ಮೌನವಾಗಿದೆ ಧರಿತ್ರಿ
ಮೌನವಾಗಿದೆ ದಿಗಂತ
ಮೌನವಾಗಿದೆ ಸಾಗರ;
ಒಂದಾಗಿದೆ ಭೂಮಂಡಲವಾಗಿ.

ಜತೆಯಾಗಿದೆ ಮೌನದಲಿ
ಅಖಂಡವಾದ ನಂಟಿನಲಿ
ನಿರಂತರತ್ವದ ಸಂಕೇತದಲಿ
ಅವಿಚ್ಛಿನ್ನತೆಯ ಭಾವದಲಿ.

ನೆಲವ ಬಿಟ್ಟು ಜಲವಿಲ್ಲ
ಜಲವಬಿಟ್ಟು ಗಗನವಿಲ್ಲ
ಒಂದಕ್ಕೊಂದು ಜತೆಯಾಗಿದೆ
ಗಾಢವಾದ ಮೌನದಲಿ.

ಆ ಮೌನವ ಸೀಳಿ
ಸ್ವಲ್ಪ ನೀನು ಹೇಳು
ಸ್ವಲ್ಪ ನಾನು ಹೇಳುತ್ತೇನೆ
ಸ್ವಲ್ಪ ಅವರು ಹೇಳುತ್ತಾರೆ.

ನಡೆವುದಾಗ ಭಾವ ಸಮ್ಮೇಳನ
ನಮ್ಮ ನೆಲ ನಮ್ಮ ಚರಿತ್ರೆ
ನಮ್ಮ ಸಂಸ್ಕೃತಿ ನಮ್ಮ ಸಾಹಿತ್ಯದ
ಸ್ನೇಹ ಸಮ್ಮೇಳನ.

ಎಲ್ಲವೂ ಒಂದಾದಾಗ
ಅನೇಕತೆಯು ಏಕತೆಯಲ್ಲಿ ಲೀನ!
*****