ನನ್ನ ಜೋತಿಯು ನಿನ್ನೊಳರಗಲಿ ನನ್ನ ಬಲವೇ ನಿನ್ನ ಹುಮ್ಮಸು |
ನಿನ್ನ ಹೃದಯವ ಕಲಕದಿರಲವ ತಿತನು ತಾನೆಂದೂ ||
ಸನ್ನುತಲ್ಲದ ಪೂರ್ಣವಲ್ಲದ ನ್ಯೂನಫಲವನು ಬಯಸಲಾಗದು |
ಘನ್ನವಾತ್ಮವಗೊಳಪ ವರವನು ಬಯಸು ಎಂದೆಂದೂ || ೧ ||
ನಿನ್ನದಾಗಲಿ ಒ೦ದೆ ಸಂತಸ ಘನ್ನದಯಪೂರಿತವು ಬಯಕೆಯು |
ನಿನ್ನ ಪ್ರತಿಶಕ್ತಿಗಳ ನೊತ್ತುತೆ ಕುರುಡುದೈವವನೂ ||
ಮುನ್ನ ತೋರ್ಪುದು ನಿಶ್ಚಲದಿ ಹೊಳೆಯುವ ಘನ್ನವಾಗಿಹದಾತ್ಮಶಕ್ತಿಯು |
ನಿನ್ನ ಕಾಯಕ ಕರ್ಮ ಮಾಳ್ಪುದು ಫಲವ ಬಯಸದಲೇ || ೨ ||
ಘನ ವಾಗಿಹ ಫಲವ ನೀಡ್ವುದು ಸರುವಶಕ್ತಿಯ ಕಾರ್ಯವದು ಕೇಳ್
ತನ್ನ ಸಮಯದಿ ಪ್ರಭುವು ಸರುವವ ನಿಶ್ಚಯದಿ ತಿರುಗಿಸುವ ||
“ಸಾವಿತ್ರಿ” “ದೇವಮಾತಾ”
*****

















