ಎತ್ತೆತ್ತ ಹರಿಯುತಿದೆ
ಸೆಲೆಯು ಬದುಕು
ಬರಿದಾದ ಯಾನ ||

ಚಿತ್ತ ಕಳೆದು
ಭಾಗಿಸಿತು ಕಡಲ
ಕಲರವ ಮೌನ ||

ಬಣ್ಣ ಚಿತ್ತಾರ
ವಿಲ್ಲದ ಬಾಳಿನಗಲ
ಬವಣೆ ಪಯಣದಲಿ ||

ಬಡವನಂಗಳದಲಿ
ಸಿರಿತನದ ಬೆಳಕು
ಬೆಸೆದ ಭೂಮಿಕೆಯಲಿ ||

ಗಗನ ತುಂಬೆಲ್ಲಾ
ಸ್ವಚ್ಚಂದ ಹಾರಾಡುವ
ಹಕ್ಕಿಯ ಚೈತನ್ಯ ||

ಹಕ್ಕಿಯಂತಯೆ
ಬದುಕು ಮೃದುಮನ
ಬಂಡಾಯವೆದ್ದ ಗೀಳು ||

ಸಾವಿರದ ದೂರ
ಹಾದಿಯ ಕನಸು
ಕಟ್ಟುವ ಮಹಾಪುರ ||

ನಿನ್ನ ಬದುಕಿದು
ನಿಲ್ಲದು ಸಾಗರದಾ
ಹರಿಗೋಲ ಯಾನ ||

ಎಚ್ಚೆತ್ತ ದನಿಯು
ನಿನ್ನದು ದಡವ ಸೇರಿ
ಹಾಡ ಹಾಡು
ಮನಸಾರೆ ಹಾಡು !!
*****