ಅಂತರಂಗದ ಗಾನ
ನಾನಾ ವಿತಾನ
ಮಿಡಿದ ಹೃದಯ ವೀಣಾ
ನುಡಿಸಿ ಮಧುರಗಾನ
ಎಲ್ಲಿಯದೋ ಈ ಗಾನ
ಯಾವುದೋ ತಾನ
ಮೂಡಿ ಭಾವ ಸ್ಪಂದನಾ
ನುಡಿಸಿ ಮಧುರಗಾನ
ನನ್ನ ನಿನ್ನ ಪ್ರೀತಿ ಪ್ರೇಮ
ಸಪ್ತಸ್ವರದ ಸರಿಗಮ
ಮಾತು ಮೀರಿದ ಮೌನ
ನುಡಿಸಿ ಮಧುರಗಾನ
ಹಾಲು ಜೇನಿನಂತೆ ಬೆರೆತ
ಮನವೆರಡರ ಸಂಗಮ
ಸರಸ ಶೃಂಗಾರ ಪಾನ
ನುಡಿಸಿ ಮಧುರಗಾನ
ಹಲವು ಜನುಮದಿಂದ ಬಂದ
ಪ್ರೇಮಾನುಬಂಧ
ಸಾಗುತಿಹುದು ಜೀವನ
ನುಡಿಸಿ ಮಧುರಗಾನ
*****