ಕಿಡ್ನಿ ಕತೆ

ದೇವರು ದೊಡ್ಡವನು. ಮನುಷ್ಯನಿಗೆ ಅನುಕೂಲವಾಗಲೆಂದೇ ಎರಡು ಕಿಡ್ನಿಗಳನ್ನು ನೀಡಿದ್ದಾನೆ!

ಚೀನಾದ ಬೀಜಿಂಗ್‌ನ ಜಿನ್‌ಹುವಾ ನಗರದ ದೊನ್‌ಗ್ಯಾಂಗ್ ಪೀಪಲ್ಸ್ ಆಸ್ಪತ್ರೆಯಲ್ಲಿ ದಿನಾಂಕ ೨೮.೦೭.೨೦೧೫ರಂದು ಮಂಗಳವಾರ ದಿನದಂದು ಸತತವಾಗಿ ಎರಡು ತಾಸುಗಳವರೆಗೆ ನಡೆದ ತುರ್ತು ಶಸ್ತ್ರಚಿಕಿತ್ಸೆಯಲ್ಲಿ ಹೇ ಡಾಂಗ್ ಎಂಬ ವ್ಯಕ್ತಿಯ ಎಡಬದಿಯ ಕಿಡ್ನಿಯಿಂದ ಸುಮಾರು ೪೨೦ ಕಲ್ಲುಗಳನ್ನು ವೈದ್ಯರು ಹೊರತೆಗೆದು ವ್ಯಕ್ತಿಯನ್ನು ಬದುಕಿಸಿದ್ದಾರೆ.

ಈ ವ್ಯಕ್ತಿ ಹೆಚ್ಚು ಜಿಪ್ಸಂ ಟೊಪು ಖಾದ್ಯ (ಬರೀ ಖನಿಜಯುಕ್ತ ಆಹಾರವನ್ನು) ಸೇವಿಸುತ್ತಿದ್ದ ಹಾಗೂ ನೀರು ಕುಡಿಯುವ ಹವ್ಯಾಸವೇ ಇರಲಿಲ್ಲ..!

“ಈ ಸೋಯಾ ಉತ್ಪನ್ನಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕ್ಯಾಲ್ಸಿಯಂ ಇರುತ್ತದೆ. ಜಿಪ್ಸಂ ಟೊಪು ಸಹ ಅದರಿಂದಲೇ ತಯಾರಾಗುತ್ತಿದ್ದು ಹೆಚ್ಚಿನ ನೀರು ಕುಡಿದು ಬೆವರು ಭಸಿಯುವ ಕೆಲಸ ಮಾಡುವುದರಿಂದ ಮಾತ್ರ ಈ ಥರದ ಆಹಾರವನ್ನು ಜೀರ್ಣಿಸಿಕೊಳ್ಳಲು ಸಾಧ್ಯ…” ಎಂದು ವೈದ್ಯರಾದ ವೈಯುಬಿನ್ ಅವರು ವಿವರಿಸಿದ್ದಾರೆ.

ಹೇ ಡಾಂಗ್‌ಂಗೆ ತೀವ್ರ ಹೊಟ್ಟೆ ನೋವು ಕಾಣಿಸಿದ್ದರಿಂದ ಸಿಟಿ ಸ್ಕ್ಯಾನ್ ಮಾಡಲಾಯಿತು. ಕಿಡ್ನಿಯಲ್ಲಿ ಅಪಾರ ಪ್ರಮಾಣದಲ್ಲಿ ಕಲ್ಲುಗಳು ತುಂಬಿ ತುಂಬಿ ಹೋಗಿದ್ದವು! ಆಗ ಸತತವಾಗಿ ಎರಡು ಗಂಟೆಗಳ ಕಾಲ ಶಸ್ತ್ರ ಚಿಕಿತ್ಸೆ ನಡೆಸಲಾಗಿತ್ತು. ೪೫ ನಿಮಿಷಗಳಲ್ಲಿ ಕಲ್ಲುಗಳನ್ನು ಹೊರತೆಗೆಯಲಾಯಿತು. ಅಷ್ಟೊಂದು ಕಲ್ಲುಗಳನ್ನು ತೆಗೆದು ನನ್ನ ಕೈ ಹಾಗೂ ಬೆರಳುಗಳು ಮರಗಟ್ಟಿದ್ದವು…. ಎಂದು ವೈದ್ಯರು ಅಲ್ಲಿ ಸೇರಿದ್ದ ಜನರಿಗೆ ವಿವರಿಸಿದರು.

ಆದ್ದರಿಂದ ಪ್ರತಿಯೊಬ್ಬರು ಪ್ರತಿನಿತ್ಯ ೨-೩ ಲೀಟರ್ ನೀರನ್ನು ಕಡಿಮೆ ಎಂದರೂ ಕುಡಿಯಲೇಬೇಕು. ದೇಹದಲ್ಲಿನ ಕಲ್ಮಶವನ್ನು ಹೊರಹಾಕಲು ಕಿಡ್ನಿಗಳು ಸರಿಯಾಗಿ ಕೆಲಸ ಮಾಡಲು ನೀರು ಬೇಕೇಬೇಕು.

ಆದ್ದರಿಂದ ಹೆಚ್ಚು ಹೆಚ್ಚು ದ್ರವರೂಪದ ಆಹಾರ ಸೇವಿಸಲೇ ಬೇಕು. ಏನಂತಿರಾ?! ಹೌದು ಅಂತೀರಿ. ಅನ್ನಲೇಬೇಕು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕಾಯಿ
Next post ಪಂಚಭೂತ

ಸಣ್ಣ ಕತೆ

 • ಕರಾಚಿ ಕಾರಣೋರು

  ಮಳೆಗಾಲ ಆರಂಭವಾಯಿತೆಂದರೆ ಕುಂಞಿಕಣ್ಣ ಕುರುಪ್ಪನ ಏಣೆಲು ಗದ್ದೆಗೆ ನೇಜಿ ಕೆಲಸಕ್ಕೆ ಹೋಗಲು ಕಪಿಲಳ್ಳಿಯ ಹೆಂಗಸರು, ಗಂಡಸರು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ವರ್ಷವಿಡೀ ವಿಪ್ರರ ಮತ್ತು ವಿಪ್ರಾತಿವಿಪ್ರರ ಆಡಿಕೆ ತೋಟಗಳಲ್ಲಿ… Read more…

 • ಮೇಷ್ಟ್ರು ರಂಗಪ್ಪ

  ಪ್ರಕರಣ ೫ ರಂಗಣ್ಣ ರೇಂಜಿನಲ್ಲಿ ಅಧಿಕಾರ ವಹಿಸಿ ನಾಲ್ಕು ತಿಂಗಳಾದುವು. ಸುಮಾರು ನಲವತ್ತು ಐವತ್ತು ಪಾಠಶಾಲೆಗಳ ತನಿಖೆ ಮತ್ತು ಭೇಟಿಗಳಿಂದ ಪ್ರಾಥಮಿಕ ವಿದ್ಯಾಭ್ಯಾಸದ ಸ್ಥಿತಿ ತಕ್ಕ ಮಟ್ಟಿಗೆ… Read more…

 • ಕಲ್ಪನಾ

  ಚಿತ್ರ: ಟಾಮ್ ಬಿ ಇದು ಇಪ್ಪತ್ತು ವರ್ಷಗಳ ಹಿಂದಿನ ಕಥೆ! ಮಾತನಾಡುವ ಸಿನಿಮಾ ಪ್ರಪಂಚ ಅದೇ ಆಗ ದಕ್ಷಿಣ ಭಾರತದಲ್ಲಿ ತಲೆಯೆತ್ತಿದ್ದಿತು! ಸಿನಿಮಾದಲ್ಲಿ ಪಾತ್ರವಹಿಸುವ ನಟಿನಟಿಯರನ್ನು ಅಚ್ಚರಿಯ… Read more…

 • ಧನ್ವಂತರಿ

  ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

 • ವಾಮನ ಮಾಸ್ತರರ ಏಳು ಬೀಳು

  "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…