ಒಂದು ಡಿಜಿಟಲ್ ಸಂಕೇತದಿಂದ ಹಲವಾರು ಮನೆಗಳ ಟಿ.ವಿಗಳು ಕೆಲಸ ಮಾಡಲಿವೆ. ಡಿಜಿಟಲ್ ಸಂಕೇತ ಡೀಕೋಡರ್ ಇಲ್ಲದ ಡಿಜಿಟಲ್ ದೂರದರ್ಶಕ ಕೂಡ ಇದೆ. ಕಂಪ್ಯೂಟರ್ ಮಾನಿಟರ್‌ನಂತೆ- ೪೮೦ ಪೃಥಕ್ಕರಣರೇಖೆ (ಲೈನ್ಸ್ ಆಪ್ ರೆಸೂಲ್ಯೂಷನ್)ಗಳಲ್ಲಿ ಡೀ. ಟಿ.ವಿ. ಸತತವಾಗಿ ರೆಡಿಚಿತ್ರಗಳನ್ನು ಪ್ರದರ್ಶಿಸಬಲ್ಲದು. ಡಿಜಿಟಲ್ ಡಿಕೋಡನ್ನು ಜೋಡಿಸಿದಾಗ ವ್ರಸಾರವಾಗುವ ಸ್ವರೂಪ (ಫಾರ್ಮಟ್) ಏನೇ ಇದ್ದರೂ ೪೮೦ ಪೃಥಕ್ಕಣಗಳನ್ನು ಪ್ರದರ್ಶಿಸಬಲ್ಲದು. ಏಕೆಂದರೆ ಸೆಟ್ ಟಾಪ್ ಪೆಟ್ಟಿಗೆ H.D.T.V (ಹೈಡೆಫನಿಷನ್) ಸಂಕೇತಗಳನ್ನು ೪೮೦ ಪಿ.ಗೆ ತಿರುಗಿಸಬಲ್ಲದು. ಆದರೆ H.D.T.V ಅಧಿಕ ಪೃಥಕರಣ ಅಂದರೆ 720 ಪಿಯನ್ನು ಪ್ರದರ್ಶಿಸಬಲ್ಲದು. ಪ್ಯಾನಸಾನಿಕ್ D.T.V ಚಿತ್ರಗಳು ಉಪಗ್ರಹ ದೂರದರ್ಶಕ ಚಿತ್ರಗಳ ಮಟ್ಟಕ್ಕೆ ಸರಿಸಮವಾಗಿರುವವು. ಆದರೆ ಈ ಚಿತ್ರಗಳನ್ನು H.D.T.V  ಚಿತ್ರಗಳೊಂದಿಗೆ ಹೋಲಿಸಿನೋಡಬಾರದು.

ಅಮೇರಿಕದಲ್ಲಿ ಸದ್ಯದಲ್ಲಿಯೇ H.D.T.V ಗಳು ಬಹುಪಾಲು ಮನೆಗಳನ್ನು ಅಲಂಕರಿಸಲಿವೆ. ಖಂಡಿತವಾಗಿಯೂ ಈ ಸೆಟ್‌ಗಳು ದೊಡ್ಡ ಪ್ರಕಾಶಮಾನವಾದ, ಮೈಮರೆಸುವಂತಹ ಚಿತ್ರಗಳನ್ನು ಬಿತ್ತರಸಲಿವೆ. ಇವು ಚಲನಚಿತ್ರದ ಸೊಬಗನ್ನು ನೀಡಲಿವೆ. ಅತ್ಯಂತ ಸ್ಪಷ್ಟವಾದ ಸಮೃದ್ಧವಾದ ವಿವಿಧ ರಂಗುಗಳು ನಮ್ಮ ಕಣ್ಣುಗಳ ಮುಂದೆ ಚಲಿಸುವಂತೆ ಭಾಸವನ್ನುಂಟು ಮಾಡುತ್ತವೆ. ಪ್ರಸಾರಗೋಪುರವು ಎಲ್ಲಿದೆ, ಎಂಬುದನ್ನರಿತು H.D.T.V ಯ ಆಂಟೇನಾವನ್ನು ಇಡಬೇಕಾಗುತ್ತದೆ. ಆಂಟೇನಾ ಸದೃಢವಾಗಿದ್ದರೆ ಉತ್ತಮ ಮಟ್ಟದ ಚಿತ್ರಗಳನ್ನು ನೋಡಬಹುದು. ಆದ್ದರಿಂದ ನಿರ್ದೇಶಕ ಆಂಟೆನಾವನ್ನು ಬಳೆಸಬೇಕು.

ಡಿಜಿಟಲ್ ಸಂಕೇತಗಳಿಗೆ ದೂರದರ್ಶಕದ ತೆರೆಯ ಮೇಲೆ ಮೂಡಲು ಹತ್ತು ಸೆಕೆಂಡುಗಳು ಸಾಕಾಗುತ್ತದೆ. ರೀಯಲ್ ಪ್ರೊಜೆಕ್ಷನ್ ಮಾದರಿಗಿಂತ ದೂರದರ್ಶನವೂ ಖಂಡಿತವಾಗಿಯೂ ಮೇಲ್ಮಟ್ಟದ್ದಾಗಿದೆ. ರೀಯಲ್ ಪ್ರೊಜೆಕ್ಷನ್ ದೊಡ್ಡದಾಗಿ ಚಿತ್ರಿತವಾದದಿದ್ದರೆ ಛಾಯೆಯನ್ನು ರಚಿಸುತ್ತಿರುತ್ತದೆ. ೩೪ ಇಂಜಿನ ಸೆಟ್‌ನ 16X9 ರ ಪ್ರಮಾಣದ ತೆರೆಯನ್ನು ನೋಡಲು ಆಕರ್ಷಕವಾಗಿರುತ್ತದೆ. ಅಂದರೆ 4X3 ತುಂಬ ಸಣ್ಣ ಸೆಟ್‌ನಂತೆ ಭಾಸವಾಗುವುದು. ನೇರ ವೀಕ್ಷಣೆಯ ಸೆಟ್‌ಗಳು ದೊಡ್ಡ ಚಿತ್ರಗಳನ್ನು ಮೂಡಿಸಲಾರವು. ಚಿಕ್ಕ ಆಕಾರವನ್ನು ಹೊಂದಿದ್ದು ಅಗಲವಾದ ತೆರೆ ಇರುವ H.D.T.V ಚಿತ್ರಮಂದಿರಗಳಲ್ಲಿ ಕೂತು ಆನಂದಿಸುವ ಅನುಭವ ವೇದ್ಯವಾಗುತ್ತದೆ.
*****