Moon

ನಾನೊಬ್ಬನೆ

ಹೌದು ಹಗಲಿಗೆ ಸೂರ್ಯ ಅವನೊಬ್ಬನೆ ರಾತ್ರಿಗೆ ಚಂದ್ರ ನೀನೊಬ್ಬನೆ ಆದರೆ ನೀವಿಬ್ಬರೂ ಅಪ್ರಸ್ತುರಾಗಿ ದಾರಿಗಾಣದ ಬಾಳ ಮುಸ್ಸಂಜೆ ಮಬ್ಬಲ್ಲೀಗ ನನಗೆ ನಾನೊಬ್ಬನೆ *****

ಚಂದ್ರನಿಗೊಂದು ಸಲಹೆ

ಮೊನ್ನೆ ಸಂಜೆ ಗುರು ಶುಕ್ರರನ್ನೇ ಕಣ್ಣುಗಳಮಾಡಿ ಆಕಾಶವೇ ನಕ್ಕಂತೆ ನೀ ಬಿಡಿಸಿಟ್ಟ ಚಿತ್ರ, ಬಹಳ ವಿಚಿತ್ರ. ನಮ್ಮವರ ಚಂದ್ರಯಾನ ನಿನ್ನ ಮೇಲಿಳಿದಾಗ ಆಗಿದ್ದರೂ ಆಗಿರಬಹುದು ನಿನಗೊಂದಿಷ್ಟು ಕಚಗುಳಿ. […]

ಮತ್ತದೇ ಪ್ರಶ್ನೆ

ಚಂದ್ರಾ, ಯಾವಾಗ ನೋಡಿದರೂ ಸದಾ ಮತ್ತದೇ ಪ್ರಶ್ನೆ ನಾನು ಹೆಚ್ಚೋ ಸೂರ್ಯ ಹೆಚ್ಚೋ?  ಸೂರ್ಯ ಹೆಚ್ಚೋ ನಾನು ಹೆಚ್ಚೋ…? ಉತ್ತರಿಸಿ ಸಾಕಾಗಿದೆ.  ನಿನ್ನನ್ನು ಬಿಡುವಂತಿಲ್ಲ ಬಿಡು ಈ […]

ನೀವಿಬ್ಬರೂ ಬೇಡ

ಚಂದ್ರ ನನಗೆ ನೀನೂ ಬೇಡ ಸೂರ್ಯನೂ ಬೇಡ ಸಾಕಾಗಿದೆ ನಿಮ್ಮದೇ ಮುಖಗಳನ್ನು ನೋಡಿ ನೋಡಿ ಆಕಾಶದಲ್ಲಿ ಬೇರೆಯವರಿಗೂ ಸ್ವಲ್ಪ ಜಾಗ ಕೊಡಿ ಅವಕಾಶವಾಗಲಿ ಇನ್ನೂ ಕೆಲವರಿಗೆ ಬೇರೆ […]

ಈ ಬುದ್ಧಿ ಹಿಡಿಸೋದಿಲ್ಲ

ಚಂದ್ರ ನನಗೆ ನಿನ್ನ ಈ ಬುದ್ಧಿ ಮಾತ್ರ ಹಿಡಿಸೋದಿಲ್ಲ ನೋಡು ಈಗ ಒಂದೆಂಟತ್ತು ದಿನದ ಹಿಂದೆ ದಿಲ್ಲಿಯಲ್ಲಿ ಸಿಕ್ಕಿದಾಗ ಪ್ರಧಾನಮಂತ್ರಿ ನೋಡ್ಕೋಂಡು ಹೊರಗೆ ಬರ್‍ತಿರೋ ಮುಖ್ಯಮಂತ್ರಿ ಥರ […]

ಚಂದ್ರ ಹೇಳಿದ್ದು

ಶಶಿಯವರನ್ನು ಭಾರತ ವಿಶ್ವಸಂಸ್ಥೆಯ ಮಹಾಕಾರ್ಯದರ್ಶಿ ಸ್ಥಾನಕ್ಕೆ ಅಭ್ಯರ್ಥಿಯೆಂದು ಹೆಸರಿಸಿದ್ದು ನನಗೇನೋ ತುಂಬಾ ಖುಷಿ ಗೆದ್ದವರು ಬಾನ್ ಕಿ ಮೂನು ಯಾರು ಗೆದ್ದರೇನು? ನಂದೇ ಹೆಸರಲ್ಲವೇನು? ಭೂಮಿಯ ಮೇಲೆ […]

ಚಂದ್ರನ ಚಾಳಿ

ಅಷ್ಟೇ ವಯಸ್ಸಿಗೆ ಬರುತ್ತಿರುವ ಕೆಂಡಸಂಪಿಗೆ ಕೆನ್ನೆಯ ಕನ್ನೆಯರು ಕ್ಷಣಕ್ಕೊಮ್ಮೆ ಕನ್ನಡಿಯಲ್ಲಿಣುಕುವಂತೆ, ಈ ಚಂದ್ರನಿಗೆ ಕಂಡ ಕಂಡ ಕಪ್ಪೆ ಹೊಂಡಗಳಲ್ಲು ತನ್ನ ಪ್ರತಿಬಿಂಬ ನೋಡಿಕೊಳ್ಳುವ ಚಾಳಿ, ಇದಕ್ಕೇನನ್ನೋಣ ನೀವೇ […]

ತಾರೆಯರು

ರಾತ್ರಿ ಬೆಳಗೂ ಕರಿಪರದೆಯ ಮುಂದೆ ಮಿಂಚುತ್ತಿದ್ದ ತಾರೆಯರು ಹಗಲು ನೀಲಿ ಪರದೆಯ ಹಿಂದೆ ನಿದ್ದೆ ಮಾಡ್ತಿದಾರೆ ಸಂಜೆಗೆ ಅವರವರ ಸೀನಿಗೆ ಸರಿಯಾಗಿ ಸದ್ದು ಮಾಡದೆ ಎದ್ದೆದ್ದು ಬರ್‍ತಾರೆ. […]