ಪರಿಪರಿ ನೆನೆದೊಡಾ ಐದೆನ್ನ ಕಾಯದೇ ?
ಪ್ರಕೃತಿಯೊಳೈದಕ್ಕೆ ಉನ್ನತದ ಬೆಲೆಯುಂಟು
ಪಂಚಭೂತಂಗಳೆಲ್ಲ ಜೀವದೊಳುಂಟು
ಪ್ರಾಣಂಗಳೆಮ್ಮೊಳೈದು ಇಂದ್ರಿಯಂಗಳೈದು
ಪಿಡಿವ ನಡೆದ ಬೆರಳೈದು ಅಂತೆನ್ನ ಕವನಕು
ಪಂಕ್ತಿಗಳೈದು – ಅದುವೆ ಕಾಯಲಿ ಎಂದೆನುತ – ವಿಜ್ಞಾನೇಶ್ವರಾ
*****