ಎರಡೆ ದಿನ ಹಿಂದೆ ಇನಿವಕ್ಕಿ ಚಿಲಿಪಿಲಿ ದನಿಯ ಗಾನವೇದಿಕೆಯೆನಿಸಿ, ಝಗಝಗಿಸಿ, ಈಗ ಬರಿ ಹಣ್ಣೆಲೆಯೆ ತುಂಬಿರುವ, ಇಲ್ಲ ಒಂದೆರಡಿರುವ, ಅಥವ ಚಳಿಕೊರೆತಕ್ಕೆ ಬೆದರಿ ಎಲ್ಲಾ ಉದುರಿ ಭಣಗುಡುವ ಒಣಕೊಂಬೆ ಕಾಂಡಗಳ ಹೇಮಂತ ನನ್ನ ಮೈಯಲ್ಲಿ...
ನಾನಳಿದ ಮೇಲೆಯೂ ನನ್ನ ಪ್ರೀತಿಸಲಿಕ್ಕೆ ಅಂಥ ಘನವಾದುದೇನಿತ್ತು ನನ್ನಲ್ಲೆಂದು ಜಗ್ಗಿ ಕೇಳದೆ ಲೋಕ ನಿನ್ನನ್ನು ಮುಂದಕ್ಕೆ? ಅದಕೆಂದೆ ನನ್ನನ್ನು ಮರೆತುಬಿಡು ನೀ ಎಂದು ಕೇಳುತ್ತಿರುವೆ; ಅಂಥ ಗುಣವೊಂದ ನನ್ನಲ್ಲಿ ಸುಳ್ಳು ಹೇಳದೆ ಹೇಗೆ ತಾನೆ...
ಸತ್ತಾಗ ನಾನು ಜಗಕೆಚ್ಚರವ ಸಾರುವುದು ಗಂಟೆಯ ವಿಷಣ್ಣ ದನಿ : "ಕೀಳುಲೋಕವಿದನ್ನು ಬಿಟ್ಟು ಓಡಿದ ತುಚ್ಛ ಕ್ರಿಮಿಜೊತೆ ಇರಲು" ಎಂದು; ದುಃಖಪಡಬೇಕಿಲ್ಲ ನೀನು ಈ ಸಾಲನ್ನು ನೋಡಿದರು ಸಹ; ಇವನು ಬರೆದಿಟ್ಟ ಕೈಯನ್ನು ನೆನೆಯಬೇಕಿಲ್ಲ...
ನಿನ್ನ ಹಳಿದರೆ ಲೋಕ ಅದು ನಿನ್ನ ತಪ್ಪಲ್ಲ, ಉತ್ತಮರು ನಿಂದೆಮಾತಿಗೆ ಸದಾ ಸಿಕ್ಕವರೆ; ಸೌಂದರ್ಯದಾಭರಣ ಸಂಶಯಕೆ ಹೊರತಲ್ಲ ನಿರ್ಮಲಾಕಾಶದಲೂ ಕಾಗೆ ಹಾರುವುದೇ. ನೀನು ಯೋಗ್ಯನೆ, ನಿನ್ನ ಕುರಿತ ಆರೋಪಗಳು ನಿನ್ನ ಮೇಲ್ಮೆಯನೆ ಹೇಳುವುವು, ಕೇಡೂ...
ತಿದ್ದಬೇಕಾದ ಕೊರತೆಯೆ ಇಲ್ಲ, ಈ ಮಾತೆ ಶತ್ರುಗಳು ಕೂಡ ಮೆಚ್ಚುವ ಸತ್ಯವಾಗಿರುತ ಜನದ ಮನದಿಂದೆದ್ದ ನುಡಿಯೊಳೂ ಮೂಡಿದೆ. ನಿನ್ನ ಹೊರ ಚೆಲುವು ಮೆಚ್ಚಿಗೆ ಮಕುಟ ಗಳಿಸಿದೆ, ಮೆಚ್ಚಿ ನುಡಿಯುವ ನಾಲಿಗೆಗಳೆ ಕಣ್ಣಿಗೆ ಸಿಗುವ ನೋಟದಾಚೆಗು...
ಕಲ್ಲು ಹಿತ್ತಾಳೆ ನೆಲ ಕೊನೆಯಿರದ ಕಡಲ ಜಲ ಎಲ್ಲದರ ಬಲ ಮೀರಿ ಆಳುತ್ತಿರಲು ಸಾವು ಹೂವಿಗೂ ಹೆಚ್ಚು ಕೋಮಲವೆನ್ನಿಸುವ ವಿರಳ ಚೆಲುವು ತಡೆದೀತೇನು ಅದರ ಆಕ್ರೋಶವನು ? ದುರ್ಭೇದ್ಯ ಶಿಲೆಗೆ, ಉಕ್ಕಿನ ದ್ವಾರಗಳ ಧೃತಿಗೆ...
ಕಾಲಪುರುಷನ ಕ್ರೂರಹಸ್ತ ಹಳೆವೈಭವದ ಭವ್ಯ ಸ್ಮೃತಿಗಳ ಗರ್ವಭಂಗ ಮಾಡಿದ್ದನ್ನು; ಎತ್ತರದ ಸೌಧಗಳೆ ತತ್ತರಿಸಿ ನೆಲಕುರುಳಿ ಮರ್ತ್ಯರೋಷಕ್ಕೆ ವಿಗ್ರಹಗಳಳಿದ್ದನ್ನು ; ದಡದ ಮಡಿಲಿಗೆ ಬೆಳೆದ ಭಾರಿ ರಾಜ್ಯಗಳನ್ನೆ ಹಸಿದ ಸಾಗರ ಉಕ್ಕಿ ನೆಕ್ಕಿ ತೇಗಿದ್ದನ್ನು; ಗಟ್ಟಿ...
ಕಾಲ ನನ್ನನು ಹೇಗೊ ಹಾಗೆ ಒಲವನೂ ಕಾಡಿ ಕ್ರೂರ ಹಸ್ತಗಳಿಂದ ಹಿಡಿದು ಹಿಂಡುವನು; ಮೈಯ ನೆತ್ತರು ಬತ್ತಿ ಹಣೆಯಲ್ಲಿ ಗೆರೆಮೂಡಿ ನನ್ನ ಪ್ರೇಮಿಯ ಪ್ರಾಯಭರಿತ ಹೊಂಬೆಳಗು ಕಡಿದಾದ ಕಾಲದಿರುಳಲ್ಲಿ ಮರೆಯಾಗುವುದು; ಚೆಲುವ ಪ್ರಭುವಲ್ಲಿ ಮೇಳೈಸಿರುವ...
ಅಲೆ ಉರುಳಿ ಸರಿದಂತೆ ಹರಳು ಚೆಲ್ಲಿದ ದಡಕೆ ಧಾವಿಸುತ್ತಿವೆ ನಮ್ಮ ಗಳಿಗೆಗಳು ಗುರಿ ಕಡೆಗೆ ; ಮುಂಚೆ ಸರಿದುದರ ಎಡೆದೊರೆತು ಹಿಂದಿನ ಕ್ಷಣಕೆ ಒಂದೆ ಸಮ ಸ್ಪರ್ಧೆಯಲಿ ಮುಂದೊಡುತಿವೆ ಜೊತೆಗೆ. ಕಣ್ತೆರೆದ ಬದುಕು ಬೆಳಕಿನ...