ಮನುಷ್ಯರ ಭಾಷೆಯನ್ನು ಗುರುತಿಸುವ ಹಾಗೂ ಸೂಕ್ತವಾಗಿ ಸಂಭಾಷಿಸುವ ತಂತ್ರವನ್ನು ರೂಪಿಸುವ ಕಾರ್ಯವಿಧಾನಗಳನ್ನು ಕಂಪ್ಯೂಟರಿಕಣಗೊಳಿಸಲಾಗುತ್ತದೆ. ಧ್ವನಿಯನ್ನು ಗುರ್ತಿಸಿ ಮನುಷ್ಯರನ್ನು ಸ್ವಾಗತಿಸುವ ಕಂಪೂಟರ್‌ಗಳು ಮಾರುಕಟ್ಟೆಗೆ ಬರಲಿವೆ.

I.B.M. ಮೈಕ್ರೋಸಾಫ್ಟ್ ಮತ್ತು ಆಪಲ್ ಗಣಕ ತಯಾರಕರು ಈ ಕ್ಷೇತ್ರದಲ್ಲಿ ಪೈಪೋಟಿಯನ್ನು ನಡೆಸಿದ್ದಾರೆ. ನಿಧಾನಗತಿಯ ಒಪ್ಪು, ತಪ್ಪಿನ ಮತ್ತು ಸಾಮಾನ್ಯ ವಿನ್ಯಾಸ ಗಣಕಗಳು ಈಗಾಗಲೇ ಮಾರುಕಟ್ಟೆಯಲ್ಲಿವೆ. ಸರಳ ಮತ್ತು ವೈವಿಧ್ಯಮಯ ಭಾಷೆಗಳಿಗೆ ಸೂಕ್ತವಾಗಿ ಸ್ಪಂಧಿಸಿ ಲಯಬದ್ಧವಾಗಿ ಮಾತನಾಡುವ ಗಣಕಗಳು ಪ್ರಯೋಗಶಾಲೆಯಲ್ಲಿ ವಿನ್ಯಾಸಕರ ಟೇಬಲ್ ಮೇಲಿವೆ.

ನಾಳೆ ನಿಮ್ಮದೂರವಾಣಿ ಗಳಿಗೆ ನಿಮ್ಮಧ್ವನಿಯಂತೆ ಉತ್ತರಿಸಿ ವಿನೀತರಾಗಿ ನಿಮ್ಮಕೆಲಸ ಕಾರ್ಯಗಳಲ್ಲಿಭಾಗಿಗಳಾಗುತ್ತವೆ. ಬಣ್ಣ ಎಣಿಸುವ, ಕಥೆ ಹೇಳುವ, ಮಕ್ಕಳಿಗೆ ಪಾಠ ಹೇಳುವ ಯಂತ್ರಗಳು ನಿಮಗೆ ಇಷ್ಟವಾದ ಧ್ವನಿಯಲ್ಲಿ ನಿಮ್ಮನ್ನು ಓಲೈಸುತ್ತವೆ.
*****