ಒಬ್ಬ ಮಹಿಳೆ ತನ್ನ ಆರು ಮಕ್ಕಳ ಸಹಿತ ಬಸ್ ಏರಿದಳು. ಬಸ್ ಹೊರಟಿತು. ಆ ಮಹಿಳೆ ಸಮೀಪ ಧಡೂತಿ ಆಸಾಮಿಯೊಬ್ಬ ಸಿಗರೇಟ್ ಸೇದುತ್ತಾ ಕುಳಿತಿದ್ದ. ಮಹಿಳೆ ಆತನನ್ನು ಉದ್ದೇಶಿಸಿ “ಮೇಲೆ ಬೋರ್ಡ್ ತಗುಲಿ ಹಾಕಿರೋದು ಕಾಣಿಸೊಲ್ಲ ಧೂಮಪಾನ ಮಾಡಬಾರದೆಂದು?”
ಧಡೂತಿ ಆಸಾಮಿ: “ಕಾಣಿಸುತ್ತಿದೆ ಅಮ್ಮಾ, ಅದರ ಪಕ್ಕದಲ್ಲಿ ಇನ್ನೊಂದು ಬೋರ್ಡ್ ಇದೆ. ಅದನ್ನು ನೋಡಿದಿರಾ? ಎರಡು ಮಕ್ಕಳು ಸಾಕು ಎಂದು.”
***