ದೇಹದ ನಿಲುಮೆ

– ಜಂಗುಳಿಯೊಳಗಿನ ಒಂದು ಜೀವವು ಕೇಳಿದ್ದೇನೆಂದರೆ.- “”ಹಿಗ್ಗುವಿಕೆಯೇಕೋ-.ಈ ದೇಹಕೆ ಎಂಮ ಕೇಳಲಾಗುತ್ತಿರುವಾಗ ನಾವು ದೇಹದ ನಿಲುಮೆಯನ್ನು ಅರಿತುಕೊಳ್ಳುವುದು ಅನಿವಾರ್ಯೆವೆಂಧು ತೋರುತ್ತದೆ. ಆದನ್ನು ದಯೆಯಿಟ್ಟು ಹೇಳಿಕೊಡಿರಿ.”

ಸಂಗನುಶರಣನು ಕಣ್ಣುಮುಗಿದು, ತನ್ನ ಒಡಲನ್ನು ಭಗವತಿಯ ಅಡಿಗಿರಿಸಿ ಆ ಬಳಿಕ ಪಡಿನುಡಿಯತೊಡಗಿದುದು ಹೇಗೆಂದರೆ-
“ಆಹುದು! ದೇಹವೇ ತಾನೆಂದು ತಿಳಿದಿರುವವನಿಗೆ ಹಿಗ್ಗುವಿಯೇಕೊ-ಎಂದು ಕೇಳಲಾಗಿದೆ. ಆದು ಎಲುವಿನ ತಡಿಕೆ; ಮಾಂಸದ ಮಡಿಕೆ; ಮೂತ್ರದ ಕುಡಿಕೆಯೆಂದು ಮೂದಲಿಸಿ ಹೇಸಿಕೆ ಹುಟ್ಟಿಸಲಾಗಿದೆ.

ದೇಹವು ರೂಪುಗೊಂಡಿದ್ಧರಿಂದಲೇ ನಿಜವಾಗಿ ದೇವನು ಅದರಲ್ಲಿ ಹೆಚ್ಚು ಆಶ್ಚರ್ಯಕರವಾಗಿ ವ್ರಕಟಿಗೊಳ್ಳಲು ಸಾಧ್ಯವಾಗುತ್ತದೆ. ದೇಹೋಹಂ ಎಂಬ ಭಾವನೆಯುಳ್ಳ, ಕೆಳಗಿನ ಪ್ರಕೃತಿಯ ಪ್ರಜ್ಞೆಯುಳ್ಳ ಜೀವಿಯ ದೇಹದಲ್ಲಿ
ದೇವನ ಪ್ರಕಟನೆಯೊಂದಿಗೆ ಪ್ರಕೃತಿಗುಣಧರ್ಮಗಳ ಪ್ರಭಾವವೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ.

ಕಾಯದ ಕಳವಳಕ್ಕಾಗಿ ಕಾಯಯ್ಯ-ಎಂಮ ಮೊರೆಯಿಡುವುದಾಗಲಿ, ಜೀನನೋಪಾಯಕ್ಯಾಗಿ ಈಯಯ್ಯ-ಎಂದು ಹ೦ಬಲಿಸುವುದಾಗಲಿ ದೇಹ ಬುದ್ಧಿಯೇ ಸರಿ.

ದೇಹವು ಅಕ್ಷರಗಳಲ್ಲಿ ವ್ಯಂಜನವಿದ್ದಂತೆ, ಜೀವವು ಸ್ವರವಿದ್ದಂತೆ. ವ್ಯಂಜನಕ್ಕೆ ಸ್ವತಂತ್ರ ಉಚ್ಚಾರವಿಲ್ಲ. ಸ್ವರವು ಕೂಡಿದಾಗಲೇ ವ್ಯ೦ಜನಫು ಉಚ್ಚರಿಸ ಲಿಕ್ಕೆ ಸಾಧ್ಯವಾಗುತ್ತದೆ. ಸ್ವತಂತ್ರ ಉಚ್ಚಾರವಿಲ್ಲವೆಂದರೂ  ಸ್ವಂತ
ಆಕಾರವಿದೆ.

ವ್ರಪಂಚದೊಳಗಿನ ಪ್ರತಿಯೊಂದು ವಸ್ತುವೂ ಪರಮಾತ್ಮನು ವಾಸಿಸುವ ನಿಲಯವೇ ಆಗಿದೆ. ತಿಲದೊಳಗಿನ ತೈಲದಂತೆ ಪರಮಾತ್ಮನು ಪ್ರತಿಯೊಂದು ವಸ್ತುವಿನ ತು೦ಬ ಹರಹಿಕೊಂಡಿದ್ದಾನೆ.

ತೈ೮ದಿ೦ದ ತು೦ಬಿದ ತಿಲವು ತೈಲವನ್ನು ಪ್ರಕಟಿಸುವ ದಾರಿಹಿಡಿಯದೆ, ತನ್ನ೦ಥ ನೂರಾರು-ಸಾವಿರಾರು ತಿಲಬೀಜಗಳನ್ನು ಪ್ರಕಟಿಸುವ ಧಾವತಿಗೊಳ್ಳುವುದೇ ಸಂಸಾರ; ಆದೇ ಮಾಯೆಯೆನಿಸಿದೆ. ಆದರೆ ಅದು ನಿಜ
ವಾಗಿಯೂ ಆಟ
.
ಸಂಸಾರವೆಂದಾಗ ಇಂದಿಗೆಂತು, ನಾಳಿಂಗೆಂತು ಎಂದು ಬೆಂದೊಡಲನ್ನು ಹೊರೆಯುವುದರಲ್ಲಿಯೇ ಹೊತ್ತುಗಳೆಯವದು. ಹಿ೦ವೆ ನಾನಾ ಯೋನಿಗಳಲ್ಲಿ ಬಂದೆನೆಂಬ ಹೇವವಿಲ್ಲ; ಹೇಯವಿಲ್ಲ. ಮಂ೦ದೆ ಮುಕ್ತಿಯಾಗಬೇಕೆಂಬ ಯುಕ್ತಿಯಿಲ್ಲ.

ದೇಹವು ಪರಮಾತ್ಮನ ಪ್ರಕಟನೆಗೆ ತಕ್ಕ ವಾಹನವಾಗದಿದ್ದರೆ ಅದಕ್ಕೆ ಸಾರ್ಥಕವೇ ಇಲ್ಲ. ಪರಮಾತ್ಮನ ವಾಹನ- ವೆಂದರೆ, ತಾಳಿಕೆಯುಳ್ಳದ್ದಾಗ ಬೇಕಲ್ಲದೆ, ಚೆಲುವೂ, ಸಚಲವೂ, ವಿಮಲವೂ ಆಗಿರುವುದು ನ್ಯಾಯಸಮ್ಮತವಲ್ಲವೇ?

ಎನ್ನ ಕಾಯವ ದಂಡಿಗೆಯ ಮಾಡಯ್ಯ.
ಎನ್ನ ಶಿರವ ಸೋರೆಯ ಮಾಡಯ್ಯ.
ಎನ್ನ ನರವ ತಂತಿಯ ಮಾಡಯ್ಯ.
ಎನ್ನ ಬೆರಳ ಕಡ್ಡಿಯ ಮಾಡಯ್ಯ.
ಬತ್ತೀಸ ರಾಗವ ಹಾಡಯ್ಯ!
ಉರದಲೊತ್ತಿ ಬಾರಿಸು ಕೂಡಲಸ೦ಗಮದೇವಾ.
.
ಇದೀಗ ಸಾರ್ಥಕತೆ. ಸಂಪೂರ್ಣ ಶರೀರವು ದೇವನ ಉಪಕರಣವಾಗುವುದರ ಜೊತೆಗೆ ಸರ್ವ ರಾಗಗಳನ್ನು ಆಲಾಪಿಸುವ ಪರಿಪೂರ್ಣ ಸಾದನವಾಗಿ ನಿಲ್ಲಬೇಕಾಗಿದೆ. ಕೂಡಲಸ೦ಗಮದೇವನೇ ಉರದಲೊತ್ತಿ ಬಾರಿಸ- ಬೇಕಲ್ಲದೆ, ಇನ್ನಾರ ಕೈಗೆ ಬಿದ್ಧರೂ ಆಚಾತುರ್ಯವಾಗುವದು.

ದಿವ್ಯೋಪಕರಣವಾಗಲರಿಯದ ದೇಹವು ಅಡ್ಡತಿಡ್ಡವಾಗಿ ಬಳಕೆಗೊಳ್ಳುವದರಿಂದ ಸಾವಿರ ಕುತ್ತುಗಳು ಹುಟ್ಟಿಕೊಳ್ಳುವವು. ಕಾಯವಿಕಾರ ಕಾಡುವದು; ಮನೋವಿಕಾರ ಮೂಡುವದು; ಇಂದ್ರಿಯ ವಿಕಾರ ಸುಳಿಯುವದು.
ಚಿತ್ತವು ಅನ್ಯದಲ್ಲಿ ಒತ್ತೆಗೊಳ್ಳುವದು.

ಅನಿಷ್ಟದಲ್ಲಿ ತೊಳಲುವದಕ್ಕಿಂತ ದೇಹವು ವ್ಯಂಗವಾಗಿದ್ದರೆ ಒಳ್ಳೆಯದೇನೋ. ಅತ್ತಿತ್ತ ಹೋಗದಂತೆ ಹೆಳವನಾಗಿದ್ದರೆ, ಸುತ್ತಿಸುಳಿದು ನೋಡದಂತೆ ಅಂಧಕನಾಗಿದ್ದರೆ, ಮತ್ತೊಂದು ಕೇಳವ ಕಿವುಡನಾಗಿದ್ಧರೆ ಅನಿಷ್ಟ ನಿವಾರಣೆ ಆಗಬಹುದೇನೋ. ಅನಿಷ್ಟಪ್ರಾಪ್ತಿಯೇ ಆಗುವದಿಲ್ಲವೇನೋ.

ಕಾಯವೆಂಬ ಘಟಕ್ಕೆ ಚೈತನ್ಯವೇ ಸುಯಿಧಾನ.
ಸಮತೆಯೆಂಬ ಜಲ, ಕರಣಾದಿಗಳೇ ಶ್ರವಣ.
ಜ್ಞಾನವೆಂಬ ಅಗ್ನಿಯನಿಕ್ಕಿ, ಮತಿಯೆಂಬ ಸಟ್ಟುಗದಲ್ಲಿ ಘಟ್ಟಿಸಿ
ಪಾಕಕ್ಕೆ ತಂದು ಭಾವದಲ್ಲಿ ಕುಳ್ಳಿರಿಸಿ ಪರಿಣಾಮದೋಗರವ ನೀಡಿದರೆ
ಕೂಡಲಸ೦ಗಮದೇವಂಗಾರೋಗಣೆ ಯಾಯಿತ್ತು.
ಇದಲ್ಲದೆ, ದೇಹ ಸಾರ್ಥಕ್ಯಕ್ಕೆ ಬೇರೊಂದು ಬಗೆಯೂ ಉಂಟು.
ಕಾಯವೆಂಬ ಡಕ್ಕೆಯ ಮೇಲೆ, ಜೀವವೆಂಬ ಹಿಡಿ ಚೆಂಡು ಬೀಳೆ,
ತ್ರಿವಿಧವ ತಾ ತಾ ಎಂಬಾತೆ ಹಿಂ, ಡಿ, ಡಿಂ, ಡಿ ಎನುತಿದೆ.
ಇಂತೀ ಉಲುಹಿನ ಭೇದದಲಿ ಹೊಲಬುದಪ್ಪದೆ ಗೆ೮ಬೇಕು ಕಾ೮ನೆಂಬ ಮಾರಿಯ.
ಕಾಲಾಂತಕ ಭೀಮೇಶ್ವರ ಲಿಂಗವನರಿಯ ಬಲ್ಲಡೆ.

 

ಕಾಯವೇ ಪ್ರಾಣಲಿಂಗಕ್ಕೆ ಸಜ್ಜೆ ಎನಿಸಿಲ್ಲವೇ?
ಎಂಬತ್ತು ನಾಲ್ಕು ಲಕ್ಷ ಶಿವಾಲಯ೦ಗಳ ಮಾಡಿ ಒಳಗಿರುವವನು ದೇವರೆಂಬುದನ್ನು ಅರಿತವರಿಲ್ಲವೇ ? ಆ ಶಿವಾಲಯಗಳೆಲ್ಲ ದೇಹಾರಗಳಾಗಿ ಮಾರ್ಪಾಡುಗೊ೦ಡ ದೇಹಗಳೇ ಸರಿಯಷ್ಟೇ?

ದೇಹಾರವಾಗಿರಲಾರದ ದೇಹಪು ಕಳವಳದ ಕಟ್ಟೆಯಾಗುತ್ತದೆ. ಕಳನಳ ಕ್ಕೀಡಾದ ದೇಹದಲ್ಲಿ ತಿಳುವಿನ ಬೆಳಕು ಬೆಳಗುವುದು ಬಿಗಿ. ಆ ದೇಹಿ ಸಂಸಾರಿ.
ಆತನಿಗೆ ಮುಕ್ತ ಭಾವನೆ ಬರಲು ಸಾಧ್ಯವಿಲ್ಲ.

ಕಾಯದ ಕಳವಳವ ಗೆಲ್ಲಲರಿಯದವರು
ಮಾಯಾಪಾಶದಲ್ಲಿ ಬಂಧನವುಳ್ಳ ಸಂಸಾರಿಗಳಿಹರಲ್ಲದೆ
ಅವರು ಜ್ಞಾನಿಗಳಾಗಲರಿಯರು.
ಅವರಿಗಿನ್ನೆ೦ದಿಗೆ ಮುಕ್ತಿಯಹುದೋ
ನಿಜಗುರು ಸ್ವತಂತ್ರ ಸಿದ್ವಲಿಂಗೇಶ್ವರಾ.

ಸ್ವಾಭಾವಿಕನಾಗಿಯೇ ಶರೀರವು ನಂಬಿಗಸ್ತ ಸೇವಕ ಇದ್ದ ಹಾಗಿದೆ. ಅದು ಎಷ್ಟೋ ಸಾರೆ ಮನಸ್ಸು .ಪ್ರಾಣಗಳ ಆದೇಶಗಳನ್ನು ಕುರುಡನಂತೆ ಪಾಲಿಸಿ ತಾನು ಮಾತ್ರ ಸಂಕಟಕ್ಕೆ ಒಳಗಾಗುತ್ತದೆ. ತನ್ನ ಹಿತಕ್ಕೆ ತಾನೇ ಎರವಾಗುತ್ತದೆ. ಮನಸ್ಸಿನ ಮೂಢನಂಬಿಕೆ-ನಿರಂಕುಶ ತತ್ವಗಳಿಂದಲೂ, ಪ್ರಾಣದ ಉದ್ರೇಕ-ಮಿತಿಯ ಉಲ್ಲಂಘನೆಗಳಿಂದಲೂ ಶರೀರವು ತನ್ನ ಸಮ ತೂಕವನ್ನು ಬಹುಬೇಗ ಕಳೆದುಕೊಳ್ಳುತ್ತದೆ. ಸಮತೂಕವು ದೇಹಕ್ಕೆ ಹುಟ್ಟು ಗುಣವಾಗಿದ್ದರೂ ಅದನ್ನು ಕಳಕೊಂಡಾಗ ಬೇನೆ-ಬೇಸರಿಕೆ -ಬಳಲಿಕೆಗಳಿಗೆ ಈಡಾಗತ್ತದೆ. ಇದು ಕಾಯದ ಕಳವಳವಾಗಲಾರದೇ?

ಬ೦ವ ಪರಿಸ್ಥಿತಿಗೆ ಹೊಂದಿಕೊ೦ಡು ಹೋಗುವ ಅದ್ಭುತಶಕ್ತಿ ದೇಹ ಕ್ಕಿದೆ. ಬಂದುದನ್ನೆಲ್ಲ ಸಹಿಸಿಕೊಂಡು ಹೋಗುವ ಅಗಾಧಶಕ್ತಿ ದೇಹಕ್ಕಿದೆ. ಅದು ನಮ್ಮ ಎಣಿಕೆಮೀರಿ ಕೆಲಸಮಾಡಬಲ್ಲದು. ಯಾಕಂದರೆ ಅದು ಶಾಂತವಾಗಿದೆ; ಸ್ಥಿರವಾಗಿದೆ; ಬಲಿಷ್ಠವಾಗಿದೆ. ಅಲ್ಲದೆ ಸಮತೋಲವುಳ್ಳದ್ಹಾಗಿದೆ. ಆದಕ್ಕಿರುನ ಕು೦ದುಎಂದರೆ, ಮನ-ಪ್ರಾಣಗಳ ದಬ್ಬಾಳಿಕೆಗೆ ತಲಿತಗ್ಗಿಸುವುದು. ಆಂತೆಯೇ ಕಾಯದ ಸಂಗವೇ ಲೇಸುಕಂಡಯ್ಯ. ಹಾವಿನ ಹಲ್ಲ ಕಳೆದು ಹಾವನಾಡಿಸಬಲ್ಲಡೆ, ಹಾವಿನ ಸಂಗವೇ ಲೇಸು ಕಂಡಯ್ಯ-ಎನ್ನುವುದು ವಾಸ್ತವಿಕದ ಮಾತಾಗಿದೆ.

ದೇಹವು ಕಾರ್ಯದಲ್ಲಿಯೂ ವಿಶ್ರಾಂತಿ ಪಡೆಯಬಲ್ಲದು. ತಾನು ಪ್ರಜ್ಞಾಯುಕ್ತನಾಗಿ, ಉಪಯುಕ್ತನಾಗಿ ವ್ಯಯಿಸುವ ಶಕ್ತಿ-ಉತ್ಸಾಹಗಳ ಬದಲು ವಿಶ್ವಶಕ್ತಿಗಳ ಆಗಾಧವಾದ ಸ೦ಪರ್ಕದಿ೦ದ ಲಭಿಸುವ ಶಕ್ತಿ-ಉತ್ಸಾಹಗಳನ್ನು ವ್ರಯೋಗಿಸುವ ಯುಕ್ತಿಯನ್ನೂ ಅದು ಚೆನ್ನಾಗಿಯೇ ಬಲ್ಲದು. ಇಂಥ ಸಮೃದ್ಧ ಹಾಗೂ ಸಮತೂಕದ ಚೀವನದಲ್ಲಿ ಊರ್ಧ್ವ ಲೋಕ- ಗಳಲ್ಲಿಯ ಸಾಮರಸ್ಯದ ಪ್ರತಿಬಿಂಬವಾದ ಹೊಸಬಗೆಯ-ಸಾಮರಸ್ಯ ವೊಂದು ದೇಹದಲ್ಲಿ ಪ್ರಕಟಗೊಳ್ಳುವದು.

ಹೊಸಬಗೆಯ ಈ ಸಾಮರಸ್ಯವು ದೇಹದಲ್ಲಿ ಪ್ರಕಟಗೊಂಡರೆ__
ದೇಹಕ್ಕೆ ಪರಿಪೂರ್ಣವಾದ ಪ್ರಮಾಣಬದ್ದತೆ ಪ್ರಾಪ್ತವಾಗುತ್ತದೆ.
ಆದರ್ಶವಾದ ಆಕಾರ–ಸೌ೦ದರ್ಯಗಳು ಕಂಗೊಳಿಸುತ್ತವೆ.
ಅದರಿ೦ದ ಸಾಮರಸ್ಯವು ಕ್ಷಣಕ್ಷಣಕ್ಕೂ ಟೆಳೆಯುತ್ತ ಹೋಗುತ್ತದೆ.
ಸಾಮರಸ್ಯವು ಬೆಳೆದಂತೆ ದೇಹದಲ್ಲಿ ಸತತ ಪರಿವರ್ತನೆ ಕಾಣಿಸಿ
ಕೊಳ್ಳುತ್ತದೆ.
ವಿಘಟನೆ-ವಿನಾಶಗಳು ಅನಾವಶ್ಯಕವಾಗುತ್ತವೆ.
ಮೃತ್ಯುವಿನ ನಿಯಮವು ಸಹ ಅನುಲ್ಲ೦ಘನೀಯವಾಗದಿರುತ್ತದೆ.

“ಕಾಯದಿಂದ ಲಿಂಗದರ್ಶನ, ಕಾಯದಿಂವ ಜಂಗಮದರ್ಶನ.
ಕಾಯದಿಂದ ಪ್ರಸಾದ ಸಂಪತ್ತು, ಕೂಡ೮ಚೆನ್ನಸಂಗಯ್ಯ
ಈ ಕಾಯದಿ೦ದ ನಿಮ್ಮುವ ಕಂಡೆನಯ್ಯ.”
ಎನ್ನುವುದಕ್ಕೆ ಸಾಧ್ಯವಾಗುತ್ತದೆ.

ಆಗ ಮಾತ್ರ ದೇಹ ನಾನಲ್ಲ, ಜೀವ ನಾನಲ್ಲ ಎಂಬುವುದು ಶಿವನೆನಿಸ ಬಲ್ಲದು. ದ್ವೇಷವಿಲ್ಲದ ಪ್ರಾಣಕ್ಕೆ ಆಶ್ರಯವಿಲ್ಲ. ಪ್ರಾಣವಿಲ್ಲದ ಕಾಯಕ್ಕೆ ಚೈತನ್ಯವಿಲ್ಲ. ದೇಹ-ಪ್ರಾಣಗಳ ಬೆಸಗೆಯಲ್ಲಿಯೇ ಅನಿಷ್ಟಗಳು ಅವಿತು ಕೊಂಡಿರುವವು.

ಕಾಯನಾನೆಂದರೆ ಕರ್ಮಕಾಂಡಿ.
ದೇಹನಾನೆಂಬುವ ವಾಸನೆಯೊಳಗಾಗಿ
ಕಾಲತ್ರಯಕ್ಕೊಳಗಾಗಿ-ಅಸ್ವತಂತ್ರನಾಗಿ
………………..ನೆಲೆಸಿತ್ತು ನೋಡಾ.

ವೇಹಭಾವನೆ ಅಳಿದು ದೇಹಭಾವನೆ ನೆಲೆಗೊಳ್ಳುವವರೆಗೆ, ಮನಪ್ರಾಣ ಗಳ ದಬ್ಬಾಳಿಕೆಯಿಂದ ದೇಹವು ಹಲವು ವಿಧದಲ್ಲಿ ಗಾಸಿಗೊಳ್ಳುತ್ತದೆ. ಹಲವು ವಿಧದಲ್ಲಿ ಮೋಸಹೊಂದುತ್ತದೆ. ಹತ್ತುಸಾವಿರಸಾರೆ ಬೀಳುತ್ತದೆ. ನೂರುಸಾರೆ ಏಳುತ್ತದೆ. ಸಾವಿರಸಾರೆ ಎಡಹುತ್ತದೆ; ದಶಸಾವಿರಸಾರೆ ಮುಗ್ಗುತ್ತದೆ. ಬಡ ಕೊಳ್ಳುತ್ತದೆ; ಕುಂಟುತ್ತದೆ, ಕಾಲೆಳೆಯುತ್ತವೆ, ಹೊಟ್ಟೆಹೊಸೆಯುತ್ತದೆ.

ದೇಹದ ಪರಿಪೂರ್ಣತೆಯೆಂದರೆ ವ್ಯಕ್ತಿತ್ವ ನಿರ್ಮಾಣ. ಅದು ಪೂರ್ಣ
ಸೌ೦ದರ್ಯ ಹಾಗೂ ಸಂಪೂರ್ಣ ಸಾಮರಸ್ಯಗಳನ್ನು ವ್ಯಕ್ತಪಡಿಸುವದು.
ಅಲ್ಲಿಯ ವರೆಗೆ-
ಕಾಯ ಕರ್ರನೆ ಕಂದಿದರೇನು?
ಮಿರ್ರನೆ ಮಿಂಚಿದರೇನು?
ಆಂತರ೦ಗ ಶುದ್ಧವಾವ. ಬಳಿಕ,
ಚೆನ್ನಮಲ್ಲಿಕಾರ್ಜುನನೊಲಿವ ಕಾಯ-
ಎ೦ತಾದೊಡೆಮಗೇನಯ್ಯ?

ಕಾಯದ ಜೀವದ ಮೊದಲ ಹೊಲಿಗೆಯೆ೦ದರೆ ದೇಹಭಾವ. ಅದನ್ನು ಹೇಗೋ ಬಿಚ್ಚಿಹಾಕಿದರೆ ಸಾಕು. ಹರಿದು ಹಾಕಿದರೂ ಸಲ್ಲುವುದು. ಮು೦ದಿನ ಹೊಲಿಗೆಗಳೆಲ್ಲ ತಾವಾಗಿಯೇ ಸಡಿಲಾಗಿ, ತಾವಾಗಿಯೇ ಬಿಚ್ಚಿಹೋಗಿ ಅಲ್ಲಿ
ಪರಮಾತ್ಮನ ನೆಲೆಯು ನಯನಮನೋಹರವಾಗಿರುವುದನ್ನು ಕಾಣಬಲ್ಲೆವು.

ದೇಪಭಾವವಳಿವಲ್ಲದೆ ಜೀವಭಾವವಳಿಯದು.
ಜೀವಭಾವವಳಿದಲ್ಲದೆ ಭಕ್ತಿಭಾವವಳವಡದು.
ಭಕ್ತಿ ಭಾವವಳವಟ್ಟಲ್ಲದೆ ಅರಿವು ತಲೆದೋರದು.
ಅರಿವು ತಲೆದೋರಿದಲ್ಲದೆ ಕುರುಹು ನಷ್ಟವಾಗದು,
ಕುರುಹು ನಷ್ಟವಾದಲ್ಲದೆ ಮಾಯೆ ಹಿಂಗದು.
ಇದು ಕಾರಣ ಕಾಯದ ಜೀವದ ಹೊಲಿಗೆಯಳಿವ
ಭೇದವ ತಿಳಿಯಬಲ್ಲರೆ,
ಗುಹೇಶ್ವರ ಲಿ೦ಗದ ಅರಿವು ಸಾಧ್ಯವಪ್ಪುದು-
ಕಾಣಾ ಸಿದ್ಧರಾಮಯ್ಯ.

ಇದು ಸುಲಭವೇ? ಆ ಕೆಲಸಕ್ಕೆ ಬಲಬೇಕು. ಬೆಂಬಲ ಮೊದಲು ಬೇಕು. ಹಂಬಲವಂತೂ ಅದಕ್ಕೂ ಮೊದಲಿಗೆ ಬೇಕು. ಹಂಬಲವಿದ್ಧಲ್ಲಿ ಹಿ೦ಬಲಬಂದು ಕೈಹಚ್ಚುತ್ತದೆ. ಕಾಯದ ಜೀವದ ಹೊಲಿಗೆ ಬಿಡಿಸುವುದು ದಣಿವಿನ ಕೆಲಸವೆನಿಸ- ದಿರಬಹುದು. ಆದರೆ ಸೋತು ಕುಳ್ಳಿರದವರಾರೂ ಸಿಗಲಿಕ್ಕಿಲ್ಲ. ಹಿಂದೆ ನೋಡಿ ಮುಂದೆ ನೋಡಿ ಮೇಲೆ ನೋಡಿ ಬೊಗಸೆಯೊಡ್ಡಿ ಬೇಡಿಕೊಳ್ಳಬೇಕಾಗುತ್ತದೆ.

ಎನ್ನ ಕಾಯ ಮಣ್ಣು, ಜೀವ ಬಯಲು,
ಆವುದ ಹಿಡಿದೆನಯ್ಯ ದೇವಾ?
ನಿಮ್ಮನಾವ ಪರಿಯಲ್ಲಿ ನೆನೆವೆನಯ್ಯಾ?
ಎನ್ನ ಮಾಯವನು ಮಾಣಿಸಯ್ಯ.
ಚೆನ್ನಮಲ್ಲಿಕಾರ್ಜುನಯ್ಯ.

ಈ ಪ್ರಾರ್ಥನೆ ಮಾಡುವುಮ ಯಾವಾಗ? .

ಅಡಿಗಡಿಗೂ ಈ ಪ್ರಾರ್ಥನೆ ಮಾಡುವುದು ಅವಶ್ಯವೆಂದು ತೋರು ವದು, ಅದು ಶುಭಲಕ್ಷಣವೆಂದೇ ಹೇಳಬೇಕಾ- ಗುತ್ತದೆ. ಎಚ್ಚರಿಕೆಯ ಕ್ಷಣಗಳು  ಕಾಣಿಸಿಕೊಳ್ಳುವದೆಂದರೆ ನಿದ್ರೆಯ ಕಾಲವನ್ನು ಸಾಕಷ್ಟು ಕಡಿಮೆ ಮಾಡಿದಂತೆಯೇ …ಪ್ರಾರ್ಥನೆ ನಿಮಿಷನಿಮಿಷಕ್ಕೂ ಬೇಕೆನಿಸಿದರೆ, ನಿಮಿಷನಿಮಿಷಕ್ಕೂ ದೇವಗಂಗೆಯು ಇಳಿದು ಬಂದು ಪ್ರಾರ್ಥಿಸು- ವವನನ್ನು ಪರಿಶುದ್ವಗೊಳಿಸುವಳು; ಪರಮ ಪರಿಮಲಗೊಳಿಸುವಳು. ಆಕೆಯ ಕೈ-ತಪ್ಪಿ ಉಳಿಯುವ ಮಲಿನತೆ- ಯಾಗಲಿ, ಆಕೆಯ ಕಣ್ತಪ್ಪಿ ಉಳಿಯಿವ ದುರ್ಗ೦ಧವಾಗಲಿ ಇರಬಲ್ಲವೇ? ಎಲ್ಲಿಯೂ: ಇರಲಾರವು; ಎಂದಿಗೂ
ಇರಲಾರವು.

ದೇಹಪೋಷಣೆಯ ಮುಖ್ಯ ಕ್ರಿಯೆಯೆ೦ದರೆ  ಊಟ. ಊಟದ ಕಾಲಕ್ಕೆ ನಮ್ಮ ಭಾವನೆ ಜಾಗ್ರತವಾಗಿ ಉಳಿದಷ್ಟು ಒಳ್ಳೆಯದು. ಮೌನದಲುಂಬುವುದು ಆಚಾರವಲ್ಲ; ತುತ್ತು ತುತ್ತಿಗೊಮ್ಮೆ “ಶಿವಶಿವ” ಆನ್ನುತ್ತಿರಬೇಕು, ಆದರಿ೦ದ ಕರಣವೃತ್ತಿಗಳು ಅಡಗುವವು. ಈ ಮಾತು ಹಳೆಯದಿದ್ಧರೂ ಹೊಸದಾಗಿ ಹೇಳದೆ ಗತ್ಯಂತರವಿಲ್ಲದಾಗಿವೆ. ಯಾಕ೦ದರೆ ನಮಗೆ ಕಾಯದ ಚೀವದ ಹೊಲಿಗೆ ಬಿಡಿಸುವುದು ಮುಖ್ಯವಾವ ಕೆ೮ಸವಾಗಿದೆ. ಆದರಿಂದ ನಾವು
ಪರಮಾತ್ಮನ ನೆಲೆಯನ್ನು ಅರಿಯಬೇಕಾಗಿದೆ. ದೇಹಭಾವನೆ ತೊಲಗಿ ದೇವಭಾವನೆ ತಲೆಯೆತ್ತಬೇಕಾಗಿದೆ. ಆದಕ್ಕೊಪ್ಪುವ ಬಲವು ದೇಹಕ್ಕೆ ಬರಬೇಕಾದರೆ, ನಾವುಣ್ಣುವ ಆಹಾರವು ಅಂಥ ಸತ್ವಪೂರಿತವಾಗಿರಲುಬೇಕು. ಅದೇ
ಕಾಲಕ್ಕೆ, ಉಣ್ಣುವದಕ್ಕಿಂತ ಮೊದಲು ಊಟದ ಆಹಾರವನ್ನು ಇಷ್ಟದೇವನಿಗೆ ತೋರಿಸಿ ಒಂದು ಸಮರ್ಥವಾದ ಪ್ರಾರ್ಥನೆ ಮಾಡಿಕೊಳ್ಳುವ ರೂಢಿಯನ್ನು ಬೆಳೆಯಿಸುವುದು ಯುಕ್ತವಾಗಿದೆ. ಅದು ಕೆಳಗೆ ಕಾಣಿಸಿದ ಅರ್ಥವನ್ನು
ಒಳಗೊಂಡಿದ್ಧರೆ ಸಾಕು.

ನಾನುಣುವ ಅನ್ನ ದೇಹಕ್ಕೆ ತಕ್ಕ ಪೋಷಣೆಯ ಸತ್ವಕೊಡಲಿ|
ಈ ದೇಹವಾತ್ಮ ಸಂಶೋಧನಕ್ಕೆ ತಳಹದಿಯೆ ಆಗಿಬಿಡಲಿ||
ಘನಸಾಹಸಕೆ ಬೇಕಾದ ತಾಳ್ಮೆ ಸಾಕಷ್ಟು ಒದಗಿ ಬರಲಿ|
ಹಿ೦ಜರಿಯುವಂಥ ಉದ್ಯಮದ ವೃತ್ತಿ ತಾನೆಳೆಮ ಸತತ ತರಲಿ ||

ಇದೀಗ ಲಿಂಗತನುವಿನ ಸಿದ್ಧಿಯ ದಾರಿ. ಲಿಂಗತನುವಿನಲ್ಲಿ ಜೀವನವು ಆದೆಂತು ಕಾಣಿಸಿಕೊಳ್ಳುವದೆಂದರೆ-
ಲಿಂಗತನುವಿಂಗೆ ಶೃಂಗಾರವಪ್ಪ ತೆರನದೆಂತೊಡೆ
ಕಾಮ ಕ್ರೋಧ ಲೋಭ ಮೋಹಾದಿಗಳಲ್ಲಿ ತೆರಫುಗೊಡದಿಪ್ಪುದು..
ಲಿಂಗವೇ ಆಂಗವಾಗಿ, ಧ್ಯಾನಧಾರಣ ನಿಜನಿವಾಸನಾಗಿ
ನಿಶ್ಚಯ ನಿಜತತ್ವವಾಗಿ ನಿಂದುದೇ ಆಭರಣವೆಂದ
ಅಂಬಿಗರ ಚೌಡಯ್ಯ.

ಲಿಂಗ ತನುವು ಆ ತನುವಿಗೊಪ್ಪುವ ಚೆಲುವಾದ ಆಭರಣಗಳು ಮುಗಿಲು ಮಲ್ಲಿಗೆಯಲ್ಲ; ನೀರ ಬರಹವಲ್ಲ; ಕಲ್ಲ ನಾರಲ್ಲ. ಅವು ಸಾಸಿಗನ ಸೊತ್ತು; ತೋಳಶಕ್ತಿಗೆ ತೊತ್ತು; ತಪ್ಪದೆ ಮುಳುಗಿ ತೆಗೆದ ಮಂಗಲದ ಮುತ್ತು.

*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಏನೊ ಏನೋ ಕೇಳಿದಂಗಾಯ್ತು
Next post ನಗೆಡಂಗುರ-೧೪೬

ಸಣ್ಣ ಕತೆ

 • ಕೂನನ ಮಗಳು ಕೆಂಚಿಯೂ….

  ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…

 • ಮರೀಚಿಕೆ

  ನಂಬಿದರೆ ನಂಬಿ ಬಿಟ್ಟರೆ ಬಿಡಿ ನನ್ನೆಲ್ಲಾ ಭಾವನೆಗಳೂ ತಬ್ಬಲಿಗಳಾಗಿಬಿಟ್ಟಿವೆ. ಪ್ರೇಮವೆಂದರೆ ತ್ಯಾಗವೆ, ಭೋಗವೆ, ಭ್ರಮೆಯೆ ಆಥವಾ ಕೇವಲ ದಾಸ್ಯವೆ? ಮನಸ್ಸಿಗಾದ ಗ್ಯಾಂಗ್ರಿನ್ ಕಾಯಿಲೆಯೆ? ಇಂತಹ ದುರಾರೋಚನೆಗಳು ಹುಟ್ಟಲು… Read more…

 • ನಾಗನ ವರಿಸಿದ ಬಿಂಬಾಲಿ…

  ಬಿಂಬಾಲಿ ಬೋಯ್ ತನ್ನ ಅಮ್ಮ ಅಣ್ಣ ಅತ್ತಿಗೆ ಜೊತೆ ಅಟಲಾ ಎಂಬ ಒರಿಸ್ಸಾದ ಹಳ್ಳಿಯಲ್ಲಿ ವಾಸಿಸುತ್ತಿದ್ದಳು. ತಂದೆಯ ಮರಣದ ಮುಂಚೆಯೆ ಅವಳ ಹಿರಿಯಕ್ಕನ ಮದುವೆಯಾಗಿತ್ತು. ತಂದೆ ಬದುಕಿದ್ದಾಗ… Read more…

 • ಯಾರು ಹೊಣೆ?

  "ಧಡ್....... ಧಡಲ್........ ಧಡಕ್" ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ "ಸಿಳ್" ಎಂದು ಬೀಸುತ್ತಿತ್ತು. ನಾನು… Read more…

 • ಆ ರಾತ್ರಿ

  ಆ ದಿನ ಮಧ್ಯಾಹ್ನ ವಸಂತನ ಮನೆಯಲ್ಲಿ ಬಹಳ ಗಡಿಬಿಡಿ! ವಸಂತ ತಾನು ಕೂಡುವ ಕೋಣೆಯನ್ನು ಅತ್ಯಂತ ಶಿಸ್ತಿನಿಂದ ಇಡುವ ಕಾರ್ಯದಲ್ಲಿ ಮಗ್ನನಾಗಿದ್ದನು. ಗಡಿಯಾರದ ಮುಳ್ಳುಗಳು ಎರಡು ಗಂಟೆಯಾದುದನ್ನು… Read more…

cheap jordans|wholesale air max|wholesale jordans|wholesale jewelry|wholesale jerseys