ಆಶ್ಚರ್‍ಯವೆಂದರೆ ಭಾರತ ಒಂದರಲ್ಲಿಯೆ ೨೪೦೦ ರಿಂದ ೫೦೦೦ ಮಿಲಿಯನ್ ದಂಶಗಳಿವೆ ಎಂದು ಅಂದಾಜು ಮೂಡಲಾಗಿದೆ. ಇಲಿ, ಮೊಲ, ಅಳಿಲು, ಮುಂತಾದವುಗಳಿಗೆ ದಂಶಕಗಳೆನ್ನುತ್ತಾರೆ. ಪ್ರತಿವರ್‍ಷ ೧೧ ಮಿಲಿಯನ್ ಟನ್ ಧಾನ್ಯಗಳನ್ನು ಇಲಿಗಳು ತಿಂದು ಬಿಡುತ್ತವೆ. ವರ್‍ಷ ಒಂದಕ್ಕೆ ಒಂದು ಇಲಿ ಒಂದು ಕ್ವಿಂಟಲ್ ಧಾನ್ಯವನ್ನು ಹಾಳುಮಾಡುತ್ತದೆ. ಒಂದು ಜೊತೆ ಇಲಿ ಒಂದು ವರ್ಷದಲ್ಲಿ ೮೦೦ ಆಗಿ ೩ ವರ್ಷಗಳಲ್ಲಿ ೩೫ ಕೋಟಿಯಷ್ಟಾಗುತ್ತವೆ! ಅಮೇರಿಕ ಸಂಯುಕ್ತ ಸಂಸ್ಥಾನವೊಂದರಲ್ಲಿಯೇ ಕಳೆದ ೨೦ ವರ್‍ಷಗಳಲ್ಲಿ ಇಲಿಯ ಬೋನಿನ ವಿವರ ಮಾದರೀಯ ೩೦೦ ಪೇಟೆಂಟ್‌ಗಳನ್ನು ಪಡೆಯಲಾಯಿತೆಂದರೆ ಅಲ್ಲಿಯ ಅಗಣಿತ ಇಲಿಗಳ ಸಂಖ್ಯೆ ಎಷ್ಟೆಂದು ಅಚ್ಚರಿಯಾಗುತ್ತದೆ. ರಾಜಸ್ಥಾನದ ಬಿಕಾನೆರ್ ಜಿಲ್ಲೆಯ ದಕ್ಷಿಣಕ್ಕೆ ಡೆನ್ನಾಕ್, ಎಂಬ ಸಣ್ಣ ಪಟ್ಟಣವಿದ್ದು ಇಲ್ಲಿ ಕಾರ್‍ನಿದೇವಿ ದೇವಾಲಯ ೬೦೦ ವರ್ಷಗಳಿಂದಲೂ ಪ್ರಸಿದ್ಧವಾಗಿದೆ. ಬಂದ ಭಕ್ತರು ಇಲ್ಲಿವಾಸವಾಗಿರುವ ಸಾವಿರಾರು ಇಲಿಗಳಿಗೆ ಆಹಾರ ನೈವೇದ್ಯವನ್ನರ್‍ಪಿಸುತ್ತಾರೆ. ಇದೇ ಇಲ್ಲಿಯ ಭಕ್ತಿ. ಬೆಕ್ಕೂ, ಕಾಗೆ, ಹದ್ದುಗಳಿಂದ ಈ ಇಲಿಗಳನ್ನು ರಕ್ಷಿಸಲು ನೌಕರರ ಒಂದು ತಂಡವನ್ನು ನೇಮಿಸಿದ್ದಾರೆ. ಆದ್ಯಾಗ್ಯೂ ಇದುವರೆಗೆ ಪಟ್ಟಣದಲ್ಲಿ ಯಾವುದೇ ತರಹದ ರೋಗಗಳು ಹರಡಿಲ್ಲದಿರುವುದು ಆಶ್ಚರ್‍ಯ!?
*****