ಪುರುಷರೇ,
ನಿಮ್ಮಂತೆ ನಮ್ಮೊಳಗೂ
ಇರುವುದೊಂದು ಅಂತರಂಗ!
ಲಾಕರಿನಲ್ಲಿಟ್ಟ ಒಡವೆಯಂತೆ
ಜೋಪಾನವಾಗಿಟ್ಟಿರುವೆವು-
ಅಲ್ಲಿಗೆ ಪರಪುರುಷರ
ಪ್ರವೇಶವಾಗದಿರಲೆಂದು
ಪುರುಷತ್ವದ ಬಲಾತ್ಕಾರದ
ಒತ್ತು ಬೀಳದಿರಲೆಂದು
ಬಹಳ ಜೋಪಾನವಾಗಿಟ್ಟಿರುವೆವು!
ಕೀಲಿ ಕೈ ಎರಡು
ಒಂದು ನಮ್ಮೊಡನೆ
ಇನ್ನೊಂದು ನಿಮ್ಮೊಡನೆ
ನಾವು ತೆರೆಯುವ ತನಕ
ನಿಮಗಿಲ್ಲ ಅಲ್ಲಿಗೆ ಪ್ರವೇಶ.
ಸ್ತ್ರೀಯೆಂದಾದರೂ
ತೆರೆದುಕೊಂಡಿರುವಳೇ
ತನ್ನ ಅಂತರಂಗವ
ಸಂಪೂರ್ಣ ಬೆತ್ತಲಾಗಿಸಿ?
*****