ಸೋಮವಾರ ಸೋಂಬೇರಿ ಸುಖನಿದ್ರೆ
ಮಂಗಳವಾರ ಮಂಗಳದ ನಿದ್ರೆ
ಬುಧವಾರ ಬುದ್ಧಿವಿರಾಮ ನಿದ್ರೆ
ಗುರುವಾರ ಗುರುವಿದಾಯ ನಿದ್ರೆ
ಶುಕ್ರವಾರ ಚಕ್ರಗತಿಯಲಿ ನಿದ್ರೆ
ಶನಿವಾರ ಅನಿವಾರ್ಯ ನಿದ್ರೆ
ಭಾನುವಾರ ಸಾಲದ ಕೊಸರು ನಿದ್ರೆ
ಇನ್ನು ಇದ್ದ ಬಿದ್ದ ಹೊತ್ತಲ್ಲಿ
ಪುಸ್ತಕ, ಪರೀಕ್ಷೆ, ಫಲಿತಾಂಶ ನಿರೀಕ್ಷೆ
ಮತ್ತೆ ಪರಮ ಸುಖನಿದ್ರೆ ಜಯವಾದರೆ!
*****