“ಒಂದು ಎಲ್ಲಕ್ಕಿಂತ ಮೊದಲು
ಬರತ್ತೆ ಅಲ್ವೇನೋ?
ಆಮೇಲ್ ಎರಡು ಮೂರು ನಾಲ್ಕು
ಐದು, ಸರಿಯೇನೋ?
ಹೇಳ್ಲ ಈಗ ಒಟ್ಟಾಗ್ ಮತ್ತೆ
ಕಲಿತದ್ದೆಲ್ಲಾನೂ?
ಒಂದು ಎರಡು ಮೂರು ನಾಲ್ಕು
ಐದು-ಮುಂದೇನು?”
“ಐದು ಆದ್ಮೇಲೆ ಹೇಳ್ಬೇಕಾದ್ದು
ಆರು ಏಳು.
ಎಂಟು ಒಂಬತ್ ಹತ್ತು ಈಗ
ಎಲ್ಲಾ ಕೇಳು.
ಒಂದು ಎರಡು ಮೂರು ನಾಲ್ಕು
ಐದು ಆರು.
ಏಳು ಎಂಟು ಒಂಬತ್ತು ಹತ್ತು
ಮಗ್ಗಿ ಬೋರು!”
*****
ಲಕ್ಷ್ಮೀನಾರಾಯಣ ಭಟ್ಟರು ಕನ್ನಡ ಕಾವ್ಯದ ಜೀವಂತಿಕೆಯನ್ನು ಹೆಚ್ಚಿಸುತ್ತ ಆಧುನಿಕ ಕನ್ನಡ ಕಾವ್ಯವನ್ನು ಬೆಳೆಸುತ್ತ ಬಂದಿರುವ ಪ್ರಮುಖ ಕವಿಗಳಲ್ಲಿ ಒಬ್ಬರು. ಅವರ ಅನುವಾದಗಳು ಕನ್ನಡ ಕಾವ್ಯಕ್ಕೆ ಕೊಟ್ಟ ಬೆಲೆಬಾಳುವ ಉಡುಗೊರೆಗಳು ಮಾತ್ರವಾಗಿರದೆ ಸ್ವಂತಕ್ಕೆ ಪಡೆದ ರಕ್ತದಾನವೂ ಆಗಿದೆ. ಸ್ವಂತ ಪ್ರತಿಭೆ, ಶ್ರೇಷ್ಠಕವಿಗಳ ಆಪ್ತ ಅಧ್ಯಯನ ಎರಡೂ ಅವರನ್ನೂ ಎತ್ತರಕ್ಕೆ ಹತ್ತಿಸಿವೆ. ಅಧ್ಯಯನ, ಚಿಂತನೆ ಇವು ಅವರಲ್ಲಿ ಹಾಸು ಹೊಕ್ಕಾಗಿ ಒಂದನ್ನು ಮತ್ತೊಂದು ಬಲಗೊಳಿಸುತ್ತ ಬಂದಿವೆ.