ಸುಧೆಯಂ ಪಡೆದುಂ ಮರಣವತಪ್ಪಿಸೆ ಕಡಲನು ಕಡೆದರು ದಾನವದಿವಿಜರು|
ಅದರೊಳು ಪಡೆದರು ಈರೆಳು ಮಣಿಗಳ ಕುಣಿದರು ಅಗಣಿತ ಸಂತಸದಿ ||
ಸುಧೆಯೊಂದಿಗೆ ತಾ ಹೊರಟಿತು ಸುರೆತಾಕುಡಿಯುತ ದೈತ್ಯರು ಮದಿಸಿದರು|
ಸುಧೆಯನು ಈ೦ಟುತೆ ಮರಣವ ತಪ್ಪಿಸಿ ಮೆರೆದರು ವಿಶ್ವದಿಬಿಡುಗಣ್ಣಿಗರೂ || ೧ ||
ಸುರೆಯಂ ಕುಡಿಯತೆ ಕಡುಮದದಿಂದಲಿ ಅಡರಿಸಿದರು ಕೇಡನು ರಕ್ಕಸರು |
ದುರುಳರ ಕಡಿಯಲು ಕಡುತ್ವರೆಯಿಂದಲಿ ದುಡುಕಿದನವಹರಿ ಅವತರಿಸಿ ||
ಮರುಳನುಹರಿತಾಮದಿರೆಯ ಕೊಲ್ಲದೆ ಕುಡುಕರಮರಣವ ನೊಡರಿಸಿದ |
ಸರುವರ ಕಿಡಿಸಲು ಮದಿರೆಯೆ ಮೂಲವು ಕಡುನಾಶಕವದ ನರಿಯದಲೆ || ೨ ||
ಸಿ೦ದಿಯೆಂಬುದದು ಮೊಲೆವಾಲ್ತಾಡದ ಬಂಧಿಸೆ ಶಾಸನ ಕುಂದನು ಹೊ೦ದದು |
ಅ೦ದಿನ ಚಣದೊಳ್ನೀರೆಯಾಗುತೆ ಬ೦ದು ಮೋಹಿಪುದು ಮಾನವ ಕೋಟಿಯ ||
ಬ೦ದುಮಾಡೆ ಶೆರೆಯ೦ದೆ ಭಟ್ಟಿಯೊಳ್ನಿ೦ದು ಗೌಪ್ಯದೊಳ್ನಲಿಯುವದು |
ಮಂದಹಾಸದಿಂ ತಾನಭಿಸಾರಿಕೆ ಯಂದದೆ ಮನೆಮನೆತಿರುಗುವದು || ೩ ||
ಹಿಂದು ದೇಶಪಿತ ಗಾಂಧಿಯಮಂತ್ರವ ನೋಂದನರಿಯೆ ಶೆರೆ ಸಿ೦ದಿಗಳು |
ಕುಂದುಕೊರತೆಗಳ ಪೊಂದಿ ವಿಶ್ವದಿಂ ಕಂದಿಹೋಗಿ ಕಾಲ್ತಗೆಯುವವು ||
ಇಂದುನಮ್ಮಯ ರಾಷ್ಟಶಕಟದನೊಗದಿ ಕುಂತಿಹರು ತಂದೆಯ ಸಮರು |
ಒಂದುಗೂಡಿ ಜನರೊಂದೆ ಮನದಿತಾ೦ ಗಾ೦ಧಿತತ್ವವವನು ಹರಡುವುದು || ೪ ||
ಸಿಂದಿಶೆರೆಗಳ ಬಂದು ಮಾಳ್ಪ ಹೊರೆಸಂದುದು ನಾಯ್ಕರ್ಗೆಂದೆನದೆ |
ಮುಂದುವರೆಯುತೆ ತಮ್ಮಯ ಸೇವೆಯಚಂದದಿ ನೀಡಲು ತಾಸುಖವು ||
ಬಂದುಕುಣಿಯುವದು ಸಗ್ಗದಿ ಗಾಂಧಿಯು ಸಂದಸಂತಸವ ತಾಪಡೆದು |
ಕುಂದುಕೊರತೆಗಳನರಿಯದೆ ಬಾಳಿರಿಯಂದವವರಗಳ ನೀಡುವನು || ೫||
*****

















