ಯೌವ್ವನವೇ ಮತ್ತೊಮ್ಮೆ ಹುಟ್ಟಿ ಬಾ ಚೈತನ್ಯಧಾರೆಯಾಗಿ ಮರಳಿ ಬಾ ಮುಪ್ಪಾದ ಈ ಜೀವ ಉರುಳಿ ಹೋಗುವ ಮುನ್ನ ಜೀವನದಿಯಾಗಿ ಹರಿದು ಬಾ. ಕಾಲಚಕ್ರದ ಗಾಲಿ ಹಿಂದಕ್ಕೆ ತಿರುಗಲಿ ಗತಜೀವನದ ಕಥೆಯ ಪುಟಗಳು ತೆರೆಯಲಿ ಹಿಂದೆ...
ಲಕ್ಷೋಪಲಕ್ಷ ಕಣ್ಣುಗಳು ಧೀಮಂತ ಮೂರ್ತಿಯ ದರ್ಶನಕೆ ತ್ಯಾಗ ದೌನತ್ಯವ ಅರಿಯಲು ಕಾತರಿಸುತ್ತಾರೆ ಹತ್ತುತ್ತಾರೆ ಮೇಲೇರುತ್ತಾರೆ ನಿನ್ನ ಅಡಿಯವರೆಗಷ್ಟೆ. ಮತ್ತೆ ಮೇಲೇರುವ ಕೆಚ್ಚಿಲ್ಲದ ಸಾಮಾನ್ಯರು ನಿನ್ನ ಅಸಾಮಾನ್ಯತೆಗೆ ಅದ್ಭುತ ಕಲಾಕೃತಿಗೆ ಬೆರಗಾಗುತ್ತಾರೆ, ಶಿಲೆಯಾಗುತ್ತಾರೆ ನಿನ್ನ ಅಂದ...
ನಾನು ವಸುಮತಿ ನಿನ್ನ ಶ್ರೀಮತಿ ದಿವ್ಯಾಲಂಕಾರಭೂಷಿತೆ ನಿನ್ನ ಹೃದಯ ವಿರಾಜಿತೆ ಸಸ್ಯಶ್ಯಾಮಲೆ, ನವರತ್ನ ಕೋಮಲೆ ಆಗಿದೆನಿಂದು ಅಂಗಾಂಗ ವಿಕಲೆ. ದಾನವನೊಬ್ಬನ ಕೈಯಿಂದ ಅಂದು ಉಳಿಸಿದೆ ವರಾಹರೂಪದೆ ಬಂದು ನೂರಾರು ದಾನವರಿಂದು ಎಳೆದಾಡುತಿಹರು ಬಳಿ ನಿಂದು...
ಶಿಲಾಮೂರ್ತಿಯಲಿ ದೇವರನು ಕಾಣುವ ಹುಚ್ಚು ಹಂಬಲವೇಕೆ? ಕಣ್ಣಿಗೆ ಕಾಣುವ ದೇವರನು ಅರಿಯದೆ ಕೈಬಿಟ್ಟೆಯೇಕೆ? ಕಲ್ಲಿನಲಿ ಮಣ್ಣಿನಲಿ ಗಾಳಿಯಲ್ಲಿ ನೀರಿನಲ್ಲಿ ಪಶುಪ್ರಾಣಿ ಸಂಕುಲದಲಿ ಪ್ರಕೃತಿಯ ಜೀವಜಂತುಗಳಲ್ಲಿ ಅಣುರೇಣು ತೃಣಕಾಷ್ಠಗಳಲ್ಲಿ ಎಲ್ಲೆಂದರಲ್ಲಿ ನೀ ಕಾಣುವಲ್ಲಿ ದೇವರಿರುವನು ನೋಡಾ...
ಹುಟ್ಟು ಸಾವುಗಳ, ನೋವು ನಲಿವುಗಳ ಬದುಕಿದು ಬರೀ ಭ್ರಾಂತಿ ಆಸೆನಿರಾಸೆಗಳ ನಡುವೆ ತೂಗಿದೆ ಸಂತಸದ ಸಂಕ್ರಾಂತಿ ಮಾಗಿಯ ಪೊರೆಯದು ಕಳಚುತ್ತಾ ತೆರಳಿದೆ ಕಾಣಲು ಹೊಸ ವರುಷ ಸಿಹಿ ಸಿಹಿ ಮಾತಿನ ತೋರಣ ಕಟ್ಟಿದೆ ಸಂಕ್ರಾಂತಿಯ...
ಚೈತ್ರ ಬಂತು ಚೈತ್ರ ಬದುಕು ಬವಣೆಯಾತ್ರೆ ಅಳುವಿರಲಿ, ನಗುವಿರಲಿ ಕಥೆಗೆ ತಕ್ಕ ಪಾತ್ರ ಅಪ್ಪ ಅಮ್ಮ ಅಣ್ಣ ತಂಗಿ ಜೊತೆಯಾದರು ಪಯಣಕೆ ನಲಿವಿನಿಂದ ನೋವು ನುಂಗಿ ನಡೆದೆವು ದೂರ ತೀರಕೆ ತೀರ ದೂರ ಬದುಕು...