ಕಳ್ಳರ ಕೂಟ – ೩

ಕಳ್ಳರ ಕೂಟ – ೩

ಹವಣಿಕೆ

ಪ್ರಥಮ ಪರಿಚ್ಛೇದ
ಇಂದು ಛತ್ರದ ಪಾರುಪತ್ತೇಗಾರ್ರಿಗೆ ಸ್ವಲ್ಪವೂ ಬಿಡಿತಿಯಿಲ್ಲ ಅವರಿಗೆ ಬಲುಕೆಲಸ. ಯಾರೋ ದೊಡ್ಡ ಅಧಿಕಾರಿಗಳು ಬಂದಿ ದ್ದಾರೆ. ಅವರಿಗೆ ಬೇಕಾದ ” ಸರಬರಾಯಿ” ಮಾಡಿಸಿ ಒಳ್ಳೆಯ ವನೆನ್ನಿಸಿಕೊಳ್ಳಬೇಕೆಂದು ಆಶೆ; ಸಾಲದುದಕ್ಕೆ ತನಗೆ ಅಂತರಂಗ ದಲ್ಲಿ ಒಂದು ದಿಗಿಲು. ಮೊನ್ನೆ ಆ ಪಳ್ಳಿ ಆಯ್ಯನು “ನೋಡು ತ್ತಿರು, ಇನ್ನು ಒಂದು ವಾರದೊಳಗಾಗಿ ನಿನ್ನ ಬಾಯಿಗೆ ಮಣ್ಣು ಹಾಕಿಸಿ ಬಿಡುತ್ತೇನೆ’ ಎಂದಿದ್ದನಂತೆ. ಈ ಅಧಿಕಾರಿಯು ಬಂದು. ದು ಅದಕ್ಕೇ ಏನೋ?
ಬಾಗಿಲು ಕಾಯುವ ಜವಾನರಿಬ್ಬರಿಗೂ ಬೇಕಾದ ಉಪಚಾರ: ವಾಯಿತು. ಆದರೂ ಅವರೇನೂ ಸಗ್ಗಲಿಲ್ಲ. ” ಅವರು ರಾಜ್ಯದಲ್ಲಿ ದೊಡ್ಡ ಅಧಿಕಾರಿಗಳು ಅಷ್ಟೆ.” ಹೆಚ್ಚುಮಾತು ಅವರಿಂದ ಹೊರಡ ಲಿಲ್ಲ ವೆಂಕಟರಮಣಯ್ಯನಿಗೆ ಎದೆಯಲ್ಲಿ ಅವಲಕ್ಕಿ ಕುಟ್ಟುತ್ತಿದೆ. “ಏನಾದರೂ ಆಗಲಿ; ಇವರು ಯಾರೆಂದು ತಿಳಿದರೆ ಸಾಕು” ಸಾಲ ದುದಕ್ಕೆ, ಹಾಳು, ಎಲ್ಲಿಯೋ ನೋಡಿದಂತಿದೆ. ಅದು ಬೇರೆ ಅಂಜುವವರ ಮೇಲೆ ಕಪ್ಪೆ ಯಿಟ್ವಂತೆ.
ದ್ವಿತೀಯ ಪರಿಚ್ಛೇದ
ಕೃಷ್ಣಮೂರ್ತಿಯ ವಾಯಿದೆ ಮೀರುತ್ತಾ ಬಂದಿತು. ಅವನಿಗೆ ಎಲ್ಲಿಯೂ ಹಣವು ದೊರೆಯಲಿಲ್ಲ. ಯತ್ನವಿಲ್ಲದೆ ಮಾವ ನನ್ನು ಕೇಳಿದನು. ಪೂರ್ವಾಪರಗಳನ್ನೆಲ್ಲ ತಿಳಿದ ಮಾನವನು ಹಣ ವನ್ನು ಕೊಡಲಿಲ್ಲ ಹೆಂಡತಿಯನ್ನು ಕೇಳಬೇಕೆಂದು ಅಪೇಕ್ಷೆ. ಕೇಳಲು ಥೈರ್ಯವಿಲ್ಲ ಅದರಿಂದ “ಅಯ್ಯೋ ಪಾಪ! ಅವಳ ಹತ್ತಿರ ಎಲ್ಲಿ ಬಂದಿತು?” ಎಂದುಕೊಳ್ಳವನು. ಏನಾದರೂ ಮಾಡ ಬೇಕು. ಇಲ್ಲವಾದರೆ ಯತ್ನವಿಲ್ಲ. ಏನು ಮಾಡಬೇಕೆಂಬ:ದೇ ತೋರದು.
ಕೊನೆಗೆ ಪಾಯವು ಹೊಳೆಯಿತು. ಅಂದು ಆ ಊರಿಗೆ ಒಬ್ಬ ದೊಡ್ಡ ಮನುಷ್ಯನು ಬಂದಿದಾನೆ. ಊರನವರಲ್ಲ ಅವನನ್ನು ‘ಆಫೀಸರು’ ಮಾಡಿದ್ದರೂ, ಅದರಲ್ಲಿ ಕೃಷ್ಣ ಮೂರ್ತಿಗೆ ನಂಬಿಕೆ  ಯಿಲ್ಲ. ಯಾವ ಆಫೀಸರ್ ಆದರೇನುನ.? ಯತ್ನವಿಲ್ಲ. ನಡು ನಡುವೆ ಮಾತ್ರ ಒಂದು ಸಲ ಎಲೋ ಯಾವುದೊ ಸಣ್ಣಸೊಲ್ಲು ” ಸಿಕ್ಕಿ ಬಿದ್ದರೆ? ” ಎನ್ನುವುದು. ಕೂಡಲೆ ಕೃಷ್ಣಮೂರ್ತಿಯು ಪ್ರತಿಹತ  ನಾದರೂ ” ಓ! ನಾನು ಸಿಕ್ಕಿಬೀಳುತ್ತೇನೆಯೋ? “ತ್ಸ್ ಚ್” ಎಂದು ಕೊಳ್ಳುವನು. ಕೊನೆಗೆ ಹಾಗೆ ಮಾಡಲು. ನಿಶ್ಚಯವಾಯಿತು. ಬಾಗಿಲು ಪಹರೆಯವರಿಬ್ಬರು? ಅವರಿಗೆ ಗಾಢನಿದ್ರ ಬಂದು ಬಿಟ್ಟರೆ?
  —-
ತೃತೀಯ ಪರಿಚ್ಛೇದ
ಈ ಛತ್ರದ ಕಿರುಮನೆಯ ಮೂಲೆಯೊಂದರಲ್ಲಿ ಮತ್ತೊಂದು ಪ್ರಾಣಿಯೂ ಯೋಚಿಸುತ್ತ ಕುಳಿತಿದೆ. ಎದುರಿಗೆ. ದೊಡ್ಡದಾದ ಇಂದು ಕನ್ನಡಿ. ಅದರಲ್ಲಿ ತನ್ನ ಪ್ರತಿಬಿಂಬವನ್ನೊಮ್ಮೆ ನೋಡಿ ಕೊಂಡು ತಾನು ಸುಂದರಿಯೆಂಬ ಅಹಂಕಾರಕ್ಕೆ ಒಂದು ಗಳಿಗೆ ಎಡೆ ಕೊಡುತ್ತಾಳೆ. ಮತ್ತೊಂದು ಗಳಿಗೆಯಲ್ಲಿ ಮುಖವು ವಿವರ್ಣ ವಾಗಿ ಕಣ್ಣೀರು ಬರುತ್ತದೆ, ಹೀಗೆ ವಿವಿಧ ಮನೋಭಾವನೆಗಳಿಂದ ಅಹತಪ್ರತ್ಯಾಹತವಾಗುತ್ತಿರುವ ಯ:ವತಿಯ ಕಣ್ಣಿಗೆ ಹತಾತ್ತಾಗಿ ಸಾಯಂಕಾಲದ ಸೂರ್ಯನ ಪ್ರತಿ ಬಿಂಬವು ಬಿದ್ದಿತು. ಆಗಲೇ ಐದು ಗಂಟೆಯಾಗಿ ಹೋಗಿದೆ. ಇನ್ನು ಬಹ ಕಾಲವಿಲ್ಲ. ತಾನು ಸಿದ್ದಳಾಗಬೇಕು ಬೆಳೆದು ಬಂದು ಫಲೋನ್ಮುಖವಾಗುವುದರೊ ಳಗಾಗಿ ಒಣಗಿ ಕೂೋಗಿದ್ದ ಪ್ರೇಮ ವೃಕ್ಷವಿಂದು ಪುನರುಜ್ಜೀವಿತ ವಾಗಿರಲು, ಇದುವರೆಗೂ ಪ್ರಸುಪ್ತವಾಗಿದ್ದ ಅಂತರಿಕವಾದ ಪ್ರೇಮಬಂಧವು ಇಂದು ಪ್ರಬುದ್ದವಾಗಿರಲು, ಹೃದಯವು ಹೇಳಕೇ ಳದೆ ತನಗಿಷ್ಟವಾದ ವಸ್ತುವಿನ ಬಳಿಗೆ ಹೊರಟುಹೋಗಿರಲು,  ಹೋಗದಿರುವುದೆಂತು? ಅಭಾವದಲ್ಲಿ ಬೇಡವೆಂದು ಕೃತನಿಶ್ಚಯೆ ಯಾದರೂ ವರ್ಷಾಂತರಗಳಿಂದ ಬೇಕೆಂದ ವಸ್ತುವೆದುರಿಗೆ ಬಂದು ನಿಂತರೆ ಅದನ್ನೆಂತು ತಿರಸ್ಕರಿಸುವುದು? ಅಜ್ಞಾತವಾಗಿಯೇ ಭೂಮಿಯನ್ನು ಅಗೆದು ಹಸನು ಮಾಡಿ ಗಿಡವನ್ನು ನೆಟ್ಟು ಅದು ಬೆಳೆದು ಬಂದು ಫಲೋನ್ಮುಖವಾಗಿರಲು, ಈಗ ಜ್ಞಾತವಾಗಿ ಅದನ್ನು ಕಿತ್ತು ಮೂಲೋತ್ಪಾಟನ ಮಾಡಲು ಮನಸ್ಸು ಬರುವುದೆ? ವರ್ಷಾಂ  ತರಗಳಿಂದ ಮನೋಭಿತ್ತಿಯಲ್ಲಿ ನಾನಾ ವಿಧವಾಗಿ ವರ್ಣಿವವಾಗಿ ಉಜ್ವಲವಾಗಿ ಬೆಳಗುತ್ತಿದ್ದ ಚಿತ್ರಪಟವಿಂದು ಪ್ರತ್ಯಕ್ಷವಾಗಿದೆ. ಕೊಳ್ಳುವುದೂ ಬಿಡುವುದೂ ತನ್ನ ಕೈಯ್ಯಲ್ಲಿದೆ ಏನು ಮಾಡು ವುದು?
ಆದರೂ ಮನಸ್ಸು ಹಿಂತೆಗೆಯುತ್ತದೆ. ಸುಖಕ್ಕೆ ಆಶೆಪಟ್ಟು ಕೆಟ್ಟ ಹೆಸರನ್ನು ಸಂಸಾದಿಸುವುದೆ? ಪ್ರೇಮಾಗ್ನಿಗೆ ತುತ್ತಾಗಿ ಧರ್ಮಕ್ಕೆ ಜಲಾಂಜಲಿ ಕೊಡುವುದೆ? ದೃಷ್ಟ ಫಲಕ್ಕೆ ಬೆರೆತು ಅಮೋ ಘವಾದ ಅದೃಷ್ಟ ಫಲವನ್ನು ತೊರೆಯುವುದೆ? ಯಾಕಾಗಬಾರದು? ಪ್ರಪಂಚವು ತನ್ನನ್ನು ಯಾರ ಪಾಲಿಗೆ ಬಿಟ್ಟಿರುವುದೋ ಅವನಿಗೆ ತಾನು ಬೇಕಾಗಿಲ್ಲ ಅವನಿಗೆ ಬೇಕಾಗಿರುವುದು ಕೇವಲ ಜೂಜು ತಾನು ನೋಡುವುದಕ್ಕೆ ಚೆನ್ನಾಗಿಲ್ಲದೆ ಇಲ್ಲ. ರೂಪವತಿಯಲ್ಲದಿದ್ದರೆ ಕಂಡವರೆಲ್ಲರೂ, ಮತ್ತೊಂದು ಗಳಿಗೆ ನಿಂತು ನೋಡುವರೇ? ಕಂಡ ಕಂಡವರ ಕಣ್ಣಿಗೆಲ್ಲಾ ಕಮನೀಯವಾದುದನ್ನೂ, ಕಡೆಗಾಣಿಸು ವವನ ಕೈ ಹಿಡಿದ ತನ್ನ ದೌರ್ಭಾಗ್ಯವೆಂತಹುದು? ತನಗೆ ಹಲ ವರು ಮೆಚ್ಚುವಂತೆ ಗಂಡನೊಡನೆ ಸಂಸಾರ ಮಾಡಬೇಕೆಂದು ಆಶೆ. ಅದಕ್ಕಿಂತಲೂ ಹೆಚ್ಚಾಗಿ ಹಣ್ಣಾಗದೆ ಹೋದ ಹೆಣ್ಣಿನ ಬಯಕೆ, ಸೌಂದರ್ಯದ ಪಾಶದಿಂದ ಬಿಗಿದು, ಹೃದಯದ ಅಂತರಾಂತರದ  ಸೌಹಾರ್ದ್ರದ ಸೋನೆಗರೆದು ಹೃದಯವನ್ನು ನೆನೆಯಿಸಿ ಸೋಲಿಸಿ, ತನ್ನ ಸರ್ವಸ್ವವನ್ನೂ ಸೂರೆಗೊಟ್ಟು, ಪತಿಯನ್ನು ತನ್ನವನನ್ನಾಗಿ ಮಾಡಿಕೊಂಡು, ಪ್ರೇಮವೆಂಬ ಸತ್ಫಲವನ್ನು ಹೊಂದಿ ಮನಸಾರೆ ಸಂಸಾರ ಸುಖವನ್ನು ಅನುಭವಿಸಬೇಕೆಂದಿದ್ದ ಪ್ರಯತ್ನಗಳೆಲ್ಲವೂ ವಿಫಲಗಳಾಗಿದ್ದವು. ಹೃದಯವು ವಿಫಲಿತ ಪ್ರಯತ್ನದ ಬೇಗುದಿ ಯಿಂದ ಬೆಂದ ಹೋಗಿದ್ದಿತು. ಮತ್ತೆ ಆ ಬಾಲ್ಯಸ್ನೇಹದ ಸೊದೆಯ ಸುರಿಮಳೆಯಾಗಿ, ಆಶಾತಂತುಗಳೆಲ್ಲವೂ ಪುನರುಜ್ಜೀವಿತವಾಗಿವೆ. ಸೌಖ್ಯಪಡಬೇಕೆಂಬ ಆಶೆಯ ಹಿರಿಯ ಹೊನಲಿನ ಹೊಡೆತದಲ್ಲಿ ವಿವೇಕದ ಅಡ್ಡ ಕಟ್ಟೆಯು ನಿಲ್ಲುವುದೆ? ಧರ್ಮದ ತಡಿಕೆಯು ತಡೆ ಯುವುದೆ? ಒಬ್ಬನಿಗೆ ತಾನು ಬೇಕಾಗಿಲ್ಲ; ಇದ್ದರೂ ಒಂದೆ ಹೋ ದರೂ ಒಂದೆ ಮತ್ತೊಬ್ಬನಿಗೆ ತಾನು ಸರ್ವಸ್ವ ತಾನು ಹೋದರೆ ಜಗತ್ತೇ ಹೋಯಿತೆಂದು ತಿಳಿಯುತ್ತಾನೆ. ತನ್ನನ್ನು ಕಸಕ್ಕಿಂತ ಕಡೆಯೆಂದು ನೋಡುವವನಲ್ಲಿದ್ದು ಸಾಯುವವರೆಗೂ ದುಃಖ ವನ್ನನುಭವಿಸುವುದೇ? ಅಥವಾ ತನ್ನನ್ನು ಗೊತ್ತುಗಾತಿಯನ್ನಾಗಿ ಮಾಡುವವನೊಡನೆ ಸೌಖ್ಯ ಸಾಮ್ರಾಜ್ಯವನ್ನು ಅನುಭವಿಸುವುದೆ?
ಹುಡುಗಿಯ ಮನಸ್ಸು ಭಾವನಾತರಂಗಿಣಿಯಲ್ಲಿ ಕೊಚ್ಚಿ ಹೋಯಿತು. ತಾನು ಸೌಂದರ್ಯವತಿ ಎಂಬ ಗರ್ವದಿಂದ ಕೂಡಿ, ತಿರಸ್ಕಾರವೆಂಬ ಸರ್ಪದಿಂದ ದಷ್ಟೆಯಾಗಿ, ಇಂದ್ರಿಯಸೌಖ್ಯವೆಂಬ  ವಿಷಕ್ಕೆ ಮನಸ್ಸನ್ನು ತೆತ್ತಿರಲು ಉಳಿಯುವುದುಂಟೇನು? ಹೊಡೆದು ಕೊಂಡು ಹೋಯಿತ್ತು. ಮುಂದಿನ ಯೋಚೆನೆಗಳು ತಾವೇತಾವಾಗಿ,. ಅವಳಿಗೆ ಮೈಮರೆಸಿದವು.
ಒಮ್ಮೊಮ್ಮೆ ಮಾತ್ರ ಹುಡುಗಿಯು ವಿಷಣ್ಣೆಯಾಗಿ “ಅಯ್ಯೋ! ಅನನೇ ನನ್ನ ಗಂಡನಾಗಬಾರದಾಗಿತ್ತೆ? ಅಥವಾ ನನ್ನ ಗಂಡನು ಅವನಂತೆ ಆಗಬಾರದಾಗಿತ್ತೆ?” ಎಂದುಕೊಳ್ಳುವಳು ಕೂಡಲೆ ಕಣ್ಣಿನಲ್ಲಿ ನೀರು ಬಂದುಬಿಡುವುದು. ಆದರೇನು? ಬಂಡೆಗಳು ಕೊಚ್ಚಿಹೋಗುವ ಪ್ರವಾಹದಲ್ಲಿ ಸಣ್ಣಕಲ್ಲು ನಿಲ್ಲುವುದೇ? ಆದರೂ ಒಂದು ಯೋಚನೆ. “” ಅವರು ಬಂದು ಬಿಟ್ಟರೆ ಅಥವಾ ತಿಳಿದರೆ? ಹಾದಿರಂಪು ಬೀದಿ ರಂಪು ಆಗುತ್ತದೆ. ಆದರಾಯಿತು ತಪ್ಪು ನನ್ನ ದಲ್ಲ.” —–
     —
ಚತುರ್ಥ ಪರಿಚ್ಛೇದ
ರಾಮಸ್ವಾಮಿಗೂ ಮನಸ್ವಸ್ಥತೆಯಿಲ್ಲ. ಅವನ ಸ್ಥಿತಿಯು ಪುಟಚಂಡಿನಂತೆ ಆಗಿದೆ, ಒಂದು ಸಲ ತನ್ನ ಆಶೆಯು ಸಫಲ ವಾಗುವುದೆಂದು ಸ್ವರ್ಗಕ್ಕೆ ಏರುತ್ತಾನೆ. ಮತ್ತೊಮ್ಮೆ ” ಸುಂದ ರಿಯು ಎಲ್ಲ ಹೆಂಗುಸರ ಹಾಗಲ್ಲ. ಧನಾದಿಗಳ ಅವಳ ಮನಸ್ಸನ್ನು ಸೆರೆಹಿಡಿಯಲಾರವು, ಸೌಖ್ಯವು ಅವಳನ್ನು ಚಸಲಪಡಿಸಲಾರದು. ಹೀಗಿರಲು ಮನಸೋತು ಕೆಟ್ಟ ಹೆಸರನ್ನು ಲಕ್ಷಿಸದೆ, ಹುಡು ಗಿಯು…ಅದು ಅಸಾಧ್ಯ,” ಎಂದಾಗ ಮನಸ್ಸು ಅಲ್ಲಿಯೇ ಇಳಿದು. ಹೋಗುವುದು. ಅಂತೂ ಒಂದೆಡೆಯಲ್ಲಿ ಕೂರಲು ಸಾಧ್ಯವಿಲ್ಲ. ಕೆರೆ, ಕಟ್ಟೆ, ತೋಪು, ಕೋಡಿ, ಹಳ್ಳ, ಎಲ್ಲವೂ ತಿರುಗಿ ಆಯಿತು. ಆದರೂ ‘ಎಲ್ಲಿ ಹೋಗಿದ್ದೆ’ ಎಂದು ಕೇಳಿದರೆ ಮಾತ್ರ ಅವನು ಹೇಳ ಲಾರನು ಅಂತರ್ದೃಷ್ಟಿಯಾಗಿರುವಾಗ, ಬಾಹ್ಯವಸ್ತುಗಳು ಕಣ್ಣಿಗೆ ಬೀಳುವವೇನು? ಮನಸ್ಸಿನಲ್ಲಿ ಕರುಮಾಡ ಕಟ್ಟುತ್ತಿರುವಾಗ, ಇನ್ನೊಬ್ಬರು ಕಟ್ಟಿದ ಆರಮನೆಯಾದರೂ ಕಣ್ಣಿಗೆ ಬೀಳುವುದೇನು?
ಒಮ್ಮೊಮ್ಮೆ ” ಇರಲಿ. ಅವಳು ಬರಲಿ” ಎನ್ನುವನು. ಮತ್ತೊಮ್ಮೆ ಬರುವುದೇ ಅಸಂಭವವೆಂದು ತೋರುವುದು. ಒಮ್ಮೊಮ್ಮೆ ” ತಪ್ಪಿಸಿಕೊಂಡು ಹೋಗಲೆಂದು ಬರುವೆನೆಂದು ಸುಳ್ಳಾಡಿರಬಹುದೆ?” ಎನ್ನುವನು. ಆದರೆ ಅವಳು ಅಂಥವಳಲ್ಲ ಮೊದಲಿನಿಂದಲೂ ಸುಳ್ಳಾಡಿದವಳಲ್ಲ ಅವಳು ಎಂಟು ವರ್ಷದ ಹುಡುಗಿಯಾಗಿದ್ದಾಗ, ನೀರಿಗೆ ಬಂದಿದಳು. ರಾಮುವೂ ಅವಳೂ ಆಟವಾಡುತ್ತ ಆಡುತ್ತಾ ಬಿಂದಿಗೆಯು ಭಾವಿಗೆ ಬಿದ್ದು ಹೋಯಿತು. ತಾಯಿಯು ಬಯ್ಯುವಳೆಂದು ಚೆನ್ನಾಗಿಯೂ ಗೊತ್ತು. ಆದರೂ ಅವಳು ಸಳ್ಳು ಹೇಳಲಿಲ್ಲ. ರಾಮೂವಿಗೆ ಸುಳ್ಳೋ ಪಳ್ಳೋ, ಸುಂದರಿಗೆ ಏಟು ಬೀಳಕೂಡದು. ತಾನು ಎಷ್ಟು ಪ್ರಾರ್ಥಿಸಿದರೂ ಅವಳು ಸುಳ್ಳಾಡುವುದಿಲ್ಲವೆಂದಾಗಲೂ, ತಾನೂ ಅವನ ಹಿಂದೆಯ ಹೋಗಿ ಅವರಮ್ಮನಿಗೆ ತಾನು ಮಾಡಿದೆನೆಂದು ಹೇಳಿಕೊಂಡು ಬಯ್ಗಳನ್ನು ತಪ್ಪಿಸಿದನು. ಆಂತಹ ಸಣ್ಣಸಣ್ಣ ವಿಚಾರಗಳ ಲಿಯೂ ಸುಳ್ಳು ಹೇಳುತ್ತಿರಲಿಲ್ಲ ಈಗ?
ನಡುನಡುವೆ ಒಮ್ಮೊಮ್ಮೆ ” ಅಯ್ಯೊ! ನಿನ್ನೆ ಅವಳು ಅಷ್ಟು  ದುಃಖ ಪಡುತ್ತಿದ್ದಾಗ ಒಮ್ಮೆ ಯಾದರೂ ಅವಳ ಕಣ್ಣೀರು ಒರೆಸದೆ ಹೋದೆನಲ್ಲ! ಎಂದು ತನ್ನನ್ನು ತಾನೆ ಬಯ್ದುಕೊಳ್ಳುತ್ತಿದ್ದನು. ಮತ್ತೊಮ್ಮೆ ತಾನು ಹಿಡಿದಿರುವ ಆಶಾತಂತುವು ಕಲ್ಪವೃಕ್ಷದ ಬೇರೆಂದೂ, ಅದನ್ನು ಹಿಡಿದು ತಾನು ಸ್ವರ್ಗವನ್ನೇರುವೆನೆಂದೂ, ಭಾವಿಸಿಕೊಳ್ಳುವನು. ಮನಸ್ಸಿನ ಎಣಿಕೆಗೆ ಯಾರ ತಡೆಯಾದರೂ ಉಂಟೆ? ಅವಳು ಬಂದಾಗ ಆ ಮಾತು ಅವಳಾಡಿದರೆ ತಾನು ಈ ಮಾತು ಆಡುವೆನೆಂದುಕೊಳ್ಳುವುದರಲ್ಲಿಯೇ ಸೂರ್ಯನು ಪೂರ್ವದಿಂದ ಪಶ್ಚಿಮಕ್ಕೆ ಹೋಗಿ ಮುಳುಗಿದನು.
ಆದರಿನ್ನೊಂದು ಹೆದರಿಕೆ. ಅವಳು ಗಂಡನಿಗೆ ಮೋಸಮಾಡಿ ಬರಬೇಕು ಅದು ಸಾಧ್ಯವೇ? ರಾಮುವಿಗೆ ಮುಖವು ವಿವರ್ಣ ಹೋಯಿತು. ಆಕೆಯು ನಿರಾಕೆಯಾಗಿ ಹೋಯಿತು. ಅಲ್ಲಿಂದ ಹೊರಟಿ ಹೊಗಬೇಕೆನ್ನಿಸಿತು. ಆದರೂ ನೋಡಿಹೋಗೋಣ ವೆಂದುಕೊಂಡನು. “ಅಗಲೆ ಏಳು ಗಂಟೆಯಾಗಿದೆ. ಇನ್ನು ನಾಲ್ಕು ಗಂಟೆಯ ಹೊತ್ತು ತಾನೆೇ’
*****
ಮುಂದುರೆಯುವುದು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅಪ್ಸರೆಯ ಅಳಲು
Next post ಕಪ್ಪು ಚೆಲುವೆಂದು ಗಣಿಸಿರಲಿಲ್ಲ ಹಿಂದಕ್ಕೆ

ಸಣ್ಣ ಕತೆ

  • ಮೌನವು ಮುದ್ದಿಗಾಗಿ!

    ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…

  • ಬಸವನ ನಾಡಿನಲಿ

    ೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…

  • ಮಿಂಚಿನ ದೀಪ

    ಸಂಜೆ ಮೊಗ್ಗೂಡೆದಿತ್ತು. ಆಕಾಶದ ತುಂಬೆಲ್ಲಾ ಬಣ್ಣದ ಬಾಟಲಿ ಉರುಳಿಸಿದ ಹಾಗೆ ಕೆಂಪು, ನೀಲಿ ಬಣ್ಣ ಚೆಲ್ಲಿ, ಚಳಿಗಾಲದ ಸಂಜೆಯ ಮಬ್ಬಿನ ತೆಳುಪರದೆಯ ‘ಓಡಿನಿ’ ಎಲ್ಲವನ್ನೂ ಸುತ್ತುವಂತೆ ಪಸರಿಸಿಕೊಂಡಿತ್ತು.… Read more…

  • ಸಾವು

    ಈ ಗೊಂಡಾರಣ್ಯದಲ್ಲಿ ನಾನು ಬಂದುದಾದರೂ ಹೇಗೆ? ಅಗೋ ಅಲ್ಲಿ ಲಾಸ್ಯವಾಗಿ ಬಳುಕುತ್ತಾ ನಲಿಯುತ್ತಾ ತುಂತುರು ತುಂತುರಾಗಿ ಮುತ್ತಿನ ಹನಿಗಳನ್ನು ಪ್ರೋಕ್ಷಿಸುತ್ತಿರುವ ಝರಿಯ ರಮಣೀಯತೆಯನ್ನೂ ಮೀರುವಂತಹ ಭಯಾನಕತೆ ವ್ಯಾಪಿಸಿದೆಯಲ್ಲಾ… Read more…

  • ರಾಮಿ

    ‘ಸಲಾಮ್ರಿ’ ರೈಲಿನ ಹೊತ್ತಾಗಿದೆ. ವೆಂಕಟೇಶನು ಒಂದೇಸವನೆ ತನ್ನ ಕೈಯಲ್ಲಿಯ ಗಡಿಯಾರವನ್ನು ನೋಡುತ್ತಿದ್ದಾನೆ. ‘ಸಲಾಮ್ರೀಽ ಏಕ ಪೈಸಾ.’ ಆಗ ಮತ್ತೆ ಒದರಿದಳು. ಟಾಂಗಾದ ತುದಿ ಹಿಡಿದು ಕೊಂಡು ಓಡ… Read more…

cheap jordans|wholesale air max|wholesale jordans|wholesale jewelry|wholesale jerseys