ಸುಭದ್ರೆ – ೯

ಸುಭದ್ರೆ – ೯

ಮಾಧವನು ಪ್ರತಿನಿತ್ಯವೂ ಬೆಳಗ್ಗೆ ಎದ್ದ ಕೂಡಲೆ ಮುಖಮಜ್ಜ ನವಾದ್ದ ಬಳಿಕ ತಂದೆಗೆ ನಮಸ್ಕಾರವನ್ನು ಮಾಡಿ ಆತನ ಆಶೀರ್ವಾದವನ್ನು ಪಡೆದು ಅನಂತರ ಇತರ ಕೆಲಸಗಳಿಗೆ ಗಮನ ಕೊಡುತ್ತಿದ್ದನು.

ಆದಿನ ಬೆಳಿಗ್ಗೆ ಏಳುಗಂಟಿಯಾದರೂ ಮಾಧವನು ಶಂಕರ ರಾಯನ ಕೊಠಡಿಗೆ ಬರಲಿಲ್ಲ. ಶಂಕರರಾಯನಿಗೆ ಮೊದಲು ಸ್ವಲ್ಪ ಆಶ್ಚರ್ಯವೂ ಅನಂತರ ಕೊಂಚ ಭಯವೂ ಉಂಟಾಯಿತು. ಏಕಂ ದರೆ, ಊರಲ್ಲಿಲ್ಲದಿರುವಾಗ ಮತ್ತು ಏಳಲಾರದಷ್ಟು ಅಸ್ವಸ್ಥನಾಗಿರು ವಾಗ ಹೊರತು ಬೇರೆಯಾವಾಗಲೂ ಈ ಕರ್ತವ್ಯವನ್ನು ಮಾಧವನು ತಪ್ಪುತ್ತಿರಲಿಲ್ಲ. ಶಂಕರರಾಯನು ಮಗನಿಗೇನೋ ವ್ಯಾಧಿಯು ಸಂ ಭವಿಸಿರಬಹುದಿಂದು ಗಾಬರಿಗೊಂಡು ತಡಮಾಡದೆ ಮಾಧವನ ಕಿರು ಮನೆಗೆ ಹೋದನು. ಬಾಗಿಲು ಮುಚ್ಚಿತ್ತು, ಅಗಳಿ ಹಾಕಿರಲಿಲ್ಲ. ಒಳಗೆಹೋಗಿ ನೋಡಲಾಗಿ ಹಾಸಿಗೆಯು ಹಾಸಿದಹಾಗೆಯೆ ಇತ್ತು. ಅದರ ಮೇಲೊಂದು ಕಾಗದದ ಲಕೋಟಿಯು ಬಿದ್ದಿತ್ತು. ಶಂಕರರಾ ಯನು ಅದನ್ನು ಕೈಗೆ ತೆಗೆದುಕೊಂಡು ನೋಡಿದನು. ಮೇಲ್ವಿಳಾಸವು ಮಾಧವನ ಕೈಯ ಅಕ್ಷರದಲ್ಲಿತ್ತು. ಶಂಕರನ ಕೈ ನಡುಗಲಾರಂಭಿ ಸಿತು, ನಿಲ್ಲಲಾರದೆ ನೆಲದಮೇಲೆ ಕೂತುಕೊಂಡು ಪಟಪಟನೆ ಸಿಡಿಯುತ್ತಿದ್ದ ತಲೆಯನ್ನು ಎಡಗೈಯಲ್ಲಿ ಭದ್ರವಾಗಿ. ಹಿಡಿದುಕೊಂಡನು. ಮೈಯೆಲ್ಲಾ ಬೆವತುಹೋಗಿತ್ತು. ಇದನ್ನೆಲ್ಲಾ ನೋಡುತ್ತಿದ್ದ ಸೇವ ಕನೊಬ್ಬನು ಬೇಗನೆ ಗಂಗಾಬಾಯಿಯನ್ನು ಕರೆದುಕೊಂಡು ಬಂ ದನು. ಆಕೆ ಬಂದು “ಏನು ಬಾವ! ಏನು ಸಮಾಚಾರ?“ ಎಂದುದಕ್ಕೆ ಶಂಕರರಾಯನು ಯಾವ ಮಾತನ್ನೂ ಆಡದೆ ಕಾಗದವನ್ನು ತೋರಿಸಿ ದನು. ಅವಳು ಲಕೋಟೆಯನ್ನು ತೆಗೆದುಕೊಂಡು ಬಿಚ್ಹಿ ನೋಡಿ, “ಹೆದರಬೇಡಿ, ಬಾವ! ಜೀವಕ್ಕೇನು ಭಯವಿಲ್ಲ, ನಿಧಾನಮಾಡಿ ಕೊಳ್ಳಿ” ಎಂದು ಹೇಳಿ ಶಂಕರರಾಯನನ್ನು ಸ್ಕಲ್ಪ ಸಮಾಧಾನಗೊ ಳಿಸಿ ಕಾಗದವನ್ನೋದಿದಳು. ಅದರ ಅಭಿಪ್ರಾಯವೇನಂದರೆ:

“ನಾನು ದೈವಸಾಕ್ಸಿಯಾಗಿ ಸುಭದ್ರೆಯನ್ನು ವರಿಸಿರುವುದ ರಿಂದ ತಮ್ಮ ಶತ್ರು ಪಕ್ಷಕ್ಕೆ ಸೇರಿದವನಾದೆನು. ಆದುದರಿಂದ ತಮ್ಮ ಗೃಹದಲ್ಲಿ ಒಂದುಕ್ಷಣವೂ ನನಗೆ ಬಾಧ್ಯತೆಯಿರುವುದಿಲ್ಲ. ಅಲ್ಲದೆ ತಮ್ಮ ಅನುಮತಿಯಿಲ್ಲದೆ ನಾನು ಸ್ವತಂತ್ರಿಸಿದ ತಪ್ಪಿತಕ್ಕೂ ಪ್ರಾಯಶ್ಚಿತ್ತವಾಗಲೇ ಬೇಕು. ಆದಕಾರಣ ನಾನು ಈಗ ಸದ್ಯಕ್ಕೆ ದೇಶಾಂತರದಲ್ಲಿ ಅಜ್ಞಾತವಾಸವನ್ನು ಮಾಡುವೆನು.

ತಮ್ಮ ಆಜ್ಞೆಯನ್ನು ಮೀರಿಮನಸ್ಸಿ ಗೆವ್ಯಥೆಯನ್ನುಂಟುಮಾಡಿದು ದಕ್ಕೆ ಕ್ಷಮೆಯನ್ನು ಕೇಳಿಕೊಳ್ಳು ತ್ತೇನೆ.ಆದರೆತಮ್ಮ ಆಜ್ಞೆಯಂತೆನಡೆದಿ ದ್ದರೆ ಸರ್ವಸಾಕ್ಷಿಯಾದ ಭಗವಂತನಿಗೆ ಉತ್ತರವಾದಿಯಾಗುತ್ತಿದ್ದೆನು. ಆದುದರಿಂದ ಕ್ಷಮಿಸಬೇಕೆಂದು ಪುನಃ ಪುನಃ ಬೇಡಿಕೊಳ್ಳುತ್ತೇನೆ.“

ಈ ವಿನಯಪೂರ್ವಕವಾದಮತ್ತು ಮನೋನಿಶ್ಚಯಪ್ರದರ್ಶಕ ವಾದ ಒಕ್ಕಣೆಯನ್ನು ಫೇಳಿದಕೂಡಲೆ ಶಂಕರರಾಯನು ಗಟ್ಟಿಯಾಗಿ ಅಳುತ್ತಾ ನೆಲದಮೇಲೆ ಹೊರಳಾಡಲು ಪ್ರಾರಂಭಿಸಿದನು. ಗಂಗಾ ಬಾಯಿಗೂ ಕಣ್ಜಿನಲ್ಲಿ ನೀರುಸುರಿಯುತ್ತಿತ್ತು. ಆದರೂ ಸಮಾಧಾನ ಮಾಡಿಕೊಂಡು “ಬಾವ ! ಇದೇನು ನಾಚಿಕೆಗೇಡು? ಅತ್ತುದರಿಂದ ಪ್ರಯೋಜನವೇನು? ಸುಮ್ಮನೆ ಗಲಭೆಯಾಗುತ್ತದೆ.“ಎಂದಳು ಶಂಕರ ರಾಯನು“ಅಯ್ಯೊ !ಅಯ್ಯೊ ನನ್ನ ಮಗನನ್ನು ಯಾವಾಗ ನೋಡುವೆ ನಪ್ಪಾ ! ನನಗೇನು ದುರ್ಬುದ್ಧಿ ಬಂದಿತು? ಎಲ್ಲಿ ಅನ್ನ ವಿಲ್ಲದೆ ನಿಲ್ಲಲು ಸ್ಥಳವಿಲ್ಲದೆ ಅಲೆಯುತ್ತಾನೊ? ಏನುಮಾಡಲಿ? ನನ್ನ ದ್ವೇಷಾಸೂಯೆ ಗಳನ್ನು ಸುಡು! ನನ್ನ ಮಗನನ್ನು ಯಾರಾದರೂ ಕರದುಕೊಂಡು ಬನ್ನಿ .ನೀವುಕೇಳಿದಷ್ಟು ಹಣವನ್ನು ಸುಭದ್ರೆಯನ್ನೂ ಮನೆಗೆ ಅವಳೇ ನನ್ನ ಮಗಳು. ನನಗಿನ್ನು ಯಾರೂ ದಿಕ್ಕಿಲ್ಲ, ನನ್ನ ಪ್ರಾಣವೆಲ್ಲಾ ಒಬ್ಬ ಮಗನಲ್ಲಿತ್ತು. ಅವನನ್ನು ನಾನಾಗಿಯೇ ಕಾಡುಪಾಲು ಮಾಡಿದ ಹಾಗಾಯಿತು. ಇನ್ನು ನಾನೇಕೆ ಬದುಕಿರಲಿ” ಎಂದು ಮುಂತಾಗಿ ಉನ್ಮತ್ತನಂತೆ ಹಲುಬಿದನು. ತಂದೆಗೆ ಸಚ್ಜರಿತ್ರ ನಾಗಿಯೂ, ವಿಧೇಯನಾಗಿಯೂ, ವಿದ್ಯಾವಂತನಾಗಿಯೂ ಇರುವ ಮಗನಿಗಿಂತಲೂ ಬೇರೆ ಭೂಷಣವೊಂದುಂಟೆ? ಶಂಕರರಾಯನಿಗೆ ಮಗನೆ ಸರ್ವಸ್ವವೂಆಗಿದ್ದನು. ಅವನ ಸೌಖ್ಯಕ್ಕೆ ಕುಂದು ಬಂದೀತೆಂಬ ಭೀತಿ ಯಿಂದ ಶಂಕರರಾಯನು ಎರಡನೆಯ ಮದುವೆಯನ್ನು ಸಹಮಾಡಿಕೊಳ್ಳ ಲಿಲ್ಲ. ಮಾಧವನಿಗೆ ಸ್ವಲ್ಪ ಮೈಆಲಸ್ಯವುಂಟಾದರೂ ತಂದೆಗೆ ಈ ಲೋಕವೇ ಮುಳುಗಿಹೋದಂತಾಗುವುದು . ಹೀಗಿರುವಲ್ಲಿ ಅವನು ದೇಶಾಂತರ ಹೊರಟುಹೋದರೆ ಶಂಕರರಾಯನು ಜೀವಿಸುವ ಬಗೆಹೇಗೆ?

ಗಂಗಾಬಾಯಿಗೆ ಅವನನ್ನು ಸಮಾಧಾನಪಡಿ ಸುವುದು ಅತ್ಯಂತ ಶ್ರಮಸಾಧ್ಯವಾದ ಕೆಲಸವಾಯಿತು. ಕೊನೆಗೆ, ಬಾವಾಜಿ! ಮಾಧ ವನನ್ನು ಆಕರ್ಷಣೆ ಮಾಡುವ ಶಕ್ತಿಯೊಂದನ್ನು ನಾವು ಭದ್ರಪಡಿಸಿ ಕೊಂಡಿದ್ದರೆ ಅವನೆಲ್ಲಿದ್ದರೂ ಬರುವನು. ಯೋಚನೆಮಾಡಬೇಡಿ. ನಾನು ತಕ್ಕ ಸನ್ನಾಹವನ್ನು ಮಾಡುತ್ತೇನೆ“ ಎಂದಳು.

ಶಂಕರ—ಎಲ್ಲಿ! ಆಕಾಗದವನ್ನು ಕೊಡು. ಮದುವೆಯಾವಾಗ ಆಯಿತು? ಅದೇನು ಸಮಾಚಾರ ನಿನಗೆಗೊತ್ತೊ ?

ಗಂಗಾ—ಮದುವೆಯಾಗಿಲ್ಲ. ಕಾಗದವನ್ನು ನೋಡಿ, ‘ದೈವ ಸಾಕ್ಷಿಯಾಗಿ ಸುಭದ್ರೆಯನ್ನು ವರಿಸಿರುವುದರಿಂದ` ಎಂದಿದೆ.

ಗಂ ಗಾಬಾಯಿಯು ರಾಂಪುರಕ್ಟೆ ಮಾಧವನು ಬಂದಿದ್ದಾಗ್ಗೆ ನಡೆದ ಸಂಗತಿಯೆಲ್ಲವನ್ನೂ ಸವಿಸ್ತಾರವಾಗಿ ಹೇಳಿದಳು.

ಶಂಕರರಾಯನು,,,ಆಹಾ! ಮೊದಲೇ ನನಗೆ ಈ ಸಂಗತಿಗಳೆ ಲ್ಲವೂ ತಿಳಿಯದೇಹೋದುವಲ್ಲ. ನನ್ನ ಮಗನು ಈಶ್ವರಸಾಕ್ಟಿ ಯಾಗಿ ಮಾಡಿಕೊಂಡಿರುವುದು ನನ್ನ ಹುಚ್ಚುತನಕ್ಕೋಸ್ಥ್ರರ ಬಿಡು ವನೆ? ಶಹಬಾಸ್ !ಮಗನೆ! ನೀನು ಹರಿಶ್ಪಂದ್ರನ ವಂಶದಲ್ಲಿ ಹುಟ್ಟಲು ತಕ್ವ್ರವನು, ಅಂಥಾ ಮಗನನ್ನು ತಿರಿಗಿ ಕಾಣುವೆನೆ?” ಎಂದು ನಾನಾ ವಿಧವಾಗಿ ವರ್ಣಿಸಿ ಅಳತೊಡಗಿದನು.

ಗಂಗಾಬಾಯಿಯು “ಸಮಾಧಾನ ಹೇಳಿದಷ್ಟೂ ದುಃಖವು ಹೆಚ್ಚುವುದು. ತನ್ನೊಳಗೆ ತಾನೇ ಶಾಂತವಾಗಲಿ“ಎಂದಂದುಕೊಂಡು ಬೇರೆ ಕೆಲಸಕ್ಕೆ ಹೊರಟುಹೋದಳು.

ಆದಿನ ಭಾನುವಾರವಾದುದರಿಂದ ಕೋರ್ಟಿನ ಕೆಲಸವಿರಲಿಲ್ಲ. ಶಂಕರರಾಯನ ಸರಕಾರದ ಪಕ್ಷಯದವಕೀಲನನ್ನು ಮನೆಗೆಕರೆಸಿಕೊಂಡು ತನಗೆವ್ಯಾಜ್ಯವನ್ನು ಮುಂದಕ್ಕೆ ನಡೆಸುವುದರಲ್ಲಿ ಸಮ್ಮತಿಯಿಲ್ಲವೆಂದೂ ಹೇಗಾದರೂಮಾಡಿ ಅಪರಾಧಿಯನ್ನು ಬಿಡುಗಡೆ ಮಾಡುವ ಪ್ರಯತ್ನ ಮಾಡಬೇಕೆಂದೂ ಹೇಳಿದನು. ಅದಕ್ಕೆ ವಕೀಲನು ಆಶ್ಲ ರ್ಯಪಟ್ಟು “ಇದೆ(ನು ಜಹಗೀರ್ದಾರರೆ, ಹೀಗೆ ಅಪ್ಷಣೆ ಕೊಡಿಸೋಣವಾಗುತ್ತದೆ? ಅಂತಹ ಘಾತುಕನನ್ನು ಬಿಡುವುದುಂಟಿ? ” ಎಂದು ಕೇಳಿದನು. ಶಂಕರರಾಯರು, “ಸ್ಕಾಮಿ! ಅವನ ಹೊಟ್ಟೆಯುರಿ ತಗಲಿದುದರಿಂದಲೆ ನನಗೆ ಮಗನ ವಿಯೋಗವುಂಟಾಗಿರಬಹುದು. ಅದುದರಿಂದ ಅವನಿಗೆ ಶಿಕ್ಷೆಮಾಡಿಸುವುದು ನನಗೆ, ಇಷ್ಟವಿಲ್ಲ. ದಯವಿಟ್ಟು ಹೀಗಾದರೂ ವ್ಯಾಜ್ಯವನ್ನು ಸಾಕುಮಾಡೋಣವಾಗಲಿ“ ಎಂದನು. ವಕೀಲನು, “ಸರಕಾರದವರು ವ್ಯಾಜ್ಯವನ್ನು ಪ್ರಾರಂಭಿಸಿದ ಮೇಲೆ ಅದನ್ನು ಬಿಡು ವುದಕ್ಕೆಂದಿಗೊ ಆಗುವುದಿಲ್ಲ, ಸಾಕ್ಷಿಗಳ ಹೇಳಿಕೆಯಿಂದೇನಾದರೂ ಗುಣವಾದರೆಆಗಬಹುದು“ಎಂದು ತಿಳಿಸಿ ಶಂಕರರಾಯನಿಗುಂಟಾದ ಮನೋವ್ಯಥೆಗೋಸ್ಕ್ರರ ಬಹಳ ಕನಿಕರಪಟ್ಟು ಹೊರಟುಹೋದನು.
*****
ಮುಂದುವರೆಯುವುದು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪ್ರಾಣದೇವತೆಗಳ ಪರಮಸ್ವರ್ಗ
Next post ಮಾನವ ಶರೀರ ದೇವರಿಗಾಗಿ

ಸಣ್ಣ ಕತೆ

  • ಸ್ವಯಂಪ್ರಕಾಶ

    ಇಸ್ತ್ರೀ ಇಲ್ಲದ ಸೀರೆ, ಬಾಚದ ತಲೆ... ಕೈಯಲ್ಲಿ ಚೀಲದ ತುಂಬ ತರ್ಕಾರಿಗಳೊಂದಿಗೆ ಮಾರುಕಟ್ಟೆಯಿಂದ ಹೊರಗೆ ಬರುವುದು ಭ್ರಮರೆ’ಯೇ... ಕಂಡು ತುಂಬಾ ಆಶ್ಚರ್ಯವಾಯಿತು. ರೋಡಿನ ಈ ಕಡೆ ಕಾರು… Read more…

  • ಕೂನನ ಮಗಳು ಕೆಂಚಿಯೂ….

    ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…

  • ಕರಿ ನಾಗರಗಳು

    ಚಿತ್ರ: ಆಂಬರ್‍ ಕ್ಲೇ ಇಶಾಂ ನಮಾಜಿಗೆ (ರಾತ್ರೆಯ ನಮಾಜು) ಮೊದಲು ಅರಬ್ಬಿ ಪುಸ್ತಕವನ್ನು ಬ್ಯಾಗಿನೊಳಗಿಟ್ಟುಕೊಂಡು, ಅದನ್ನು ದುಪಟ್ಟದೊಳಗೆ ಮರೆ ಮಾಡಿಕೊಂಡು ಓಡಿ ಬಂದ, ತರನ್ನುಮ್‌ ನೀರು ಹರಿಯುತ್ತಿದ್ದ… Read more…

  • ಮಾದಿತನ

    ಮುಂಗೋಳಿ... ಕೂಗಿದ್ದೆ ತಡ, ಪೆರ್‍ಲಜ್ಜ ದಿಡಿಗ್ಗನೆದ್ದ. ರಾತ್ರಿಯೆಲ್ಲ... ವಂದೇ ಸಮ್ನೆ ಅಳುತ್ತಾ, ವುರೀಲೋ... ಬ್ಯಾಡೋ... ಯಂಬಂತೆ, ದೀಪದ ಬುಡ್ಡಿ, ನಡ್ಮುನೆ ಕಂಬ್ಕಂಟಿ, ಸಣ್ಗೆ ವುರಿತಿತ್ತು. ಯದೆವಳ್ಗೆ ಮಜ್ಗೆ… Read more…

  • ಮೃಗಜಲ

    "People are trying to work towards a good quality of life for tomorrow instead of living for today, for many… Read more…