ಮನಸೇಽ

ಗೊಂದಲಗೂಡು ನರಕಸದೃಶ
ವಿಷಾನಿಲದಿಂದಾವೃತ್ತ ಭೂಮಂಡಲ ಮಧ್ಯದೊಳು
ಶಾಂತಿಬಯಸಿ ಮುಕ್ತಿಹುಡುಕುತ ಸುಳಿದಾಡಿ ಸುತ್ತಿ
ಬಸವಳಿಯುವ ಮನಸೇ
ಸುಮ್ಮನೊಮ್ಮೆ ಕೂಡು ಸಮುದ್ರದಂಡೆಯ ಮೇಲೆ

ಕಣ್ಣಾಡಿಸು ಸುತ್ತಮುತ್ತೆಲ್ಲ
ಮರಳು ಚಿಪ್ಪು ವಿಶಾಲ ಸಮುದ್ರದಲೆಗಳು
ನೋಡು ದೂರದಿಗಂತದೆಡೆಗೆ
ಸೂರ್‍ಯ ನಕ್ಕು ಮುಕ್ಕಳಿಸಿದ ಬಂಗಾರ ನೀರಿನಲೆಗಳ
ನಡುವೆ ತೇಲುವ ಹಾಯಿ ದೋಣಿಗಳ;

ಕಾಣದಿರಲಿ ಮರಳ ಮೇಲಿನ ಕಸಕಡ್ಡಿ
ಬೆನ್ನಹಿಂದಿನ ಎತ್ತರೆತ್ತದ ಜಂಬದ
ಮನೆಗಳ ಪಗಡೆಯಾಟದ ನೋಟ.

ಸುತ್ತಾಡಿ ನಗರ ಪ್ರದಕ್ಷಿಣೆ ಮಾಡು ಮನಸೇ
ಸಂಪಿಗೆ ಗುಲಾಬಿ ಪಾರಿಜಾತ ಹೂಗಿಡಮರ
ಬಳ್ಳಿಗಳ ಪರಿಮಳ ಆಸ್ವಾದಿಸು
ಸ್ವಲ್ಪ ಉಸಿರು ಬಿಗಿಹಿಡಿ ಚರಂಡಿ ತಿಪ್ಪೆಗಳೂ ಇವೆ
ಕಣ್ಣಿಗೆ ಒಳಪರದೆ ಬೀಳಲಿ ಜನ ಕಾಣದಿರಲಿ.

ನಿರಮ್ಮಳವಾಗಿ ಹಣೆಗಂಟು ಇಳಿಸು ಮನಸೇ
ಜೋಲು ಮುಖ ಎತ್ತಿ ನಗೆಹೊತ್ತು
ಸುತ್ತೆಲ್ಲ ನೋಡು ಇದು ನಿನ್ನದೇ ನಾಡು ನುಡಿ
ನಿನ್ನವರೇ ಸಂಬಂಧಿಗಳ ಕಲರವ
ಮುದ್ದಿಡುತಿದೆ ನಾಯಿ ನಿನ್ನ ಕಾಲಿಗೆ
ನಗು ರಿಂಗಣಿಸಲಿ; ಕಿವಿಗೆ ಬಿಡು ಎಣ್ಣೆ.

ಸುಮ್ಮನೆ ಕೂಡು ದೀಪದ ಬೆಳಕಿನ ದೇವನೆದುರಲಿ
ನೋಡು ಅವನ ಕಣ್ಣಲಿ ಮಿಂಚುನಗು
ತುಟಿಯಲ್ಲಿಯ ತುಂಟನಗು ಮುಡಿಗೇರಿಸಿದ ಹೂವು
ಮುಗ್ಧ ಮೊಲ, ಪುಣ್ಯಕೋಟಿ ಗೋವು;
ಕಾಣಿಸಿದರೆ ಕಾಣಿಸಲಿ ಅವನ ಸುತ್ತ ತುಂಬಿರುವ
ಹುಲಿ ಹಾವು ಕೀಟಗಳ ಹರಿದಾಟ
ನಡುವೆ ಪ್ರಶಾಂತ ಚಿತ್ಕಳೆಯ ಸಾಕಾರ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕಾವ್ಯ
Next post ಕಳ್ಳರ ಕೂಟ – ೨

ಸಣ್ಣ ಕತೆ

  • ಮುಗ್ಧ

    ಆಲೀ........ ಏ ಆಲೀ........ ಐಸಮ್ಮ ಮಗನನ್ನು ಎಷ್ಟು ಜೋರಾಗಿ ಕರೆದರೂ ಆಲಿಯಿಂದ ಉತ್ತರ ಬರಲಿಲ್ಲ. ಒಂದು ಕಡೆ ಕತ್ತಲೆಯಾಗುತ್ತಾ ಬರುತ್ತಿದೆ. ಬೀಡಿ ಕಟ್ಟುಗಳನ್ನು ಸಂಜೆಯ ಒಳಗೆ ಬ್ರಾಂಚಿಗೆ… Read more…

  • ಪ್ರಕೃತಿಬಲ

    ಮಕರ ಸಂಕ್ರಮಣದ ಮಹೋತ್ಸವದ ದಿವಸವದು, ಸೂರ್ಯನಾರಾಯಣನು ಉತ್ತರಾಯಣನಾಗಿ ಸೃಷ್ಟಿಶೋಭೆಯೆಂಬ ಮಹಾಪ್ರದರ್ಶನ ಸಮಾರಂಭವನ್ನು ಜಗತ್ತಿಗೆ ತೋರಿಸುವನಾದನು. ಈ ಅದ್ವಿತೀಯವಾದ ಪ್ರದರ್ಶನವನ್ನು ನೋಡಲಪೇಕ್ಷಿಸುವವರು ಪರಮ ರಮಣೀಯವಾದ ಬೆಂಗಳೂರು ಪಟ್ಟಣಕ್ಕೆ ಬಂದು… Read more…

  • ಮರೀಚಿಕೆ

    ನಂಬಿದರೆ ನಂಬಿ ಬಿಟ್ಟರೆ ಬಿಡಿ ನನ್ನೆಲ್ಲಾ ಭಾವನೆಗಳೂ ತಬ್ಬಲಿಗಳಾಗಿಬಿಟ್ಟಿವೆ. ಪ್ರೇಮವೆಂದರೆ ತ್ಯಾಗವೆ, ಭೋಗವೆ, ಭ್ರಮೆಯೆ ಆಥವಾ ಕೇವಲ ದಾಸ್ಯವೆ? ಮನಸ್ಸಿಗಾದ ಗ್ಯಾಂಗ್ರಿನ್ ಕಾಯಿಲೆಯೆ? ಇಂತಹ ದುರಾರೋಚನೆಗಳು ಹುಟ್ಟಲು… Read more…

  • ಎದಗೆ ಬಿದ್ದ ಕತೆ

    ೧೯೯೫. ನಾನಾಗ ಹುಬ್ಬಳ್ಳಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಇಲ್ಲಿ ೧೯೯೭ರ ವರೆಗೆ ನರಕ ಅನುಭವಿಸಿದೆ. ಪಾಪದ ಕೂಪವಿದು ಸ್ವರ್ಗ ನರಕ… Read more…

  • ತಾಯಿ-ಬಂಜೆ

    "ಅಯ್ಯೋ! ಅಮ್ಮ!... ನೋವು... ನೋವು... ಸಂಕಟ.... ಅಮ್ಮ!-" ಒಂದೇ ಸಮನಾಗಿ ನರಳಾಟ. ಹೊಟ್ಟೆಯನ್ನು ಕಡೆಗೋಲಿನಿಂದ ಕಡದಂತಾಗುತ್ತಿತ್ತು. ಈ ಕಲಕಾಟದಿಂದ ನರ ನರವೂ ಕಿತ್ತು ಹೋದಂತಾಗಿ ಮೈಕೈಯೆಲ್ಲಾ ನೋವಿನಿಂದ… Read more…