Home / ಕವನ / ಕವಿತೆ / ಕಲಪುರಂಷನ ಕಂತೆಯು

ಕಲಪುರಂಷನ ಕಂತೆಯು

ಕಲಿಯ ಕಾಲದ ಕಂತೆಯ ಕೇಳಿರಿ ಕೂಡಿದ ಜನರೆಲ್ಲಾ |
ಕಲಿಯು ತನ್ನಯ ತಾಂಡವ ಪೂಡಿಹ ವಿಶ್ವದೊಳೆಲ್ಲೆಲ್ಲಾ || ೧ ||

ಹುಲಿಗೆಯಂಜದವ ನಿಲಿಗೆಯಂಜುವುದು ಪ್ಲೇಗದ ಭಯವಲ್ಲಾ |
ಸುಲಿಗೆಯೆಲ್ಲೆಡೆ ಹಬ್ಬಿದೆ ನರರೊಳು ವಿಶ್ವದೊಳೆಲ್ಲೆಲ್ಲಾ || ೨ ||

ರಾಷ್ಟ್ರ ರಾಷ್ಟ್ರದ ನಡುವೆ ಹೆಬ್ಬುತಿದೆ ಹಗೆತನವೆಲ್ಲೆಲ್ಲಾ
ರಾಷ್ಟ್ರನಾಯಕರು ಸ್ವಾರ್ಥದಿ ಶಾಂತಿಯ ಕದಡುವರೆಲ್ಲೆಲ್ಲಾ || ೩||

ವಿಶ್ವಪಿತನ ಪರಮಾತ್ಮನ ನಂಬುವ ಜನಗಳೆ ಉಳಿದಿಲ್ಲಾ |
ವಿಶ್ವಮೇಧದೊಳ್ಕಲೆಯುತೆ ರಕುತವ ಹರಿಸುವರೆಲ್ಲೆಲ್ಲಾ || ೪ ||

ತಂದೆತಾಯಿ ಗುರುಹಿರಿಯರ ಸ್ಮರಣೆಗೆ ಮನದೊಳಗಿಂಬಿಲ್ಲಾ
ಕಂಡಕಂಡಪೆಣ್ಣೊಳ್ಳುತೆ ಗೃಹಿಣಿಯ ಮಾಳ್ಪರು ಎಲ್ಲೆಲ್ಲಾ || ೫ ||

ಧರ್ಮಗುರುಗಳೇ ಧರ್ಮದ ಛದ್ಮದಿ ಸುಲಿಗೆ ಮಾಳ್ಪಬರಲ್ಲಾ
ಕರ್‍ಮಮಾಡದಲೆ ಫಲವ ಬೇಡಿಪಬಂಟರೆಯೆಲ್ಲೆಲ್ಲಾ || ೬||

ಕಪ್ಪು ಸಂತೆಯೆ ದುಡ್ಡನು ಗಳಿಸುವ ಮಾರ್ಗವೆನಿಪುದಲ್ಲಾ |
ಉಪ್ಪುವುಂಡವಗೆ ಮೋಸಗೊಳಿಪುದೆ ಜಾಣ್ಮೆಲಕ್ಕಣಲ್ಲಾ || ೭||

ದೇಶಭಕ್ತರ ಸೋಗಿಲಿ ಲಂಚವ ಪಡೆದರೆ ತಪ್ಪಲ್ಲಾ |
ದೇಶಶೀಳುತೆ ಜನಗಳ ಕೊಲ್ವುದೆ ಪರಮ ಧರ್ಮವಲ್ಲಾ || ೮ ||

ಬಿಳಿಯ ಟೊಪ್ಪಿಗೆ ವೇಷದಿ ಜನಗಳ ಸುಲಿದರೆ ತಪ್ಪಲ್ಲಾ |
ಸುಳಿಯನರಿಯುತೆ ಸುಳ್ಳನು ಪೇಳ್ವುದೆ ಲೋಕರೂಢಿಯಲ್ಲಾ || ೯ ||

ಕರ್ಮಯೋಗಿಯ ಗಾಂಧಿಯ ಕೊಲ್ವುದೆ ತೂರಲಕ್ಕಣಲ್ಲಾ |
ಮರ್ಮವಿದನು ನೀಂ ತಿಳಿದು ನಡೆದೊಡೆ ಕಲಿಯಭಯವೆಯಿಲ್ಲಾ || ೧೦ ||
*****

Tagged:

Leave a Reply

Your email address will not be published. Required fields are marked *

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...