ತಂಪು ಪಾನಿಯಗಳನ್ನು ತಯಾರಿಸುವಾಗ ಪ್ರಕ್ಟೋಸನ್ನು ಟೋಮ್ಯಾಟೋದಿಂದ ಇಲ್ಲಿಯವರೆಗೆ ಪಡೆಯಲಾಗುತ್ತಿತ್ತು ತಂಪು ಪಾನಿಯಗಳ ತಯಾರಿಕೆಯ ಜತೆಗೆ ಅಟೋಮೊಬೈಲ್‌ಗಳಿಗೆ ಉಪಯೋಗಿಸುವ ‘ಎಥನಾಲ್’ ಅನ್ನು ತಯಾರಿಸುವ ಸಂಶೋಧನೆಯನ್ನು ಮಾಡಲಾಗಿದೆ.

ಪ್ರೊ|| ರಾಜ್‌ಬೀರ್ ಸಂಗ್ಮಾನ್ ನೇತೃತ್ವದ ಫ್ರೆಂಚ್ ವಿಜ್ಞಾನಿಗಳ ತಂಡ ಜೀನ್‌ಫೂಷನ್ ಟೆಕ್ನಾಲಜಿಯ ಮೂಲಕ ಜೈವಿಕವಾಗಿ ಅಭಿವೃದ್ದಿಪಡಿಸಿದ ಮತ್ತು ಸಾಧಾರಣ ಬಟಾಟೆಗಿಂತ 19 ಪಟ್ಟು ಹೆಚ್ಚಿನ ಪ್ರಕ್ಟೋಸನ್ನು ಹೊಂದಿದೆ, ಎಂದು ವಿಜ್ಞಾನಿಗಳು ಅಭಿಪ್ರಾಯ ಪಡುತ್ತಾರೆ. ನೈಸರ್ಗಿಕ ಕಾರ್ಬೋಹೈಡ್ರೇಟ್‌ಗಳಲ್ಲಿ ಅತ್ಯಂತ ಸಿಹಿಯಾದ ಪ್ರಕ್ಟೋಸನ್ನು ಔದ್ಯಮಿಕ ಸಂಸ್ಕರಣೆಯ ಮೂಲಕ ಉತ್ಪಾದಿಸಲಾಗುತ್ತದೆ. ಇದಕ್ಕೆ ಮೆಕ್ಕೆಜೋಳದಲ್ಲಿರುವ
ಪಿಷ್ಟವನ್ನು ಬಳಸಲಾಗುತ್ತದೆ. ಬಳಿಕ ಪಿಷ್ಟವನ್ನು ಪ್ರಕ್ಟೋಸ್ ಆಗಿ ಪರಿವರ್ತಿಸಲಾಗುತ್ತದೆ. ಬಟಾಟೆಯಲ್ಲಿ ಪಿಷ್ಟ ಹೇರಳವಾಗಿರುವುದು. ಎಲ್ಲಿರಿಗೂ ತಿಳಿದಿರುವ ವಿಷಯವೇ ಆಗಿದೆ. 1996-97ರ ಅವಧಿಯಲ್ಲಿ ಫ್ರಾನ್ಸಿನ ರೈತರು ಹೇರಳ ಪ್ರಮಾಣದಲ್ಲಿ ಬಟಾಟೆಯನ್ನು ಬೆಳೆದಾಗ ದೊಡ್ಡಸಮುಸ್ಯೆ ಎದುರಾಯಿತಲ್ಲದೇ ಈ ಸ್ಪಾರ್ಟ್‌ನ್ನು ಪ್ರುಕ್ಟೋಸ್ ಆಗಿ ಬದಲಾಯಿಸುವುದು ದೊಡ್ಡ ಸಮಸ್ಯೆಯಾಗಿತ್ತು

ಹೀಗೆ ಬಟಾಟೆ ದೊಡ್ಡ ಸಮಸ್ಯೆಯಾಗಿ ಮಾರ್ಪಟ್ಟಾಗ ಅದರಲ್ಲಿರುವ ಪಿಷ್ಟವನ್ಪು ಪ್ರಕ್ಟೋಸ್ ಆಗಿ ಪರಿವರ್ತಿಸುವ ವಿಧಾನವನ್ನು ಪತ್ತೆ ಹಚ್ಚಲು ಫಾನ್ಸ್ ವಿಜ್ಞಾನಿಗಳು ಮುಂದಾದರು. ಜೈವಿಕ ತಂತ್ರಜ್ಞಾನದಿಂದ ಅಭಿವೃದ್ಧಿಪಡಿಸಿದ ಬಟಾಟೆಯಿಂದ ಕಡಿಮೆ ವೆಚ್ಚದ ಎಥನಾಲನ್ನು ಉತ್ಪಾದಿಸಬಹುದೆಂದು ಬೋಸ್ಟರ್ ಮೂಲದ ವ್ಯಾಪಾರಿಗಳು ತಿಳಿಸುತ್ತಾರೆ.

*****