ಕಳ್ಳರ ಕೂಟ – ೨

ಕಳ್ಳರ ಕೂಟ – ೨

ಜೂಜಿನ ದೊಂಬಿ 

ಪ್ರಥಮ ಪರಿಚ್ಛೇದ
ಛತ್ರದ ಪಾರುಪತ್ತೆಗಾರ ವೆಂಕಟಿರಮಣಯ್ಯನು ಯಾರನ್ನು ಕಂಡರೂ ಲಕ್ಷಿಸುವವನಲ್ಲ. ಆ ಊರಿನಲ್ಲಿ ತನಗಿಂತ ಮಿಗಿಲಾದ ಅಧಿಕಾರಸ್ಥರೇ ಇಲ್ಲವೆಂದು ಆತನ ನಂಬಿಕೆ. ಅಧಿಕಾರ ಗೌರವವು ಕಡಮೆಯಾಗಿದ್ದರೂ ಆತನ ಲೇವಾದೇವಿಯ ದರ್ಪವು ಒಳ್ಳೆ ಬಲ ವಾಗಿದ್ದಿತು. ಹಳ್ಳಿ ಯ ಲೇವಾದೇವಿಗೆ ತಕ್ಕಷ್ಟು ಹಣವು ಆತನ ಲ್ಲಿದಿತು.
ಆತನಿಗೂ ನಡುನಡುವೆ ಕಷ್ಟ ಬರುತ್ತಿದ್ದತು. ಅಕಸ್ಮಾತ್ತಾಗಿ  ಯಾರಾದರೂಬ್ಬ ಅಧಿಕಾರಿಗಳು ವೆಂಕಟರಮಣಯ್ಯನು ದೊಡ್ಡ ವರೆನ್ನುವ ಅಧಿಕಾರಿಗಳು ಪ್ರಾಪ್ತರಾಗುವರು. ಅದುವರೆಗೂ ಬಂದ ಹಾದಿಹೋತರಿಗೆ ಆಗಬೇಕಾಗಿದ್ದ ಉಪಚಾರಗಳ ಒಟ್ಬಿನಲ್ಲಿ ಅರ್ಧವನ್ನು ಆವರಿಗೆ ಒಪ್ಪಿಸಿಬಿಡುವನು. ಅಧಿಕಾರಿಗಳೂ ತಮ್ಮಂ ತೆಯೇ ಇತರರಿಗೂ ನಡೆಯುವುದೆಂಬ (” ಆತ್ಮವ ತ್ಸ ರ್ವಭೂತಾನಿ ಯಃ ಪಶ್ಯತಿ ಸ ಪಶ್ಯತಿ” ಎಂಬ ಭಗವದ್ದಾಕ್ಯವು ಇಲ್ಲಿ ಮಾತ್ರ ಅನ್ವಯಿಸುತ್ತಿತು) ಹೊರಟು ಹೋಗುವರು. ಮಳೆ ಹುಯ್ದ ಉತ್ತರಕ್ಷಣದಲ್ಲಿ ಇಕ್ಕೆಲವನ್ನೂ ಮೀರಿ ಹರಿದು, ಇನ್ನೊಂದು ಕೊಂಚ ಹೊತ್ತಿನಲ್ಲಿಯೇ ಬತ್ತಿಹೋಗುವ ಗಿರಿನದಿಯಂತೆ ಅಧಿಕಾರಸ್ಥರ ಮುಖದರ್ಶನವಾದೊಡನೆಯೇ ಉಕ್ಕಿ ಹರಿದು ಬರುತ್ತಿದ್ದ ಉಪಚಾರ ತರಂಗಿಣಿಯು, ಅವರು ಹಿಂತಿರುಗಿ ದೊಡನೆಯೇ ಬತ್ತಿಹೋಗುತಿದ್ದಿತು. ಅದಷ್ಟಾದರೂ ಅಗಲು ವೆಂಕಟ ರಮಣಯ್ಯನಿಗೆ ಅಂತರಂಗದಲ್ಲಿದ್ದ ಒಂದು ದೊಡ್ಡ ಭೀತಿಯೇ ಕಾರಣ ಯಾವನಾದರೂ ಪಾಪಭೀತನಾದ ಅಧಿಕಾರಿಯು ಬಂದಾ ನೆಂಬ ದಿಗಿಲು. ಆದರೆ ಅರ್ಧ ಧೈರ್ಯ. ಈಗಿನ ಕಾಲದಲ್ಲಿ ಅಂತಹವರು ಅಧಿಕಾರವನ್ನು ಹುಡುಕಿಕೊಂಡು ಹೋಗುವುದಿಲ್ಲ ವೆಂದು
ಇವನ ಅಳಿಯ ಕೃಷ್ಣಮೂರ್ತಿಯು ಆ ಮಾವನಿಗೆ ಕಡಮೆ ಯಾದವನಲ್ಲ. ಆ ಹಳ್ಳಿಯಲ್ಲಿ ಕುಳಿತುಕೊಂಡು ಸುಮ್ಮನಿರಲಾಗ ದೆಂದು ಅಲ್ಲಿ “ಕ್ಲಬ್‌” ಒಂದನ್ನು ಏರ್ಸಡಿಸಿರುವನು. ಅಲ್ಲಿಗೆ ” ನೆಂಬರ್‌ದಾರ್‌” ಆಗಲು, (ಅಲ್ಲಿಯವರು ಹೇಳುವುದು ಹಾಗೆ) ದುಡ್ಡುಕಾಸು ಚನ್ನಾಗಿ ಕೈಯ್ಯಲ್ಲಿರಬೇಕೆಂಬುದೊಂದೇ ನಿಯಮ. ಜಾತಿ, ಕುಲ, ಗೋತ್ರಗಳ ತಾರತಮ್ಯವಲ್ಲಿಲ್ಲ. ಮೇಲುಕೀಳೆಂಬ ಆ ಎಲ್ಲರೂ ಒಂದೇ. ಜನವಾರ್ತೆಯನ್ನು ನಂಬು ವುದಾದರೆ ಅಲ್ಲಿ ಬೆಳಗಿನಿಂದ ಸಂಜೆವರೆಗೂ ಜೂಜು ನಡೆಯುತ್ತ ದೆಂದು ಹೇಳಬೇಕು. ಅಲ್ಲಿನವರನ್ನೇ ಕೇಳಿದರೆ, ಅವರು “ತಮಾಷೆ” ಯಾಗಿ ಕಾಲಹರಣಮಾಡುವರು ಅಷ್ಟೆ. ಆದರೆ ಈ ” ತಮಾಷೆ” ಕಾಲಹರಣವು ಎಷ್ಟೊ ಜನರ ಮನೆ ಮುಳಿಗಿಸಿಬಿಟ್ಟಿದ್ದಿತು.
ಆ ಕ್ಲಬ್ಬಿನವರಲ್ಲಿ ಮತ್ತೊಂದು ಸುಗುಣವಿದ್ದಿತು. ಯಾವು ದೊಂದು ಸಭ್ಯ ಮಂಡಲಿಯವರಿಂದಲೂ ತಮಗೆ ಯಾವ ಬಿರುದೂ ಲಭ್ಯವಾಗುವುದಿಲ್ಲವೆಂದು ತಿಳಿದು ಅಥವಾ ತಮಗೆ ಬಿರುದುಕೊಡುವ ಸೌಭಾಗ್ಯವು ಯಾವುದೂ ಸಭ್ಯಮಂಡಲಿಗಿಲ್ಲವೆಂದು ತಿಳಿದು, ಅವರು ತಮ್ಮ ತಮ್ಮಲ್ಲಿಯೇ ಬಿರುದಾವಳಿಗಳನ್ನು ಹಂಚಿಕೊಂಡಿದ್ದರು. ಸರ್ವಜ್ಞ ಕೃಷ್ಣಮೂರ್ತಿಗಳು ಪ್ರೆಸಿಡೆಂಟರು (ಇವರಿಗೆ ಎಂಟು ಸಲ ಸ್ಕೂಲ್‌ ಫೈನಲ್‌ ಹಾಲ್‌ ಟಿಕೆಟ್‌ ಬಂದಿದ್ದಿತಂತೆ) ಆಫೀಸರ್‌ ರಾಮರಾಯರು ವೈಸ್‌ ಪ್ರೆಸಿಡೆಂಟರು. (ಇವರಿಗೆ ಸುಮಾರು ೫೦ ವಯಸ್ಸು, ಯಾವ ಆಫೀಸಿಗೂ ಇವರು ಕೆಲಸಕ್ಕಾಗಿ ಅರ್ಜಿಯನ್ನು ಹಾಕಿದುವಿಲ್ಲ). ಗೆಲುವುದಾರ ವೆಂಕಣ್ಣಯ್ಯನವ (ಇವರು ಎಂದೂ ಯಾವುದರಲ್ಲಿಯೂ ಗೆದ್ದುದೇ ಇಲ್ಲ). ಸ್ಯಾಂಡೋ ಸಣ್ಣಪ್ಪನವರು (ಇವರನ್ನು ಮೂರುಸಲ ಗಾಳಿಹೊಡೆದುಕೊಂಡು ಹೋಗಿದಿತಂತೆ). ಆರೊಗ್ಯವಂತರು ಜಿನದಾಸ ಪಂಡಿತರು (ಇವರ ಹಾಸಿಗೆ ಹಿಡಿದು ಮಲಗದ ದಿವಸವಿಲ್ಲ). ಆಚಾರ ವಿಚಾರದ ಸುಬ್ರಹ್ಮಣ್ಯಾವಧಾನಿ ಗಳು (ಇವರ ಮುಖ ನೋಡಿದರೆ ವಾಂತಿಗೆ ಬರುತ್ತಿದ್ದಿತಂತೆ). ಮೊದಲಾದವರು ‘ಕಮಿಟೀ ಮೆಂಬರು’ಗಳು. ಅಂತೂ ” ಟೈಟಲ್‌ ಹೋಲ್ಡರ್ಸ್:” ಅಲ್ಲಿ ಸೇರುವ ಹಾಗೇ ಇರಲಿಲ್ಲ.
ಆ ಕ್ಲಬ್ಬಿನಲ್ಲಿ ಒಂದುದಿನ ಒಂದು ವಿಶೇಷವು ನಡೆಯಿತೆಂದು  ಸಮಾಚಾರ. ಮೈಸೂರಿನಿಂದ ಯಾರು ಯಾರೋ ದೊಡ್ಡ ಮನು ಷ್ಯರು ಅಲ್ಲಿಗೆ ಅತಿಥಿಗಳಾಗಿ ಹೋಗಿದ್ದಂತೆಯೊ, ಅಂದು ಅವರ ಸಮಾಗಮನದ ಸಂತೋಷ ಸೂಚನಾರ್ಥವಾಗಿ ‘ಕ್ಲಬ್ಬಿ’ನವರು ಒಂದು ದೊಡ್ಡ ಆಟವನ್ನು ಹೂಡಿದ್ದಂತೆಯೂ, ಇವು ಹೇಗೆಹೇಗೋ  ಪಾರುಪತ್ತೆ ಗಾರನಿಗೆ ತಿಳಿದು, ಆತನು ಬಂದು ಅಳಿಯನನ್ನು ಯದ್ವಾ ತದ್ವಾ ವಾಚಾಮಗೋಚರವಾಗಿ ಆಡಿದಂತೆಯೂ, ಆಗ ಅಳಿ ಯನು ” ಅವರೆಲ್ಲರೂ ದೊಡ್ಡದೊಡ್ಡಮನುಷ್ಯರು ಅವರೆದುರಿಗೆ ತನಗೆ ಅವಮಾನವಾಯ್ತೆಂ”ದು “ಕ್ರುದ್ಧನಾಗಿ, ತನ್ನ ಮಾವನು ಪಾರು ಪತ್ತೆಗಾರನಾಗಿರುವುದರಿಂದ ತನಗೆ ಬಂದಿರುವ ಅನಮಾನವನ್ನು ತಪ್ಪಿಸಲು ತಾನು ಅಂತಹ ದೊಡ್ಡಮನುಷ್ಯರ ಸಹವಾಸಮಾಡಿರು  ವುದಾಗಿಯೊ ಹೇಳಿಕೊಂಡು, ಅನರೆಲ್ಲರನ್ನೂ ಪ್ರತ್ಯೇಕ ಪ್ರತ್ಯೇಕ ವಾಗಿ ಕುಲಗೋತ್ರಗಳನ್ನು ಹೇಳಿ ಮಾವನಿಗೆ ತೋರಿಸಿದಂತೆಯೂ  ಮರುದಿನ ಬೆಳಗ್ಗೆ ಆ ದೊಡ್ಡಮನುಸ್ಯರು ತಾವು ನಿಜವಾಗಿಯೂ ದೊಡ್ಡ ಮನುಷ್ಯರೇ ಎಂದು ತೋರಿಸಿಕೊಳ್ಳಲು ಮೈಸೂರಿನ ಬೀದಿ ಯನ್ನು ನಿರ್ನುಲಮಾಡುವ ದೊಡ್ಡಕೆಲಸದಲ್ಲಿ ಪ್ರವೃತ್ತರಾಗಿದ್ದರೆಂತಲೂ ವರ್ತಮಾನ. ಅಂತೂ ನಾನು ಇಷ್ಟುಮಾತ್ರ ಹೇಳುವೆವು. ಈಗಿನ ಸಂಘಸುಧಾರಕರು ಜನಸ ಮೂಹದಲ್ಲಿ ಎಂತು ಗಂಟಲು ಕಿತ್ತುಕೊಳ್ಳುವುದಕ್ಕಿಂತಲೂ ‘ಹೋಟಲು’ ಜೂಜಿನ ಮನೆಗಳನ್ನು ದಿನ ವೊಂದಕ್ಕೆ ಹತ್ತುಹತ್ತರಂತೆ ಹೆಚ್ಚಿಸುತ್ತ ಬಂದರೆ ನಮ್ಮ ಪುರೋಭಿವೃದ್ಧಿಗೆ ಅಡ್ಡವಾಗಿರುವ ವರ್ಣಾಶ್ರಮ ಧರ್ಮಗಳೂ ಪರಸ್ಪರ ವೈಷಮ್ಯಗಳೂ ತಪ್ಪಿ ಸರ್ವಸಮತ್ವವು ತಾನೇ ತಾನಾಗುವು ಪರಲ್ಲಿ ಸಂದೇಹವಿಲ್ಲ.
  —
ದ್ವಿತೀಯ ಪರಿಚ್ಛೇದ
ಹೇಗೆಹೇಗೋ ಈ ಕ್ಲಬ್ಬಿನ ಸಮಾಚಾರವು ಮೈಸೂರು ಪೋಲೀಸ್‌ ಇನ್ಸ ಸ್ಪೆಕ್ಟರಿಗೆ ತಿಳಿಯಬಂದಿತು, ಅವರು ಇದರ ತತ್ವಾರ್ಥ ವಿಚಾರಿಸಲು ಪ್ರಸಿದ್ಧ ಪಕ್ತೀದಾರನಾದ ನರಸಿಂಗರಾಯ ನನ್ನು ಕಳುಹಿಸಿದರು. ಅವನು ಬಂದಿರುವುದು ಯಾರಿಗೂ ತಿಳಿ ಯದು. ಅಂದು ಭಾನುವಾರವೆಂದು ಆ ಊರಿನ ‘ನೆಂಬರುದಾರ್ರ’ ಜತೆಗೆ ಹೊರಗಿನ ಅತಿಧಿಗಳನ್ನೂ ಬರಮಾಡಿಕೊಂಡು, ಅಂದು ಕ್ಲಬ್ಬಿನವರು ಮಹಾ ವೈಭವದಿಂದ ಸಂತೋಷಕೂಟವನ್ನು ನಡೆ ಸುತ್ತಿದ್ದಾರೆ ಅಂದು ಬರಿಯ ಕಾಫಿ ತಿಂಡಿಗಾಗಿ, ಒಂದು ಹೊತ್ತಿಗೇ ಹತ್ತು ರೂಪಾಯಿ ಖರ್ಚಾಗಿದೆ ರೂಪಾಯಿಗಳ ಶಬ್ದವು ಸುಮಾರು ದೂರಕ್ಕೆ ಕೇಳಿಸುತ್ತ, ಕ್ಲಬ್ಬಿನವರ ಧನಿಕತೆಯನ್ನು ವ್ಯಕ್ತಪಡಿಸುತ್ತದೆ.
ಮಾವನು ಅಳಿಯನ ವೈಭವವನನ್ನು ನೊಡಿ ಬೆರತುಹೋಗಿ ದ್ದಾನೆ. ಮಾವನಿಗೆ ಒಳಗೆ ಒಂದು ಯೋಚನೆಯಿದ್ದಿತು. ಯಾವ ತ್ತಾದರೂ ಒಂದು ದಿನ ಅಳಿಯನಿಗೆ ಅದೃಷ್ಟ ಬಂದರೆ ಅಷ್ಟು ಹಣವೂ ತನ್ನದಾಗುವುದು. ಅಲ್ಲದೆ ನಿತ್ಯವೂ ತಪ್ಪದೆ ಅಳಿಯನು ೨-೩ ರೂಪಾಯಿ ತಂದುಕೊಡುವನು. ಇನ್ನೇನಾಗಬೇಕು ?
ಸುಮಾರು ಮೂರುವರೆ ಗಂಟೆ. ಆ ವೇಳೆಗೆ ಅಳಿಯಂದಿರು ಕೃಷ್ಣ ಮೂರ್ತಿಗಳಿಗೆ ಬಂದಿದ್ದ ಹಣವೆಲ್ಲ ಕೈಬಿಟ್ಟು ಹೋಗಿದೆ. ಗಳಿಗೆಗೊಂದು ಸಲ ” ಸುಖದುಃಖೇ ಸಮೇಕೃತ್ವಾ ಲಾಭಾ ಲಾಭೌ ಜಯಾ ಜಯೌ” ಎಂದು ಶ್ಲೋಕವನ್ನು ಹೇಳುತ್ತಲ್ಕೂ ಮತ್ತೊಮ್ಮೆ “ ಸುಮಾರು ೩೦೦ ರೂಪಾಯಿ ಬಂದಿತ್ತು. ಎದ್ದಿದರೆ ಚನ್ನಾಗಿದ್ದಿತು ” ಎಂದು ಹೇಳಿಕೊಳ್ಳುತ್ತಲೂ ಆಡುತ್ತಲೇ ಕುಳಿತಿ ದ್ದನು. ಸುತ್ತಿನವರು ” ತಾವು ಒಬ್ಬರ ಕೈಕೆಳಗೆ ಇರುವವರಲ್ಲ. ತಮಗೆ ಧಾರಾಳವಾಗಿ ಮಾತಾಡುವ ಹಕ್ಕು ಉಂಟೆ”ಂದು ತೋರಿಸಿ ಕೊಳ್ಳಲು ತೋರಿದುದನ್ನೆಲ್ಲ ಮಾತನಾಡುತ್ತಿದ ರು.
ಸಿಗರೇಟು ಬೀಡಿ ಚುಟ್ಟಾಗಳ ಹೊಗೆ ಆ ಆವರಣ ವನ್ನೆಲ್ಲಾ ವ್ಯಾಪಿಸಿ ಅಲ್ಲಿ ಸಣ್ಣಗೆ ಮಂಜು ಮನುಸುಕಿರುವಂತೆ ಕಾಣುತ್ತದೆ. ಆ ಸುಗಂಧನ್ರು ಸುತ್ತಲೂ ವ್ಯಾಪಿಸಿದೆ. ಬಿಸಾಡಿದ ತುಂಡುಗಳೆನೂ ದಟ್ಟವಾಗಿ ಬಿದ್ದಿದ್ದು, ಅಂಗೈಯಗಲವೂ ಬರಿನೆಲ ಕಾಣಿಸದಂತೆ ಆಗಿದೆ ಬೆಳಗಿನಿಂದಲೂ ಅದೃಷ್ಟದೇವತೆಯ  ಕೋಪಕ್ಕೆ ಪಾತ್ರರಾಗಿರುವವರ ತಾರದ್ವನಿಯೊಡನೆ ಆಕೆಯ ಕಟಾ ಕ್ಷಕ್ಕೆ ಪಾತ್ರರಾಗಿರುವವರ ಮಂದ್ರಗಂಭೀರ ಧ್ವನಿಯೂ, ಹಾಗೂ ಹೀಗೂ ಇರುವವರ ಅಸಮಾಧಾನದ ಮಧ್ಯಮಧ್ವನಿಯೂ ಸೇರಿ ದೊಡ್ಡ ಸಂಗೀತವನ್ನು ಮಾಡುತ್ತಿವೆ ಆಗಿಂದಾಗ್ಯೆ ಜಲ್‌ ಜಲ್ಲೆಂದು ಕೇಳಿಸುವ ರೂಪಾಯಿನ ಶಬ್ದವು ತಾಳವಾಗಿದೆ. ಎಲ್ಲ ರಿಗೂ ಜೂಜಿನ ಅಮಲು ತಲೆಗೇರಿದೆ. ಯಾವನು ಬಂದರೂ ಹೆದ ರುವ ಹಾಗಿಲ್ಲ. ಸರಿ! “ಆನೆ ನೀರಾಟದೊಳು ಮೀನ ಕಂಡಂಜು ವುದೆ?” ಎಂದಹಾಗೆ.
ಕೊನೆಗೆ ನಂಬರುವಾರರ ಮನೋಧಾರ್ಥ್ಡ್ರವನ್ನು ಪರೀಕ್ಷೆ ಮಾಡುವ ಕಾಲವು ಬಂದಿತು. ಸುಮಾರು ನಾಲ್ಕುಗಂಟೆ ಇರಬಹುದು ಒಬ್ಬನು ವದೆ ಮಾರುವವನು ಅಲ್ಲಿಗೆ ಬಂದನು. ಊಟಮಾಡಲು ಪುರಸತ್ತಿಲ್ಲದ ಕೆಲವರು ಕೂಡಲೆ ಅವನನ್ನು ಗಿ ಕರಿಡರು. ವಡೆಯ ಮಾರಾಟಿವೂ ಚೆನ್ನಾಗಿ ಆಯಿತು; ಅವನಿಗೂ ವಡೆ ಜೆನ ಜಃ ಎಂದು ಒಂದು ರೂಪಾಯಿ ಇನಾಮೂ ಸಿಕ್ಕಿತು. ಅವನೂ ದೂ ಇದೂ ಮಾತನಾಡುತ್ತ ಅಲ್ಲೆಕುಳಿತು ಬಿಟ್ಟಿತು. ಮತ್ತೊ ಹ ಕೋಡಿಬಳೆ ತಂದನು. ಅದೂ ಚೆನ್ನಾಗಿದು ಎಲ್ಲಾ ಖರ್ಚಾ ಗಿ, ಅವನೂ ವಡೆಯವನೂ ತಮ್ಮತಮ್ಮ ವೃತ್ತಿಯ ವಿಚಾರವಾಗಿ ಮಾತನಾಡುತ್ತ ಕುಳಿತುಕೊಂಡರು. ಆ ವೇಳೆಗೆ ಸುಮಾರು ಐದು ಗಂಬೆಯಾಗಿರಬಹುದು. ಮನೆಗೆ ಹೋಗಿ ದೃವರೂ ಬಂದು ಬಿಟ್ಟಿದ್ದಾರೆ, ‘ ಕ್ಲಬ್‌ `’ಭತಿೀಯಾಗಿ ಹೋಗಿದೆ. ಯಾರೂ ಶಪ್ಪಿಸಿ ಕೊಂಡಿಲ್ಲ.
  ತೃತೀಯ ಪರಿಚ್ಛೇದ
ಆ ವೇಳೆಗೆ “ಕೃಷ್ಣಮೂರ್ತಿಗಳೇ” ಎಂದು ಕೂಗುವ  ಸ್ವಲ್ಪ ಕ್ರೂರವಾದ ಶಬ್ದವೊಂದು ಕೇಳಿಸಿತು. ಪರಿಚಿತವಾದ ಆ ಶಬ್ದವೆತ್ತಲಿಂದ ಬಂದಿತೆಂದು ನೋಡುತ್ತವಾಗಲೇ, ಸಾಮಾನ್ಯ  ವಾಗಿ, ನೋಡಿದರೆ ಹೆದರಿಕೆಯಾಗನಿವೆ ಭೀಮ ಸ್ವರೂಪವೊಂದು, “ಕಾಕಿ”ಯೂನಿಫರಮ್ಮಿನಲ್ಲಿ ಇನ್ನೂ ಕರಾಳವಾಗಿ ಎದುರಿಗೆ ಬಂದು ನಿಂತಿತು. ಅವರು ಬಾಗಿಬು ಚಿಲಕೆ ಹಾಕದೆ ಮೈಮರೆತ ದಿನವಿಲ್ಲ. ಇಂದು ಈ ವ್ಯಕ್ತಿಯು ಒಳಗೆ ಬಂದು ಹೇಗೆ? ಎಲ್ಲ ರಿಗೂ ಅಶ್ಚರ್ಯ. ಎಲ್ಲರೂ ತುಟಿಪಿಟಕ್ಕೆನ್ನದೆ ಚಿತ್ರದ ಬೊಂಬೆಗಳಂತೆ ಕುಳಿತಿದ್ದಾರೆ. ದುಡ್ಡಿನ ರಾಶಿಯು ಮುಂದೆ ಸುರಿದಿದೆ, ಎಲ್ಲರೂ ಸುತ್ತ ಕುಳಿತಿದ್ದಾರೆ. ಕೈಯ್ಯ ಎಲೆಗಳು ಕ್ರಮೇಣ ಜಾರಿಬಿದ್ದು ಹೋಗುತ್ತಿವೆ. ಬಲಗೈಯ್ಯ ಸಿಗರೇಟು, ಬೀಡಿ ಇತ್ಯಾ ದಿಗಳು ಅಲ್ಲಲ್ಲೆ ಕವರಿಹೋಗುತ್ತಿವೆ. ಎಲ್ಲಿದ್ದವರು ಅಲ್ಲೆ!
ಈ ವೇಳೆಗೆ ಆಗಲೇ, ವಡೆಯವನೂ ಕೋಡು, ಬಳೆಯವನೂ ಹೋಗಿ ಎರಡು ಪಿಸ್ತೂಲುಗಳನ್ನು ಹಿಡಿದು ಕೊಂಡು ಆ ಕಿರುಮನೆ ಗಿದ್ದ ಎರಡು ಬಾಗಿಲಲ್ಲಿ ನಿಂತಿದ್ದಾರೆ , ಯಮನೆರಡಾಗಿ ಬಂದಂತೆ ಕಾಣುತ್ತದೆ. ಯಾರೂ ಏನೂ ಮಾಡುವ ಹಾಗಿಲ್ಲ; ಎದ್ದು ಹೋಗಲು ಯತ್ನಿಸಿದರು. ಆದರೆ ನಡೆಯಲಿಲ್ಲ.
ಮುಂದಿನ ಫಲಾಫಲಗಳೆಲ್ಲವೂ ಎಲ್ಲರ ಮನಸ್ಸಿಗೂ ತಟ್ಟನೆ ಹೊಳೆದು ಹೋಯಿತು. ಕೆಲವರ ಕಣ್ಣಿನಲ್ಲಿ ನೀರು ದಡಗುಟ್ಟಿ ಕೊಂಡು ಹರಿಯಲೂ ಹರಿಯಿತು. ಆದರೂ ಯಾರಿಗೂ ಮಾತ ನಾಡುವ ಎದೆಯಿಲ್ಲ. ಎಲ್ಲರೂ ನೀರವ. ಮಾಡುವ ಕೆಲಸವು ತಪ್ಪೆಂದು ತಿಳಿದಿರುವಾಗ, ಒಮ್ಮೆಯಾದರೂ ಅದು ಮನುಷ್ಯನನ್ನು ಕಾಡದೆ ಹೋಗುವುದೇನು?
ಕೊನೆಗೆ ನರಸಿಂಗರಾಯನೇ ಮಾತನಾಡಿದನು. ಆ ಬದ್ಮಾ ಷ್‌? ಅಬ್‌ ಕ್ಯಾಬೋಲ್ತೆ ತುಂ ಸಬ್‌ಲೋಗ್‌ ?” ಎಂದು ಗದರಿಸಿ ದನು. ಗರ್ಜನೆಯು ಎಲ್ಲರ ಎದೆಯನ್ನೂ ನಡಗಿಸಿ ಬಿಟ್ಟಿತು. ಏನೂ ಯಿಲ್ಲದಾಗ ನಗುತ್ತಿರುವ ಆ ಪೋಲೀಸಿನವರ ಮುಖದಲ್ಲಿ, ಯಾವನಾದರೊಬ್ಬನು (ಅವನು ಅಪರಾಧವನ್ನೇ ಮಾಡಿರಬೇಕಾ ದ್ದೇ ಇಲ್ಲ), ಬಂದು ಎದುರಿಗೆ ನಿಂತರೆ ಕಿಡಿಯೇಳುತ್ತದೆ. ನೋಡು ವವರ ಎದೆ ಇಬ್ಬಾಗವಾಗುತ್ತದೆ. ಮೊದಲೇ ಕಣ್ಣೀರು ಬಿಡುತ್ತಿದ್ದ ವರು ದೊಡ್ಡದಾಗಿ ಗೊಳೋ ಎಂದು ಅತ್ತುಬಿಟ್ಟರು. ಮತ್ತೆ ಕೆಲ ವರು ಸುಮ್ಮನೆ ಮುಸುಕು ಹಾಕಿಕಂಡು ತಲೆ ತಗ್ಗಿಸಿಕೊಂಡು ಕುಳಿತರು; ಹೊರಗೆ ಹೊರಡಬೇಕೆಂದ ಒಬ್ಬಿಬ್ಬರ ಪ್ರಯತ್ನಗಳೂ ಸಹ ನಡೆಯಲಿಲ್ಲ ಕೊನೆಗೆ ಬೇರೆ ಗತಿಯಿಲ್ಲದೆ ಕೃಷ್ಣಮೂರ್ತಿಯೇ ಮುಂದೆ ಬರಬೇಕಾಯಿತು. ಸಾಮದಾಸನಾದ್ಯುಪಾಯಗಳನ್ನೆಲ್ಲಾ ಪ್ರಯೋಗಿಸಿದುದರ ಫಲವಾಗಿ ಕೊನೆಗೆ ನರಸಿಂಗರಾಯನಿಗೆ ಮೂರುನೂರು ರೂಪಾಯಿಯನ್ನೂ, ಅವರಿಬ್ಬರಿಗೂ ಐವತ್ತು ಐವತ್ತು ರೂಪಾಯಿಯನ್ನೂ ಕೊಡಬೇಕೆಂದು ಇತ್ಯರ್ಥವಾಯಿತು. ಬಂದಿದ್ದ ಮೃತ್ಯುವು ದುಡ್ಡಿನ ಮೇಲೆ ಹೋಗಿ, ತಾವು ಉಳಿದು ಕೊಂಡೆವೆಂದು ನಿಶ್ಚಯವಾದ ಕೂಡಲೆ, ಎಲ್ಲರೂ ಚಿಗುತುಕೊಂ ಡರು. ಅರೆಗಂಟೆಯ ಮುಂದೆ ಒಬ್ಬೊಬ್ಬರು ನೂರು ರೂಪಾಯಿ ಕೊಡಲು ಸಿದ್ದವಾಗಿದ್ದವರು, ಈಗ ಇಪ್ಪತ್ತು ರೂಪಾಯಿ ಕೊಡು ವುದೂ ಕಷ್ಟವಾಗಿ ಹೋಯಿತು ತುಂಬಿದ ಕಟ್ಟೆಯಲ್ಲಿ ಮೂರು ನೂರು ರೂಪಾಯಿ ಹುಟ್ಟುವುದು ಕಷ್ಟವಾಗಿ ಹೋಯಿತು. ಕೊನೆಗೆ ಯಜಮಾನ ಕೃಷ್ಣಮೂರ್ತಿಯು ಅಲ್ಲೊಬ್ಬ ಬಳಿ ಒಂದು ದಿವಸದ ವಾಯಿದೆ ಮಾಡಿಕೊಂಡು ನೂರು ರೂಪಾಯಿಗಳನ್ನು ಸಾಲಮಾಡಿ ತನ್ನ ಲ್ಲಿದುದನ್ನೂ ಸೇರಿಸಿಕೊಟ್ಟು, ಆ ಪ್ರಾರಬ್ಧಗಳನ್ನು ತೊಲ  ಗಿಸಿದನು
ಅಲ್ಲಿಗೆ ಆಟವು ನಿಂತುಹೋಯಿತು. ಎಲ್ಲರೂ ಚದುರಿ ಹೋದರು. ಕೃಷ್ಣಮೂರ್ತಿಗೆ ಮಾತ್ರ ಯೋಚನೆ. ಮರುದಿವಸ ನೂರು ರೂಪಾಯಿಗಳನ್ನು ಎಲ್ಲಿ೦ದ ತರುವುದು? ಯಾರನ್ನು ಕೇಳುವುದು??’ ಅವನಿಗೆ ಬಹಳ ಬೇಕಾದವರೊಬ್ಬರಿದ್ದರು “ಅದ ಕ್ಕೇನು? ನಿಮ್ಮ ಮಾವನನ್ನೇ ಕೇಳಿದರಾಯಿತು” ಎಂದರು. ಮಾವನ ಯೋಗ್ಯತೆ ಅಳಿಯನಿಗೆ ಗೊತ್ತು. ಅಂತೂ ಅವನಿಗೆ ಆಕಾಶವೇ ಕಳಚಿಬಿದ್ದಂತೆ ಇದೆ. ಜೂಜಿನಕಟ್ಟೆ ಸಾಲ ಮೊದಲು ತೀರಿಸಬೇಕು. ಇಲ್ಲವಾದರೆ ಮಾನ ಹೋಗುತ್ತದೆ. ಮನೆಯಲ್ಲಿ ಮಕ್ಕಳು ಅನ್ನವಿಲ್ಲ ದೆ ಅತ್ತರೂ ಚಿಂತೆಯಿಲ್ಲ. ತ:ನು ವಾರಕ್ಕೊಂದು ಸಲ ಭೀಷ್ಮ ಸಹಕ ಮಾಡುತ್ತಿದ್ದರೂ ಯೋಚನೆ ಇಲ್ಲ. ಜೂಜಿನ ಸಾಲ ಮೊದಲು ತೀರಿಸಬೇಕು. “ಇಲ್ಲವಾದರೆ ಮಾನ ಹೋಗುತ್ತದೆ. ಜೂಜಿಗೂ ಮಾನಕ್ಕೂ ಬಹು ನಿಕಟ ಸಂಬಂಧವೇನೊ?
*****
ಮುಂದುವರೆಯುವುದು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮನಸೇಽ
Next post ಕೂಡಲ ಸಂಗಮದೇವನ ಕನ್ನಡ

ಸಣ್ಣ ಕತೆ

 • ವರ್ಗಿನೋರು

  ಆಗ್ಲೇ ವಾಟು ವಾಲಿತ್ತು. ಯೆಷ್ಟು ವಾಟು ವಾಲ್ದ್ರೇನು? ಬಳ್ಳಾರಿ ಬಿಸ್ಲೆಂದ್ರೆ ಕೇಳ್ಬೇಕೇ? ನಡೆವ... ದಾರ್ಗೆ ಕೆಂಡ ಸುರ್ದಂಗೆ. ನೆಲಂಭೋ ನೆಲಾ... ಝಣ ಝಣ. ‘ಅಲ್ಗೆ’ ಕಾದಂಗೆ. ಕಾಲಿಟ್ರೆ… Read more…

 • ಎರಡು ರೆಕ್ಕೆಗಳು

  ಪಶ್ಚಿಮದಲ್ಲಿ ಸೂರ್ಯ ಮುಳುಗುತ್ತಿದ್ದ ಆಕಾರದ ತುಂಬ ಒಂಥರಾ ಕೆಂಬಣ್ಣ ತುಂಬಿಕೊಂಡಿತ್ತು. ಆ ಸಂಜೆಯಲ್ಲಿ ತಣ್ಣನೆಯ ಗಾಳಿ ಆ ಭಾವನೆ ಬಂಡೆಯ ಕೋಟೆಯ ಮೇಲೆ ಹಾಯ್ದು ಹೋಯಿತು. ಎತ್ತರದ… Read more…

 • ಮರೀಚಿಕೆ

  ನಂಬಿದರೆ ನಂಬಿ ಬಿಟ್ಟರೆ ಬಿಡಿ ನನ್ನೆಲ್ಲಾ ಭಾವನೆಗಳೂ ತಬ್ಬಲಿಗಳಾಗಿಬಿಟ್ಟಿವೆ. ಪ್ರೇಮವೆಂದರೆ ತ್ಯಾಗವೆ, ಭೋಗವೆ, ಭ್ರಮೆಯೆ ಆಥವಾ ಕೇವಲ ದಾಸ್ಯವೆ? ಮನಸ್ಸಿಗಾದ ಗ್ಯಾಂಗ್ರಿನ್ ಕಾಯಿಲೆಯೆ? ಇಂತಹ ದುರಾರೋಚನೆಗಳು ಹುಟ್ಟಲು… Read more…

 • ಮುದುಕನ ಮದುವೆ

  ಎಂಬತ್ತುನಾಲ್ಕು ವರ್ಷದ ನಿವೃತ್ತ ಡಾಕ್ಟರ್ ಶ್ಯಾಮರಾಯರಿಗೆ ೩೮ ವರ್ಷದ ಗೌರಮ್ಮನನ್ನು ಮದುವೆಯಾದಾಗ ಅದು ವೃತ್ತಪತ್ರಿಕೆಗಳಲ್ಲಿ ದೊಡ್ಡ ಅಕ್ಷರಗಳಲ್ಲಿ ಬಂದು ಒಂದು ರೀತಿಯ ಆಶ್ಚರ್ಯ, ಕೋಲಾಹಲ ಎಬ್ಬಿಸಿತ್ತು. ಡಾ.… Read more…

 • ಕಳಕೊಂಡವನು

  ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…

cheap jordans|wholesale air max|wholesale jordans|wholesale jewelry|wholesale jerseys