ಅಷ್ಟೇ ವಯಸ್ಸಿಗೆ ಬರುತ್ತಿರುವ ಕೆಂಡಸಂಪಿಗೆ
ಕೆನ್ನೆಯ ಕನ್ನೆಯರು ಕ್ಷಣಕ್ಕೊಮ್ಮೆ ಕನ್ನಡಿಯಲ್ಲಿಣುಕುವಂತೆ,
ಈ ಚಂದ್ರನಿಗೆ ಕಂಡ ಕಂಡ ಕಪ್ಪೆ ಹೊಂಡಗಳಲ್ಲು ತನ್ನ ಪ್ರತಿಬಿಂಬ
ನೋಡಿಕೊಳ್ಳುವ ಚಾಳಿ, ಇದಕ್ಕೇನನ್ನೋಣ ನೀವೇ ಹೇಳಿ.
*****