ಕಳ್ಳರ ಕೂಟ – ೧

ಕಳ್ಳರ ಕೂಟ – ೧

ಹುಚ್ಚನೇ ಹೌದೇ? 

ಪ್ರಥಮ ಪರಿಚ್ಛೇದ 
ದಫೆೇದಾರ ನರಸಿಂಗರಾಯನು ಬಹು ಬುದ್ದಿವಂತೆ. ಅನೇಕ ಕಳ್ಳರನ್ನು ಹಿಡಿದುಕೊಟ್ಟು, ಮೇಲಿನ ಅಧಿಕಾರಿಗಳಲ್ಲಿ ಪ್ರೀತಿ  ಗೌರವಗಳನ್ನು ಸಂಪಾದಿಸಿದ್ದನು. ಆದರೂ ಈ ಹಾಳು ಜನರ ಬಾಯಿ] ಸುಮ್ಮನಿರದು. ‘ ಜೇಷ್ಟ ಆಷಾಢದ ಹೊಳೆಯು ಎರಡೂ ದಡಗಳನ್ನು ಮೀರಿ ಹೆರಿದುಬಿದುವಂತೆ ಒಮ್ಮೊಮ್ಮೆ ಅಂಕೆಯನ್ನು ಮೀರಿ ನಡೆದು ” ಅವನೋ ದಫೇದಾರ ನರಸಿಂಗ! ಕಳ್ಳ ! ಕಳ್ಳರು ಕಾಣದ ಹಾಗೆ ಮನೆ ದೋಚಿದರೆ ಅವನು ಕಂಡಹಾಗೆ ದೋಚುತ್ತಾನೆ. ಅವನು ಹಗಲುಕಳ್ಳ. ಕಳ್ಳನಾದರೊ ಯಾರಾ ದರೂ ಕಂಡರೆ ಓಡಿಹೋಗುತ್ತಾನೆ. ಇವನು ಯಾರನ್ನಾದರೂ ಕಂಡರೆ ಹುಡುಕುವುದು ಇನ್ನಷ್ಟು ಬಲ?” ಎಂದು ಮುಂತಾಗಿ ಹೇಳಿಬಿಡುವರು. ಬಹು ಕಷ್ಟಪಟ್ಟು ಕಟ್ಟಿದ ಕೃಷ್ಣರಾಜಸಾಗರದ  ಕಟ್ಟೆಯನ್ನು ಪ್ರವಾಹವು ಆಂಜಿಸಿ ಅಧಿಕಾರಿಗಳನ್ನು ದರ್ಶನಕ್ಕೆ ಬರಮಾಡಿಕೊಳ್ಳುವಂತೆ ಒನ್ಮೊ ಮ್ಮೆ ಈ ಕಿಂವದಂತಿಯೂ ಬಲವಾಗಿ “ನಿಜವೇ?” ಎಂದು ವಿಚಾರಿಸಲ್ಕು ಸಾವಿರ ರೂಪಾಯಿ ಸಂಬಳದ ಅಧಿಕಾರಿಗಳನ್ನೇ ಎಷ್ಟೋಸಲ ಬರಮಾಡಿಕೊಳ್ಳುವುದು. ಅವರೆಲ್ಲರೂ ನರಸಿಂಗರಾಯನು ದಕ್ಷನೆಂದೂ ಪ್ರಾಮಾಣೀಕನೆಂದೂ ಕೈಕುಯ್ಲು ಬರೆದುಕೊಟ್ಟಿರುವಾಗ ಬಡವರ ಕೂಗು. ಅವನೆಷ್ಟು ನರಹತ್ಯಗಳನ್ನು ತಿಂದು ತೇಗಿರುವನೆಂದರೇನು? ದೊಡ್ಡ ಅಧಿ ಕಾರಿಗಳು Mr, Narasiga Rao ಅನ್ನುವಾಗ, ಹೊಟ್ಟಿಗಿಲ್ಲ ದವರು ನರಸಿಂಗ ಅಂದರೇನು? ಅವನು ಹೇಳುವುದಿಷ್ಟೆ. “ಹಲ್ಕಾ ಜನಗಳು” “ಕೈಗೆ ಸಿಕ್ಕಲಿ” ಇದರಮೇಲೆ ಮಾತಿಲ್ಲ. ನಾನಿಷ್ಟು ಮಾತ್ರ ಬಲ್ಲೆವು ಇದು ಬರಿಯ ಮಾತಲ್ಲ. ಎನ್ನೊ ಜನ ನಿರಪರಾಧಿ ಗಳು ಜೈಲಿನಲ್ಲಿ ಶ್ರೀಮಾನ್ ಧಫೇದಾರ,….. ನ ಹೆಸರು ಹೇಳಿ ಕೊಂಡು ಆ! ಮರೆತೆವು ಅವನ ಗುಣಾವಳಿಯನ್ನು ಪಾಡುತ್ತ ಇರುವುದನ್ನು ನಾನು ಕೇಳಿದ್ದೇವೆ. ಆದರೆ ನಮಗೂ ದಿಗಿಲು. ಆದ ಕ್ಕಾಗಿ ಸುಮ್ಮನಿರುವುದು.
ನರಸಿಂಗರಾಯನಿಗೆ ಏನೋ ದೇವರು ಕೊಟ್ಟಿಹಾಗೆ ೧೪ ರೂ ಸಂಬಳ ಬಗುತ್ತಿದ್ದರೂ ಆಸ್ತಿಯೇನೋ ೧೦-೧೫ ಸಾವಿರ ದಷ್ಟಿತ್ತು. ಪಾಪ! ೨೦ ವರ್ಷದ ಹಿಂದೆ ಅವರಿವರ ಕೈಕಾಲು ಹಿಡಿದು ಕೆಲಸಕ್ಕೆ ಸೇರಿದಾಗ ಆ ಮಹಾತ್ಮನ ಆಸ್ತಿಯೆಲ್ಲವೂ ಆಕಾಶತತ್ವದಲ್ಲಿ ಅವೃಕ್ತವಾಗಿದ್ದಿತು. ಆ ಸರಕಾರದವರ ಅನು ಗ್ರಹವು ಇವನಿಗೆ ಪ್ರೂಪ್ತವಾಗಿ ಮೊದಲ ತಿಂಗಳು ೬ ರೂ ಸಂಬಳವು ಕೈಗೆ ಬಂದಿತು. ಅದರ ಜತೆಯಲ್ಲಿಯೇ ನರಸಿಂಗರಾಯನ ಆಸ್ತಿಯು ವ್ಯಕ್ತವಾಗುತ್ತ ಬಂದಿತು. ನರೆಸಿಂಗರಾಯನನ್ನೇ ಯಾರಾ ದರೂ ಆಸ್ತಿಯ ವಿಚಾರವಾಗಿ ಕೇಳಿದರೆ ಇನ್ನೂ ಉಪನಿಷತ್ತು ಶಾಂತಿ ಆಗಲಿಲ್ಲವೆನ್ನುವನು. ಸ್ವಲ್ಪ ಮಂದಬುದ್ಧಿಗಳಾದ ನಮ್ಮಂತ ವರು ಅದೇನೆಂದು. ಕೇಳಿದೆರೆ, ಸೇದುತ್ತಿದ್ದ ಚುಟ್ಟಿನನ್ನು ಸೊಟ್ಟಗಿಟ್ಬು, ಹಾಕಿಕೊಂಡು ಮೆರೆವ ಆ “ಹೊರಳಿಸಿದ ಚಿನ್ನ?’ ದ ಕನ್ನ ಡಕದ ಮಧ್ಯದಿಂದ, ಮೃತ್ಯುವಿನ ದಾಯಾದಿಯಂತೆ, ಮಹಾಸ್ನಿಗ್ದ ವಾದ ದೃಷ್ಟಿಯಿಂದ ನೋಡುತ್ತ, ಸುಮಾರು ೬ ಧಡಿಯ ತೂಗಬಹು ದಾದ ಆ ತೋಳಿನಿಂದ ಕಾಲುಗಂಬೆ ಕಿವಿಹಿಂಡಿ, ಕೇಳಿದವನನ್ನು ಹತ್ತಿರ ಎಳೆದುಕೊಂಡು ಸಣ್ಣಗೆ ಬೆನ್ನಿಕಮೇಲೆ ಸ್ವಲ್ಪ ಬಾಸುಂಡೆ ಏರುವಂತೆ ತಟ್ಟಿ, ಗುದ್ದಿ ” ಪೂರ್ಣ! ಗೊತ್ತಿಲ್ಲ!” ಎಂದುಬಿಡುವನು. ಹಾಗೆಂದರೆ ೨೦ ಎಂದು ಅವನ ಅರ್ಥವಂತೆ! ಆ ವಿಧವಾದ ಅತನ ಮೆಚ್ಚಿಕೆಗೆ ಪಾತ್ರರಾದವರ ಮನೋಭಾವವು ಹೇಗಾದರೂ ಇರಲಿ, ನೋಡಿದವರಿಗೆ ತಪ್ಪದೆ ನಾಲ್ಕರ ಭಳಿ ಬರುತ್ತಿವಿತು. ಅಷ್ಟೇನು? ಈತನ ಶಹಬಾಸುಗಿರಿಗಳನ್ನು ಹುಡುಗರು ಸ್ವಲ್ಪ ಗ್ರಹಚಾರ ಕಡಮೆ ಯಾಗಿ ಯಾವತ್ತುದರೂ ಕಂಡರೆ, ಅಂದು ತಾಯಿತಂದೆಗಳಿಗೆ ಹನುಮಂತರಾಯನ ಗುಡಿಯಲ್ಲಿ “ಗುಳಿಮದ್ದು” ಕಟ್ಟಿಸುವುದಕ್ಕೆ ಒಂದು ಆಣೆ ಖರ್ಚು. ಆದರೂ ಅಲ್ಲಿಂದ ಮುಂದೆ ದಫೇದಾರನ ಹೆಸರೆತ್ತಿದರೆ ಆ ಹುಡುಗರ ತುಂಟಾಟನೇ ಮುಗಿದು ಹೋಗು ತ್ತಿದ್ದಿತು.
ಇಂತಹ ಪುಣ್ಯಾತ್ಮನು ಇವತ್ತು ವರುಣದ ಛತ್ರದ ಕಡೆ ಹೋಗುತ್ತಿದ್ದನು. ಮೈಸೂರಿನಿಂದ ಹೊರಟಾಗ ಸುಮಾರು ಒಂದು ಘಂಟೆ. ಕೃಷ್ಣವರ್ಣದ ಆ ಹಿಡಂಬ ಸುಂದರಾಕೃತಿಯು ಮಧ್ಯಾ ಹ್ನದ ಬಿಸಿಲಿನಲ್ಲಿ ಬೆಂದು ಸ್ವಲ್ಪ ವಿವರ್ಣವಾಗಿದಿತ್ತು. ಆದರೂ ಆ ಗಟ್ಟಿಬಣ್ಣಕ್ಕೇನೂ ಲೋಪವಿರಲಿಲ್ಲ. ಬೆವರು ಮಾತ್ರ ಬೆಟ್ಟ ದಿಂದ ಮಳೆ ಹುಯ್ದ ಮಾರನೇ ದಿನ ಹಗಿನು ಇಳಿದು ಬರವಂತೆ ತಲೆ ಕತ್ತು ಕಣ್ಣು ಹೊಗೆ ಎಲ್ಲದರಿಂದಲೂ ಸುರಿದುಹೋಗುತ್ತಿದ್ದಿತು. ಆತನನ್ನು ಹೊತ್ತಿದ್ದ ಆ “ಬೈಕು” ಸಹ, ಸ್ವಲ್ಪ ಧೂಳಿ ಧೂಸರ ವಾಗಿ, ವರ್ಣಾಂತರವನ್ನು ಹೊಂದಿ, ಸ್ವಾಮಿಯ ಮನೋಭಾವ ವನ್ನೇ ಸೂಚಿಸುತ್ತಿದ್ದಿತು ದಾರಿಯಲ್ಲಿ ಯಾರೂ ಸಿಕ್ಕಲಿಲ್ಲವಲ್ಲ ಎಂಬುದೊಂದೇ, ಇವನಿಗೆ ಮಹಾಕೋಪವನ್ನುಂಟು ಮಾಡಿದ್ದಿತು. ಯಾರಿಗೂ ಅದೃಷ್ಟ ತೀರಿರಲಿಲ್ಲ ಏನು ಮಾಡುವುದು?
ಈ ವ್ಯಕ್ತಿಯು ಊರ ಸಮೀಪಕ್ಕೆ ಬಂದಹಾಗೆಲ್ಲಾ, ಆ ಛತ್ರದ ಮಗ್ಗಲ ತೋಪಿನಿಂದ ಗಳಿಗೆಗೊಂದು ಸಲ ಒಂದು ಕಲ ಕಲ ಶಬ್ದವು ಕೇಳಿಸಿ ತಟ್ಟನದು ನಿಂತು ನಿಶ್ಶಬ್ದವಾಗಿ ಮತ್ತೆಯೂ ಹಾಗೇ ಕೇಳಿಸುವುದು ಹೆಚ್ಚಾಯಿತು. ದಫೇದಾರನೂ ಆತುರ ಪಟ್ಟು ಏನಿರಬಹುೆದೋ ನೋಡೋಣವೆಂದು ಕುತೂಹಲದಿಂದ ಬೇಗ ಬೇಗ ಬೈಸಿಕಲ್ಲು ಒತ್ತುತ್ತಿದ್ದನು. ಅಂತೂ ಬೈಸಿಕಲ್ಲು ಬಂದು ತೋಪಿನ ಬಳಿ ಥಿಂತಿಶು. ಕೂಡಲೆ ರಾಯನು ಸರ್ರನಿಳಿದು ಬರ್ರನೆಹೋಗಿ ಅಲ್ಲಿ ನಿಂತನು.
ಹರಕುಬರಕು ಬಟ್ಟೆಯಿಂದ ಹುಚ್ಚಾಗಿ ಸಿಂಗರಿಸಿಕೊಂಡು. ಬಾಯಿಗೆ ಬಂದುದನ್ನೆಲ್ಲಾ ಹಾಡು ಮಾಡಿಕೊಂಡು, ಹುಚ್ಚನೊ ಬ್ಬನು ನಿಂತಿದ್ದಾನೆ. ಅವನ ಸುತ್ತಲೂ, ಆ ಗ್ರಾಮದ ಹುಡುಗ ರೆಲ್ಲರೂ, ಸುತ್ತುಕೊಂಡಿದ್ದಾರೆ. ಅವನು ಒಮ್ಮೊಮ್ಮೆ ಅಳುತ್ತಾನೆ. ಮತ್ತೊಮ್ಮೆ ನಗುತ್ತಾನೆ. ಆದರೆ ವಿಶೇಷವೇನೆಂದರೆ ಅವನ ನಗುವು ಅಳುವಿನಂತೆ. ಸಾಲದೆ ಅವನು ಮಧ್ಯೆಮಧ್ಯೆ ಹಾಡುಗ ಳನ್ನು ಹೇಳುವನು. ಆ ಹಾಡಿನ ಅರ್ಥವು ತಿಳಿಯಲಿ ತಿಳಿಯದೆ ಹೋಗಲಿ, ಹುಡುಗರು ನಕ್ಕುಬಿಡುವರು. ಅವರು ತಿಳಿದಿರುವುದು ಅಷ್ಟೆ. ಹುಚ್ಚನಿಗೆ ಕಲ್ಲುಪೆಟ್ಟು ಬಿದ್ದು ನೋವಿಗೆ ಅವನು ಅತ್ತರೆ, ಹುಡುಗರಿಗೆ ನಗು. ಅವನು ಅಸ್ತವ್ಯಸ್ತವಾಗಿ ಮಾತನಾಡಿದರೆ ಆಗಲೂ ನಗು. ಅಂತು ಹುಡುಗರ ಮನಸ್ಸಿನಲ್ಲಿ ಹುಚ್ಚಿಗೂ ನಗುವಿಗೂ ನಿಕಟ ಸಂಬಂಧ. ಹುಚ್ಚನು ಬಂದರೆ ಜತೆಯಲ್ಲಿ ನಗುವೂ ಬರಬೇಕು. ಅಷ್ಟೆ! ಹುಡುಕಿನೋಡುವುದಾದರೆ ಅವರೂ ಹುಚ್ಚರೆ !
ಇಂತಹ ಹುಚ್ಚನ ಮತ್ತು ಅವನ ಅನುಯಾಯಿಗಳ ಗುಂಪಿ ನಲ್ಲಿ ದಫೇದಾರನು ಹೋಗಿ ನಿಂತನು. ಕೂಡಲೆ ಆ ಹುಡುಗರ ಗುಂಪಿನಲಿ ತುಂಬಿ ತುಳುಕುತ್ತಿದ ಸಂತೊೋಸನನ್ನ ಬತ್ತಿ ಬಯಲಾಯಿತು. ಈತನೂ ತನ್ನ ಸ್ವಭಾವಾನುಗುಣವಾಗಿ ಕಯ್ಯಲ್ಲಿದ್ದ ಚಾಟಿ-ಛೇ, ಅಲ್ಲ Whip ಚಾಟಿಯಂದರೆ ಗಾಡಿ ಹೊಡೆಯು ವುದು Whip ಅಂದರೆ ದೊಡ್ಡದೊಡ್ಡ ಮನುಷ್ಯರು ಕಯ್ಯಲ್ಲಿ ಹಿಡಿದು ಆಡಿಸಲು, ಮತ್ತು ನಾಯಿ ಕುದುರೆ ಆಳು, ಕಾಳು, ಇವ ರನ್ನು ಹೊಡೆಯಲೂ ಉಪಯೋಗಿಸುವ ನವನಾಗರಿಕತೆಯ ದಿವ್ಯಾ ಯುಧ- Whip ನಿಂದ, ಹುಚ್ಚನನ್ನು ಅನುಗ್ರಹಿಸಲು ಯತ್ನಿಸಿದನು. ಹುಚ್ಚನು ಆ ಕೂಡಲೆ ಜಾಣನಾಗಿ, ತಟ್ಟನೆ ಅದರ ಮಾರ್ಗದಿಂದ ಹಿಂದೆ ಸರಿದು ಭೀಕರವಾದ ವಿಕಟಸ್ವರ ದಿಂದ “ನರಸಿಂಗರಾಯ!” ಎಂದನು ಆ ವ್ಯಕ್ತಿಯ ಧ್ವನಿವೈ ಚಿತ್ರವೋ ಅಥವಾ ಆಕಾರ ವಿಶೇಷವೋ ವ್ಹಿಪ್ಪಾಯುಧವು ನಿಷ್ಪಲ ವಾಯಿತು. ಅಂತೂ ನರಸಿಂಗರಾಯನು ಅಪ್ರತಿಭನಾಗಿ ಒಂದು ಗಳಿಗೆ ನಿಂತಿದ್ದು ಒಂದು ಕತ್ತರಿ ಸಿಗರೇಟು ಸೇದಿಬಿಟ್ಟು, “This is not a K.D.” ಎಂದು ಹೇಳಿಕೊಂಡು ಹೊರಟು ಹೋದನು.
ಇಷ್ಟು ಹೊತ್ತೂ ಹುಡುಗರೂ ಅವಾಕ್‌. ಎಲ್ಲರೂ ನರ ಸಿಂಗರಾಯನನ್ನು ನೋಡಿ ಬೆಪ್ಪಾಗಿ, ಅನನ ಬಾಯಿಂದ ಹೊರ ಡುವ ಸಿಗರೇಟು ಹೊಗೆಯ ಅಂದವನ್ನು ನೋಡುತ್ತಾ, ಎಲ್ಲ ವನ್ನೂ ಮರೆತು ನಿಂತುಬಿಟ್ಟಿದ್ದರು. ದಫೇದಾರನ ಬೆನ್ನು ಕಂಡ ಕೂಡಲೆ ಹುಚ್ಚನು ಮತ್ತೆ ನಗುತ್ತಾ ತನ್ನ ಹಾಡನ್ನು ಹಾಡಿದನು. ಆದರೆ ಭಕ್ತಕದಂಬನವೀಸಲ್ಲ ತಮ್ಮ ಅನುಮೋದನವನ್ನು ಸಂಪೂ  ರ್ಣವಾಗಿ ತೋರಿಸಲಿಲ್ಲ ಕೂಡಲೇ ಹುಚ್ಚನು ದೊಡ್ಡದಾಗಿ ಅಳುತ್ತಾ ಮುಂದಿ ಹೊರಟನು. ಅವನ ಹಾಡು ವಿಚಿತ್ರ ವಾಗಿದ್ದಿತು.
“ನನ್ನಂಥಮಂದಿಯ | ನಡುವಿದ್ದುನೋಡುವೆ||
 ನನ್ನ ಕೇಳುವರಿಲ್ಲ | ನಾನೊಬ್ಬರ ಕೇಳುವುದಿಲ್ಲ||ಅಯ್ಯೋ||
೨. ಅಳುವಿನ ನಡುವೊಮ್ಮೆ ನಗುವಿನಬೆಳಕು |
 ಕತ್ತಲನಡುವೊಮ್ಮೆ ಹಣತೆಯ ಬೆಳಕು ||ಅಯ್ಯೋ||
೩. ಹಚ್ಚನೆ ಹಸುರನು ಬೆಳ್ಳನೆಬಸವನು |
 ನುಣ್ಣಗೆ ತಿಂದಿದೊ ಸಣ್ಣಗೆತೂಗುವನು ||ಅಯ್ಯೋ||
೪. ಅಳದಿರೆತಿಳಿಯದು ನಗುವಿನನಲವು
 ಅದಕಾಗಿ ಅಳುವುದೆ ಕೆಲಸವು ಬೆಳಗಿಂದ ಮೊದಲಾಗಿ ||ಅಯ್ಯೋ||
೫. ಬಣ್ಣನೆ ಸೀರೆಯುಟ್ಟ ಚೆಂದುಳ್ಳ ಚೆಲುವೆಯ
 ಹಣ್ಣಾದ ಕಿತ್ತಲೆ ಬಣ್ಣದ ಮುದ್ದಿನ ನುಣ್ಣಿನ
 ಕೆನ್ನೆಯ ನೊಮ್ಮೆಯು ಮುದ್ದಿಸಲಿಲ್ಲವಯ್ಯೋ ||
  —
ದ್ವಿತೀಯ ಪರಿಚ್ಛೇದ
ಹುಚ್ಚನ ಹಾಡು ಹೃದಯ ವಿದ್ರಾವಕವಾಗಿದ್ದಿತು.
ಹುಚ್ಚನು ಮುಂದುಮುಂದಕ್ಕೆ ಹೋದನು. ಅಲ್ಲಿ ಒಂದು ಛತ್ರ. ಆ ಛತ್ರದ ಬಾಗಿಲಲ್ಲಿ ನಿಂತು, ಹುಚ್ಚನು ತನ್ನ ಅನು ಯಾಯಿಗಳಲ್ಲಿ ಒಬ್ಬನನ್ನು ಕರೆದು “” ಆಶ್ರಮ ಯಾರದೊ? ಇಲ್ಲಿ ರುವವರು ಯಾರೋ? ಎಂದನು. ದಫೆದಾರನ ದರ್ಶನ ದಿಂದುಂಟಾದ ಭೀತಿಯು ತಪ್ಪಿದ್ದ ಹುಡುಗರಲ್ಲೊಬ್ಬನು ” ಇಲ್ಲಿ ಯಾರು ಇರೋದು? ಗೊತ್ತಿಲ್ಲವೆ? ಛತ್ರದ ಪಾರುಪತ್ತೆಗಾರ್ರು ವೆಂಕಟಿರಮುಣಯ್ಯನವರು. ಅವರ ಮಗಳು ಸುಂದರಮ್ಮ.” ಎಂದರು. ಆಗ ಆ ಹುಡುಗರ ನಡುವೆ ತಿಳಿದವನೊಬ್ಬನಿದ್ದಿದ್ದನು.  ಆ ಕೂಡಲೆ ಆ ಹುಚ್ಚನ ಮುಖದಲ್ಲಿ ವ್ಯತ್ಯಾಸವನ್ನು ಚನ್ನಾ ಗಿಯೂ ಕಾಣಬಹುದಾಗಿದ್ದಿತು.
ಹುಚ್ಚನು ಅರ್ಥ ನಗುತ್ತ, ಅರ್ಧ ಅಳುತ್ತಾ ತನ್ನ ಹಾಡನ್ನು ಹೇಳತೊಡಗಿದನು.
“ಅಳುತಳುತ ಹೋದರೆ ಯೇನಾಯ್ತು ! |
 ನಗುವಿನ ನಡುವಿದ್ದರೇನಾಯ್ತು ! ||
 ನಕ್ಕು ಅಳಬೇಕು! |  ಅತ್ತುನಗದೇಕು” ||ಅಯ್ಯೋ ॥
ಎಂದು ಹಾಡಿದನು. ಹುಚ್ಚನ ಕಂಠವು ಸ್ವಭಾವವಾಗಿ ಸರಳವಾದುದು, ಆದರೂ ಈಗ ಸ್ವಲ್ಪ ವರಟಾಗಿದ್ದಿತು. ಹಾಗೆ ವರಟಾಗಿಯೇ ಹಾಡು ಹೇಳುತ್ತಾ ಛತ್ರದೊಳ ನುಗ್ಗಿದನು. ಹುಚ್ಚನ ಹಿಂದೆ ಬಂದ ಹುಡುಗರ ಗದ್ದಲವು ಅಲ್ಲಿದ್ದವರನ್ನು ಈಚೆಗೆ ಬರಮಾಡಿತು. ಎಲ್ಲರೂ ಬಂದರೂ, ಒಬ್ಬಳು ಸುಮಾರು ೧೬ ವರ್ಷದ ಹುಡುಗಿಯೊಬ್ಬಳು ಮಾತ್ರ ಒಂದು ಕಿರುಮನೆಯ ಬಾಗಿ ಲನ್ನು ಅರ್ಧಸರಿದ್ಕು, ಹೊಸಲ ಮೇಲೆಯೇ ನೋಡುತ್ತ ನಿಂತಿ ದ್ದಳು, ಹುಚ್ಚನು ವಿಕಟಿವಾಗಿ ನಗುತ್ತಾ, ಸುತ್ತಲೂ ನೋಡಿ ಎಲ್ಲರನ್ನೂ ಬಿಟ್ಟು ನೇರನಾಗಿ ಆ ಹುಡುಗಿಯ ಬಳಿಗೆ ಹೋಗಿ. ನಿಂತನು.
ಹುಚ್ಚನಿಗೆ ಕತ್ತು ಬಿಗಿದುಕೊಂಡು ಮಾತೇ ಹೊರಡಲಿಲ್ಲ- ನೋಡಿದರೆ ಕಣ್ಣಲ್ಲಿ ಎರಡು ತೊಟ್ಟು ನೀರೂ ಇದ್ದಂತಿದ್ದಿತು. ಅಂತೂ ಬಹು ಪ್ರಯಾಸದಿಂದ, ಹೊರಡದ ಶಬ್ದವನ್ನು ಹೊರಡಿಸಿ ” ನನಗೆ ಹಸಿವು, ಅನ್ನ ಕೊಟ್ಟರೆ ಹಾಡು ಹೇಳುತ್ತೇನೆ ” ಎಂದನ್ನು ಹುಡುಗಿಯೂ ಆ ಶಬ್ಧವನ್ನು ಕೇಳಿ ನೆಟ್ಟ ನೋಟದಿಂದ ಹುಚ್ಚ ನನ್ನು ನೊಡುತ್ತಾ ನಿಂತುಬಿಟ್ಟಳು. ಕಾಲನ್ನು ಕೀಲಿಸಿದಂತಾಗಿ, ಮುಂದೆ ಹೋಗಲಾರದೆ ನಿಂತಿರಲು, ಹುಚ್ಚನು ಮತ್ತೆ ಹಾಡನ್ನೆತ್ತಿದನು. ಈಗಿನ ಹಾಡು ಹಿಂದಿನಂತೆ ವಿಕಟಸ್ವರದಲ್ಲಿರಲಿಲ್ಲ. ಸಣ್ಣ ಧ್ವನಿಯಲ್ಲಿ ಮರ್ಮಾಂತಿಕವಾದ ವೇದನೆಯಿಂದ ಕೂಡಿದ್ದಿತು.
ಅಳುನಿನ ನಡುವೊಮ್ಮೆ ನಗುವಿನ ಬೆಳಕು |
ಕತ್ತಲೆ ನಡುವೊಮ್ಮೆ ಹಣತೆಯ ಬೆಳಕು ||ಅಯ್ಯೋ||
ಹುಡುಗಿಯ ಯೋಚನೆಯು ತೀರಿತು. ಆಗಿಯುತ್ತಿದ್ದ ಅಡಕೆಲೆಯನ್ನು ಹಾಗೆಯೇ ದವಡೆಯಲ್ಲಿಟ್ಟು ಕೊಂಡು, ಬಾಗಿ ಲನ್ನು ಹೊರಗೆಳೆದು ಕೊಂಡು ಹೊರಟು ಹೋದಳು. ಅವಳ ನಡಗೆಯನ್ನು ನೋಡಿದರ ತನಗೆ ಬೇಕಾದವರು ಯಾರೋ ತನ್ನನ್ನು ನೋಡುತ್ತಿರುವರೆಂಬ ನಂಬುಗೆಯಿಂದ ನಡೆವಂತಿದ್ದಿತು. ನಡೆಗೆಯಲ್ಲಿ ಚಾಂಚಲ್ಯವಿಲ್ಲ. ಸ್ಥೈರ್ಯವಿದೆ. ಹೋಗಲಿಷ್ಟವಿಲ್ಲದೆ ಇಲ್ಲ ಆದರೆ ಜಾಗ್ರತೆಯ ನಡೆಯಲ್ಲ ತನಗಿಷ್ಟವಿರುವಾಗ ಅರೆ ನಿದ್ದೆಯಲ್ಲಿ ತೂಗಾಡದೆ ನಡೆವ ನಡೆ ಅಂತೂ ಒಟ್ಟಿನಲ್ಲಿ ಹುಡು ಗಿಯ ಸರ್ವಾಂಗವೂ ಗಾಂಭೀರ್ಯವನ್ನು ತೋರಿಸುತಿದ್ದಿತು. ಆದರೆ ಅದು ಸ್ವಾಭಾವಿಕವಾದುದುಲ್ಲ; ತನ್ನ ಹೈದಯದ ಭಾವ  ವನ್ನು ಹೊರಗೆ ಬಿಟ್ಟು ಕೊಡಲಾರದ ಲೋಭದಂತಹ ಗಾಂ ಭೀರ್ಯ.
ಸ್ವಲ್ಪ ಹೊತ್ತಿನೊಳಗೆ ಹುಡುಗಿಯು ಬಂದಳು. ಮೊಸ ರನ್ನವನ್ನು ಕಲೆಸಿ, ಅದರ ಮೇಲೆ ಒಂದು ಚೂರು ಉಪ್ಪಿನಕಾಯಿ ಯನ್ಸಿಟ್ಟು ತಂದಿದ್ದಾಳೆ. ಕಣ್ಣಿನ ಕೊನೆಯ ಒಂದು ತೊಟ್ಟು ನೀರು ಹಾಗೆಯೇ ನಿಂತಿದೆ. ಬಿಗಿದ ಕತ್ತಿನಿಂದ ಉಗುಳು ನುಂಗಿ ಕೊಳ್ಳುತ್ತಾ “”ಎಲ್ಲಿ ತಿನ್ನುವೆ?” ಎಂದು ಕೇಳಿದಳು. ಹುಡುಗಿಯು ನಡುವಿಗೆ ಬಿಗಿದುಕೊಂಡಿರುವ ಸೆರಗೂ, ಅವಳ ಮುಖಮುದ್ರೆಯೂ ಈಷದ್ದುಃಖದ್ಯೋತಕವಾದ ಅವಳ ನೋಟವೂ ಹುಚ್ಚನನ್ನು ಹಗ್ಗ ದಿಂದ ಕಟ್ಟಿದಂತೆ ಮಾಡಿಬಿಟ್ಟವು. ಇದುವರೆಗೂ ಮುಖದ ಮೇಲಿ ರದ ಒಂದು ಭಾವವು ಬಂದು, ” ಮೂರು ದಿನದಿಂದ ಅನ್ನವಿಲ್ಲ ಈಗ ಸಿಕ್ಕಿತು ಎಲ್ಲಾದರೂ ತಿನ್ನೋದು.” ಎಂದು ಅನ್ನವನ್ನು ಈಸಿಕೊಂಡನು ಎರಡು ಕೈಗಳಲ್ಲಿ ಅದನ್ನು ಹಿಡಿದುಕೊಂಡು ಬಾಯಿಂದ ಸ್ವಲ್ಪ ಸವಿದು “ಆಹಾ! ಸುಂದರ! ಸುಂದರ! ಬಹು ಸೊಗಸಾಗಿದೆ. ನಿನ್ನ ಹಾಗೆ ಇದೆ” ಎಂದು ವಿಕಟವಾಗಿ ನಕ್ಕು ಬಿಟ್ಟು ಕೂಡಲೆ ಕುಳಿತುಕೊಂಡು ದೊಡ್ಡದಾಗಿ ಬಿಕ್ಕಿಬಿಕ್ಕಿ ಅತ್ತು ಬಿಟ್ಟನು. ಕೊನೆಗೆ (ಆ ಹುಡುಗಿಯ ಮುಖವನ್ನು ವಕ್ರವಾಗಿ ವಿಚಿತ್ರವಾದ ದೃಷ್ಟಿಯಿಂದ ನೋಡುತ್ತಾ ಆ ಅನ್ನವನ್ನು ಮತ್ತೊಮ್ಮೆ ಸವಿಯುತ್ತಾ ಆ! ಬಲು ಸುಂದರ! ಅನ್ನವನ್ನು ಐದು ಘಂಟಿಗೆ ಕೆರೆಯ ಹತ್ತಿರ ನಿನ್ನ ಹೆಸರು ಹೇಳಿಕೊಂಡು ತಿನ್ನು ವೆನು” ಎಂದು ಮೇಲಕ್ಕೆದ್ದನು.
ಹತ್ತಿರಿದ್ದವರಲ್ಲಿ ಯಾರೊ “ನಿತ್ಯ ಅನ್ನ ಕೊಡುತ್ತಾಳೆ. ಅವಳನ್ನು ಮದುವೆಮಾಡಿಕೊ. ? ಎಂದರು. ಹುಚ್ಚನು ಅದಕ್ಕೆ ಅಳುತ್ತಾ “ನಾನೇ ಹೆಂಡತಿ ಅವಳೇ ಮಾಡಿಕೊಳ್ಳಲಿ” ಎಂದನು, ಅರ್ಥವಿಲ್ಲದ ಮಾತೂ ಹುಡುಗಿಗೆ ಅರ್ಥವಾಗುವಂತೆ ಕಂಡಿತು.  ಅವಳು ಅಲ್ಲಿ ನಿಲ್ಲದೆ ಹೊರಟು ಹೋದಳು. ಬಾಗಿಲು ದಪ್ಪಸದ್ದಿ ನೊಡನೆ ಮುಚ್ಚಿಕೊಂಡಿತು. ಯಾರಾದರೂ ಬಾಗಿಲ ಕಿಂಡಿ ಯಿಂದ ನೋಡಿದ್ದರೆ ಹುಡುಗಿಯು ಮೊಗವಡಿಯಾಗಿ ಹಾಸಿಗೆಯ ಮೇಲೆ ಬಿದ್ದುಕೊಂಡು ಅಳುತ್ತಿದ್ದುದನ್ನು ನೋಡಬಹುದಾಗಿದ್ದಿತು.
     —
ತೃತೀಯ ಪರಿಚ್ಛೇಧ
ಸಾಯಂಕಾಲ ನಾಲ್ಕುಗಂಟೆ. ಹುಚ್ಚನು ಎಂದಿನಂತೆ ಹಾಡುವುದಿಲ್ಲ. ಸುಮ್ಮನೆ ಕುಳಿತಿದ್ದವನು ಇದ್ದಕ್ಕಿದ್ದ ಹಾಗೆಯೇ ಸಣ್ಣನಗು ನಕ್ಕು, ಹಾಗೆಯೇ ನಿಟ್ಟುಸಿರು ಬಿಟ್ಟು ಕುಳ್ಳಿರುವನು. ಅವನ ಹಿಂದಿನ ಚರ್ಯೆಯಿಂದ ಹುಚ್ಚನೆಂದು ಬಂದು ಅವನನ್ನು ಮುತ್ತಿದ್ದ ಹುಡುಗರು ಇಂದು ಅವರೇನುಮಾಡಿದರೊ ಸುಮ್ಮನಿ ರುವುದನ್ನು ಕ೦ಡು ಒಬ್ಬೊಬ್ಬರಾಗಿ ಹೊರಟುಹೋದರು. ಹುಚ್ಚನು ಕುಳಿತಿದ್ದ ಹುಣಸೇಮರವು ತಾಳಿಂದ ತುದಿಯವರೆಗೂ ಹೂ ಬಿಟ್ಟಿದ್ದಿತು. ಒಂದೊಂದು ಸಲ ಗಾಳಿಯು ಬಂದಾಗಲೂ ಆ ಮರವು ಸಣ್ಣಗೆ ಪ್ರಷ್ಪವೃಷ್ಟಿಯನ್ನು ಮಾಡುವುದು, ನೆರಳು ಹುಚ್ಚ ನಿದ್ದ ಸ್ಥಳದಿಂದ ಹಿಂದಕ್ಕೆ ಹೊರಟುಹೋಗಿದೆ. ಬಿಸಿಲಿಗೆ ಸಿಕ್ಕಿ  ಮೈಯ್ಯಲ್ಲಿ ಬೆವರು ಧಾರಾಳವಾಗಿ ಸೋರುತ್ತಿದೆ. ಅದರೂ ಹುಚ್ಛನಿಗೆ ಮೈ ಮೋಲೆ ಪ್ರಜ್ಞೆಯಿಲ್ಲ. ಅನ್ನದಗಂಟು ಮಗ್ಗುಲ ಲ್ಲಿದೆ. ಅವನಿಗೆ ನಿದ್ರೆಯಿಲ್ಲ. ಕಣ್ಣು ತೆರಿದಿದೆ. ಮೈಕವಿಲ್ಲ. ಚನ್ನಾಗಿ ಎಚ್ಚರವಿದ್ದು ರೆಪ್ಪೆ ಬಡಿಯುತ್ತಿದ್ದಾನೆ. ಆದರೂ ಹೊರ ಗಿನ ಜ್ಞಾನವಿಲ್ಲ.
ಇದ್ದ ಹಾಗೆಯೇ ಒಂದು ಕೆಂಜಗವು ಮೇಲಿಂದ ಗಾಳಿಗುದುರಿ ಹುಚ್ಚನೆಂಬ ಅಭಿಮಾನವಿಲ್ಲದೆ ಬಲವಾಗಿ ಕಚ್ಚಿಬಿಟ್ಟಿತು. ಹುಚ್ಚನು ಭಾವನಾಶರಂಗಿಣಿಯಲ್ಲಿ ಈಜುತ್ತಿದ್ದವನು ಈಚೆಗೆ ಬರಬೇಕಾ ಯಿತು. ಬಂದು ನೋಡಿದರೆ ಆಗಲೇ ೫ ಗಂಟೆಯಾಗಿರಬಹುದು. ಬಿಂಬವು ಪಶ್ಚಿಮ ಕ್ಷಿತಿಜದ ಹತ್ತಿರ ಹತ್ತಿರ ಬಂದು ಸೂರ್ಯನ ಪ್ರತಾಪನು ಕುಗ್ಗಿದೆ. ಬಿಂಬವನ್ನು ಸ್ವಲ್ಪ ಕಷ್ಟ ಪಟ್ಟರೆ ಕಣ್ಣಿನಿಂದಲೇ ನೋಡಬಹುದು. ಆಗಲೇ ಕೆಂಬಣ್ಣವು ಹುಟ್ಟಿ ಪಶ್ಚಿಮ ದಿಗಂತವನ್ನು ವ್ಯಾಪಿಸುತ್ತಿದೆ. ಸಂಧ್ಯಾ ಸೂರ್ಯನ ಕಿರಣರಾಶಿಯು ಮೇಘ ಮಂಡಲದ ಮೇಲೆ ವಿಚಿತ್ರವಾದ ಬಣ್ಣಗ ಳಿಂದ ಚಿತ್ರಿಸುತ್ತಿದೆ. ಸುತ್ತಲೂ ಮರಗಳೆಲ್ಲ ಚಿನ್ನದ ಮುಲಾಮು ಆದಂತೆ ಶೋಭಿಸುತ್ತಿವೆ. ” ಇದಿಷ್ಟೂ ನೋಡದೆ ಕುಳಿತಿದ್ದ ತಾನು ಹುಚ್ಚನಲ್ಲದೆ ಮತ್ತೇನು?” ಎಂದುಕೊಂಡು ಹುಚ್ಚನಲ್ಲಿಂ ದೆದು ಕೆರೆಯ ಕಡೆಗೆ ಹೋದನು, ಇವನಲ್ಲಿಗೆ ಹೋಗುವುದ ರೊಳಗಾಗಿ ಊರಿನ ಹೆಂಗಸರು ಕೆರೆಯಿಂದ ಹಿಂತಿರುಗಿದ್ದುದನ್ನು ಕಂಡು ಹುಚ್ಛನಿಗೆ ದಿಗಿಲಾಯ್ತು. ಅವಳೂ ಬಂದು ಹೊರಟು ಹೋಗಿದ್ದರೆ ?,
ಹುಚ್ಚನು ಹುಚ್ಚಾಗಿ ಕಾಣಿಸಿಕೊಳ್ಳುವುದೂ ಬೇಕಾಗಿದ್ದಿತು.. ಹೆಂಗುಸರೆಲ್ಲರೂ ಹೊತ್ತಿರುವ ನೀರಿನ ಕೊಡದ ಭಾರವನ್ನೂ ಲಕ್ಷಿ ಸದೆ ತನ್ನನ್ನು ನೋಡಲು ನಿಂತುಕೊಂಡರೆಂದು ಕಂಡು, ಹುಚ್ಚನು ಒಂದು ದೊಡ್ಡ ಕಲ್ಲು ತೆಗೆದುಕೊಂಡು ವಿಕಾರವಾಗಿ ಕೂಗಿಕೊ ಕೊಳ್ಳುತ್ತ, ದಾಪುಗಾಲು ಹಾಕಿಕೊಂಡು ನಡೆಯಲು ಮೊದಲು ಮಾಡಿದನು. ಕೂಡಲೇ ಹೆಂಗಸರು ಏನೋ ಹೊಸ ವಿಪತ್ತು ಎಂದು ಹೇಳದೆ ಕೇಳಗೆ ಹೊರಟುಹೋದರು. ತನ್ನ ಉಪಾಯಕ್ಕೆ ತಾನೇ ನಗುತ್ತಾ ಹುಚ್ಚನು ಕೆರೆಗೆ ಹೋದನು.
ಸಾಯಂಕಾಲ ೬ ಗಂಟೆಯಾಗಿ ಹೋಗಿದೆ. ಹುಡುಗಿಯು ಬರುವಳೆಂಬ ನಂಬಿಕೆಯು ಹುಚ್ಚನನ್ನು ಅಲ್ಲಿಯೇ ನಿಲ್ಲಿಸಿಕೊಂ ಡಿದೆ. ಹುಚ್ಚನು ಈಗ ಹುಚ್ಚಾಗಿಲ್ಲ. ಶಾಂತನಾಗಿದ್ದಾನೆ. ಇದು  ವರೆಗೂ ಮೊಗದ ಮೇಲೆ ಮಾತ್ರ ಕಾಣುತ್ತಿದ್ದ ಹುಚ್ಚು ಹೋಗಿ ಒಳಗಿನ ಕ್ಷೋಭವು ಒಡೆದು ಕಾಣುತ್ತಿದೆ. ಊರ ದಾರಿಯನ್ನೇ ಎದುರು ನೋಡುತ್ತ ಕುಳಿತಿದ್ದಾನೆ. ಒಮ್ಮೊಮ್ಮೆ ನಿರಾಶೆಯ ದರ್ಪ ದಿಂದ ಆಹತನಾದರೂ ಮತ್ತೆ, ಸಪ್ರತ್ಯಯನಾಗಿ ಕಾದು ಕುಳಿತಿ ದ್ದಾನೆ. ಸಂಜೆಯೂ ಆಯಿತು. ಸೂರ್ಯಬಿಂಬವು ಅಸ್ತ ವಾಯಿತು. ಹಕ್ಕಿಯ ಗದ್ದಲವು ತಾನೇತಾನಾಯಿತು. ಇನ್ನೂ ಹುಡುಗಿಯು ಬರಲಿಲ್ಲ.
     —
ಚತುರ್ಥ ಪರಿಚ್ಛೇದ
ಸಂಜೆಯ ಮಸಕು ಹಬ್ಬುತ್ತಾ ಬಂತು. ದೂರಕ್ಕೆ ಕಣ್ಣು ಕಾಣಿಸದೆ ಹೋಯಿತು. ಹುಚ್ಚನು ನಿರಾಶೆಯಿಂದ ಹುಚ್ಚಾಗಿ ಒದ್ದಾಡುತ್ತಾ ಇದ್ದಾನೆ. ಕೊನೆಗೆ ಮರದಡಿಯಲ್ಲಿ ಕಾಲಿನಸದ್ದು. ಸೀರೆಯ ನೆರಿಯ ನಿರಿಮುರಿ. ಯಾರೋ ಹೆಂಗಸು ಬರುವಂತಿದೆ ಅವಳೇನೋ?
ಹುಚ್ಚನ ಕಣ್ಣು ಅಂಗೈಯಗಲವಾಗಿ ನೋಡಿತು ಒಂದೇ ಸಲಕ್ಕೆ ಮೇಲೆ ಮೇಲೆ ಬರುತ್ತಿದ್ದ ಆ ಕಾವಳದಲಿ, ಎದು ರಿರುವಸ್ತ ಸ್ಥಳವನ್ನಲ್ಲಾ ಒಮ್ಮೆಗೇ ಹುಡುಕಿಬಿಟ್ಟಿತು. ಅವಳೇಯೊ ? ಅವಳೇ ಎನ್ನುವಂತಿದೆ! ಹೌದು! ಅವಳೇ! ಹುಚ್ಚನ ಹೃದಯವು ಒಟ್ಟಿಗೆದ್ದು ಬಾಯಿಗೆ ಬಂದುಬಿಟ್ಟಂತಾಗಿದೆ. ಆ ಸಾಯಂಕಾಲ ದಲ್ಲೂ ಮೈಯೆಲ್ಲಾ ಬೆವರಿ ಹೋಗಿದೆ. ಏನೋ ಆಗಿ ಸುಮ್ಮನೆ ನಿಂತುಬಿಟ್ಟಿದ್ದಾನೆ. ಹುಡುಗಿಯೂ ಹಿಂದೆ ಮುಂದೆ ನೋಡಿಕೊ ಳ್ಳುತ್ತಾ; ಕಣ್ಣೀರು ವರಿಸಿಕೊಳ್ಳುತ್ತಾ ಒಂದೊಂದು ಹೆಜ್ಜೆಯಾಗಿ ಮುಂದುವರಿಯುತ್ತಿದ್ದಾಳೆ. ಕಂಕುಳಲ್ಲಿರುವ ಬರಿಯ ಬಿಂದಿ ಗೆಯೂ ಭಾರವಾದಂತೆ ಕಾಣುತ್ತಿದೆ. ನಿಲುವುದಕ್ಕೆ ಕೈಲಾಗದು. ಮುಂದೆ ಹೋಗದಿರಲಾರಳು. ಅಂತೂ ಪರಪ್ರೇಷಿತೆಯಂತೆ, ಭೂತಾವಿಷ್ಟೆಯಂತೆ ಮುಂದುವರಿಯುತ್ತಿದ್ದಾಳೆ. ಕೊನೆಗೆ, ಇನ್ನು ಹತ್ತು ಹೆಜ್ಜೆ ಇದೆ. ಅಲ್ಲಿ ನಿಂತಿದ್ದವನನ್ನು ನೋಡಿದಳು. ತಡೆ ಯುವುದು ಅಸಾಧ್ಯವಾಗಿ ದುಃಖವು ಬಂದುಬಿಟ್ಟಿತು. ಹುಡು ಗಿಯು ದೊಡ್ಡದಾಗಿ ಅತ್ತುಬಿಟ್ಟಿಳು. ಕೈಯ್ಯ ಕೊಡವು ಬಿದ್ದು ಹೋಗಿ, ಸಮೀಪದಲ್ಲಿದ್ದ ಸೋಪಾನ ಪಂಗ್ತಿಯ ಮೇಲುರುಳಿ ಕೊಂಡು ಹೋಗಿ ಕೆರೆಗೆ ಬಿದ್ದು ಬಿಟ್ಟಿತು. ಹುಚ್ಚನೂ ಕಣ್ಣೇರು ಕರೆಯುತ್ತಿದ್ದನು. ಅವನೂ ಅದನ್ನು ನೋಡಲಿಲ್ಲ. ಅಥವಾ ನೋಡಿದರೂ ಗಮನಿಸಲಿಲ್ಲ ಮರ್ಮಾಂತಿಕವಾದ ವೇದನೆಯಿಂದ  ಅಳುತ್ತಿರುವ ಈ ಪ್ರಾಣಿಗಳು ಆ ಬಿಂದಿಗೆಯೆನ್ನ ಗಮನಿಸುವುದೂ ಉಂಟೇನು?
ಕೊನೆಗೆ ಸು೦ದರಿಯೇ ಮಾತನಾಡಿದಳು. ಇಬ್ಬರೂ ಒಬ್ಬರ ಮುಂದೆ ಒಬ್ಬರು ಕುಳಿತಿದ್ದಾರೆ. ಅತ್ತು ಅತ್ತು ಕಣ್ಣು ಕೆಂಪಗೆ ಆಗಿ ಹೋಗಿದೆ. ಮೂಗಿನಲ್ಲಿ ಸಿಂಬಳವು ಸುರಿಯುತ್ತದೆ. ಇಬ್ಬರೂ ನೀರವ. ಹೀಗಿದ್ದಾಗ ಹುಡುಗಿಯು ಮಾತನಾಡಿದಳು. ‘ರಾಮೂ! ಇದೇಕೆ ಹೀಗಾಗಿಬಿಟ್ಟೆ ? ನಿನಗಾಗಿ……..” ಹುಡುಗಿಯು ಸುಮ್ಮನಾದಳು ಮತ್ತೆ “ರಾಮೂ! ನೋಡಿ ಬಹಳ ದಿನ  ವಾಯಿತು, ನೋಡಬೇಕೆಂದು ಇದ್ದೆ. ನೋಡಿದುದಾಯಿತು. ಇದೇ ಕೊನೆ. ಇನ್ನು ಒಬ್ಬರನ್ನೊಬ್ಬರು ಮರೆತುಬಿಡೋಣ” ಎಂದಳು ರಾಮುವಿಗೆ ಮತ್ತೆ ಮಿತಿಮೀರಿದ ದುಃಖವು ಬಂದಿತು. ಹೇಗೆ ಹೇಗೋ ಸಂವರಣ ಮಾಡಿಕೊಂಡು “ಇದಕ್ಕಾಗಿಯೇ ನಾನು ನಿನ್ನನ್ನು ಹುಡುಕಿ ಬಂದುದು?” ಎಂದನು. ಹುಡುಗಿಯು ಕೂಡಲೇ ಧೀರಳಾಗಿ ಮನಸ್ಸಿನ ಆನೇಗವನ್ನು ದೂರನಿಟ್ಟು ಈಷ ತ್ಕ್ರೋಧದಿಂದ ” ತಪ್ಪು ನನ್ನದಲ್ಲ” ಎಂದು, ಹಾಗೆಯೋ ಮತ್ತೆ ಶಾಂತಳಾಗಿ ಆ ಕಳೆದುವನ್ನು ಕೆದಕಿ ಆಗಬೇಕಾದುದೇನು? ನಾವಿಬ್ಬರೂ ಲಕ್ಷಿಸಬೇಕಾದುದು ಧಮ, ನಾವಿಬ್ಬರೂ ಎದುರಿ ಗಿರುವುದರಿಂದ ಅದು ಲೋಪವಾಗಬಹುದಾದ ಸಂಭವವುಂಟು.  ಆದುದರಿಂದ ನಿಲ್ಲಬೇಡ ಹೊರಟುಹೋಗು. ನಾನೂ ಹೊಃಗುವೆನು” ಎಂದಳು. ರಾಮುವೂ ನಿರಾಶಾಹತನಾಗಿ ” ಸುಂದರ! ಹೊರಟು ಹೋಗಬೇಡ ಧರ್ಮಲೋಪವಾಗದಂತೆ ಜಾಗ್ರತರಾಗಿರೋಣ. ಒಂದು ಘಳಿಗೆ ಕುಳಿತುಕೊ. ಒಂದು ಘಳಿಗೆ ಕುಳಿತುಕೊ’` ಎಂದು ಅಂಗಲಾಚಿ ಬೇಡಿಕೊಂಡನು ಹುಡುಗಿಯ ವಿವೇಕವು ನಿಲ್ಲಲಿಲ್ಲ. ಕುಳಿತುಕೊಂಡಳು. ರಿಣಮು ಮತ್ತೆ ಹೃದಯದಲ್ಲಿ ಕಾಳ್ಕಿಚ್ಚು ಬೇಯುತ್ತಿದ್ದು, ಅಡು ವೃರ್ಥವಾಯಿತೆಂಬ ನಂಬಿಕೆಯು ಹುಟ್ಟಿ, ಕುದಿಯುತ್ತಿರುವವರಿಗೆ ಮಾತ್ರವೇ ಸಾಧ್ಯವಾದ ಒಂದು ವಿಚಿತ್ರ ದೈನ್ಯದಿಂದ ಹೇಳಿಕೊಂಡನು. “”ಸುಂದರ! ತಪ್ಪು ನನ್ನ ದೇ ಆಗಲಿ. ಆದರೂ ತಪ್ಪಿತಸ್ಥನೆಂದು ದೂರಮಾಡುವೆಯಾ? ಸುಂದರ! ನಿನ್ನ ಮನಸ್ಸು ಇತರರ ಮುಖವನ್ನು ಗಣಿಸದಷ್ಟು ನಿಷ್ಟುರವಾಯ್ತೆ? ನನ್ನನ್ನು ಕಂಡು ಇಂದಿಗೆ ಐದು ವರುಷವಾ ಯಿತು. ತಪ್ಪು ನನ್ನದೇ ಆಗಲಿ! ಒಂದು ಸಲವಾದರೂ ಈ ಪಾಪಿಯು ನಿನ್ನ ಮನಸ್ಸಿನಲ್ಲಿ ಎಡೆಯನ್ನು ಹೊಂದಿರಲಿಲ್ಲವೆ? ನೀನು ನನ್ನನ್ನು ಪ್ರೇಮಾರ್ದವಾದ ದೃಷ್ಟಿಯಿಂದ ನೋಡಿರಲಿಲ್ಲವೆ? ಅದಕ್ಕಾದರೂ ಈದಿವಸ ಮತ್ತೊಮ್ಮೆ ನನ್ನೊಡನೆ ಮಾತನಾಡು, ದೇವಿ ! ನಿನ್ನನ್ನು ಹಗಲಿರಳೂ ಧ್ಯಾನಿಸುತ್ತಿರುವುದು ಸುಳ್ಳೆಂದು ನಿನಗೆ ತೋರಿದರೆ ಈ ಹೃದಯವನ್ನು ಬಗಿದು ನೋಡು. ಅಲ್ಲಿ ನಿನ್ನ ಸುಂದರ ತಮ ಮೂರ್ತಿಯು ಪ್ರಸ್ಥಾಪಿತವಾಗಿಲ್ಲದಿದ್ದರೆ ನನ್ನನ್ನು ನಂಬಬೇಡ. ಲೋಕದಲ್ಲಿ ನಿನ್ನ ವಿನಾ ನನಗೆ ಮ ತ್ತೊಂದೂ ಇಲ್ಲ. ಸುಂದರ! ನೀನೂ ಕೈಬಿಡುನೆಯಾ? ಹಾಗಿ ದ್ದರೆ ಹೇಳು. ಇನ್ನೊಂದು ಘಳಿಗೆ ಕುಳಿತುಕೋ ನಿನ್ನನ್ನು ನೋಡುನೋಡುತ್ತಾ, ಈ ತುಂಬಿರುವ ಕೆರಯಲ್ಲಾದರೂ ಬಿದ್ದು ಪ್ರಾಣವನ್ನು ಬಿಟ್ಟು ಬಿಡುವೆನು.” ಎಂದೆದ್ದನು. ಹುಡುಗಿಯ ಮನಸ್ಸು ಸ್ವಲ್ಪ ವ್ಯತ್ಯಸ್ತವಾಯಿತು. ಕೂಡಲೇ ಎದ್ದು ನಿಂತು “ರಾಮು! ನಾಳೆಯಲ್ಲಾದರೂ ನೋಡೋಣ. ಇಂದು ಬೇಡ, ಹೊತ್ತಾಯಿತು. ನಾನು ಹೋಗುವೆನು? ಎಂದಳು ಕೂಡಲೇ ರಾಮುವು ” ನಾಳೆ ಛತ್ರದ ಮಗ್ಗುಲಲ್ಲಿರುವ ತೋಪಿನಲ್ಲಿ ಒಂದು ಗುಡಾರವಿರುವುದು, ಅಲ್ಲಿಗೆ ಬರುವೆಯಾ?” ಎಂದನು. ಸುಂದ ರಿಯು “ಆಗಲಿ. ರಾತ್ರಿ. ಹನ್ನೊಂದು ಘಂಟೆಯಮೇಲೆ ಕಾಯ್ದು ಕೊಂಡಿರು” ಎಂದು ಹೇಳಿ ಹೊರಟುಹೋದಳು. ಯುವಕನಿಗೆ ಅತೃಪ್ತಿಯಲ್ಲಿ ತೃಪ್ತಿ. ಯುವತಿಗೆ ಭೀತಿಯಲ್ಲಿ ಧೈರ್ಯ. ಆದರೂ ಯಾವುದೋ ಪ್ರಬಲದುಃಖವು ಬೇರೆ ಭಾವಗಳನ್ನೆಲ್ಲ ಮುಳುಗಿಸಿ ಬಿಟ್ಟಿದ್ದಿತು.
*****
ಮುಂದುರೆಯುವುದು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕಡಲಗರ್‍ಭ
Next post ನಿನ್ನ ನೆತ್ತಿಗೆ ಛತ್ರ ಹಿಡಿದು ಹೊರಗಿನ ಮಂದಿ

ಸಣ್ಣ ಕತೆ

  • ತ್ರಿಪಾದ

    ವಿಲಿಯಂ ಜೋನ್ಸ್ ಭಾರತದ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅವನ ಮನವನ್ನು ಕಾಡುತ್ತಿದ್ದ ಪ್ರೀತಿ ಅವನ ಹೆಂಡತಿ ಮಕ್ಕಳೊಂದಿಗೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಅವನ ಪ್ರೀತಿಯ ನಾಯಿ… Read more…

  • ಮಿಂಚು

    "ಸಾವಿತ್ರಿ, ಇದು ಏನು? ನನ್ನಾಣೆಯಾಗಿದೆ. ಹೀಗೆ ಮಾಡಬೇಡ! ಇದು ಒಳ್ಳೆಯದಲ್ಲ. ಬಿಡು, ಬಿಡು...! ನಾಲ್ಕು ಜನ ನೋಡಿದರೆ ಏನು ಅಂದಾರು?" ಅನ್ನಲಿ ಏನೇ ಅನ್ನಲಿ ನಾನು ಯಾವ… Read more…

  • ಮನೆ “ಮಗಳು” ಗರ್ಭಿಣಿಯಾದಾಗ

    ಮನೆ ಮಗಳು "ಸೋನಿ" ಉಡಿ ತುಂಬುವ ಸಮಾರಂಭ. ಬೆಳಗಾವಿ ಜಿಲ್ಲೆಯ ಸದಲಗಾ ಪಟ್ಟಣದ ಪೀರ ಗೌಡಾ ಪಾಟೀಲ ಹಾಗೂ ಅವರ ತಮ್ಮ ಮಹದೇವ ಪಾಟೀಲರಿಗೆ ಎಲ್ಲಿಲ್ಲದ ಸಂಭ್ರಮವಾಯಿತು.… Read more…

  • ಮತ್ತೆ ಬಂದ ವಸಂತ

    ಚಿತ್ರ: ಆಮಿ ಮೊದಲ ರಾತ್ರಿಯ ಉನ್ಮಾದದಲ್ಲಿದ್ದ ಮಧುವಿನ ಕಿವಿ ಹಿಂಡಿ ಅವಳಂದಳು. ‘ಮಧು, ಇಂದಿನಿಂದ ನಾವು ಗಂಡ - ಹೆಂಡತಿಯಾಗಿರುವುದು ಬೇಡ. ಬದುಕಿನ ಕೊನೆ ತನಕವೂ ಗೆಳೆಯ… Read more…

  • ದಾರಿ ಯಾವುದಯ್ಯಾ?

    ಮೂವತೈದು ವರ್‍ಷಗಳ ನಂತರ ಅಮಲ ನಿನ್ನೂರಿಗೆ ಬರುತ್ತಿದ್ದೇನೆ ಅಂತ ಫೋನ ಮಾಡಿದಾಗ ಮೃಣಾಲಿನಿಗೆ ಆಶ್ಚರ್‍ಯ ಮತ್ತು ಆತಂಕ ಕಾಡಿದವು. ಬರೋಬ್ಬರಿ ಮೂವತ್ತೈದು ವರ್ಷಗಳ ಹಿಂದೆ ವಿಶ್ವವಿದ್ಯಾಲಯದ ಕ್ಯಾಂಪಸ್… Read more…

cheap jordans|wholesale air max|wholesale jordans|wholesale jewelry|wholesale jerseys