ಚಾಲಕ ರಹಿತ ವಿಮಾನಗಳು ಎಂದರೆ ಕೀಲಿಲ್ಲದೆ ಬಂಡಿ ಓಡಿಸಿದಂತೆ ಎಂಬ ಮಾತಿತ್ತು 2010ನೇ ಇಸ್ವಿಯ ಹೊತ್ತಿಗೆ ಬೋಯಿಂಗ್ ಲಾಕ್ ಹೀಡ್ ಮಾರ್ಟಿನ್ ‘ಡಾರ್ಕ್‌ಸ್ಟಾರ್’ ನಂತಹ ಸ್ವಯಂಚಾಲಿತ ವಿಮಾನಗಳು ತಯಾರಾಗುವ ಸಾಧ್ಯತೆಗಳಿವೆ. ಮತ್ತಿನ್ನಿಷ್ಟು ವರ್ಷಗಳು ಕಳೆದರೆ ರೋಬಟ್ ಹೆಲಿಕ್ಯಾಪ್ಪರ್‌ಗಳು ಸೈನಿಕರನ್ನು ಯುದ್ಧಕ್ಕೆ ಬಿಡಬಹುದು. ಮನುಷ್ಯರ ಮನಸ್ತತ್ವವನ್ನು ಆಧರಿಸಿ ಈ ಚಾಲಕ ರಹಿತ ವಿಮಾನಗಳು ತಯಾರಾಗಲಿವೆ. 21ನೇ ಶತಮಾನದಲ್ಲಿ ಇಂತಹ ವಿಮಾನಗಳು ಚಾಲಕ ರಹಿತ ವಿಮಾನಗಳೂ ಸಹ ಹಳೆಯದಾಗ ಬಹುದು. ಒಬ್ಬ ಪೈಲೆಟ್, ಮತ್ತು 7 ಜನ ಪ್ರಯಾಣಿಕರೊಂದಿಗೆ ಗಂಟೆಗೆ 220 ಕಿ.ಮೀ. ವೇಗದಲ್ಲಿ ಚಲಿಸುವ ಮಿನಿವ್ಯಾನ್‌ನಂತಹ ವಿಮಾನಗಳು ಪ್ರಪಂಚದ ಎಲ್ಲೆಡೆ ಸಂಚರಿಸುತ್ತವೆ. 21ನೇ ಶತಮಾನದಲ್ಲಿ ಸಾರಿಗೆ ವ್ಯವಸ್ಥೆಯಲ್ಲಿ ಸಂಶೋಧನೆಗಳನ್ನು ಮಾಡುವ ಖಾಸಗಿ ಸಂಸ್ಥೆಗಳನ್ನು ಗುರುತಿಸಲು ನಾಸಾ ಸಂಸ್ಥೆಯು ಕೈಕೊಂಡ ಯೋಜನೆಯಾದ Advanced General Eviation Transport Experiment (ಆಗೇಟ್) ಎನ್ನುವ ಪದವನ್ನು ತಮ್ಮ ಸಂಸ್ಥೆಯ ನಿಕ್‌ನೇಮ್ ಆಗಿ ಮಾಡಿಕೊಳ್ಳಲು ಸಂಸ್ಥೆಗಳು ಆತುರದಿಂದ ಕಾಯುತ್ತವೆ. ಕಾಕ್‌ಪಿಟ್ ಪ್ರವೇಶದ್ವಾರದ ಮೇಲೆ ಹೈವೆ ಇನ್ ದಿ ಸ್ಕೈ (Highway in the sky) ಎನ್ನುವ ಬೋರ್ಡು, ಸುತ್ತಲಿನ ದೃಶ್ಯಗಳು ಕಾಣುವಂತೆ ತಲೆಯ ಮೇಲ್ಭಾಗದಲ್ಲಿ ಸುತ್ತಲೂ ಗಾಜಿನ ಆವರಣ, ವಿಮಾನವನ್ನು ಸರಿಯಾಗಿ ನಡೆಸಲು ಡಿಜಿಟಲ್ ವೇಟ್‌ಲಿಂಕ್ಸ್ (Digital Weight Links) ಸಹಕರಿಸುವಿಕೆ, ವಿಮಾನ ಸರಿಯಾದ ಎತ್ತರ ಮತ್ತು ದಿಕ್ಕಿನಲ್ಲಿ ಚಲಿಸಲು ಸೂಕ್ಷ್ಮವಾದ ಕಂಟ್ರೋಲ್ ಪ್ಯಾನಲ್(Control Panel)ಗಳು, ಭವಿಷ್ಯದ ಆಗೆಟ್ Projectಗಳೊಂದಿಗೆ ಹಗುರವಾದ ದೃಢವಾದ ಸಾಮರ್ಧ್ಯವನ್ನು ಹೊಂದಿರುವ ಇಂತಹ ಮಾದರಿಯ ಚಾಲಕನಿಲ್ಲದ ವಿಮಾನಗಳು ತಯಾರಾಗುವ ನಿರೀಕ್ಷೆ ಇದೆ, ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.
Related Post
ಸಣ್ಣ ಕತೆ
-
ಕೆಂಪು ಲುಂಗಿ
ಬೇಸಿಗೆಯ ರಜೆ ಬಂತೆಂದರೆ ಅಮ್ಮಂದಿರ ಗೋಳು ಬೇಡ; ಮಕ್ಕಳೆಲ್ಲಾ ಮನೆಯಲ್ಲೇ... ಟೀವಿಯ ಎದುರಿಗೆ ಇಲ್ಲವಾದರೆ ಅಂಗಳದ ಸೀಬೆಮರ ಮತ್ತು ಎತ್ತರವಾದ ಕಾಂಪೌಂಡಿನ ಗೋಡೆಗಳ ಮೇಲೆ.... ಯಾರಾದರೂ ಬಿದ್ದರೆ,… Read more…
-
ಮಾದಿತನ
ಮುಂಗೋಳಿ... ಕೂಗಿದ್ದೆ ತಡ, ಪೆರ್‍ಲಜ್ಜ ದಿಡಿಗ್ಗನೆದ್ದ. ರಾತ್ರಿಯೆಲ್ಲ... ವಂದೇ ಸಮ್ನೆ ಅಳುತ್ತಾ, ವುರೀಲೋ... ಬ್ಯಾಡೋ... ಯಂಬಂತೆ, ದೀಪದ ಬುಡ್ಡಿ, ನಡ್ಮುನೆ ಕಂಬ್ಕಂಟಿ, ಸಣ್ಗೆ ವುರಿತಿತ್ತು. ಯದೆವಳ್ಗೆ ಮಜ್ಗೆ… Read more…
-
ಸಾವು
ಈ ಗೊಂಡಾರಣ್ಯದಲ್ಲಿ ನಾನು ಬಂದುದಾದರೂ ಹೇಗೆ? ಅಗೋ ಅಲ್ಲಿ ಲಾಸ್ಯವಾಗಿ ಬಳುಕುತ್ತಾ ನಲಿಯುತ್ತಾ ತುಂತುರು ತುಂತುರಾಗಿ ಮುತ್ತಿನ ಹನಿಗಳನ್ನು ಪ್ರೋಕ್ಷಿಸುತ್ತಿರುವ ಝರಿಯ ರಮಣೀಯತೆಯನ್ನೂ ಮೀರುವಂತಹ ಭಯಾನಕತೆ ವ್ಯಾಪಿಸಿದೆಯಲ್ಲಾ… Read more…
-
ದೇವರೇ ಪಾರುಮಾಡಿದಿ ಕಂಡಿಯಾ
"Life is as tedious as a twice-told tale" ಧಾರವಾಡದ ಶಾಖೆಯೊಂದಕ್ಕೆ ಸಪ್ತಾಪುರವೆಂಬ ಹೆಸರು, ದೂರ ದೂರಾಗಿ ಕಟ್ಟಿರುವ ಆ ಗ್ರಾಮದ ಮನೆಗಳಲ್ಲಿ ಒಂದು ಮನೆಯು… Read more…
-
ಹನುಮಂತನ ಕಥೆ
ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…