ನನ್ನ ಉಸಿರಿನ ಹನಿ ಹನಿಗಳಲಿ
ಮೀಯಲಿ, ನೆನೆಯಲಿ ಹರಿನಾಮ
ನನ್ನೆದೆಗೆ ನೀಡಲಿ ತಂಪು
ನನ್ನ ಬಾಳಿಗಾಗಲಿ ಕಂಪು
ಉಸಿರು ಉಸಿರಲಿರಲಿ ಜಪ
ಜಪವಿರದ ಗಾಳಿ ಒಳ ಹೋಗದಿರಲಿ
ಪಾಪದ ಧೂಳಿ ಹೊಕ್ಕದಿರಲಿ
ಶಾಪದ ಮೈಲಿಗೆ ತಟ್ಟದಿರಲಿ
ಮಾತಿರಲಿ ಹಾಡಿರಲಿ ಮೌನವಿರಲಿ
ಕ್ಷಣ ಕ್ಷಣವು ನಾಮ ನುಡಿಯಿರಲಿ
ನಾಮವಿರದ ಗಳಿಗೆಗಳೆಲ್ಲವೂ
ಪಾಪದ ರೂಪಗಳ ತಿಳಿದಿರಲಿ
ಆಲೋಚನೆಯಲಿ ಹರಿನಾಮ ವಿರಲಿ
ಮಾತಿನಲಿ ಗುಣಗಾನ ವಿರಲಿ
ವಚನದಲಿ ಹರಿ ನೆನೆಯುತ್ತಿರಲಿ
ತನುವಿನ ಇಂಚಿನಲ್ಲೂ ದೈವತ್ವ ಇರಲಿ
ಯಾರು ಏನೇ ಹೇಳಿರಲಿ
ಯಾವುದಕ್ಕೂ ಚಿತ್ತ ಇಣಕದಿರಲಿ
ಶಿವನಾಮ ನಿನ್ನ ಹೊತ್ತು ಸಾಗಲಿ
ಮಾಣಿಕ್ಯ ವಿಠಲನಾಗಿರಲಿ
*****