ಇವಳೇ… ಕ್ಷಮಿಸು
ಇತ್ತೀಚೆಗೆ ಯಾಕೋ…
ನೀನು ನನಗೆ ಏನೂ ಅನಿಸೋದೆ ಇಲ್ಲ
ಬಂಧನ ಸವಿ ಕಳೆದಿದೆ
ಹೊರೆಯಾಗಿದೆ
ಹಾಗಂತ… ನಿನ್ನ ನಡೆ ನುಡಿ ಬಗ್ಗೆ ಎರಡಿಲ್ಲ,
ಆದರೂ ಯಾಕೋ ನಿನ್ನ ಯಾವುದೂ ಸುಖ ಕೊಡ್ತಿಲ್ಲ
ಕೂಡಿದ್ದು ಕೊಂಡೇ ಕಂಡಾಟ ಆಡೋದು
ನಿನಗೂ ಅಲ್ಲ ನನಗೂ ಅಲ್ಲ!
ಹತ್ತಿರವಿದ್ದರೆ ಇರುಸು ಮುರುಸು
ಮಾತು, ಮುಖದಲ್ಲಿ ವ್ಯಕ್ತವಾಗಿ
ನೋಯೋದು ಬೇಡ.
ಒಡನಾಟ ಅರ್ಥ ಕಳೆದು ಕೊಂಡು
ಬದುಕು ಅಸಹನೀಯವಾಗೋದು ಬೇಡ
ದೂರ ಇರೋಣ
ಸ್ನೇಹದಿಂದಿರೋಣ
ಏನಂತಿ?
*****