ಒಬ್ಬ ಗಣಿತಜ್ಞ ಮತೊಬ್ಬ ತತ್ವಜ್ಞಾನಿ ಮಾತುಕತೆಯಲ್ಲಿ ತೊಡಗಿದ್ದರು. ಗಣಿತದಲ್ಲಿ ಎಲ್ಲಾ ನಿಖರವಾಗಿ ಎಣಿಸಲು ಗುಣಿಸಲು ಸಾಧ್ಯ ಎಂದ ಗಣಿತಜ್ಞ, ತತ್ವಜ್ಞಾನಿ ಒಡನೆ ಕೇಳಿದ ಆಕಾಶವನ್ನು ಅಳೆಯಲು, ಗಗನದ ಚುಕ್ಕಿಗಳನ್ನು ಎಣಿಸಲು ನಿನಗೆ ಸಾಧ್ಯವೇ? ಮಳೆಹನಿಗಳ ಲೆಕ್ಕ ಮುಗಿಲಿಗೆ ಗೊತ್ತಿಲ್ಲ. ಅದು ನೆಲಕ್ಕೆ ಬಿದ್ದಾಗ ನೆಲವು ಅದರ ಲೆಕ್ಕ ಇಟ್ಟಿಲ್ಲ. “ಇವೆಲ್ಲಕ್ಕೂ ನಿಖರವಾದ ಉತ್ತರ ಹೇಳಬಲ್ಲೆಯಾ?” ಎಂದಾಗ ಗಣಿತಜ್ಞ ಮೌನದಲ್ಲಿ “ಅನಂತತೆಯ ಅಳೆಯುವವರು ಉಂಟೇ?” ಎಂದು ಮೌನವಾದ.
*****