ಕಲ್ಲು ಬಂಡೆ ಪಕ್ಕದಲ್ಲಿ ಬೆಳದಿತ್ತು ಹುಲ್ಲು, ಹಸಿರುನಗೆ ಚೆಲ್ಲಿಹುಲ್ಲು ಕೇಳಿತು- “ಏ! ಕಲ್ಲೇ! ನಿನಗೆ ಜುಟ್ಟೂ, ಮೀಸೆ ಒಂದೂ ಇಲ್ಲವೇ?” ಎಂದು. ಅದಕ್ಕೆ ಕಲ್ಲು ಒಡನೆ ಹೇಳಿತು- “ಏ! ಹುಲ್ಲೇ! ನಿನಗೆ ಹೊಟ್ಟೆ, ತಲೆ ಒಂದೂ ಇಲ್ಲವೇ?” ಎಂದು. ಹುಲ್ಲು ಹೇಳಿತು- “ಪಕ್ಕದಲ್ಲಿರುವ ನೀನೇ ನನ್ನ ಹೊಟ್ಟೆ, ನನ್ನ ತಲೆ” ಎಂದಿತು. ಒಡನೆ ಕಲ್ಲು ನಕ್ಕು ಹೇಳಿತು- “ಪಕ್ಕದಲ್ಲಿರುವ ನೀನೇ ನನ್ನ ಜುಟ್ಟು, ಮೀಸೆ” ಎಂದಿತು. ಕಲ್ಲು, ಹುಲ್ಲು ಎಂಬ ಬೇಧಭಾವ ನಮಗಿದ್ದರು ನಾವಿರುವ ವಿಶ್ವರಂಗದಲ್ಲಿ ನಮ್ಮದು ಸ್ನೇಹಸಂಗ ಎಂದು ಹೇಳುತ್ತಾ ಕಲ್ಲು ಹುಲ್ಲು ಒಂದಾಗಿ ನಕ್ಕವು.
*****