ಬೆನ್ನು ಬಾಗಿಸಿಕೊಂಡು ತಂದುದನ್ನು ಅಟ್ಟುಕೊಂಡು ಉಟ್ಟುಕೊಂಡು ಪಾಡು ಪಟ್ಟುಕೊಂಡು ಜೀ ಹುಜೂರ್ ಹಾಡಿಕೊಂಡು ಉಸಿರು ಬಿಡಲು ಅಪಣೆ ಬೇಡಿಕೊಂಡು ಕೀ ಕೊಟ್ಟ ಗೊಂಬೆಗಳಂತೆ ಕುಣಿಯುವವರು ನಾವು ಕುಣಿಸುವವರು ನೀವು. ನಿಮ್ಮ ಪಾದಕ್ಕೆ ಮೂಗುದಾರಕ್ಕೆ ಮಣಿದು...
ಗುಡ್ಡ ಬೆಟ್ಟಗಳ ಏಳುಬೀಳುಗಳ ಹಾಗೆ ನಮ್ಮ ಮನಸ್ಸು. ಉಕ್ಕಿ ಹರಿವ ಸಮುದ್ರದ ಅಲೆಗಳ ಹಾಗೆ ನಮ್ಮ ಭಾವ. ಗಿರಿಗಳೊಳಗಿನ ಕಂದರಗಳ ಹಾಗೆ ನಮ್ಮ ಹೃದಯ. ಜುಳು ಜುಳು ಹರಿವ ನೀರಿನ ಹಾಗೆ ನಮ್ಮ ಪ್ರೀತಿ....
ಎಂದು ಬರುವಳೋ ನನ್ನ ಹುಡುಗಿ ಎನ್ನ ಮನಸೂರೆಗೊಂಡ ಬೆಡಗಿ ಮನೆ ಮನಗಳ ಬರಿದು ಮಾಡಿ ವಿರಹದ ಉರಿಗೆನ್ನ ದೂಡಿ ಬೆಂದು ಬಸವಳಿದೆನ್ನ ನೋಡಿ ನಗುತಿರುವಳು ದೂರ ಓಡಿ ಎಂದು ಬರುವಳೋ... ಮೃದು ಮಧುರ ಸ್ವರ...
`ಹುಚ್ಚು ಮನದ ಹತ್ತು ಮುಖ'ಗಳ ದರುಶನ ಪಡೆದು 'ಚಿಗುರಿದ ಕನಸು'ಗಳ ಜತೆಗೆ 'ಮೂಕಜ್ಜಿಯ ಕನಸು'ಗಳ ಕಂಡು 'ಸರಸಮ್ಮನ ಸಮಾಧಿ' ಕಟ್ಟಿ 'ಭೂತ', 'ದೇವದೂತ'ರುಗಳೊಡನೆ ಓಡಾಡಿ 'ಸಂನ್ಯಾಸಿಯ ಬದುಕು' ಅಳೆದು 'ಮೈಮನದ ಸುಳಿಯಲ್ಲಿ' ಸೂಳೆಯ ಕಂಡು...
ಅಂತರಂಗದ ಗಾನ ನಾನಾ ವಿತಾನ ಮಿಡಿದ ಹೃದಯ ವೀಣಾ ನುಡಿಸಿ ಮಧುರಗಾನ ಎಲ್ಲಿಯದೋ ಈ ಗಾನ ಯಾವುದೋ ತಾನ ಮೂಡಿ ಭಾವ ಸ್ಪಂದನಾ ನುಡಿಸಿ ಮಧುರಗಾನ ನನ್ನ ನಿನ್ನ ಪ್ರೀತಿ ಪ್ರೇಮ ಸಪ್ತಸ್ವರದ ಸರಿಗಮ...
ಯಾರು ಹೇಳಿದರು ಜಾಗತೀಕರಣದಿಂದ ಅಳಿಯಿತು ಕನ್ನಡ? ಅಂತರ್ ಜಾಲದಲ್ಲಿ ಕನ್ನಡ ಲಿಪಿ ಸೇರಿ ಜಗದಗಲ ಪಸರಿಸಿದೆ ಕನ್ನಡ. ಅಭಿಮಾನಿಯ ಹೊಸಿಲೊಳಗೆ ಮಾತೃಭಾಷೆಯ ಕೊಲೆ?! ಇಲ್ಲ ಸಾಧ್ಯವಿಲ್ಲ. ನಿರಭಿಮಾನಿಯ ಮನೆಯಲ್ಲಿ ಅಳಿಯುತ್ತಿದೆ ಕನ್ನಡ! ಪಾಶ್ಚಾತ್ಯೀಕರಣದ ಹುಚ್ಚು,...
ಮೇಲೆ ನೋಡಿದರೆ ನೀಲಾಕಾಶ- ಅಲ್ಲಿ ರವಿ, ಚಂದ್ರ ನಕ್ಷತ್ರಗಳಿದ್ದಂತೆ, ರಾಹು ಕೇತು ಶನಿಗ್ರಹಗಳೂ ಇವೆ. ತೊಟ್ಟವಳು ಗಹನ ಗಂಭೀರ! ಕೆಳಗೆ ನೋಡಿದರೆ ವಿಶಾಲ ಪೃಥ್ವಿ, ಎಲ್ಲವನು ಹೊತ್ತಿರುವ ಭೂಮಿತಾಯಿ, ಇಲ್ಲಿ ಚೆಲುವು ಇದ್ದಂತೆ ಕ್ರೌರ್ಯವೂ...