ಹೃದಯ ತುಂಬಿ ಬರೆದೆ ನಾನು
ಹೊಸದು ಹೊಸದು ಕವಿತೆಯ
ನವರಾಗದಿ ನುಡಿಸು ನೀನು
ಬಾಳ ಭಾವ ಗೀತೆಯ.
ಕಣ್ಣಿನಲ್ಲಿ ಕನಸು ತುಂಬಿ
ಕಾವ್ಯ ಧಾರೆಯಾಗಲಿ
ಮಾತಿನಲ್ಲಿ ಮಧುವು ತುಂಬಿ
ಸರಸ ಸೂರೆಯಾಗಲಿ
ಮನಸ್ಸು ಮನಸ್ಸು ಸೇರಿ ಬೆರೆತು
ಮಧುರ ಗಾನವಾಗಲಿ
ನಿನ್ನೆ ನಾಳೆ ಎಲ್ಲಾ ಮರೆತು
ಬಾಳ ಪಯಣ ಸಾಗಲಿ.
ನೋವು ನಲಿವು ಏನೇ ಬರಲಿ
ಒಲವು ನಮ್ಮದಾಗಲಿ
ಜೀವ ಜೀವ ಕೂಡಿ ಕಲೆತು
ರಸಜೀವವ ತುಂಬಲಿ
*****