ಮೊರಗಳನ್ನು ಮಾರಲು ಬಂದ ಅವಳಲ್ಲಿ ಒಂದು ಜೊತೆ ಮರ ಕೊಂಡುಕೊಂಡೆ. “ಅಮ್ಮಾ! ನಾನು ಬಸುರಿ, ಹೆರಿಗೆಗೆ ಆಸ್ಪತ್ರೆಗೆ ಸೇರಬೇಕು, ಒಂದು ಸೀರೆ ಕೊಡಿ”-ಎಂದಳು. ಕರುಳು ಕಲಿಕಿತು. ಒಳಗೆ ಹೋಗಿ ಒಂದು ಹಳೆಯ ಸೀರೆ ತಂದು ಕೊಟ್ಟೆ. ಕಣ್ಣಿಗೆ ಒತ್ತಿಕೊಂಡಳು. ನಾನು ಒಳಗೆ ಬಂದು ಬಾಗಿಲು ಹಾಕಿ ಕಿಡಕಿಯಿಂದ ನೋಡುತ್ತಾ ಇದ್ದೆ. ಹೊಟ್ಟೆಯಲ್ಲಿ ಮಡಚಿಟ್ಟ ಒಂದು ಸೀರೆ ಜೊತೆ, ನಾನು ಕೊಟ್ಟ ಸೀರೆಯನ್ನು ಗಂಟಾಗಿ ಕಟ್ಟಿ ಹೊಟ್ಟೆಗೆ ಕಟ್ಟಿಕೊಂಡು ಸೆರಗು ಹೊದ್ದುಕೊಂಡಳು. ನನಗೆ ಈಗ ಅವಳ ಹೊಟ್ಟೆ ಹತ್ತು ತಿಂಗಳ ಬಸುರಿಯಂತೆ ಕಂಡಿತು.
*****

ಪರಿಮಳ ರಾವ್ ಜಿ ಆರ್‍
Latest posts by ಪರಿಮಳ ರಾವ್ ಜಿ ಆರ್‍ (see all)