ಚಂದ್ರ ನನಗೆ ನಿನ್ನ ಈ ಬುದ್ಧಿ
ಮಾತ್ರ ಹಿಡಿಸೋದಿಲ್ಲ ನೋಡು
ಈಗ ಒಂದೆಂಟತ್ತು ದಿನದ ಹಿಂದೆ
ದಿಲ್ಲಿಯಲ್ಲಿ ಸಿಕ್ಕಿದಾಗ
ಪ್ರಧಾನಮಂತ್ರಿ ನೋಡ್ಕೋಂಡು
ಹೊರಗೆ ಬರ್‍ತಿರೋ ಮುಖ್ಯಮಂತ್ರಿ ಥರ
ಮುಖ ಗುಂಡಗೆ ಅರಳಿ ಹೋಗಿತ್ತು.
ಇವತ್ತು ನೋಡಿದರೆ ಚುನಾವಣೆಗೆ ಟಿಕೆಟ್ ಸಿಗದೆ
ವೋಲ್ಟೇಜ್ ಡ್ರಾಪ್ ಆದ ಪುಢಾರಿ ತರ ಸೊಟ್ಟ ಮುಖ
ಮಾಡ್ಕೊಂಡು ಕೂತೀದೀಯ.
*****


















