ಜಾನಪದದಲ್ಲಿ ಮಾನವೀಯ ಮೌಲ್ಯಗಳು

ಜಾನಪದದಲ್ಲಿ ಮಾನವೀಯ ಮೌಲ್ಯಗಳು

ಜಾನಪದ ಇಂದು ಮತ್ತೊಮ್ಮೆ ಜೀವಂತವಾಗಿ ಸಮಾಜದಲ್ಲಿ ಬೆಳಗುತ್ತಿದೆ. ಜಾನಪದವು ಜನರ ಸಂಸ್ಕೃತಿಗೆ ಹಿಡಿದ ಕೈಗನ್ನಡಿಯಾಗಿದೆ. ಜನಪದರು ಜನಾಂಗದ ಜೀವನಾಡಿಯಾಗಿ ನೀತಿಯ ಸೂತ್ರವಾಗಿ, ಬಾಳಿನ ದೀಪವಾಗಿ ಬದುಕಿನ ವಿವಿಧ ಸಂಸ್ಕೃತಿಗಳನ್ನು ಬಿತ್ತರಿಸುವ ಹೃದಯಗಳ ಮಾಧ್ಯಮವಾಗಿ ಬಾಳಿದೆ.

ಇಂದು ಬದುಕಿನಲ್ಲಿ ಜಾನಪದವಿಲ್ಲದಿದ್ದರೆ ಜೀವನಕ್ಕೆ ಯಾವ ಅರ್ಥ ಇರುತಿರಲಿಲ್ಲ. ನಮ್ಮ ಪೂರ್ವಜರ ನಡೆ, ನುಡಿ, ಅಂತಃಕರಣ ತತ್ವ ನಿಷ್ಠೆ, ಶೃದ್ಧೆ, ಜೀವನ ಸಾರ್ಥಕತೆ, ಮಾನವೀಯ ಮೌಲ್ಯಗಳಂಥ ಯಾವುವು ನಮಗೆ ಇಂದು ಕಾಣುತಿರಲಿಲ್ಲ.

ಜನರಿಂದ ಜನರಿಗೆ, ನಾಲಿಗೆಯಿಂದ ನಾಲಿಗೆಗೆ ಹೃದಯದಿಂದ ಹೃದಯಕ್ಕೆ ಜನಪದ ರಸವಾಕ್ಯಗಳು ತಟ್ಟಿ ಹೊಸ ಸಾರ್ಥಕ ಬದುಕಿಗೆ ನಿದರ್ಶನವಾಗಿ ಜಾನಪದ ಗೀತೆಗಳು ಬಾಳಿವೆ. ನಮ್ಮ ಪೂರ್ವಜರಿಗೆ ಬದುಕಿನ ಬಗ್ಗೆ ಎಷ್ಟೊಂದು ಆಸ್ಥೆ ಇತ್ತೋ ಅಷ್ಟೇ ಮಾನವೀಯ ಮೌಲ್ಯಗಳ ಬಗ್ಗೆ ಕಾಳಜಿ ಇತ್ತು. ಬದುಕು ಕೇವಲ ನಿಂತ ನೀರಲ್ಲ. ಪ್ರತಿನಿತ್ಯ ಬಾಳನ್ನು ಸಂಸ್ಕರಿಸಬೇಕು. ದುಃಖ ಸುಖಗಳಲ್ಲೂ ತಟಸ್ಥ ಭಾವ ಇರಬೇಕು. ಬರುವ ಕಷ್ಟಗಳಿಗೆ ಎದುರಿಸುವ ಧೈರ್ಯವಿರಬೇಕು. ಬಾಳು ಗಂಭೀರವಾಗಿ ಕಂಡರೂ ಸರ್ವಕಾಲಕ್ಕೂ ಖುಷಿಯಿಂದ ಜೀವಿಸಬೇಕು ಎಂಬುವ ಅನೇಕ ಉದಾತ ವಿಚಾರಗಳು ನಮ್ಮ ಜನರದು. ಅಂತಲೆ ನಮ್ಮ ನಡುವೆ ಗಾದೆಗಳು, ಒಗಟುಗಳು, ಕುಟ್ಟುವ, ಬೀಸುವ, ನೀತಿಯ, ಸೋಬಾನ, ಕಥೆಗಳು ಬಿತ್ತರಿಸುವ ಪದಗಳು ಹುಟ್ಟಿಕೊಂಡವು.

ಜನಪದ ಕವಿಯ ಹಾಡಿನಲ್ಲಿ ಎಂದೂ ಭಾರವಾದ ಶಬ್ದಗಳಿಲ್ಲ. ಮನಸ್ಸಿಗೆ ನೋವಾಗುವ ಅರ್ಥಗಳಿಲ್ಲ. ಶುಷ್ಕವಾದ ವಾಕ್ಯಗಳಿಲ್ಲ. ಪ್ರತಿಯೊಂದು ಪದಗಳಲ್ಲೂ ಒಂದು ಸಂದೇಶವಿದೆ, ಕಾಳಜಿಯಿದೆ, ಅನುಕಂಪವಿದೆ. ಜೀವನ ನೋಡುವ ರೀತಿ ವಿಹಂಗಮವಾಗಿದೆ. ಗ್ರಾಮೀಣರ ಬದುಕಿನ ಸಂಸ್ಕೃತಿಯನ್ನು ಹಿಡಿದಿಡುವ ಕಾರ್ಯ ಜಾನಪದ ಮಾಡಿದೆ. ಈ ಜಾನಪದ ಕ್ಯಾಮೆರಾದಲ್ಲಿ ಜನರ ಬಾಳಿನ ಒಳನುಡಿಗಳನ್ನು ಕ್ಲಿಕ್ ಮಾಡಿರುವುದು ನಿಜಕ್ಕೂ ಶ್ಲಾಘನೀಯ. ಇಂದು ಜಾಗತಿಕ ಕರಣ ಟೀವಿ ಸಂಸ್ಕೃತಿ ಬಂದ ಮೇಲೆ ಎಲ್ಲೊ ಒಂದು ಕಡೆ ಜಾನಪದ ನಶಿಸುತ್ತಿದೆಯೆಂಬ ಭಯ ನಮ್ಮನ್ನು ಕಾಡುತ್ತಿದೆ. ಹಳ್ಳಿ ಹಳ್ಳಿ ಗ್ರಾಮೀಣ ಪ್ರದೇಶಗಳಿಗೆ ಟೀವಿ ಲಗ್ಗೆ ಹಾಕಿದ ಮೇಲೆ ಜನ ಸಾಮಾನ್ಯರ ವಾಸ್ತವ ಜೀವನದ ಅರ್ಥಗಳು ಕುಸಿಯುತ್ತಿವೆಯೋ ಎಂಬ ಅನುಮಾನ ನಮಗೆ ಕಾಡುತ್ತಿರುವುದು ಒಪ್ಪಲೇಬೇಕಾದ ಮಾತು. ಜನರ ಟೀವಿ ಲೋಕದಲ್ಲಿ ತೇಲಿ ತಮ್ಮ ಪ್ರತಿಭೆ ಕಲೆಯನ್ನು ಮರೆಯುತ್ತಿರುವೇನೋ ಎನಿಸಿದೆ.

ಈಗೀನ ಗ್ರಾಮೀಣ ಪ್ರದೇಶಗಳಿಗೂ ವಿದ್ಯುತ ಸಲಕರಣೆಗಳು ಬಂದ ಮೇಲೆ ಜನರಿಗೆ ಕುಟ್ಟುವ ಬೀಸುವ ಪರಿಪಾಠ ತಪ್ಪಿ ಜೊತೆಗೆ ಆ ಬಗ್ಗೆ ಜಾನಪದ ಗೀತೆಗಳು ಹುಟ್ಟಿಕೊಳ್ಳದೆ ಆ ಬೀಜಗಳು ಕೊಳೆಯಲು ಪ್ರಾರಂಭಿಸಿದೆ.

ಇತೀಚಿಗೆ ಜಾನಪದ ಅಧ್ಯಯನ ಕರ್ನಾಟಕದಲ್ಲಿ ನಡೆಯುಯುತ್ತಿರುವುದು ಆರೋಗ್ಯಕರ ಲಕ್ಷಣವೆನಿಸಿದೆ. ಲೇಖಕರು ಸಂಪಾದಕರು, ಸಂಶೋಧಕರು ಸಂಸ್ಥೆಗಳು, ಸರ್ಕಾರ ಈ ನಿಟ್ಟಿನಲ್ಲಿ ಹೆಚ್ಚಿನ ಆಸಕ್ತಿ ವಹಿಸಿರುವುದು, ಜಾನಪದ ಉಳಿವಿಗೆ ಹರ ಸಾಹಸ ನಡೆದಿದೆ. ಭುಲಾಯಿ ಹಾಡು, ಸತ್ತವರ ಹಾಡುಗಳು, ಅಜ್ಜಿ ಹೇಳಿದ ಜಾನಪದ ಕಥೆಗಳು ಅಲ್ಲಲ್ಲಿ ಬದುಕಿ ಪುಸ್ತಕ ಹಾಳೆಗಳಲ್ಲಿ ಮಿಂಚಿದರೂ ಇಷ್ಟೆ ಮಾತ್ರದಿಂದ ಜಾನಪದ ತೃಪ್ತಿಕರ ಬೆಳುವಣಿಗೆಯಲ್ಲಿ ಇನ್ನು ಲೆಕ್ಕಣಿಯ ಬಾಯಿಗೆ ಸಿಗದ ಅನೇಕ ಜಾನಪದ ಹಾಡುಗಳು, ಒಗಟುಗಳು ಪೂರ್ವಜರ ಮುಪ್ಪಿನವಸ್ಥೆಯಲ್ಲಿರುವ ಜನಸಾಮಾನ್ಯರ ಕಂಠದಂಚಿನಲ್ಲಿದ್ದು ನಿರ್ನಾಮದ ದಾರಿಯಲ್ಲಿವೆ. ಇಂಥ ವೇಳೆಯಲ್ಲಿ ಅಂಥವರನ್ನು ಗುರುತಿಸಿ ಜನಪದ ಕಟ್ಟುವ ಕೆಲಸ ಮಾಡುವುದು ನಮ್ಮ ಆದ್ಯ ಕರ್ತವ್ಯವೆನಿಸಿದೆ. ನಮ್ಮ ಗ್ರಾಮೀಣ ಪ್ರದೇಶದಲ್ಲಿ ವಾಸಿಸುವ ಜನರಿಗೆ ದೊರೆ ಎಂದರೆ ಯಾವ ರಾಜ್ಯದ ಮುಖ್ಯಮಂತ್ರಿಗಳು ಅಥವಾ ಸಾಹುಕಾರರಲ್ಲ, ಅವರ ಪಾಲಿಗೆ ರೈತನೇ ದೇವರು ಎಂತಲೇ ಒಕ್ಕಲಿಗರ ಕಂಡರಾಯ್ತು ಹಳ್ಳಿ ಗಾಡಿನ ಜನತೆಗೆ ಸ್ವಾಭಿಮಾನ ಉಕ್ಕಿ ಬರುತ್ತಿದೆ. ಅಂದ ಹಾಗೆ ಗ್ರಾಮೀಣ ಜನರ ತಮ್ಮ ದನಿಪದರುಗಳಲ್ಲಿ ಹೀಗೆ ಹಾಡುತ್ತಾರೆ.

‘ಹಸುರೀನ ನಾಡಿಗೆ ದೊರೆಯಾರು ಗೊತ್ತೆನ?
ಹಿರಿಹೋಳಿ ದಂಡೀಲಿ ಕರಿಹೋರಿ | ಮೇಸುವ
ನೋರಿಹಾಲ ಕುಡಿಯುವ ಒಕ್ಕಲಿಗ |

ಇಂಥ ಒಕ್ಕಲಿಗನು ಬೇಸಾಯ ಮಾಡುತ್ತ ಹಸಿರಿನ ಹೊಲಗಳಲ್ಲಿ ಬೆಳೆಗಳ ಸಾಲಿನಲಿ ತುಂಬಿ ಬಂದ ಬೆಳೆಗಳನ್ನು ಕಂಡು ಸಂತಸದಿಂದ ಹಾಡಿದಾಗ

‘ಒಕ್ಕಲಿಗ ಹಾಡಿದರ ನಾಡೆಲ್ಲ ನಕ್ಕೀತ
ಹಾಡಮರೆತರ ನಾಡ ಬಿಕ್ಕೀತ | ಜತಿಗೂಡಿ
ಜಯವೆಂದು ಹಾಡೋಣ ಜನಪದಕ

ಎಂದು ಗ್ರಾಮೀಣ ಜನರು ತಮ್ಮ ಭಾವಗಳನ್ನು ಇಲ್ಲಿ ಬಿತ್ತರಿಸುತ್ತಾರೆ. ರೈತ ಆರೋಗ್ಯವಂತನಾಗಿದ್ದರೆ ದೇಶ ಆರೋಗ್ಯವಾಗಿ ಬಾಳಲು ಸಾಧ್ಯ. ಅವನು ಖುಷಿಯಿಂದ ಬೆಳೆ ಕಂಡು ಹಾಡಿದರ ಲೋಕವೇ ಆನಂದದಲ್ಲಿ ಲೋಲಾಡುತ್ತದೆ. ಒಂದು ವೇಳೆ ಅವನು ತನ್ನ ದುಃಖ ತೋಡಿಕೊಂಡು ಬೆಳೆ ಬೆಳೆಯದಾಗ ಕಣ್ಣೀರಿಟ್ಟಾಗ ಜಗತ್ತೇ ಬಿಕ್ಕುತ್ತದೆ ಎಂಬ ಮಾತು ಎಷ್ಟು ಮಾರ್ಮಿಕವಾಗಿದೆ. ಇವತ್ತು ಸಮಾಜದಲ್ಲಿ ಅತೀ ಹೀನವಾಗಿ ಬಾಳುತ್ತಿರುವವನೆ ಒಕ್ಕಲಿಗನು. ತನ್ನ ದುಡಿಮೆಗೆ ತಕ್ಕಷ್ಟು ಫಲವಿಲ್ಲ. ಮಣ್ಣಲ್ಲಿ ಬಿತ್ತಿದ ಬೀಜ ಮಣ್ಣುಪಾಲಾಗಿ ಹೋದಾಗ ಅವನ ಬಾಳಿಗೆ ಆಸೆಯಿನ್ನೆಲ್ಲಿ? ಸಾಲ ಶೂಲಗಳಲ್ಲಿ ತೇಲಿ ಕೊನೆಗೆ ಆತ್ಮಹತ್ಯೆಗೆ ಶರಣಾಗುವ ರೈತನ ಕುರಿತು ಜಾನಪದ ಹೃದಯದಿಂದ ಕೊಂಡಾಡಿದೆ.

ಸಂಸಾರವೆಂಬುದು ಸಾಗರ ಹೊಳೆಯುವ
ಈಸಬಲ್ಲವನ ಎದೆಯುದ್ದ | ಹಡೆದವ್ವ
ಓದಬಲ್ಲವಗ ಕೈಲಾಸ.

ಎಂಬುವಲ್ಲಿ ನಮ್ಮ ಗ್ರಾಮೀಣ ಅನುಭಾವಿಕರು ಸಹ ಶಿಕ್ಷಣಕ್ಕೆ ಆದ್ಯತೆ ನೀಡಿರುವುದು ಈ ನುಡಿಗಳಿಂದ ವೇದ್ಯವಾಗುತ್ತದೆ. ಸಮಸ್ಯೆಗಳು ಎಷ್ಟೇ ಇರಲಿ ಅವುಗಳನ್ನು ಎದುರಿಸಿ ಬಾಳಿದಾಗ ಅವುಗಳು ಗೌಣವಾಗುತ್ತವೆ. ಸಾಗರದಂಥ ಈ ಸಂಸಾರದಲ್ಲಿ ಈಜಬಲ್ಲವನಿಗೆ ಮಾತ್ರ ಈ ಬದುಕು ತೇಲಿಸುತ್ತದೆ. ಅಲ್ಲದೆ ಕಿಂಚಿತ್ತೂ ಸಾಕ್ಷರನಾಗಿ ಬಾಳಿದನೆಂದರಾಯಿತು. ಈ ಬದುಕು ನಂದನವನ ಕೈಲಾಸವಾಗಲು ಸಾಧ್ಯ ಎನಿಸುತ್ತದೆ.

ಇವತ್ತು ಲೋಕದಲ್ಲಿ ಹೆಣ್ಣು ಗಂಡಿನ ಪ್ರೀತಿ ಮಾದ್ಯಮಗಳ ಮೂಲಕ ಬಿತ್ತರಿಸುವುದರಿಂದ ಯುವ ಜನಾಂಗದಲ್ಲಿ ಪ್ರೀತಿಯ ಹೆಸರಲ್ಲಿ ಅಶ್ಲೀಲತೆ ಬಾಳದಾರಿ ಕವಲೊಡೆಯುತ್ತಿರುವುದು ಸಾಮಾನ್ಯವಾಗಿದೆ. ಅಂತಲೆ ತನ್ನ ಗಂಡ ಇನ್ನೊಂದು ಹೆಣ್ಣನ್ನು ಪ್ರೀತಿಸುವುದು ಸೈರಿಸದ ಗರತಿ ತನ್ನ ಗಂಡನಿಗೆ ಸಂಭೋಧಿಸುವ ಅವಳ ಧನಿ ಪದರುಭಾವ ಜೊತೆಗೆ ಅದಕ್ಕೆ ಕೊಟ್ಟ ಉಪಮೆ ಎಂಥವರಿಗೂ ಬೆರಗುಗೊಳಿಸುವಂಥದು.

ಅಂಗಿಯ ಮ್ಯಾಲಂಗಿ ಛಂದೇನೋ ನನರಾಯ
ರಂಭೆ ಮ್ಯಾಲ ರಂಭೆ ಪ್ರತಿ ರಂಭೆ
ಬಂದರ ಛಂದೇನೋ ರಾಯ ಮನಿಯಾಗ

ಎನ್ನುವಲ್ಲಿ ಅವಳ ಅಂತರಂಗದ ತುಡಿತಕ್ಕೆ ಈ ನುಡಿಗಳು ಸಾಕ್ಷಿಯಾಗಿ ನಿಲ್ಲುತ್ತವೆ.

ಹೀಗೆ ನಮ್ಮ ಪೂರ್‍ವಜರು ಬದುಕನ್ನು ಅರ್ಥಪೂರ್ಣವಾಗಿ ಕಂಡಿದ್ದಾರೆ. ಜೀವನ ಬರೀ ಮೋಜಲ್ಲ. ಆದರ್ಶವಾಗಿ ಬಾಳಿದರೆ ಸಂಸಾರ ಸುಂದರವಾಗುತ್ತದೆ ಎನ್ನುವ ಅವರ ಭಾವ ಸಾರ್ವತ್ರಿಕ ಸತ್ಯವಾಗಿ ನಿಂತಿದೆ.

ಮಕ್ಕಳಿಲ್ಲದ ಹೆಣ್ಣಿನ ಬಗ್ಗೆ ಬಾಲಕರಿಲ್ಲದ ಬಾಲಿದ್ಯಾತರ ಜನ್ಮ ಬಾಡಿಗಿ ಎತ್ತ ದುಡಿದ್ಹಂಗ | ಬಾಳೆಲೆ ಹಾಸುಂಡು ಬೀಸಿ ಒಗದ್ಹಂಗ ಎಂಥ ನಿದರ್ಶನಗಳನ್ನು ನಮ್ಮ ಅನುಭಾವಿಕ ಪೂರ್ವಜರು ಕೊಟ್ಟಿರುವುದು ಹೃದಯಕ್ಕೆ ತಲುಪುವ ಭಾಷೆ ಇದಾಗಿದೆ.

ಶರಣ ನೆನೆದರೆ ಸರಗೀಯ ಇಟ್ಟಂಗ
ಹವಳ ಮಲ್ಲಿಗಿ ಮುಡಿದಂಗ | ಕಲ್ಯಾಣ
ಶರಣರ ನೆನೆಯೋ ನನ ಮನವೆ

ಎಂದು ನಮ್ಮ ಗ್ರಾಮವಾಸಿಗಳು ಶರಣರನ್ನು ಎದೆ ತುಂಬ ನೆನಪಿಸಿಕೊಂಡು ಮನಸ್ಸನ್ನು ನೀತಿ ಮಾರ್ಗದತ್ತ ದುಡಿಸಿಕೊಂಡಿರುವುದು ಅವರ ಭಾವಗಳಿಗೆ ಈ ನುಡಿ ದೀಪವಾಗಿ ಬೆಳಕು ಚೆಲ್ಲುತ್ತದೆ. ಕಲ್ಯಾಣ ನಾಡಿನಲ್ಲಿ ಮೆರೆದ ಭಕ್ತಿಯ ಬೀಜ ಬಿತ್ತಿ ಕ್ರಾಂತಿಯನ್ನು ಮಾಡಿದ ಜೊತೆಗೆ ನೀಲಮ್ಮ ಹೇಮರಡ್ಡಿ ಮಲ್ಲಮ್ಮನಂಥವರ ಹಿರಿಮೆಯನ್ನು ಕೊಂಡಾಡಿ ಜಾನಪದ ಅರಸಿಗರು ಹೀಗೆ ಹಾಡುತ್ತಾರೆ.

ಬಸವಣ್ಣ ನಿನ್ನಂಥ ಭಕ್ತಿವಾನರಿಲ್ಲ
ನೀಲಮ್ಮ ನಂಥ ಶರಣರಿಲ್ಲ | ಹೇಮರೆಡ್ಡಿ
ಮಲ್ಲಮ್ಮ ನಂಥ ಸೊಸಿನಿಲ್ಲ

ಹೀಗೆ ಗ್ರಾಮೀಣ ಜನತೆಯು ತಮ್ಮ ದನಿಪದರುಗಳಲ್ಲಿ ಮಾನವೀಯ ಮೌಲ್ಯಗಳನ್ನು ತುಂಬಿ ಅದನ್ನೆ ಹಾಸಿ ಹೊದ್ದುಕೊಂಡಿರುವುದು ಶ್ಲಾಘನೀಯವಾಗಿದೆ. ಅಂತಲೆ ಇಂದು ಸಾರ್ವಕಾಲಿಕ ಸತ್ಯವಾಗಿ ನಿತ್ಯ ನೂತನವಾಗಿ ಬೆಳಗಿ ಸಂಭ್ರಮಿಸುತ್ತದೆ.
*****

One thought on “0

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸಿದ್ದತೆ ಏನು
Next post ಎತ್ತೆತ್ತ ಹರಿಯುತಿದೆ

ಸಣ್ಣ ಕತೆ

  • ಗುಲ್ಬಾಯಿ

    ನಮ್ಮ ಪರಮಮಿತ್ರರಾದ ಗುಂಡೇರಾವ ಇವರ ನೇತ್ರರೋಗದ ಚಿಕಿತ್ಸೆ ಗಾಗಿ ನಾವು ಮೂವರು ಮಿರ್ಜಿಯಲ್ಲಿರುವ ಡಾಕ್ಟರ ವಾಲ್ನೆಸ್ ಇವರ ಔಷಧಾಲಯಕ್ಕೆ ಬಂದಿದ್ದೆವು. ಗುಂಡೇರಾಯರು ಹಗಲಿರುಳು ಔಷಧಾಲಯದಲ್ಲಿಯೇ ಇರಬೇಕಾಗಿರುವದರಿಂದ ಆ… Read more…

  • ಹೃದಯದ ತೀರ್ಪು

    ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…

  • ಸಿಹಿಸುದ್ದಿ

    ಶ್ರೀನಿವಾಸ ದೇವಸ್ಥಾನದಲ್ಲಿ ಎರಡು ಪ್ರದಕ್ಷಿಣೆ ಹಾಕಿ ಮೂರನೇ ಪ್ರದಕ್ಷಿಣೆಗೆ ಹೊರಡುತ್ತಿದ್ದಂತೆಯೇ, ಯಾರೋ ಹಿಂದಿನಿಂದ "ಕಲ್ಯಾಣಿ," ಎಂದು ಕರೆದಂತಾಯಿತು. ಹಿಂತಿರುಗಿ ನೋಡಿದರೆ ಯಾರೋ ಮಧ್ಯ ವಯಸ್ಸಿನ ಮಹಿಳೆ ಬರುತ್ತಿದ್ದರು.… Read more…

  • ಗಿಣಿಯ ಸಾಕ್ಷಿ

    ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು. ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. ಅವಳ… Read more…

  • ಗೃಹವ್ಯವಸ್ಥೆ

    ಬೆಳಗು ಮುಂಜಾನೆ ಎಂಟು ಗಂಟೆಗೆ ಹೊಗೆಬಂಡಿಯು XX ಸ್ಟೇಶನಕ್ಕೆ ಬಂದು ನಿಂತಿತು. ಸಂತ್ರಾಧಾರವಾಗಿ ಮಳೆ ಹೊಡೆಯುತ್ತಿರುವದರಿಂದ ಪ್ರಯಾಣಸ್ಥರು ಬೇಸತ್ತು ಗಾಡಿಯಿಂದ ಯಾವಾಗ ಇಳಿಯುವೆವೋ ಎಂದೆನ್ನುತ್ತಿದ್ದರು. ನಿರ್ಮಲಾಬಾಯಿಯು ಅವಳ… Read more…