ಬಳ್ಳಿ ಮರ

ಎಷ್ಟೊಂದು ಆಸೆಯಿಂದ ನೆಟ್ಟಿದ್ದೆ ಹೂ ಬಳ್ಳಿಯನ್ನು ಮರಕ್ಕೆ ಬಳ್ಳಿಯ ಸೆರೆ ಬಳ್ಳಿಗೆ ಮರವಾಸರೆ ಮರ ಬಳ್ಳಿ, ಬಳ್ಳಿ ಮರ ಬಂಧ ಅನುಬಂಧ ಗಟ್ಟಿಯಾಗಿ ಶಾಶ್ವತವಾಗಿ ನೂರ್ಕಾಲ ನಗಲೆಂದು ಹೂವಾಗಿ ಕಾಯಾಗಿ ಹಣ್ಣಾಗಿ ಅಸಂಖ್ಯಾತ ಬಳ್ಳಿಯಾಗಲೆಂದು,...

ಆಧುನಿಕ ಅಹಲ್ಯೆಯರು

ಇದ್ದಾರೆ ಕಲಿಯುಗದಲ್ಲೂ ಅಹಲ್ಯೆಯರು ಆಧುನಿಕ ಅಹಲ್ಯೆಯರು ಇಂದು ಎಂದು ಮುಂದೆಂದೂ ಕೂಪ ಮಂಡೂಕಗಳಂತೆ ಗಂಡ ಮನೆ ಮಕ್ಕಳು ತಾವೇ ಕಟ್ಟಿಕೊಂಡ ಕೋಟೆಗೆ ಬೀಗ ಹಾಕಿಸಿ ಬೀಗದ ಕೈ ಗಂಡಂದಿರಿಗೆ ಕೊಟ್ಟು ಸ್ವಾಭಿಮಾನವ ಮೂಲೆಗಿಟ್ಟು ವ್ಯಕ್ತಿತ್ವವ...

ವನಿತೆ

ಲತೆಯಾಗದಿರು ಹೂವಾಗದಿರು ವನಿತೆ ಮರವಾಗು ಹೆಮ್ಮರವಾಗು ಮೋಡವಾಗದಿರು ವನಿತೆ, ಗುಡುಗಾಗು ಸಿಡಿಲಾಗು, ಮಿಂಚಾಗು. ಹಣತೆಯಾಗದಿರು ಮೊಂಬತ್ತಿಯಾಗದಿರು ವನಿತೆ, ಕಿಡಿಯಾಗು ಜ್ವಾಲಾಮುಖಿಯಾಗು ಚಾಕುವಾಗದಿರು ಈಳಿಗೆ ಮಣೆಯಾಗದಿರು ವನಿತೆ ಕತ್ತಿಯಾಗು ಗುರಾಣಿಯಾಗು ಕವಿತೆಯಾಗದಿರು ಕಥೆ ಕಾದಂಬರಿಯಾಗದಿರು ವನಿತೆ,...

ಸೊಸೆಗೊಂದು ಕಾಲ

ಸೈರಿಸು ಮಗಳೇ ಹೈರಾಣವಾಗದಿರು ಶತ ಶತಮಾನಗಳಿಂದ ಬಂದ ಗತ್ತು ಗಮ್ಮತ್ತು ಶಾಶ್ವತವಲ್ಲ. ಹೊಸದಂತೂ ಅಲ್ಲ. ಅಟ್ಟವೇರಿದವರು ಇಳಿಯಲೇ ಬೇಕಲ್ಲ ನಿನ್ನವ್ವ ನನ್ನವ್ವ ಅವರವ್ವ. ತುಳಿದದ್ದು ಒಂದೇ ಹಾದಿ ಕಲ್ಲು ಮುಳ್ಳಿನ ಗಾದಿ ನಾಲ್ಕು ಗೋಡೆಗಳಲ್ಲೇ...

ಬದಲಾಗದವರು

ಬೆನ್ನು ಬಾಗಿಸಿಕೊಂಡು ತಂದುದನ್ನು ಅಟ್ಟುಕೊಂಡು ಉಟ್ಟುಕೊಂಡು ಪಾಡು ಪಟ್ಟುಕೊಂಡು ಜೀ ಹುಜೂರ್ ಹಾಡಿಕೊಂಡು ಉಸಿರು ಬಿಡಲು ಅಪಣೆ ಬೇಡಿಕೊಂಡು ಕೀ ಕೊಟ್ಟ ಗೊಂಬೆಗಳಂತೆ ಕುಣಿಯುವವರು ನಾವು ಕುಣಿಸುವವರು ನೀವು. ನಿಮ್ಮ ಪಾದಕ್ಕೆ ಮೂಗುದಾರಕ್ಕೆ ಮಣಿದು...

ಅಸ್ತಿತ್ವ

ಬದುಕುತ್ತೇನೆ ಗೆಳೆಯಾ ನೀನಿಲ್ಲದೆಯೂ ಬದುಕುತ್ತೇನೆ ನಾನು ನಾನಾಗಿ ನಶ್ವರದ ಪಯಣದಲಿ ಅಗಲುವಿಕೆ ಅನಿವಾರ್ಯತೆ ಒಂಟಿತನ ಸಹಜ ತಾನೇ ಅದೆಷ್ಟು ಸಿಹಿಯಾಗಿದ್ದೆ ಸಕ್ಕರೆಯಂತೆ ಸವಿಯಾಗಿ ಮಾತನಾಡಿ ಹೊಂಗನಸಿನಲಿ ತೇಲಾಡಿಸಿ ಅಣುಅಣುವಿನಲ್ಲಿ ನೀನಾಗಿದ್ದೆ ಅತಿಯಾದರೆ ಅಮೃತವೂ ವಿಷ...

ಎಂದು ಬರುವಳೋ

ಎಂದು ಬರುವಳೋ ನನ್ನ ಹುಡುಗಿ ಎನ್ನ ಮನಸೂರೆಗೊಂಡ ಬೆಡಗಿ ಮನೆ ಮನಗಳ ಬರಿದು ಮಾಡಿ ವಿರಹದ ಉರಿಗೆನ್ನ ದೂಡಿ ಬೆಂದು ಬಸವಳಿದೆನ್ನ ನೋಡಿ ನಗುತಿರುವಳು ದೂರ ಓಡಿ ಎಂದು ಬರುವಳೋ... ಮೃದು ಮಧುರ ಸ್ವರ...

ಮಧುರಗಾನ

ಅಂತರಂಗದ ಗಾನ ನಾನಾ ವಿತಾನ ಮಿಡಿದ ಹೃದಯ ವೀಣಾ ನುಡಿಸಿ ಮಧುರಗಾನ ಎಲ್ಲಿಯದೋ ಈ ಗಾನ ಯಾವುದೋ ತಾನ ಮೂಡಿ ಭಾವ ಸ್ಪಂದನಾ ನುಡಿಸಿ ಮಧುರಗಾನ ನನ್ನ ನಿನ್ನ ಪ್ರೀತಿ ಪ್ರೇಮ ಸಪ್ತಸ್ವರದ ಸರಿಗಮ...

ಬಾ ಗೆಳೆಯ ಬಾ

ಬಾ ಗೆಳೆಯ ಬಾ ಹೃದಯದಂಗಳದಲ್ಲಿ ಚಿತ್ತಾರ ಬಿಡಿಸು ಬಾ ಬಾನಿನಂಗಳದಲ್ಲಿ ಚಂದಿರ ನೀನಾಗು ಬಾ ನೀ ಬರುವಿಯೆಂದು ಕಾಯುತಿರುವೆ ಕಾತುರದೆ ಇಹಪರವ ಮರೆತು ಹೃದಯ ಬಾಗಿಲು ತೆರೆದು ಕಣ್ಣಿನಲಿ ಪ್ರೀತಿ ದೀಪ ಬೆಳಗಿಸಿ ಮುಗುಳ್ಳಗೆಯ...

ಹೃದಯ ರಾಗ

ಹೃದಯ ತುಂಬಿ ಬರೆದೆ ನಾನು ಹೊಸದು ಹೊಸದು ಕವಿತೆಯ ನವರಾಗದಿ ನುಡಿಸು ನೀನು ಬಾಳ ಭಾವ ಗೀತೆಯ. ಕಣ್ಣಿನಲ್ಲಿ ಕನಸು ತುಂಬಿ ಕಾವ್ಯ ಧಾರೆಯಾಗಲಿ ಮಾತಿನಲ್ಲಿ ಮಧುವು ತುಂಬಿ ಸರಸ ಸೂರೆಯಾಗಲಿ ಮನಸ್ಸು ಮನಸ್ಸು...