ಮೊರೆವ ನದಿ, ಅತ್ತಿತ್ತ
ಹೆಬ್ಬಂಡೆರಾಶಿ
ಎಂದೂ ಮುಗಿಯದ ಘರ್ಷಣೆ;
ಹೊಗೆಯಂತೆ ಮೇಲೆ
ನೀರ ಕಣಗಳ ಸಂತೆ
ಕಾಮನ ಬಿಲ್ಲಿನ ಘೋಷಣೆ.
ಪ್ರಜ್ಞೆ – ಪರಿಸರ ಯಂತ್ರ
ಸ್ಥಿತಿ ಚಲನೆಗಳ ನಡುವೆ ಮೂಡಿ ಮೇಲೇಳುತಿದೆ
ಅರ್ಥಕ್ಕೊಗ್ಗದ ಶಬ್ದ ಪವಣಿಸುವ ತಂತ್ರ.
ಕವಿತೆಗೆಲ್ಲಿದೆ ಅರ್ಥ? ಅದಕ್ಕಿಲ್ಲ ಸ್ವಾರ್ಥ
ಎರಡನ್ನೂ ಮೀರಿದ ಅದು
ಮಂತ್ರಮಾತ್ರ.
*****