ನಾನು ನನ್ನ ನಾಯಿ

ನಾನು, ನನ್ನ ನಾಯಿ ಪ್ರಜ್ಞಾ
ಕೂಡಿದ್ದೇವೆ. ನಾನು ಕಂಡದ್ದು, ಕೇಳಿದ್ದು,
ಅವರು, ಇವರು, ಯಾಕೆ? ಜಗತ್ತಿನ ಒಳ್ಳೆಯದೆಲ್ಲಾ
ನನ್ನದಾಗಬೇಕು; ನನ್ನ ಅನುಭವಕ್ಕೆ ದಕ್ಕಬೇಕೆಂಬೊಬ್ಬ ತಾಮಸಿ.

ಪ್ರಜ್ಞಾ
ಬೆಂಕಿ, ಬೆಳಕು, ಎಚ್ಚರ
ನಾನು
ಅತ್ತಿತ್ತ ಒಂದೆರಡು ಹೆಜ್ಜೆ ಇಟ್ಟರೆ, ಕಣ್ಣಾಡಿಸಿದರೆ
ಮನಸ್ಸು ಹರಿಯ ಬಿಟ್ಟರೆ ಸಾಕು ಬೊಗಳಿ ಗದರುತ್ತೆ
ಕಾರ್ಯ ಕಾರಣ ವಿಶ್ಲೇಷಿಸಿ ನಿಯಂತ್ರಿಸುತ್ತೆ; ಕಸಿವಿಸಿ ತರುತ್ತೆ.

ನಾಯಿದೇನು!
ಪ್ರತಿಯೊಂದಕ್ಕೂ ಬೊಗಳುತ್ತೆ
ನೋಡಿ ಬಿಡೋಣ! ಅಂತ ಪ್ರಯೋಗಕ್ಕಿಳಿದಾಗಲೆಲ್ಲಾ..
ದಕ್ಕಿದ್ದು ಬರೀ ಬರೆ ಮಾತ್ರ

ಅದಕ್ಕೆ ಈಗೀಗ..
ಪ್ರಜ್ಞಾನೇ ನನ್ನ ನೆರಳು
ನನಗೆ ನೆರಳು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹೋಗಿಯೇ ಬಿಟ್ಟಿದ್ದ!
Next post ಪರಿಪರಿ ನೆನೆದೊಡಾ ಐದೆನ್ನ ಕಾಯದೇ ?

ಸಣ್ಣ ಕತೆ