ಅಪ್ಸರೆಯ ಅಳಲು

ಚಿತ್ತ ಚಿತ್ತಾರದ ಭಾವಭಂಗಿಯಲಿ
ಸೆಳವಿಗೆದುರಾಗಿ ಬಿಂಕಬಿನ್ನಾಣಗಳಲಿ ಸುಳಿದಾಡಿ
ಮೇಲೇರಿ ಇಳಿಜಾರಕೆ ತೇಲಿಬಿದ್ದು
ಒಡಲಾಳಸೇರಿ ಕ್ಷಣಾರ್ಧದಲಿ ನೆಗೆದು
ತನ್ನೊಳಗೇ ಸ್ವರ್‍ಗ ಇಳಿಸಿಕೊಂಡು
ಕಣ್ಮನ ಸೆಳೆವ ಅಪ್ಸರೆ

ಹಂಗಿನರಮನೆಯ ಅಕ್ವೇರಿಯಂನೊಳಗೆ ಹೊರಳಾಟ
ಶುದ್ಧನೀರು ಗಾಳಿ ಉದುರಿಸಿದ ಪುಡಿಯೂಟ
ಸಹಜ ತೇಲುವಿಕೆಗೆ ಬಿಗಿಜಡತ್ವ
ಚೆಲ್ಲಾಟ ಚಿನ್ನಾಟಕೆ ಬೇಲಿ

ಪಿಳಿಪಿಳಿ ಕಣ್ಣುಬಿಟ್ಟದ್ದೂ ಕಣ್ಣೀರಿಟ್ಟದ್ದೂ
ನೀರೊಳಗೆ ಇಂಗಿಹೋಗಿ ಕೇಳಿಸದಂತೆ
ಕಾಣಿಸದಂತೆ ಅದೃಶ್ಯ
ಮಾತುಮೌನ ನಿರ್ಲಿಪ್ತ ಆವರಣ

ಬರುವೆಯಾ ಸೂರ್‍ಯ ಚಂದ್ರ ನೀನಾದರೂ ಬಾ
ಹಗಲುರಾತ್ರಿ ಹಂಬಲಿಸಿದ ಎದೆಗೂಡು ನಿಶ್ಯಬ್ದ…
ಅಪರಂಜಿ ಅರಮನೆಯ ಚೌಕಟ್ಟಿನೊಳಹೊರಗೆಲ್ಲ
ದೀಪಗಳ ಸರಮಾಲೆ ಮನದಾಳ ಕತ್ತಲೆಯ ಗೂಡು
ನೋವು ಹತಾಷೆ ಮಡುಗಟ್ಟಿ
ಕಣ್ಣುರೆಪ್ಪೆ ಮುಚ್ಚಿದರೂ ಒತ್ತಿದರೂ
ನಿದ್ದೆಯ ಸುಳುವಿಲ್ಲ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೧೨೬
Next post ಕಳ್ಳರ ಕೂಟ – ೩

ಸಣ್ಣ ಕತೆ

  • ಜಡ

    ಮಾರಯ್ಯನನ್ನು ಅವನ ಹಳ್ಳಿಯಲ್ಲಿ ಹಲವರು ಹಲವು ಹೆಸರುಗಳಿಂದ ಕರೆಯುತ್ತಿದ್ದರು. ಹಾಗಾಗಿ ಅವನ ನಿಜವಾದ ಪೂರ್ತಿ ಹೆಸರು ಮಾರಯ್ಯನೆಂಬುವುದು ಸಮಯ ಬಂದಾಗ ಅವನಿಗೆ ಒತ್ತಿ ಹೇಳಬೇಕಾಗಿ ಬರುತ್ತಿತ್ತು. ಅಂತಹ… Read more…

  • ಮನೆಮನೆಯ ಸಮಾಚಾರ

    ಪ್ರಮೋದನಗರದ ಸಮೀಪದಲ್ಲಿ ಹೂವಿನಹಳ್ಳಿಯೆಂಬದೊಂದು ಗ್ರಾಮವಿರುವದು. ಅಲ್ಲಿ ಪ್ರೌಢರಾಯನೆಂಬ ದೊಡ್ಡ ವೃತ್ತಿವಂತನಾದ ಗೃಹಸ್ಥನಿದ್ದನು. ಪ್ರೌಢರಾಯರಿಗೆ ಇಬ್ಬರು ಗಂಡುಮಕ್ಕಳೂ, ಒಬ್ಬ ಹೆಣ್ಣು ಮಗಳೂ ಇದ್ದರು. ರಾಯರ ಹಿರಿಯ ಮಗನಾದ ರಾಮಚಂದ್ರರಾಯನು… Read more…

  • ನಿರೀಕ್ಷೆ

    ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…

  • ಅವರು ನಮ್ಮವರಲ್ಲ

    ಪೇದೆ ಪ್ರಭಾಕರ ಫೈಲುಗಳನ್ನು ನನ್ನ ಟೇಬಲ್ ಮೇಲೆ ಇಟ್ಟು, ‘ಸರ್ ಸಾಹೇಬರು ನಿಮ್ಮನ್ನು ಕರೆಯುತ್ತಿದ್ದಾರೆ’ ಎಂದು ಹೇಳಿ ಮಾಮೂಲಿನಂತೆ ಹೊರಟು ಹೋದ. ಸಮಯ ನೋಡಿದೆ. ೧೦:೩೦ ಗಂಟೆ.… Read more…

  • ಮತ್ತೆ ಬಂದ ವಸಂತ

    ಚಿತ್ರ: ಆಮಿ ಮೊದಲ ರಾತ್ರಿಯ ಉನ್ಮಾದದಲ್ಲಿದ್ದ ಮಧುವಿನ ಕಿವಿ ಹಿಂಡಿ ಅವಳಂದಳು. ‘ಮಧು, ಇಂದಿನಿಂದ ನಾವು ಗಂಡ - ಹೆಂಡತಿಯಾಗಿರುವುದು ಬೇಡ. ಬದುಕಿನ ಕೊನೆ ತನಕವೂ ಗೆಳೆಯ… Read more…