ಚಂದ್ರಾ, ಯಾವಾಗ ನೋಡಿದರೂ ಸದಾ ಮತ್ತದೇ ಪ್ರಶ್ನೆ
ನಾನು ಹೆಚ್ಚೋ ಸೂರ್ಯ ಹೆಚ್ಚೋ?  ಸೂರ್ಯ ಹೆಚ್ಚೋ
ನಾನು ಹೆಚ್ಚೋ…? ಉತ್ತರಿಸಿ ಸಾಕಾಗಿದೆ.  ನಿನ್ನನ್ನು ಬಿಡುವಂತಿಲ್ಲ
ಬಿಡು ಈ ಹೆಚ್ಚುಗಾರಿಕೆಯ ಹುಚ್ಚು
ಪಾಪ ನಿನಗೆ ಗೊತ್ತಿರೋದು ಇದೊಂದೆ ಕ್ವಿಜ್ಜು
ಕಡೆಯದಾಗಿ ಹೇಳಿಬಿಡುತ್ತೇನೆ ಕೇಳು, ನೀವಿಬ್ಬರೂ ಒಂದೇ
ಅವನೊಂದು ಓವೆನ್, ನೀನೊಂದು ಫ್ರಿಜ್ಜು
*****