ನಿನ್ನ ನೆತ್ತಿಗೆ ಛತ್ರ ಹಿಡಿದು ಹೊರಗಿನ ಮಂದಿ-
ಯೆದುರು ಗೌರವ ಮೆರೆದರದು ನನಗೆ ಲಾಭವೇ?
ಸುಸ್ಥಿರ ಭವಿಷ್ಯ ಜೀವನಕೆಂದು ಅಡಿಪಾಯ
ಹಾಕುವುದು ವ್ಯರ್‍ಥ ಎಂದೇನು ನಾ ಅರಿಯೆನೆ ?
ಸರಳನಡೆ ನೀಗಿ, ಆಡಂಬರಕೆ ಬಲಿ ಹೋಗಿ,
ಅಂತಸ್ತು ಠೀವಿ ಸಭೆಮನ್ನಣೆಗೆ ಸಿರಿಯನೇ
ಸುರಿದು ಆಸೆಯಲಿ ಕಾಯುತ್ತಲೇ ಹುಸಿಯಾಗಿ
ಮರುಕಕೀಡಾದ ತವಕಿಗಳ ನಾ ಕಾಣೆನೇ?
ನನ್ನ ಸೇವೆಯೊ ನಿನ್ನ ಹೃದಯದಾರಾಧನೆಯು,
ಕೊಡುಗೆಯೋ ಸರಳ, ಪ್ರೀತಿಗೆ ಸಂದ ಬಾಗಿನವು,
ಎರಡನೆ ನೆಲೆಯದಲ್ಲ, ಕೃತ್ರಿಮವನೆ ಅರಿಯದದು,
ಇದು ಪರಸ್ಪರ ಕೊಡುಗೆ, ನಿನಗಾಗಿ ನಾನು.
ಬೇಹುಗಾರರ ಮಾತ ಎಸೆ ನಿಜಹೃದಯವೊಂದು
ಎಷ್ಟೇ ನಿಂದನೆಗೊಂಡೂ ನಿನ್ನಂಕೆಗೊಳಪಡದು.
*****
ಮೂಲ: ವಿಲಿಯಂ ಷೇಕ್ಸ್‌ಪಿಯರ್
Sonnet 125
Were’t aught to me I bore the canopy
Related Post
ಸಣ್ಣ ಕತೆ
-
ನಿರಾಳ
ಮಂಗಳೂರಿನ ಟೌನ್‌ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. ಜೇಬಿಗೆ ಕೈ ಹಾಕಿ ನೋಡಿದ. ಬರೇ ಇಪ್ಪತ್ತೇಳು… Read more…
-
ಮರೀಚಿಕೆ
ನಂಬಿದರೆ ನಂಬಿ ಬಿಟ್ಟರೆ ಬಿಡಿ ನನ್ನೆಲ್ಲಾ ಭಾವನೆಗಳೂ ತಬ್ಬಲಿಗಳಾಗಿಬಿಟ್ಟಿವೆ. ಪ್ರೇಮವೆಂದರೆ ತ್ಯಾಗವೆ, ಭೋಗವೆ, ಭ್ರಮೆಯೆ ಆಥವಾ ಕೇವಲ ದಾಸ್ಯವೆ? ಮನಸ್ಸಿಗಾದ ಗ್ಯಾಂಗ್ರಿನ್ ಕಾಯಿಲೆಯೆ? ಇಂತಹ ದುರಾರೋಚನೆಗಳು ಹುಟ್ಟಲು… Read more…
-
ಕಳ್ಳನ ಹೃದಯಸ್ಪಂದನ
ಅದು ಅಪರಾತ್ರಿ ೨ ಘಂಟೆ ಸಮಯ. ಎಲ್ಲರೂ ಗಾಢ ನಿದ್ರೆಯಲ್ಲಿದ್ದರು. ಊರಿನಿಂದ ಸ್ವಲ್ಪ ದೂರವಾಗಿದ್ದ ಕಲ್ಯಾಣ ನಗರದ ಬಡಾವಣೆ, ಅಷ್ಟಾಗಿ ಹತ್ತಿರ ಹತ್ತಿರವಲ್ಲದ ಮನೆಗಳು, ಒಂದು ವರ್ಷದ… Read more…
-
ಹಳ್ಳಿ…
ಬಂಗಾರ ಬಣ್ಣದ ಕಾರು, ವೇಗವಾಗಿ... ಅತಿವೇಗವಾಗಿ, ಓಡುತ್ತಿತ್ತು. ರೆವ್ರೊಲೆ ಆವಿಯೊಯು-ವಾ-ಹೊಚ್ಚ ಹೊಸ ಮಾದ್ರಿಯ ಹೊರ, ಒಳಗೆ, ಬಲು ವಿಶಿಷ್ಠ, ವಿನೂತನ, ವಿನ್ಯಾಸದ, ಎಬಿಎಸ್ ಸಿಸ್ಟಮ್ ಕಾರೆಂದರೆ ಕೇಳಬೇಕೆ?… Read more…
-
ಸಿಹಿಸುದ್ದಿ
ಶ್ರೀನಿವಾಸ ದೇವಸ್ಥಾನದಲ್ಲಿ ಎರಡು ಪ್ರದಕ್ಷಿಣೆ ಹಾಕಿ ಮೂರನೇ ಪ್ರದಕ್ಷಿಣೆಗೆ ಹೊರಡುತ್ತಿದ್ದಂತೆಯೇ, ಯಾರೋ ಹಿಂದಿನಿಂದ "ಕಲ್ಯಾಣಿ," ಎಂದು ಕರೆದಂತಾಯಿತು. ಹಿಂತಿರುಗಿ ನೋಡಿದರೆ ಯಾರೋ ಮಧ್ಯ ವಯಸ್ಸಿನ ಮಹಿಳೆ ಬರುತ್ತಿದ್ದರು.… Read more…