ಟ್ರೀಯ ಪ್ರಯೋಗಶಾಲೆ ತಯಾರಿಸುತ್ತದೆ. ಮತ್ತು ಈ ಸೂಟ್‌ಗೆ ಪೆಟೆಂಟ್ ಸಹ ದೂರೆತಿದೆ. ಅಪಾಯಕಾರಿ ಪರಿಸ್ಥಿತಿಯಲ್ಲಿ ಈ ವಸ್ತ್ರದಲ್ಲಿರುವ ವಿಶೇಷ ವಿದ್ಯುತ್ ವಾಹಕಗಳು ತಕ್ಷಣ ಪ್ರೇರಿತವಾಗಿ ಅಪಾಯದ ಕರೆಗಂಟೆಯನ್ನು ಬಾರಿಸುತ್ತವೆ. ವಿವಿಧ ವಿಕಿರಣಗಳು, ವಿಷಾನಿಲಗಳು, ಜೈವಿಕ ಅನಿಲಗಳು ಇತ್ಯಾದಿಗಳನ್ನು ಇದು ತಡೆದು ಹಿಡಿಯುತ್ತವೆ. ಈ ಕಾರಣವಾಗಿ ಇಲ್ಲಿಯ ಕೆಲಸಗಾರರು ಭಯವಿಲ್ಲದೇ ಉತ್ಪಾದನೆಯನ್ನು ಮಾಡಬಹುದು. ಈ ಕಡೆ ಮನೆಯಲ್ಲಿ ಹೆಂಗಸರಿಗೂ ನೆಮ್ಮದಿ ಕೂಡ.

ಮೊದಲು ಪಾಲಿವಿನೈಲ ಆಲ್ಕೋಹಾಲ್ ಮತ್ತು ಉಪ್ಪುಗಳನ್ನು ಗ್ಲಿಸರಾಲ್‌ನಲ್ಲಿ ಕರಗಿಸಿ ಅರೆವಾಹಕ ಘನ ಪದಾರ್ಥಗಳನ್ನು ತಯಾರಿಸಲಾಗುತ್ತದೆ. ಇದಕ್ಕೆ ವಿದ್ಯುತ್ ವಾಹಕ ಪಾಲಿಮರ್ ಪದಾರ್ಥದ ಪದರವನ್ನು ಕೊಡಲಾಗುತ್ತದೆ. ಹೀಗೆ ತಯಾರಾದ ಬಟ್ಟೆಯಿಂದ ಸೂಟ್‌ಗಳನ್ನು ಹೊಲೆಯಲಾಗುತ್ತದೆ. ವಾಹಕ ಪದರನಲ್ಲಿ ವಿದ್ಯುತ್ ತಂತಿಯ ಸಂಪರ್ಕವಿರುತ್ತದೆ. ಅಪಾಯಕಾರಿ ಪರಿಸರವಿದ್ದಾಗ ವಿದ್ಯುತ್ ಮಂಡಲ ಪೂರ್ಣವಾಗಿ ಅಪಾಯದ ಗಂಟೆಯನ್ನು ಬಾರಿಸುತ್ತದೆ. ಈ ದಿಸೆಯಲ್ಲಿ ಅಲ್ಲಿಯ ಕಾರ್ಖಾನೆಗಳ ಕೆಲಸಗಾರರಿಗೆ ನೆಮ್ಮದಿ ಇದೆ. ಪರಿಸರ ಮಾಲಿನ್ಯದ ತೊಂದರೆ ಇರದೇ ಈ ಕೆಲಸಗಳಿಗೆ ಬಹಳೇ ‘ಡಿಮ್ಯಾಂಡ’ ಕೂಡ ಇದೆ.
*****