ಬರೆದವರು: Thomas Hardy / Tess of the d’Urbervilles
ಮಲ್ಲಿಯು ಮೈನೆರೆದ ವಿಷಯ ಊರಲ್ಲೆಲ್ಲಾ ತಿಳಿಯಿತು. ಅವಳ ಪ್ರಸ್ತದ ದಿನ ಬಡಬಗ್ಗರಿಗೆ ಊಟ ಬೇಕಾದ ಹಾಗೆ ಬೀಳುವುದೆಂದು ಯಾವ ಜ್ಯೋತಿಷ್ಯರೂ, ಜೋಯಿಸ ಹೇಳದಿದ್ದರೂ ಸುತ್ತಮುತ್ತಿನ ಬಡವರೆಲ್ಲ ಸೇರಿದರು. ಅವರ ಆಸೆ ವಿಫಲವಾಗಲಿಲ್ಲ. ಒಬ್ಬಟ್ಟು ಪಾಯಸದೂಟ ಬಡವರ ಹೊಟ್ಟೆಯೂ ತುಂಬುವಷ್ಟು ಮಟ್ಟಿಗೆ ಆಯಿತು. ಮಲ್ಲಣ್ಣನು ಒಂದು ಕಡೆ ಶಂಭುರಾಮಯ್ಮನು ಇನ್ನೊಂದು ಕಡೆ ನಿಂತು ಎರಡು ಕಡೆಯ ಊಟವೂ ಎಲ್ಲರಿಗೂ ತೃಪ್ತಿಯಾಗುವಂತೆ, ಪೋಲಾಗದಂತೆ ನೋಡಿಕೊಂಡರು. ಎಂದಿನಂತೆ, ಬಡವರು ತಿಂದು ತೃಪ್ತರಾಗಿ ನಾಳೆಗಷ್ಟು ಎಂದು ಕೊಂಡು ಹೋದರು.
ಊಟದಲ್ಲಿ ಏನೂ ವಿಶೇಷ ಇಲ್ಲದಿದ್ದರೂ ಊಟವಾದಮೇಲೆ ಒಂದು ವಿಶೇಷವಾಯಿತು. ಸುಮಾರು ಅರವತ್ತುವರ್ಷದಮುದುಕ ನೊಬ್ಬನು ಬಂದು ಮಲ್ಲಣ್ಣನನ್ನು ಕಾಣಿಸಿಕೊಂಡನು ಮಲ್ಲಣ್ಣನು ಇವೊತ್ತು ಕಲಾಬತ್ತಿನ ಪಂಚೆಯನ್ನು ಉಟ್ಟು ವಲ್ಲಿಯನ್ನು ಹೊದ್ದಿದ್ದಾನೆ. ಎಣ್ಣೆಮಜ್ಞನಮಾಡಿ ತಲೆಯತುಂಬಾ ಇರುವ ಜುಟ್ಟನ್ನು ಎಣ್ಣೆಗಂಟು ಹಾಕಿದ್ದಾನೆ. ಪ್ರಸಾದದ ಹೂವೊಂದು ಮುಡಿದಿದ್ದಾನೆ ಕೈಗೊಂದು ನಳಿಗೆ ಕಪ್ಪ ಹಾಕಿಕೊಂಡಿದ್ದಾನೆ. ಬೆರಳಲ್ಲಿ ಒಂದು ಹರಳಿನ ಉಂಗುರ ಥಳಪಳ ಎನ್ನುತ್ತಿದೆ.
ಮುದುಕನು ಕೈಮುಗಿದು ಕಟವಾಯಿಯಲ್ಲಿ ಸೋರುತ್ತಿರುವ ತಾಂಬೂಲ ರಸವನ್ನು ಒರಸಿಕೊಳ್ಳುತ್ತಾ “ಅಡ್ಡ ಬಿದ್ದೆ ಬುದ್ದಿ” ಎಂದು ಕೈಯೆತ್ತಿ ಮುಗಿದನು. ಮಲ್ಲಣ್ಣನೂ ವಿನಯನಿಂದ, ತನಗೆ ಅವನು ಯಾರು ಎನ್ನುವುದು ಗೊತ್ತಿಲ್ಲದಿದ್ದರೊ ಏನೋ ಬಹಳದಿನದಿಂದ ದಿನವೂ ನೋಡಿರುವವನಿಗಿಂತ ಹೆಚ್ಚಾಗಿ ವಿಚಾರಿಸಿದನು: ” ಏನಯ್ಯಾ ಎಲ್ಲಿದ್ದೀಯೆ? ಚೆನ್ನಾಗಿದ್ದಿಯಾ? ”
ಆ ಮುದುಕನಿಗೆ ಅಷ್ಟು ಅವಕಾಶ ಸಿಕ್ಕಿದ್ದೇ ಸಾಕಾಯಿತು :
” ನಮ್ಮ ನೆನೆಪದೆಯಾ ಬುದ್ದಿ?” ಎಂದನು.
ಮಲ್ಲಣ್ಣನಿಗೆ ಪೇಚಾಟಿಕ್ಕಿಟ್ಟುಕೊಂಡಿತು: “ಬೋದಿನ ಆಯಿತೆ ಲವಾ? ನಿನ್ನ ಹೆಸರು ಮರೆತು ಹೋಗಿದೆಯಲ್ಲಾ ” ಎಂದನು.
“ನೆಪ್ಪು ತಪ್ಪಿಹೋದರೆ ಏನು ಮಹಾ! ”
ನೋಡಿ ಹದಿನಾಕು ವರ್ಸ ಆಯಿತು ತಮ್ಮ ನೆಪ್ಪು ನನಗೆ ಚೆನ್ನಾಗದೆ ಬುದ್ಧಿ.”
ಮಲ್ಲಣ್ಣನು ತಲಿತೆರೆದುಕೊಳ್ಳುತ್ತ ನಿಜವಾಗಿ ಪ್ರಯತ್ನ ಪಟ್ಟನು. ನೆನೆಪಾಗಲಿಲ್ಲ” “ನೀನೇ ಹೇಳಿಬುಡು” ಎಂದನು.
ಮುದುಕನು “ಇತ್ತಕಡೆ ಕೊಂಚ ಬನ್ನಿ” ಎಂದು ಕರೆದನು. “ನನ್ನ ಹೆಂಡತೀಗೆ ಸೀರೆ ಕೊಟ್ಟದ್ದು ಮರೆತುಬುಟ್ಟರಾ?” ಎಂದು. ಕೇಳಿದನು.
ಅಲ್ಲಿಗೂ ಮಲ್ಲಣ್ಣನಿಗೆ ನೆನೆಪಾಗಲಿಲ್ಲ.
ಮುದುಕನು ಮತ್ತೆ ಹೇಳಿದನು: ನೆನೆಪು ಮಾಡಿಕೊಳ್ಳಿ, ಅಣ್ಣಾವರೆ ನೀವು ನಮಗೆ ಪಾಯಸದ ಊಟ ಮಾಡಿ ಹಾಕಿಸಿದಿರಿ. ನಮ್ಮ ಮಗೂ ಕೊನೇಲಿ ಇನ್ನಷ್ಟು ಪಾಯಸಬೇಕೂ ಅಂತು. ನೀವು ಎರಡಚ್ಚು ಬೆಲ್ಲ, ಒಂದು ಸೇರು ಅಕ್ಕಿ, ಒಂದು ರೂಪಾಯಿ ಕೊಟ್ಟು, ನಾಳೆ ಚೆನ್ನಾಗಿ ಪಾಯಸ ಮಾಡಿ” ಹಾಕೋ ಹೊಟ್ಟೆ ತುಂಬಾ ಈ ಮಕ್ಕಳಿಗೆ ಅಂದಿರಿ. ನೆನೆಪಾಯಿತಾ?
ಮಲ್ಲಣ್ಣನಿಗೆ ನೆನೆಪಾಯಿತು. ಅಂದು ಹೆಂಡತಿಯ ಜೊತೆಯಲ್ಲಿ ಹೋಗಿ ಮಗುವನ್ನು ತಂದಿದ್ದ ದಿನದ ಮಾತು. ಇವನೇನು ಮಗು ನಂದು ಅನ್ನೋಕೆ ಬಂದಿದ್ದಾನೋ ಅನ್ನಿಸಿತು. ದಿಗಿಲಾಯಿತು. ಆದರೂ ಒಂದು ಚಿಟಿಕೆ ನಶ್ಯ ಹಾಕ್ಕೊಂಡು ” ನೀನು ಡೊಂಬರ—”
” ಚಿನ್ನ ”
” ನೆನೆನಾಯಿತು. ಚೆನ್ನಾಗಿದ್ದಿಯಾ? ನಿನ್ನ ಹೆಂಡತಿಮಕ್ಕಳೆಲ್ಲ ಎಲ್ಲಿ? ಈಗ ಏನು ಮಾಡುತ್ತಿದ್ದೀ ಎಲ್ಲಿದ್ದೀ ? ”
” ನಾನು ಮುದುಕ ಆಗೋದೆ ಅಪ್ಪಾವ್ರೆ ! ಮಕ್ಕಳು ಒಬ್ಬ ಮೊನ್ನೆ ತಾನೇ ಮಿಲಿಟರಿಗೆ ಹೋದಾ! ಇನ್ನೊಬ್ಬ ದೇಶಾಂತರ ಹೋದ. ಉಳಿದೋವು ಎರಡು ಮಕ್ಕಳು ನಾನು ಅವಳು. ಭಂಡಾಟ ಮಾಡಿ ಹೊಟ್ಟೆ ತುಂಬಿಕೊಂತಾ ಇದೀನಿ. ಇವೊತ್ತು ಇಲ್ಲಿ ಊಟ ಅಂದರು. ನಾನು ಬಂದೆ.”
“ಎಲ್ಲರೂ ಬಂದಿದ್ದೀರಿ ?7?
“ಒಳ್ಳೆ ಊಟಮಾಡಿ ಬಾಳದಿನ ಆಗೋಗಿತ್ತು. ಎಲ್ಲರೂ ಬಂದಿದ್ದೀವಿ.”
” ಸಂತೋಷ. ಇವೊತ್ತು ರಾತ್ರಿ, ನಾಳೆ, ನಾಡಿದ್ದು ಇದ್ದು ಊಟಮಾಡಿಕೊಂಡು ಹೋಗಿ.”
“ಬುದ್ದಿ, ಕೋಪಮಾಡಕೂಡದು. ತಮಗೆ ದೇವರು ಒಳ್ಳೇದ ಮಾಡಿದ. ನಮಗೂ ಏನಾದರೂ ಮಾಡಿಸಿಕೊಡಬೇಕು.”
`”ಏನು ಹೇಳು ! ಸರಿಯಾಗಿ ಹೇಳು!”
ಬುದ್ಧಿ, ನಿಮ್ಮ ಪಾದದಾಣೆ ನಿಜಾ ಹೇಳ್ತೀನಿ. ಆ ಮೊಗೀನ ಅಪ್ಪಾ ಅಮ್ಮಾ ಇಲ್ಲಿ ಬಂದಿದ್ದಾರೆ.”
ಮಲ್ಲಣ್ಣಗೆ “ಎನೋ ಗಾಬರಿ ಆಯಿತು. ” ಏನೆಂದೆ?”
” ಹೌದು ಬುದ್ಧಿ. ಸುಳ್ಳಲ್ಲ. ಇಲ್ಲೆ ಅದಾರೆ. ಅಕೋ, ಅಲ್ಲಿ ಬಂದರು ನೋಡಿ. ಆ ಈಬೂತಿ ಮೇಲೆ ನೀರು ಗಂದ ಹಚ್ಚಿಕೊಂಡು?”
“ಏನು ಆ ಕೆಂಪು ಮೊಗಟ ಉಟ್ಟಿರೋರೆ ?
“ಹೌದು ಬುದ್ಧಿ ”
ಮಲ್ಲಣ್ಣನು ಗಂಟಲಿಗೆ ಅಡರಿದ್ದ ಶ್ಲೇಷ್ಮವನ್ನು ನುಂಗುತ್ತಾ ಅವಸರದಲ್ಲಿ ಕೇಳಿದನು: “ಅವರೇನು ?”
“ಅವರೇ ಆ ಮೊಗೀನ ಅಪ್ಪ!”
” ನಿಜವಾಗಿ? ”
“ಸುಳ್ಳು ಯಾಕೆ ಹೇಳಲಿ? ಬುದ್ದಿ ? ತಾವು ಆಗಬೋದು ಅಂದರೆ, ಅವರನ್ನೂ ಕರೆದು ಮಾತನಾಡುತ್ತೀನಿ ನೋಡಿ ಬುದ್ದಿ.”
“ನಮಗೆ ಕೊಟದ್ದು ಅಂತ ಅವರಿಗೆ ಹೇಳಿದೀಯಾ? ”
“ತಾವು ಹೂಂ ಅಂದರೆ ಹೇಳ್ತೀನಿ.?
ಮಲ್ಲಣ್ಣನು ಯೋಚನೆಮಾಡಿದನು : “ಅವರಿಗೆ ಮಲ್ಲಿಯ ಮೇಲೆ ಅಭಿಮಾನ ಇದೆ. ಇದು ತಮ್ಮ ಮಗು ಎಂದು ತಿಳಿದರೆ, ಅವರಭಿಮಾನ ಇನ್ನೂ ಬಲಿಯುವುದು. ತಪ್ಪೇನೂ ಇಲ್ಲ. ಆದರೆ ನಮಗೆ ತಿಳಿದಿದೆ. ಎಂದರೆ ನೊಂದುಕೊಂಡಾರು, ಎಂದುಕೊಂಡು, ಅವರ ಕೈಲಿ ಮಾತಾಡು : ಹೇಳು. “ಆದರೆ ನಮಗೆ ಕೊಟ್ಟಿ ಅನ್ನ ಬೇಡ ಎಂದನು.
“ಆ ಮೊಗಾ ಏನಾಗದೆ? ಬುದ್ದಿ?
“ಆ ಮೊಗ ಈಗ ನಾಯಕರ ಹೆಂಡ್ತಿ: ಇವೊತ್ತು ಪ್ರಸ್ತ. ಅದಕ್ಕೇ ಈ ಊರೂಟ. ?
“ಹಂಗಾ! ”
ಮಲ್ಲಣ್ಣನಿಗೆ ದೊಂಬನ “ಹಂಗಾ!” ಅರ್ಥವಾಯಿತು. ಸಂಜೆ ಐದು ಗಂಟೆಗೆ ಬಂದು ನೋಡು.”
“ಬುದ್ದಿ, ನನ್ನ ಮಾತು ಕೇಳಬೇಕು. ತಾವು ಹೂಂ ಅಂದರೆ ತಮಗೆ ಕೊಟ್ಟೆ ಅಂತ ನುಡಿಡೇ ಬುಡ್ತೇನೆ.”
ಮಲ್ಲಣ್ಣನು ಯೋಚಿಸಿ ನೋಡಿದನು : “ಅವರು ಕೇಳಿದರೆ ಹೇಳು. ಇಲ್ಲದಿದ್ರೆ ಯಾಕೆ ? ?
” ಬುದ್ದಿ, ಅವರೂ ತಮ್ಮಂಗೆ ಇಲ್ಲಿ ಯಜಮಾನರಾಗಿರೋ ಹಂಗದೆ. ತಾವೂ ಅವರೂ ಸೇರಿ ಖಾನಂದರವರಿಗೆ ಹೇಳಿದರೆ, ಬಡವ ನನ್ನ ಹೊಟ್ಟೆ ತುಂಬುತ್ತದೆ. ಸಾಯೋ ಕಾಲದಲ್ಲಿ ನಾನೂ ಸುಖವಾಗಿ ಸಾಯ್ತೀನಿ.”
” ಕೊಟ್ಟದ್ದೆಲ್ಲ ಕುಡಿದು ಬುಂಡೇ ಎಸೀತೀಯೇನೊ ?
“ಬುದ್ದಿ, ತಾವು ಕಾಣದ್ದೇನು? ಮಳೆ ಬಂದಾಗಲೂ ನೆಲ ನೀರು ಕುಡಿಬೇಡವಾ ?
“ಆಯಿತು. ನಿನಗೇನಾಗಬೇಕು ಹೇಳು? ?
” ನೋಡಿ ಬುದ್ದಿ, ನಿಮ್ಮ ಪಾದದಾಣೆ ಸತ್ಯವಾಗಿ ಏಳ್ತೀನಿ. ನನ್ನ ಸಂಸಾರಕ್ಕೆ ಹತ್ತು ರುಪಾಯಿ. ನನಗೆ ನನ್ನ ಸೊಂತ ಖರ್ಚಿಗೆ ದಿನಕ್ಕೆ ಎರಡಾಣೆ. ಅಷ್ಟಾದಕೆ ಸಾಕು, ಮಹಾಪಾದ.”
“ಅಲ್ಲವೋ, ಮನೆ ಬೇಡವಾ, ಮಕ್ಕಳು ಮರಿ ಹೆಂಡತಿ, ಎಲ್ಲರಿಗೂ ಬಟ್ಟೆ ಬೇಡವಾ? ”
“ಬುದ್ದಿ ಅದೆಲ್ಲ ಕೇಳಿದರೆ ಕೊಟ್ಟಾರಾ ಬುದ್ದಿ ”
” ಹೊಲೇರ ಪಾಳ್ಯದಲ್ಲಿ ಇರುತೀಯೇನು?”
” ನಾವು ದೊಂಬರಲ್ಲಾ ಬುದ್ಧಿ, ಶಿವನಿಗೆ ಹೆಣ್ಣು ಕೊಟ್ಟೋರು ನಾವು ಉತ್ತಮರಲ್ಲವಾ?”
ಮಲ್ಲಣ್ಣನಿಗೆ ತಾನಿದ್ದ ಮನೆ ಛಾವಣಿ ಹೋಗಿದ್ದರೂ ಗೋಡೆ ಗಳು ನಿಂತಿರುವುದು ನೆನೆನಾಯಿತು. “ಜೋಪಡಿ ಆದರೂ ಪರವಾ ಯಿಲ್ಲವೋ ?” ಕೇಳಿದನು.
“ನಮಗೆ ಅದು ಅರಮನೆ ನಿಮ್ಮ ಪಾದ ”
“ಆಯಿತು. ನಾನಿದ್ದನಲ್ಲ, ಆ ಮನೆ ಕೊಡಿಸ್ತೀನಿ ದೀವಳಿಗೆಗೆ ಉಗಾದಿಗೆ ಬಟ್ಟೆ ಬರೆ ಕೊಡಿಸ್ತೀನಿ. ಒಂದು ಕಡೆ ನೆಲೆಯಾಗಿ ನಿಂತೀಯಾ? ”
“ಬುದ್ದಿ. ನಾನು ತಿರುಗೋ ಮುಕ್ಕಗಳು. ಆಗಾಗ ಒಂದು ಪೇರಿ ಹೊಡೆದು ಬಂದು ಬುಡ್ತೀನಿ.”
“ಸರಿ ನಿನ್ನಿಷ್ಟ. ನಾನು ಖಾವಂದರ ಹತ್ತಿರ ಮಾತಾಡುತೀನಿ. ಆದರೆ ಇವೊತ್ತಿಗೆ ಅದೆಲ್ಲ ಮರೆತು ಬಿಡಬೇಕು – ಮೊಗೀನ ವಿಚಾರ ಎಲ್ಲೂ ಎತ್ತ ಕೂಡದು.”
“ಅಪ್ಪಣೆ ಬುದ್ದಿ ! ಅವರ ಹತ್ತಿರ ಮಾತಾಡಲಾ? ”
“ಮಾತಾಡು.”
” ಅವರೇನಾದರೂ ಕೊಡುತೀನಿ ಅಂದರೆ ?”
“ತಕೋ.”
” ಅಪ್ಪಣೆ. ”
ಮಲ್ಲಣ್ಣನು ತನ್ನ ಕೆಲಸಕ್ಕೆ ಹೋದನು.ದೊಂಬರ ಚಿನ್ನನು ಅವನು ಹೋಗುತ್ತಿದ್ದುದನ್ನು ನೋಡಿ “ಇವೊತ್ತು ನಂಗೂ ಅದ್ರುಷ್ಟಾ ಖುಲಾಯಿಸಿದೆ.” ಎಂದು ತಲೆ ಸವರಿಕೊಳ್ಳುತ್ತಾ ಶಂಭುರಾಮಯ್ಯನನ್ನು ಹುಡುಕಿಕೊಂಡು ಹೋದನು.
*****