ನನ್ನಾಕೆಯಂತಾಕೆ ಲೋಕಕೆ ಒಬ್ಬಾಕೆ ಅವಳಿಗೆ ಅವಳೆ ಹೋಲಿಕೆ. ಓದಿಯೂ ಓದದ ದೂರದವಳಲ್ಲದ ಇವಳ ಮಾಡಿಕೊಂಡು ಬಂದೆ ಇವಳ ಜೋಡಿ ಸಂಸಾರ ನನಗೆ ಕತ್ತಿ ಮೇಲೆ ಸಾಮು ಮಾಡಿದಂಗಾಗುತಿಹುದು. ಮೇಲೆ, ನೋಡೋಕೆ ಇವಳು ಮೆತ್ತನ್ನಾಕೆ ಒಳಗೆ...
ಓ ನನ್ನ ಸೌಭಾಗ್ಯ! ಇಲ್ಲಿಹುದು ನೋಡು ನಮ್ಮ ನಿಜ ಭಾಗ್ಯ ನೋಡು! ಆಡು ಹಾಡು ನೀನು ನೀನೇ ಆಗು. ಆಗಸವ ತುಂಬಿವೆ ಮದದಾನೆ ಹಿಂಡಂತೆ ಗಾಂಭೀರ್‍ಯ, ಚೆಲುವಿನ ಬಿಳಿ ಮೋಡ ದಂಡು. ಬೆಳಗುತಿಹವು ಸುಮಂಗಲಿಯ...
ನಮ್ಮವಳು ನಾನು ನನ್ನ ಮಕ್ಕಳ, ನಮ್ಮ ಬಾಳುವೆಯ ಚೆಂಬೆಳಕು .. ಚೆಂಬೆಳಕು .. ಚೆಂಬೆಳಕು. ಹೊತ್ತುಟ್ಟ, ಹೊತ್ತು ಮುಳುಗ, ನಮಗೆ ಅವಳಿರಬೇಕು ಅವಳಿರುವಳು ಎಂತಲೆ ಆಗಿದೆ ನೇರುಪ ನಮ್ಮ ಬದುಕು... ನಿಜ ಹೇಳುವುದಾದರೆ ನಮಗೇ...
ಇವಳೇ... ಕ್ಷಮಿಸು ಇತ್ತೀಚೆಗೆ ಯಾಕೋ... ನೀನು ನನಗೆ ಏನೂ ಅನಿಸೋದೆ ಇಲ್ಲ ಬಂಧನ ಸವಿ ಕಳೆದಿದೆ ಹೊರೆಯಾಗಿದೆ ಹಾಗಂತ... ನಿನ್ನ ನಡೆ ನುಡಿ ಬಗ್ಗೆ ಎರಡಿಲ್ಲ, ಆದರೂ ಯಾಕೋ ನಿನ್ನ ಯಾವುದೂ ಸುಖ ಕೊಡ್ತಿಲ್ಲ...
ಕಟುಕನಾನಲ್ಲೆ ನಲ್ಲೆ ನೋಟಕೆ ಹಾಗೆ ಕಂಡು ಬಂದರೂ... ನಾನು ನಿನ್ನ ಉತ್ಕಟ ಪ್ರೇಮಿ ಅಷ್ಟೆ. ನನ್ನ ಆಟ ನಿನಗೆ ಪ್ರಾಣ ಸಂಕಟ ಆದರೂ... ಕ್ಷಮಿಸು! ಎಂಬುದು ಔಪಚಾರಿಕ. ಏನು ಮಾಡಲಿ? ನಾನು ಹತ್ತಿಕ್ಕಿ ಕೊಳ್ಳಲಾರೆ!...
ನನ್ನಾಕೆ ಊರಿಗೆ ಹೋಗಿ ಒಂದೆರಡು ದಿನಗಳು ಕಳೆಯೆ ನನ್ನೊಳಗಿನ ಕಾಮಣ್ಣ ಮಿಸುಗಾಡ ತೊಡಗಿದನು ಏನು ತಿನ್ನಲಿ? ಏನು ಬಿಡಲೆಂದು ಆಕರಿಸ ತೊಡಗಿದನು ಹಾಳಾದ ಕನಸುಗಳು ಒಳಗಿನ ಮನಸನು ಹಿಡಿದ ಕ್ಷ-ಕಿರಣ ಚಿತ್ರಗಳು. ಇಲುಕಿಲ್ಲದ ಹಾಗೆ...
ನನಗಾಗಿ ತೆರೆವ ನಿನ್ನೆದೆಗೆ ನಾನೇನ ತಂದೆ?- ಅದರಿರುವೇ ಮರೆತೆ ಇದ್ದರೂ ಅದರ ಆದರ ನಿಯಮ ಬಾಹಿರ ವೆಂದೆ ಬಗೆದೆ ನನಗಾಗಿ ತೆರೆವ... ನಾನು ನಕ್ಕಾಗ ನಕ್ಕು ಅತ್ತಾಗ ಅತ್ತು ಪಕ್ಕಾಗಿ ನಿಂತ ನಿನ್ನ ತುತ್ತು...