ಸ್ನಾನಕ್ಕೇಂತ ಬಂದ ಚಂದ್ರ
ಸಮುದ್ರ ಕನ್ಯೆಯ ಕೋಣೇಲಿ
ಅಡಗಿದನೆಂಬ ಗುಮಾನಿ ಕೇಳಿ,
ಬೆಳಗಿನ ಜಾವದಲ್ಲಿ ತುರ್ತಾಗಿ
ಬಲೆ ಕೊಟ್ಟು ಬೆಸ್ತರನ್ನಟ್ಟಿದ
ಭೂಮಿಗೆ ಸಿಕ್ಕದ್ದು ಏನು?
ಬರೀ ಒಂದಿಷ್ಟು ಮೀನು.
*****

ಕನ್ನಡ ನಲ್ಬರಹ ತಾಣ
ಸ್ನಾನಕ್ಕೇಂತ ಬಂದ ಚಂದ್ರ
ಸಮುದ್ರ ಕನ್ಯೆಯ ಕೋಣೇಲಿ
ಅಡಗಿದನೆಂಬ ಗುಮಾನಿ ಕೇಳಿ,
ಬೆಳಗಿನ ಜಾವದಲ್ಲಿ ತುರ್ತಾಗಿ
ಬಲೆ ಕೊಟ್ಟು ಬೆಸ್ತರನ್ನಟ್ಟಿದ
ಭೂಮಿಗೆ ಸಿಕ್ಕದ್ದು ಏನು?
ಬರೀ ಒಂದಿಷ್ಟು ಮೀನು.
*****